Tumakur : ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಶೀಘ್ರ
ಜಿಲ್ಲೆಯ ಪ್ರತಿಷ್ಠೆ ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದ ಎಚ್ ಎಂಟಿ ವಾಚ್ ಕಾರ್ಖಾನೆ ಈಗ ಬರೀ ನೆನಪು ಮಾತ್ರ. ಆದರೆ, ಅದೇ ಜಾಗದಲ್ಲಿ 2024 ಮಾರ್ಚ್ ಇಲ್ಲವೆ ಏಪ್ರಿಲ್ ವೇಳೆಗೆ ತುಮಕೂರಿನಲ್ಲಿ ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ತುಮಕೂರು : ಜಿಲ್ಲೆಯ ಪ್ರತಿಷ್ಠೆ ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದ ಎಚ್ ಎಂಟಿ ವಾಚ್ ಕಾರ್ಖಾನೆ ಈಗ ಬರೀ ನೆನಪು ಮಾತ್ರ. ಆದರೆ, ಅದೇ ಜಾಗದಲ್ಲಿ 2024 ಮಾರ್ಚ್ ಇಲ್ಲವೆ ಏಪ್ರಿಲ್ ವೇಳೆಗೆ ತುಮಕೂರಿನಲ್ಲಿ ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಪಗ್ರಹಗಳಿಗೆ ಉಪಯೋಗವಾಗುವ ಟ್ಯಾಂಕರ್‌ಗಳ ನಿರ್ಮಾಣ ಮಾಡುವ ಘಟಕ ತಲೆ ಎತ್ತಿದೆ ಎಂದರು.
ಇದುವರೆಗೂ ಇಸ್ರೋ ಉಪಗ್ರಹಗಳ ಉಡಾವಣೆಗೆ ಉಪಯೋಗಿಸುತ್ತಿದ್ದ ಟ್ಯಾಂಕರ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದು, ಇನ್ನು ಮುಂದೆ ತುಮಕೂರಿನ ಘಟಕದ ಮೂಲಕ ಇಸ್ರೋ ಸ್ಥಾವಲಂಬಿಯಾಗಲಿದೆ ಎಂಬುದು ಹೆಗ್ಗಳಿಕೆ. ಚಂದ್ರಯಾನ -೩ ರ ಯಶಸ್ಸಿನ ಹಿನ್ನೆಲೆ ಇತ್ತೀಚೆಗಷ್ಟೇ ಗೌರವ ಡಾಕ್ಟರೇಟ್ ಪದವಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿಗೆ ಭಾಜನರಾದ ಡಾ.ಎಸ್.ಸೋಮನಾಥ್ ರನ್ನು ಬೆಂಗಳೂರಿನ ಆಂತರಿಕ ಭವನದಲ್ಲಿ ಭೇಟಿಯಾಗಿ ಗೌರವಿಸುವ ಜತೆಗೆ ತುಮಕೂರಿನ ಪ್ರೊಪುಲೆಂಟ್ ಟ್ಯಾಂಕರ್‌ಗಳ ಉತ್ಪಾದನಾ ಘಟಕವನ್ನು ಶೀಘ್ರ ಕಾರ್ಯಾರಂಭ ಮಾಡುವಂತೆ ಜಿಲ್ಲೆಯ ಜನರ ಪರವಾಗಿ ಮನವಿ ಮಾಡಿದ್ದೆ ಎಂದು ನೆನಪಿಸಿಕೊಂಡರು.
ಮುಂದಿನ 2024ರ ಮಾರ್ಚ್, ಏಪ್ರಿಲ್ ವೇಳೆಗೆ ತುಮಕೂರಿನ ಉತ್ಪಾದನಾ ಘಟಕ ಕಾರ್ಯಾರಂಭಿಸುವ ಭರವಸೆ ನೀಡಿದರು.
