ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನ ಯೋಜನೆಯಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಸರ್ವೀಸ್ ಮಾಡ್ಯೂಲ್ನಿಂದ ಸಿಬ್ಬಂದಿ ಇರುವ ಕ್ರ್ಯೂ ಮಾಡ್ಯೂಲ್ ಅನ್ನು ಬೇರ್ಪಡಿಸುವ ಪರೀಕ್ಷೆ ಯಶಸ್ವಿಯಾಗಿದೆ. ಇದು 2026ರ ಮಾನವರಹಿತ ಕಾರ್ಯಾಚರಣೆ ಮತ್ತು ಸಿಬ್ಬಂದಿಯ ಸುರಕ್ಷತೆಗೆ ಅತಿಮುಖ್ಯವಾಗಿದೆ.
ನವದೆಹಲಿ: ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಪ್ರಪ್ರಥಮ ಯೋಜನೆಯಾದ ಗಗನಯಾನ ಸಾಕಾರದತ್ತ ಇಸ್ರೋದ ಮತ್ತೊಂದು ಅಡಿ ಮುಂದಿಟ್ಟಿದೆ. ಆರ್ಬಿಟ್ ಮಾಡ್ಯೂಲ್ನ ಭಾಗಗಳಾಗಿರುವ ಸರ್ವೀಸ್ ಮಾಡ್ಯೂಲ್ನಿಂದ (ಎಸ್ಎಂ) ಸಿಬ್ಬಂದಿ ಇರುವ ಮಾಡ್ಯೂಲ್ (ಸಿಎಂ) ಅನ್ನು ಬೇರ್ಪಡಿಸುವ ಪರೀಕ್ಷೆ ಯಶಸ್ವಿಯಾಗಿದೆ.
ಉಡಾವಣೆಯಾಗುವ ವೇಳೆ ಸಿಬ್ಬಂದಿ ಮಾಡ್ಯೂಲ್ಗೆ ಅಂಟಿಕೊಂಡಿರುವ ಸರ್ವೀಸ್ ಮಾಡ್ಯೂಲ್, ಸೌರ ಫಲಕಗಳ ಮೂಲಕ ಅದಕ್ಕೆ ಅಗತ್ಯವಾದ ವಿದ್ಯುತ್ ಪೂರೈಕೆ, ದಾರಿ ತೋರಿಸುವಿಕೆ, ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸಲು ಬೇಕಾಗುವ ಉಪಕರಣಗಳ ಶೇಖರಣೆಯಂತಹ ಕಾರ್ಯಗಳನ್ನು ನಿರ್ವಹಿಸುತ್ತದೆ.
ಬೇರ್ಪಡಿಸುವಿಕೆ:
ಕ್ರ್ಯೂ ಮಾಡ್ಯೂಲ್ ಭೂಮಿಗೆ ಮರಳುವಾಗ ಎಸ್ಎಂನ ಅಗತ್ಯವಿರುವುದಿಲ್ಲ. ಜತೆಗೆ ಅದು ಅಂಟಿಕೊಂಡಿದ್ದರೆ ಮಾಡ್ಯೂಲ್ನ ತೂಕ ಹೆಚ್ಚಿ ಪ್ಯಾರಾಚೂಟ್ಗಳು ತೆರೆದುಕೊಂಡು ಲ್ಯಾಂಡ್ ಆಗಲು ಸಮಸ್ಯೆಯಾಗುತ್ತದೆ. ಆದಕಾರಣ, ವಾತಾವರಣ ಪ್ರವೇಶಕ್ಕೂ ಮುನ್ನವೇ ಅದನ್ನು ಬೇರ್ಪಡಿಸಲಾಗುತ್ತದೆ. ಇದೀಗ ಯಾವುದೇ ಸಮಸ್ಯೆಯಿಲ್ಲದೆ ಸರಿಯಾದ ಸಮಯಕ್ಕೆ, ಸೂಕ್ತ ವಿಧಾನದಲ್ಲಿ ಅವುಗಳ ಬೇರ್ಪಡಿಸುವುಕೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಇದು ಯೋಜನೆಯ ಯಶಸ್ಸಿಗೆ ಮಾತ್ರವಲ್ಲ, ಸಿಬ್ಬಂದಿಯ ಸುರಕ್ಷತೆಗೂ ಅತಿಮುಖ್ಯವಾಗಿದೆ.
