ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗಳಿಗೆ ಪ್ರತಿಯಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್‌ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲಿ ವಾಯುಪಡೆಯ ಯುದ್ಧ ವಿಮಾನಗಳು ಶೀಘ್ರದಲ್ಲೇ ಟೆಹ್ರಾನ್‌ನ ಆಕಾಶದಲ್ಲಿ ಕಾಣಿಸಿಕೊಳ್ಳಲಿವೆ ಎಂದು ಅವರು ಹೇಳಿದ್ದಾರೆ. 

ಇಸ್ರೇಲ್ (ಜೂ.14): 'ಇಸ್ರೇಲಿ ವಾಯುಪಡೆಯ ಯುದ್ಧ ವಿಮಾನಗಳು ಶೀಘ್ರದಲ್ಲೇ ಟೆಹ್ರಾನ್‌ನ ಆಕಾಶದಲ್ಲಿ ಕಾಣಿಸಿಕೊಳ್ಳಲಿವೆ' ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಸ್ರೇಲ್ ಮೇಲೆ ಇರಾನ್ ನೂರಾರು ಕ್ಷಿಪಣಿ ದಾಳಿ ಬಳಿಕ ಇಂದು ವೀಡಿಯೊ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ನೆತನ್ಯಾಹು ಅಯತೊಲ್ಲಾ ಆಡಳಿತದ ಪ್ರತಿಯೊಂದು ಅಡಗುತಾಣ ಮತ್ತು ಗುರಿಯ ಮೇಲೆ ಇಸ್ರೇಲ್ ದಾಳಿ ಮಾಡಲಿದೆ ಎಂದು ಅವರು ಇರಾನ್‌ಗೆ ಬೆದರಿಕೆ ಹಾಕಿದ್ದಾರೆ.

ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಭಾರೀ ಹಾನಿ:

ಇಸ್ರೇಲ್ ವೈಮಾನಿಕ ದಾಳಿಯಿಂದ ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಗಂಭೀರ ಹಾನಿಯನ್ನುಂಟುಮಾಡಿದೆ. ಇರಾನ್‌ನ ಅಧಿಕಾರಿಗಳು ಏನೇ ಹೇಳಿಕೊಂಡರೂ, ಅವರ ಪರಮಾಣು ಕಾರ್ಯಕ್ರಮವು ಭಾರೀ ನಷ್ಟವನ್ನು ಅನುಭವಿಸಿದೆ ಎಂದು ನೆತನ್ಯಾಹು ದೃಢಪಡಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳಲ್ಲಿ ಇರಾನ್‌ನ ಪರಮಾಣು ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿರುವ ಹಿರಿಯ ವಿಜ್ಞಾನಿಗಳ ತಂಡವನ್ನು ಗುರಿಯಾಗಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಇಸ್ರೇಲ್‌ನ ವಾಯುದಾಳಿಗಳು ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಹಲವು ವರ್ಷಗಳ ಹಿಂದಕ್ಕೆ ತಳ್ಳಿವೆ ಎಂದಿರುವ ನೆತನ್ಯಾಹು, ಈ ದಾಳಿಗಳು ಇರಾನ್‌ನ ಪರಮಾಣು ಯೋಜನೆಗಳಿಗೆ ದೊಡ್ಡ ಆಘಾತವನ್ನುಂಟುಮಾಡಿವೆ ಎಂದಿದ್ದಾರೆ. ಪ್ರಸ್ತುತ ಈ ಬೆಳವಣಿಗೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇರಾನ್‌ನಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.