ಭಾರತದ ಚಂದ್ರಯಾನ-3 ನೌಕೆ ಚಂದ್ರನ ಮೇಲೆ ಇಳಿಯಲು ಸಜ್ಜಾಗಿರುವ ಹೊತ್ತಿನಲ್ಲೇ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಟ್ವೀಟರ್‌ನಲ್ಲಿ ಹಂಚಿಕೊಂಡ ವ್ಯಂಗ್ಯಚಿತ್ರವೊಂದು ವಿವಾದಕ್ಕೀಡಾಗಿದೆ. ಲೋಟವೊಂದರಲ್ಲಿ ಚಹಾ ಸುರಿಯುತ್ತಿರುವ ವ್ಯಕ್ತಿಯೊಬ್ಬರ ವ್ಯಂಗ್ಯಚಿತ್ರವನ್ನು ರಾಜ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಮುಂಬೈ: ಭಾರತದ ಚಂದ್ರಯಾನ-3 ನೌಕೆ ಚಂದ್ರನ ಮೇಲೆ ಇಳಿಯಲು ಸಜ್ಜಾಗಿರುವ ಹೊತ್ತಿನಲ್ಲೇ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಟ್ವೀಟರ್‌ನಲ್ಲಿ ಹಂಚಿಕೊಂಡ ವ್ಯಂಗ್ಯಚಿತ್ರವೊಂದು ವಿವಾದಕ್ಕೀಡಾಗಿದೆ. ಲೋಟವೊಂದರಲ್ಲಿ ಚಹಾ ಸುರಿಯುತ್ತಿರುವ ವ್ಯಕ್ತಿಯೊಬ್ಬರ ವ್ಯಂಗ್ಯಚಿತ್ರವನ್ನು ರಾಜ್‌ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು, ‘ಇದೀಗ ಬಂದ ಸುದ್ದಿ: ಚಂದ್ರನಿಂದ ಬಂದ ಮೊದಲ ಚಿತ್ರ. ವಿಕ್ರಮ್‌ ಲ್ಯಾಂಡರ್‌. ಜಸ್ಟ್‌ ಆಸ್ಕಿಂಗ್‌’ ಎಂದು ಬರೆದುಕೊಂಡಿದ್ದಾರೆ.

ಕಾರ್ಟೂನ್‌ನಲ್ಲಿರುವ ವ್ಯಕ್ತಿ ನಿರ್ದಿಷ್ಟವಾಗಿ ಇವರೇ ಎಂದು ಹೇಳಿಲ್ಲ. ಆದರೆ ರಾಜ್‌ ಅವರು ಇಸ್ರೋ ಮಾಜಿ ಮುಖ್ಯಸ್ಥ (ISRO Former Chief) ಕೆ. ಶಿವನ್‌ ( k Shivan) ಅವರನ್ನು ಗೇಲಿ ಮಾಡಿದಂತಿದೆ. ಚಿತ್ರವು ಶಿವನ್‌ರನ್ನೇ ಹೋಲುತ್ತದೆ. ಈ ವ್ಯಂಗ್ಯಚಿತ್ರದ ಮೂಲಕ ಪ್ರಕಾಶ್‌ ವಿಜ್ಞಾನಿಗಳನ್ನು ಅವಮಾನಿಸಿದ್ದಾರೆ ಎಂದು ಅನೇಕರು ಕಿಡಿಕಾರಿದ್ದಾರೆ. ಆದರೆ, ಇದರ ಬೆನ್ನಲ್ಲೇ ರಾಜ್‌ ಸ್ಪಷ್ಟನೆ ನೀಡಿ, ‘ನಾನು 1969ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲಿಗ, ಅಮೆರಿಕ ಗಗನಯಾನಿ ನೀಲ್‌ ಆರ್ಮಸ್ಟ್ರಾಂಗ್‌ ಅವರನ್ನು ಉಲ್ಲೇಖಿಸಿ ಹಳೆಯ ಜೋಕ್‌ ಟ್ವೀಟ್‌ ಮಾಡಿದ್ದೆ. ಅವರ ಸಾಧನೆಯನ್ನು ಕೇರಳದ ಚಾಯ್‌ವಾಲಾ ಒಬ್ಬ ಸಂಭ್ರಮಿಸುವ ಚಿತ್ರ ಅದು. ಆದರೆ ಇದರಲ್ಲಿ ಟ್ರೋಲ್‌ಗಳು ಯಾವ ಚಾಯ್‌ವಾಲಾನನ್ನು ಕಂಡರು?’ ಎಂದು ಪ್ರಶ್ನಿಸಿದ್ದಾರೆ.

