Asianet Suvarna News Asianet Suvarna News

ವಿವಾದದ ಬೆನ್ನಲ್ಲೇ ಆತ್ಮಚರಿತ್ರೆ ಹಿಂಪಡೆದ ಇಸ್ರೋ ಚೇರ್ಮೆನ್ ಎಸ್ ಸೋಮನಾಥ್!

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರ ಆತ್ಮಚರಿತ್ರೆ ವಿವಾದಕ್ಕೆ ಸಿಲುಕಿದ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೀಗ ಆತ್ಮಚರಿತ್ರೆಯನ್ನೇ ಹಿಂಪಡೆದಿದ್ದಾರೆ. 

ISRO chairman S Somanath withdraw his Nilavu Kudicha Simhangal Autobiography after controversy ckm
Author
First Published Nov 4, 2023, 10:36 PM IST

ತಿರುವಂತಪುರಂ(ನ.04) ಚಂದ್ರಯಾನ 3 ನೌಕೆಯನ್ನು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಸಿ ಅಧ್ಯಯನ ನಡೆಸಿದ ಹೆಗ್ಗಳಿಗೆ ಇಸ್ರೋ ಚೇರ್ಮೆನ್ ಎಸ್ ಸೋಮಾನಾಥ್ ಅವರಿಗಿದೆ. ಅತೀ ಕಡಿಮೆ ಖರ್ಚಿನಲ್ಲಿ ಚಂದ್ರಯಾನ ಮಾಡಿದ ಭಾರತದ ಮಾದರಿಯನ್ನು ಇದೀಗ ಇತರ ದೇಶಗಳು ಅನುಸರಿಸಲು ಮುಂದಾಗಿದೆ. ವಿಶ್ವಾದ್ಯಂತ ಇಸ್ರೋ ಸಾಧನೆಗೆ ಪ್ರಶಂಸೆಗಳು ವ್ಯಕ್ತವಾಗಿದೆ. ಈ ಸಾಧನೆ ರೂವಾರಿಯಾಗಿರುವ ಎಸ್ ಸೋಮನಾಥನ್ ಯುವ ಪೀಳಿಗೆ ಸ್ಪೂರ್ತಿಯಾಗಲು ಮಳೆಯಾಳಂ ಭಾಷೆಯಲ್ಲಿ ಆತ್ಮಚರಿತ್ರೆ ಬರೆದಿದ್ದಾರೆ. ನಿಲಾವು ಕುಡಿಚ್ಚ ಸಿಂಹಗಳ್( ಬೆಳದಿಂಗಳ ಕುಡಿದ ಸಿಂಹಗಳು) ಹೆಸರಿನ ಈ ಆತ್ಮಚರಿತ್ರೆ ಭಾರಿ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಸೋಮನಾಥ್ ಆತ್ಮಚರಿತ್ರೆಯನ್ನು ಪ್ರಕಟಣೆಯಿಂದಲೇ ಹಿಂಪಡೆದಿದ್ದಾರೆ.

ಚಂದ್ರಯಾನ 3ರ ಯಶಸ್ಸಿನ ಹಾಗೂ ರೋಚಕ ಪಯಣವನ್ನು ಸೋಮನಾಥ್ ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಈ ಆತ್ಮಚರಿತ್ರೆ ಪ್ರಕಟಣೆಗೆ ಕೋಝಿಕೋಡ್‌ನ ಲಿಪಿ ಬುಕ್ಸ್ ಪ್ರಕಾಶನಕ್ಕೆ ನೀಡಲಾಗಿತ್ತು. ಆದರೆ ಈ ಪ್ರಕಾಶನ ಕೆಲ ಅಧ್ಯಾಯನಗಳನ್ನು ಪ್ರಚಾರದ ರೂಪದಲ್ಲಿ ಬಿಡುಗಡೆ ಮಾಡಿದೆ. ಇದರ ಒಂದು ಭಾಗವನ್ನು ಮಲೆಯಾಳಂ ಸುದ್ಧಿ ಮಾಧ್ಯಮ ಪ್ರಕಟಿಸಿತ್ತು. ಇಷ್ಟೇ ಅಲ್ಲ ಇಸ್ರೇ ಮಾಜಿ ಚೇರ್ಮೆನ್ ಕೆ ಶಿವನ್ ತಮ್ಮನ್ನು ಇಸ್ರೋ ಅಧ್ಯಕ್ಷರಾಗುವುದನ್ನು ತಡೆದಿದ್ದರು ಅನ್ನೋ ಅರ್ಥದ ಅಧ್ಯಾಯ ವಿವಾದಕ್ಕೆ ಕಾರಣವಾಗಿತ್ತು.

ಚಂದ್ರಯಾನ-3ಕ್ಕಿಂತ ಮೂರು ಪಟ್ಟು ದೂರ ಕ್ರಮಿಸಿದ ಆದಿತ್ಯ ಎಲ್‌-1, ಇಸ್ರೋ ಮಾಹಿತಿ!

