ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಇಸ್ರೋ ಅಧ್ಯಕ್ಷ
ತಮ್ಮ ದೇವಸ್ಥಾನಗಳ ಭೇಟಿ ಕಾರಣಕ್ಕಾಗಿಯೇ ಸುದ್ದಿಯಾಗುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಗುರುವಾರ, ಗುಜರಾತ್ ಸೌರಾಷ್ಟ್ರಕ್ಕೆ ಭೇಟಿ ನೀಡಿ ಸೋಮನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

ನವದೆಹಲಿ (ಸೆ.28): ಇಸ್ರೋದ ಮಹತ್ವದ ಉಡಾವಣೆ ಹಾಗೂ ಯೋಜನೆಗಳ ವೇಳೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ದೇಶದ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಪರ ವಿರೋಧದ ಚರ್ಚೆಗಳ ನಡುವೆ ಇಸ್ರೋ ಅಧ್ಯಕ್ಷ ಸೋಮನಾಥ್ ಗುರುವಾರ ಗುಜರಾತ್‌ನ ಸೌರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ಸೌರಾಷ್ಟ್ರದಲ್ಲಿರುವ ವಿಶ್ವ ಪ್ರಸಿದ್ಧ ಆದಿ ಜ್ಯೋತಿರ್ಲಿಂಗ ಶ್ರೀ ಸೋಮನಾಥ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ವೇಳೆ ಸೋಮನಾಥ್ ಸಾಂಪ್ರದಾಯಿಕ ಕಚ್ಚೆ, ಶಲ್ಯ ಹಾಗೂ ಬಿಳಿ ಬಣ್ಣದ ಕುರ್ತಾ ಧರಿಸಿದ್ದರು. ಶಿವಲಿಂಗಕ್ಕೆ ಹಾಲಿನ ಅಭಿಷೇಕ, ಆರತಿಯನ್ನು ಬೆಳಗಿದರು. ಕೊನೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಸೋಮನಾಥ್ ಅವರಿಗೆ ಜ್ಯೋತಿರ್ಲಿಂಗದ ಫೋಟೋ ನೀಡಿ ಸನ್ಮಾನಿಸಲಾಯಿತು.
ಚಂದ್ರಯಾನ-3 ಉಡಾವಣೆಗೂ ಮುನ್ನ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಇಸ್ರೋ ಅಧ್ಯಕ್ಷ ಪೂಜೆ ಸಲ್ಲಿಸಿದ್ದರು. ಈ ಬಗ್ಗೆ ವ್ಯಾಪಕ ಪರ ವಿರೋಧದ ಚರ್ಚೆಯಾಗಿತ್ತು. ಚಂದ್ರನ ನೆಲದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆದ ಬಳಿಕ ಕೇರಳದ ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದ ಹರಕೆಯನ್ನೂ ತೀರಿಸಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, 'ನಾನೊಬ್ಬ ಅನ್ವೇಷಕ, ನಾನು ಚಂದ್ರನನ್ನು ಅನ್ವೇಷಣೆ ಮಾಡುತ್ತೇನೆ. ಅದರೊಂದಿಗೆ ನನ್ನೊಳಗಿನ ಅಂಶಗಳನ್ನೂ ಕೂಡ ನಾನು ಅನ್ವೇಷಣೆ ಮಾಡುತ್ತೇನೆ. ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಎರಡನ್ನೂ ಅನ್ವೇಷಿಸಲು ಇದು ನನ್ನ ಜೀವನದ ಒಂದು ಭಾಗವಾಗಿದೆ. ನಾನು ಅನೇಕ ದೇವಾಲಯಗಳಿಗೆ ಭೇಟಿ ನೀಡುತ್ತೇನೆ ಮತ್ತು ನಾನು ಅನೇಕ ಗ್ರಂಥಗಳನ್ನು ಓದುತ್ತೇನೆ. ನಾನು ಈ ಬ್ರಹ್ಮಾಂಡದಲ್ಲಿ ನಮ್ಮ ಅಸ್ತಿತ್ವ ಮತ್ತು ನಮ್ಮ ಪ್ರಯಾಣ ಇದರ ಅರ್ಥವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ. ," ಅವರು ಹೇಳಿದರು. ಭೂಮಿಯ ಹೊರಗಿನ ಬಾಹ್ಯಾಕಾಶವನ್ನು ವಿಜ್ಞಾನದ ಮೂಲಕ ಅನ್ವೇಷಣೆ ಮಾಡುತ್ತೇನೆ. ನನ್ನ ಒಳಗಿನ ವಿಚಾರವನ್ನು ಆಧ್ಯಾತ್ಮದ ಮೂಲಕ ಅನ್ವೇಷಣೆ ಮಾಡುತ್ತೇನೆ ಎಂದು ಹೇಳಿದ್ದರು.
ಇಂದು ವಿಕ್ರಮ್ ಹಾಗೂ ಪ್ರಗ್ಯಾನ್ ಎಚ್ಚರವಾದರೆ ಅದು ಇಸ್ರೋ ಪಾಲಿಗೆ ಐತಿಹಾಸಿಕ, ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್!
ಜುಲೈನಲ್ಲಿ ಚಂದ್ರಯಾನ-3 ಮಿಷನ್‌ಗೆ ಮುನ್ನ ಇಸ್ರೋ ವಿಜ್ಞಾನಿಗಳ ತಂಡವು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿತ್ತು, ಇದು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಬೆರೆಸುವ ಚರ್ಚೆಗೆ ಕಾರಣವಾಯಿತು.ಸೋಮನಾಥ್ ಅವರು ಆಂತರಿಕ ಮತ್ತು ಬಾಹ್ಯ ಆತ್ಮಗಳನ್ನು ಅನ್ವೇಷಿಸಲು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದು ಹೇಳಿದರು. "ಬಾಹ್ಯಕ್ಕಾಗಿ, ನಾನು ವಿಜ್ಞಾನವನ್ನು ಮಾಡುತ್ತೇನೆ, ನನ್ನೊಳಗಿನ ವಿಚಾರಗಳ ಅನ್ವೇಷಣೆಗಾಗಿ ನಾನು ದೇವಾಲಯಗಳಿಗೆ ಬರುತ್ತೇನೆ" ಎಂದು ಉನ್ನತ ವಿಜ್ಞಾನಿ ಹೇಳಿದ್ದರು.
ನಾವು ಹೇಳದ ‘ಚಂದ್ರರಹಸ್ಯ’ ಇನ್ನೂ ಇದೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್