ಇಸ್ರೋ ಉತ್ಪಾದನಾ ಘಟಕ ಕಾರ್ಯಾರಂಭ ಮಾಡುವ ಮೂಲಕ ಉದ್ಯೋಗಗಳು ಸೃಷ್ಠಿಯಾಗಿ ಆದಷ್ಟೂ ಸ್ಥಳೀಯರಿಗೂ ಹೆಚ್ಚು ಅವಕಾಶಗಳು ಸಿಗುವಂತೆ ಇಸ್ರೋ ತೀರ್ಮಾನಿಸುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದ್ದೇನೆ. ತುಮಕೂರಿನಲ್ಲಿ ಬಾಹ್ಯಾಕಾಶ ಸಂಸ್ಥೆ ಕಾರ್ಯಾರಂಭ ಮಾಡುತ್ತಿರುವುದು ದೇಶ, ರಾಜ್ಯ ಹಾಗೂ ಜಿಲ್ಲೆಯ ಹೆಮ್ಮೆ ಎನ್ನಿಸಿದೆ ಎಂದರು.
ತುಮಕೂರು ಜನತೆ ಜಾತಿ ಮತ್ತು ಪಕ್ಷವನ್ನು ಹೊರತುಪಡಿಸಿ ಮುದ್ಧ ಹನುಮೇಗೌಡರ ಬಗ್ಗೆ ಒಂದು ಅಪಾರವಾದ ನಂಬಿಕೆ ಇದೆ ಆ ವರ್ಗದ ಜನಕ್ಕೆ ನಾನು ಋಣಿಯಾಗಿರುತ್ತೇನೆ, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನಾನು ಅಭ್ಯರ್ಥಿ ಆಕಾಂಕ್ಷಿ ಆಗಿರುವುದು ಸತ್ಯ. ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದ್ದು ಜೆಡಿಎಸ್ ಈ ಕ್ಷೇತ್ರ ಜೆಡಿಎಸ್ ಪಕ್ಷಕ್ಕೆ ಮೀಸಲಿಟ್ಟರೆ ನೀವು ಜೆಡಿಎಸ್ ಪಕ್ಷ ಸೇರುತ್ತೀರಾ ಎಂದಾಗ ಆ ಪ್ರಶ್ನೆ ಉದ್ಭವಿಸುವುದಿಲ್ಲ. ಏಕೆಂದರೆ ಬಿಜೆಪಿ ಪಕ್ಷದ ವರಿಷ್ಠರು ಹಾಗೂ ಸ್ಥಳೀಯ ಮುಖಂಡರು ನಮ್ಮ ಬಗ್ಗೆ ವಿಶ್ವಾಸವನ್ನು ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ, ನಾನು ಇಲ್ಲಿಯೇ ಸ್ಪರ್ಧಿಸುತ್ತೇನೆ ಎಂದರು.
ಬಿಜೆಪಿ ಪಕ್ಷದಲ್ಲಿ ಟಿಕೆಟ್ ನೀಡಿದರೆ ಇಂಡಿಪೆಂಡೆಂಟ್ ಆಗಿ ನಿಂತುಕೊಳ್ಳುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸ್ವತಂತ್ರವಾಗಿ ನಿಂತುಕೊಳ್ಳುವ ಅವಶ್ಯಕತೆ ನನಗಿಲ್ಲ, ಪಕ್ಷವೇ ಟಿಕೆಟ್ ನೀಡುವಾಗ ನಾನು, ಸ್ವತಂತ್ರವಾಗಿ ಕೇಳಿದ್ದು ಕೊಡಲಿ ಆ ವಿಚಾರವಾಗಿ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಮುದ್ದಮ್ಮೇಗೌಡರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ವದಂತಿ ಹೆಚ್ಚಾಗಿದೆ ಇದಕ್ಕೆ ಏನು ಹೇಳುತ್ತೀರಾ? ಎಂದಾಗ ನಾನು, ಈ ಎಲ್ಲಾ ಪ್ರಶ್ನೆಗಳಿಗೆ ಈಗ ಉತ್ತರ ನೀಡುವುದಿಲ್ಲ, ನಾನು, ಬಿಜೆಪಿ ಪಕ್ಷದಲ್ಲಿದ್ದೇನೆ ಇಲ್ಲಿಯೇ ನಾನು, ಲೋಕಸಭಾ ಸದಸ್ಯ ಸ್ಥಾನಕ್ಕೆ ಟಿಕೆಟ್ ಆಕಾಂಕ್ಷಿಯಾಗಿರುತ್ತೇನೆ ಎಂದು ಪುನರುಚ್ಛರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗೂಳೂರು ವಿಜಯಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.