ಮಾಧ್ಯಮದಲ್ಲಿ ಸುದ್ದಿ ಭಾರಿ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಸೋಮನಾಥ್, ನನ್ನ ಆತ್ಮಚರಿತ್ರೆ ಆಯ್ದ ಭಾಗದ ಅಧ್ಯಾಯವನ್ನು ತಪ್ಪಾಗಿ ಅರ್ಥೈಸಲಾಗಿದೆ. ವಾಕ್ಯಗಳನ್ನು ಕತ್ತರಿಸುವ ವೇಳೆ ಅನಾರ್ಥ ಮಾಡಲಾಗಿದೆ. ಮಾಜಿ ಚೇರ್ಮೆನ್ ಕೆ ಶಿವನ್, ನನ್ನನ್ನು ಚೇರ್ಮೆನ್ ಆಗಲು ತಡೆದಿದ್ದರು ಎಂದು ನಾನು ಎಲ್ಲೂ ಹೇಳಿಲ್ಲ. ಇಸ್ರೋ ಸಾಧನೆ ಹಾದಿಯ ಆತ್ಮಚರಿತ್ರೆ ಇದಾಗಿದೆ. ಇದು ಒಂದು ತಂಡವಾಗಿ ಮಾಡಿದ ಸಾಧನೆಯಾಗಿದೆ. ಬಾಹ್ಯಾಕಾಶ ಕಮಿಷನ್ ಸಮಿತಿಯ ಸದಸ್ಯನಾಗಿರುವುದೇ ಚೇರ್ಮೆನ್ ಜವಾಬ್ದಾರಿಯತ್ತ ನನ್ನನ್ನು ಕೊಂಡೊಯ್ದಿದೆ. ಮತ್ತೊಂದು ಇಸ್ರೋ ಘಟಕದ ನನಗೆ ಮುಖ್ಯ ಇಸ್ರೋದ ಚೇರ್ಮೆನ್ ಆಗುವ ಸಾಧ್ಯತೆ ಕಡಿಮೆ ಇತ್ತು ಎಂದಿದ್ದೇನೆ ಎಂದು ಸೋಮನಾಥ್ ಸ್ಪಷ್ಟಪಡಿಸಿದ್ದಾರೆ.

ಕೇವಲ ಸ್ಪಷ್ಟನೆ ನೀಡಿ ಸೋಮನಾಥ್ ಸುಮ್ಮನಾಗಿಲ್ಲ. ಆತ್ಮಚರಿತ್ರೆಯನ್ನು ಪ್ರಕಟಣೆಯಿಂದಲೆ ಹಿಂಪಡೆದಿದ್ದಾರೆ. ಈ ಆತ್ಮಚರಿತ್ರೆ ಬರೆಯಲು ಮುಖ್ಯ ಕಾರಣ, ಇದು ಸ್ಪೂರ್ತಿದಾಯಕ ಪಯಣವಾಗಿದೆ. ಈ ದಾರಿಯಲ್ಲಿ ಎದುರಿಸಿದ ಸವಾಲು, ಬಾಹ್ಯಾಕಾಶ ತಂತ್ರಜ್ಞಾನಿಯಿಂದ ಚಂದ್ರಯಾನ 3ರ ಯಶಸ್ಸಿನ ವರೆಗಿನ ಸಾಧನೆಯ ಪಯಣದ ರೋಚಕ ಘಟನೆಗಳಾಗಿದೆ. ಇದನ್ನು ಯುವ ತಲೆಮಾರಿಗೆ ಹೇಳುವ ಪ್ರಯತ್ನ ಮಾಡಿದ್ದೇನೆ. ಆದರೆ ವಿವಾದ ಸೃಷ್ಟಿಸುವ ಉದ್ದೇಶ ಇಲ್ಲ ಎಂದು ಸೋಮನಾಥ್ ಹೇಳಿದ್ದಾರೆ.

ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಇಸ್ರೋ ಅಧ್ಯಕ್ಷ

ಕೆ ಶಿವನ್ ಬಳಿಕ ಇಸ್ರೋ ಚೇರ್ಮೆನ್ ಜವಾಬ್ದಾರಿ ವಹಿಸಿಕೊಂಡ ಸೋಮನಾಥ್, ಚಂದ್ರಯಾನ 3 ಉಡಾವಣೆಗೆ ತಯಾರಿ ಆರಂಭಿಸಿದ್ದರು. ಈ ವೇಳೆ ಮಾಜಿ ಅಧ್ಯಕ್ಷ ಕೆ ಶಿವನ್ ಬಳಿ ಸತತವಾಗಿ ಸಂಪರ್ಕದಲ್ಲಿದ್ದು, ಹಲವು ಮಾಹಿತಿಯನ್ನು, ಮಾರ್ಗದರ್ಶನವನ್ನೂ ಪಡೆದಿರುವುದಾಗಿ ಸ್ವತಃ ಸೋಮನಾಥ್ ಹೇಳಿದ್ದಾರೆ. ನಾನು ಇಸ್ರೋ ಚೇರ್ಮೆನ್ ಆದ ಬಳಿಕ , ಕೆ ಶಿವನ್ ಬಳಿ ಹಲವು ಸಲಹೆ ಪಡೆದಿದ್ದೇನೆ. ಪ್ರತಿ ಬಾರಿ ನಮಗೆ ಉಪಯುಕ್ತ ಸಲಹೆ, ಮಾರ್ಗದರ್ಶನ ನೀಡಿದ್ದಾರೆ. ಕಾರಣ ಚಂದ್ರಯಾನ 2 ಅಂತಿಮ ಹಂತದಲ್ಲಿ ತಾಂತ್ರಿಕ ಕಾರಣದಿಂದ ವಿಫಲಗೊಂಡಿತ್ತು.ನನಗಿಂತಲೂ ಹೆಚ್ಚಿನ ಸವಾಲನ್ನು ಕೆ ಶಿವನ್ ಎದುರಿಸಿದ್ದರು. ಹೀಗಾಗಿ ಅವರ ಮಾರ್ಗದರ್ಶನ ನಮಗೆ ಮುಖ್ಯವಾಗಿತ್ತು ಎಂದು ಸೋಮನಾಥ್ ಹೇಳಿದ್ದಾರೆ.
 

Follow Us:
Download App:
  • android
  • ios