Chandrayaan- 3: ಇಸ್ರೋ ಮಾಜಿ ಮುಖ್ಯಸ್ಥರಿಗೆ ಪ್ರಕಾಶ್‌ ರೈ ಲೇವಡಿ: ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಾ ಎಂದು ನೆಟ್ಟಿಗರ ಟೀಕೆ

ಈ ನಡುವೆ, ರಾಜ್‌ ಈ ಟ್ವೀಟನ್ನು ಅನೇಕರು ಖಂಡಿಸಿದ್ದಾರೆ, ‘ಪ್ರಕಾಶ್‌ ರಾಜ್‌ (Prakash Raj) ಅವರ ಈ ನಾಚಿಕೆಗೇಡಿನ ಟ್ವೀಟನ್ನು ನಾನು ಖಂಡಿಸುತ್ತೇನೆ. ಇಸ್ರೋದ ಯಶಸ್ಸು ಭಾರತದ ಯಶಸ್ಸು’ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಸಿಂಘ್ವಿ (Abhishek Singvi) ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರೊಬ್ಬರು, ‘ಪ್ರಕಾಶ್‌ ಜೀ, ಈ ಚಂದ್ರಯಾನ ಮಿಷನ್‌ ಇಸ್ರೋದಿಂದ ಬಂದದ್ದು. ಬಿಜೆಪಿಯದಲ್ಲ (BJP). ಅದು ಯಶಸ್ವಿಯಾದರೆ, ಅದು ಭಾರತಕ್ಕಾಗಿ ಯಾವುದೇ ಪಕ್ಷಕ್ಕಾಗಿ ಅಲ್ಲ. ಈ ಮಿಷನ್‌ ವಿಫಲವಾಗಬೇಕೆಂದು ನೀವು ಏಕೆ ಬಯಸುತ್ತೀರಿ? ಬಿಜೆಪಿ ಕೇವಲ ಆಡಳಿತ ಪಕ್ಷ. ಒಂದು ದಿನ ಹೋಗುತ್ತದೆ. ಆದರೆ ಇಸ್ರೋ ಸಾಧನೆ ವರ್ಷಗಳ ಕಾಲ ಉಳಿಯುತ್ತದೆ ಮತ್ತು ನಮಗೆ ಹೆಮ್ಮೆ ತರುತ್ತದೆ’ ಎಂದು ಬರೆದಿದ್ದಾರೆ.

Chandrayaan 3: ಚಂದ್ರನ ನೆಲದತ್ತ ಭಾರತ, ಶಶಿಯ ಆಗಸದಲ್ಲಿ ವಿಕ್ರಮ್‌ ಅನಾವರಣ!

ಜಗತ್ತು ಒಂದು ಮೈಲಿಗಲ್ಲು ಎಂದು ಪರಿಗಣಿಸುವ ಸಾಧನೆಯನ್ನು ನೀವು ಗೇಲಿ ಮಾಡುತ್ತಿದ್ದೀರಿ. ನೀವು ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಿ. ನೀವು ಸಹ ದೇಶವಾಸಿ ಎಂದು ಹೇಳಿಕೊಳ್ಳಲು ನಾಚಿಕೆಪಡುತ್ತೇನೆ !! ಇಸ್ರೋ ಬಗ್ಗೆ ನನಗೆ ಹೆಮ್ಮೆ ಇದೆ!! ಜೈ ಹಿಂದ್‌’ ಎಂದು ಇನ್ನೊಬ್ಬ ಬಳಕೆದಾರ ಕಿಡಿಕಾರಿದ್ದಾರೆ.

Scroll to load tweet…