Asianet Suvarna News Asianet Suvarna News

ಚಂದ್ರನ ಮತ್ತೊಂದು ಬದಿಯ ಚಿತ್ರ ಸೆರೆ ಹಿಡಿದು ಕಳಿಸಿದ ವಿಕ್ರಂ

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಅಣಿಯಾಗುತ್ತಿರುವ ವಿಕ್ರಂ ಲ್ಯಾಂಡರ್‌, ಚಂದ್ರನ ಮತ್ತೊಂದು ಬದಿಯ ಫೋಟೋಗಳನ್ನು ಸೆರೆ ಹಿಡಿದು ರವಾನಿಸಿದೆ. ಈ ಚಿತ್ರಗಳಲ್ಲಿ ಚಂದ್ರನ ಕುಳಿಗಳು ಹಾಗೂ ಗುಡ್ಡಗಳು ಅತ್ಯಂತ ಸ್ಪಷ್ಟವಾಗಿ ಕಾಣುತ್ತಿವೆ.

ISRO chandrayaan3 Vikram lander captured and sent a picture of another side of the moon akb
Author
First Published Aug 22, 2023, 9:32 AM IST | Last Updated Aug 22, 2023, 9:53 AM IST

ಬೆಂಗಳೂರು:  ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಅಣಿಯಾಗುತ್ತಿರುವ ವಿಕ್ರಂ ಲ್ಯಾಂಡರ್‌, ಚಂದ್ರನ ಮತ್ತೊಂದು ಬದಿಯ ಫೋಟೋಗಳನ್ನು ಸೆರೆ ಹಿಡಿದು ರವಾನಿಸಿದೆ. ಈ ಚಿತ್ರಗಳಲ್ಲಿ ಚಂದ್ರನ ಕುಳಿಗಳು ಹಾಗೂ ಗುಡ್ಡಗಳು ಅತ್ಯಂತ ಸ್ಪಷ್ಟವಾಗಿ ಕಾಣುತ್ತಿವೆ. ‘ಚಂದ್ರಯಾನ 3’ ನೌಕೆಯನ್ನು ಗುಡ್ಡಗಳು ಅಥವಾ ಕಂದಕಗಳು ಇಲ್ಲದ ಅತ್ಯಂತ ಸುರಕ್ಷಿತ ಜಾಗದಲ್ಲಿ ಇಳಿಸುವ ಉದ್ದೇಶದೊಂದಿಗೆ ಲ್ಯಾಂಡರ್‌ಗೆ ಅಪಾಯ ಶೋಧಕ ಹಾಗೂ ತಡೆ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಆ ಕ್ಯಾಮೆರಾ ಇದೀಗ ಸೆರೆ ಹಿಡಿದಿರುವ ದೃಶ್ಯಗಳನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ. ಈ ಕ್ಯಾಮೆರಾವನ್ನು ಇಸ್ರೋದ ಪ್ರಮುಖ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವಾದ ಅಹಮದಾಬಾದ್‌ ಮೂಲದ ಬಾಹ್ಯಾಕಾಶ ಅಪ್ಲಿಕೇಷನ್ಸ್‌ ಸೆಂಟರ್‌ ಅಭಿವೃದ್ಧಿಪಡಿಸಿದೆ.

ಚಂದ್ರಯಾನ-2  ನೌಕೆಯ ಆರ್ಬಿಟರ್‌ ಜೊತೆ ಸಂಪರ್ಕ ಸಾಧಿಸಿದ ಚಂದ್ರಯಾನ-3

2019ರಲ್ಲಿ ಚಂದ್ರಯಾನ-2 ನೌಕೆಯ ಜತೆ ಉಡಾವಣೆ ಮಾಡಲಾಗಿದ್ದ, ಚಂದಿರನ ಕಕ್ಷೆಯಲ್ಲಿ ಈಗಲೂ ಸುತ್ತುತ್ತಿರುವ ಆರ್ಬಿಟರ್‌ (Orbitor) ಜತೆ ಚಂದ್ರಯಾನ-3 ನೌಕೆಯ ಜತೆ ಹೋಗಿರುವ ಲೂನಾರ್‌ ಮಾಡ್ಯೂಲ್‌ (Lunar module) ಯಶಸ್ವಿಯಾಗಿ ಸಂಪರ್ಕ ಸಾಧಿಸಿದೆ.  ಈ ವಿಷಯವನ್ನು ಟ್ವೀಟ್‌ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತಿಳಿಸಿದೆ. ‘ಬಾರೋ, ಗೆಳೆಯ! ಚಂದ್ರಯಾನ-3 ಲೂನಾರ್‌ ಮಾಡ್ಯೂಲ್‌ ಅನ್ನು ಆರ್ಬಿಟರ್‌ ಅಧಿಕೃತವಾಗಿ ಸ್ವಾಗತಿಸಿದೆ. ಎರಡೂ ಸಾಧನಗಳ ನಡುವೆ ಪರಸ್ಪರ ಸಂವಹನ ಸಾಧ್ಯವಾಗಿದೆ’ ಎಂದು ಇಸ್ರೋ ಮಾಹಿತಿ ನೀಡಿದೆ.