ಈ ಯಶಸ್ವಿ ಪರೀಕ್ಷೆಯೊಂದಿಗೆ, 2026ರ ಅಂತ್ಯದಲ್ಲಿ ಉಡಾವಣೆಗೆ ಉದ್ದೇಶಿಸಲಾಗಿರುವ ಮೊದಲ ಮಾನವರಹಿತ ಕಾರ್ಯಾಚರಣೆ ಇನ್ನೊಂದು ಮಜಲು ದಾಟಿದೆ.
ಲಂಡನ್ನ ಟ್ರಾಫಲ್ಗರ್ ಸ್ಕ್ವೇರ್ನಲ್ಲಿ ನಡೆದ ಉತ್ಸವ
ಅಕ್ಟೋಬರ್ 4ರಂದು ಲಂಡನ್ನ ಟ್ರಾಫಲ್ಗರ್ ಸ್ಕ್ವೇರ್ನಲ್ಲಿ ನಡೆದ ಜಪಾನ್ ಮತ್ಸುರಿ (Japan Matsuri) ಉತ್ಸವದಲ್ಲಿ ಭಾಗವಹಿಸಿದ್ದು ಅದ್ಭುತ ಅನುಭವ!
ಜಪಾನಿನ ಸಂಸ್ಕೃತಿ, ಸಂಗೀತ, ಆಹಾರ ಮತ್ತು ಸಂಪ್ರದಾಯಗಳ ಅದ್ಭುತ ಸಂಗಮವಿದು. ಜೋಜಿ ಹಿರೋಟಾ ಅವರ ಲಂಡನ್ ತೈಕೋ ಡ್ರಮ್ಮರ್ಸ್ನ ಭರ್ಜರಿ ಡ್ರಮ್ಗಳ ನಾದ, ಶಮಿಸೆನ್ ಪಾಪ್ ಸಂಗೀತ, ನವೋಮಿ ಸುಜುಕಿ ಅವರ ಗಾಯನ, ಜಪಾನಿನ ಜನಪದ ನೃತ್ಯಗಳು, ಸುಮೋ ಕುಸ್ತಿ, ಮಾರ್ಷಲ್ ಆರ್ಟ್ಸ್ ಎಲ್ಲವೂ ಮನಸೂರೆಗೊಂಡವು. ಇದು ಕೇವಲ ಪ್ರಕೃತಿಯ ಸೌಂದರ್ಯವಲ್ಲ;. ಎರಡು ದೇಶಗಳ ಸ್ನೇಹ ಮತ್ತು ಸಾಂಸ್ಕೃತಿಕ ಬಾಂಧವ್ಯದ ಸಂಕೇತವೂ ಹೌದು.
ಏಷ್ಯಾದವನಾದ ನನಗೆ ಈ ಸಂಭ್ರಮದ ನಡುವೆ ಇದ್ದಾಗ ಒಂದು ರೀತಿಯ ಮನೆಯಲ್ಲಿರುವ ಆತ್ಮೀಯ ಭಾವನೆ ಮೂಡಿತು. ಜಪಾನ್ಗೆ ಭೇಟಿ ನೀಡುವ ಕನಸು ಇನ್ನೂ ನನಸಾಗಿಲ್ಲ. ಆದರೆ ಜಪಾನೇ ಲಂಡನ್ಗೆ ಬಂದಾಗ, ಆ ಸಂತೋಷವೇ ಬೇರೆ!ಮತ್ತೊಮ್ಮೆ ಇಂತಹ ಉತ್ಸವದಲ್ಲಿ ಭಾಗವಹಿಸಲು ಕಾತರದಿಂದ ಕಾಯುತ್ತಿದ್ದೇನೆ. ಒಂದು ದಿನ ಜಪಾನ್ಗೂ ಭೇಟಿ ನೀಡುವ ಕನಸು ನನಸಾಗಲಿ!