ಪ್ರಕಾಶ್‌ ರಾಜ್‌ ಚಂದ್ರಯಾನ ಗೇಲಿ ವಿವಾದ: ಸ್ಪಷ್ಟನೆ ನೀಡಿದ ನಟ

2019ರಲ್ಲಿ ಚಂದ್ರಯಾನ-2 ನೌಕೆ (Chandrayaan 2) ಯೋಜನೆಯಡಿ ಆರ್ಬಿಟರ್‌, ಲ್ಯಾಂಡರ್‌ ಹಾಗೂ ರೋವರ್‌ (Rover) ಅನ್ನು ಕಳುಹಿಸಲಾಗಿತ್ತು. ಆದರೆ ಲ್ಯಾಂಡರ್‌ (Lander) ಚಂದ್ರನ ಮೇಲೆ ಇಳಿಯುವಾಗ ಸಂಪರ್ಕ ಕಡಿದುಕೊಂಡು ಚಂದ್ರನ ಒಡಲಿಗೆ ಅಪ್ಪಳಿಸಿತ್ತು. ಒಂದು ವರ್ಷ ಮಾತ್ರ ಜೀವಿತಾವಧಿ ಹೊಂದಿದ್ದ ಆರ್ಬಿಟರ್‌, ಇಸ್ರೋ ವಿಜ್ಞಾನಿಗಳು ಮಾಡಿದ ನಿಖರ ಉಡಾವಣೆ ಹಾಗೂ ಸೂಕ್ತ ರೀತಿಯ ಕಕ್ಷೆ ಬದಲಾವಣೆ ಪ್ರಕ್ರಿಯೆಯಿಂದಾಗಿ ತನ್ನ ಜೀವಿತಾವಧಿಯನ್ನು 5 ವರ್ಷಗಳಿಗೆ ಹೆಚ್ಚಿಸಿಕೊಂಡಿದೆ. ಚಂದ್ರಯಾನ 3 ಜತೆ ಹೋಗಿರುವ ಲೂನಾರ್‌ ಮಾಡ್ಯೂಲ್‌ ಕೂಡ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಅಮೂಲ್ಯ ಮಾಹಿತಿಯನ್ನು ಭೂಮಿಗೆ ಕಳುಹಿಸಿಕೊಡಲಿದೆ.

ಭಾರತದ ಮಹತ್ವಾಕಾಂಕ್ಷಿಯ ಯೋಜನೆ ಚಂದ್ರಯಾನ 3 ನಿರಂತರವಾಗಿ ತನ್ನ ಗುರಿಯತ್ತ ಸಾಗುತ್ತಿದೆ. ಈಗ ಇಸ್ರೋ ಚಂದ್ರಯಾನ-3 ಚಂದ್ರಯಾನ-2 ಆರ್ಬಿಟರ್ ನಡುವೆ ಸಂವಹನವನ್ನು ಯಶಸ್ವಿಯಾಗಿ ಸ್ಥಾಪಿಸಿ ದೊಡ್ಡ ಸಾಧನೆ ಮಾಡಿದೆ. 

23ರ ಬದಲು 27ಕ್ಕೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್
ಭಾರತದ ಮಹತ್ವಕಾಂಕ್ಷಿ ಯೋಜನೆ  ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗಲು ಕ್ಷಣಗಣನೇ ಆರಂಭಗೊಂಡಿದೆ. ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ. ಇದರ ನಡುವೆ ಇಸ್ರೋ ಅಹಮ್ಮದಾಬಾದ್ ಕೇಂದ್ರದ ನಿರ್ದೇಶಕ ನಿಲೇಶ್ ಎಂ ದೇಸಾಯಿ (Nilesh M. desai) ವಿಕ್ರಮ ಲ್ಯಾಂಡರ್ ಇಳಿಯಲು ಹೊಸ ದಿನಾಂಕ ಸೂಚಿಸಿದ್ದಾರೆ. ಆಗಸ್ಟ್ 23ಕ್ಕೆ ಸಾಧ್ಯವಾಗದಿದ್ದರೆ ಆಗಸ್ಟ್ 27ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಸಲಾಗುತ್ತದೆ ಎಂದಿದ್ದಾರೆ. ಚಂದ್ರಯಾನ 3 ಯಶಸ್ವಿಯಾಗುವುದು ಖಚಿತ. ನೌಕೆ ಉಡಾವಣೆ ಬಳಿಕ ಪ್ರತಿ ನಿಮಿಷ ಸೂಕ್ಷ್ಮವಾಗಿ ಗಮನಿಸಿದ್ದೇವೆ, ನಿರ್ವಹಣೆ ಮಾಡಿದ್ದೇವೆ. ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಇಳಿಸಲು ಎಲ್ಲವೂ ಸಿದ್ಧಾವಾಗಿದೆ. ಆದರೆ ಆಗಸ್ಟ್ 23 ರಂದು ಚಂದ್ರನಲ್ಲಿರುವ ವಾತಾವರಣ, ಪರಿಸ್ಥಿತಿ, ಮಾಡ್ಯುಲ್ ಸ್ಥಿತಿಗತಿ ಗಮನಿಸಿ ಲ್ಯಾಂಡ್ ಮಾಡಲಾಗುತ್ತದೆ. ಒಂದು ವೇಳೆ ಪ್ರತಿಕೂಲ ವಾತಾವರಣವಿದ್ದರೆ ಆಗಸ್ಟ್ 27ರಂದು  ವಿಕ್ರಮ್ ಲ್ಯಾಂಡರ್ ಇಳಿಸಲಾಗುತ್ತದೆ ಎಂದು ನಿಲೇಶ್ ಎಂ ದೇಸಾಯಿ ಹೇಳಿದ್ದಾರೆ.

23ರ ಬದಲು 27ಕ್ಕೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್, ಚಂದ್ರಯಾನ3 ದಿನಾಂಕ ಬದಲಿಸಿತಾ ಇಸ್ರೋ?

Latest Videos
Follow Us:
Download App:
  • android
  • ios