Benjamin Netanyahu son wedding postponed:ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ, ಪ್ರಧಾನಿ ನೆತನ್ಯಾಹು ತಮ್ಮ ಪುತ್ರ ಅವ್ನರ್ ನೆತನ್ಯಾಹು ಅವರ ಮದುವೆಯನ್ನು ಮುಂದೂಡಿದ್ದಾರೆ. ಈ ಕ್ರಮಕ್ಕೆ ನೆತನ್ಯಾಹು ವಿರೋಧಿಗಳಿಂದ ಟೀಕೆ ವ್ಯಕ್ತವಾಗಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಉಲ್ಬಣಗೊಂಡ ಹಿನ್ನೆಲೆಯಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಪುತ್ರ ಅವ್ನರ್ ನೆತನ್ಯಾಹು ಅವರ ಮದುವೆಯನ್ನು ಮುಂದೂಡಿದ್ದಾರೆ.
ಟೈಮ್ಸ್ ಆಫ್ ಇಸ್ರೇಲ್ ವರದಿಯ ಪ್ರಕಾರ, ಅವ್ನರ್‌ರ ಸಂಗಾತಿ ಅಮಿತ್ ಯಾರ್ಡೆನಿ ಜೊತೆಗಿನ ವಿವಾಹ ಜೂನ್ 16, 2025ಕ್ಕೆ ನಿಗದಿಯಾಗಿತ್ತು. ಆದರೆ, ಇರಾನ್ ಜೊತೆಗಿನ ಯುದ್ಧದಿಂದಾಗಿ ಇದನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಇಸ್ರೇಲಿ ಯುದ್ಧ ವಿಮಾನಗಳು ಶೀಘ್ರದಲ್ಲೇ ಟೆಹ್ರಾನ್‌ಗೆ ನುಗ್ಗಲಿವೆ; ಇರಾನ್‌ಗೆ ನೆತನ್ಯಾಹು ಮತ್ತೆ ಬೆದರಿಕೆ!
ನೆತನ್ಯಾಹು ಪುತ್ರನ ಮದುವೆಗೆ ವಿರೋಧ:
Benjamin Netanyahu son wedding postponed: ಗಾಜಾದಲ್ಲಿ ಒತ್ತೆಯಾಳುಗಳ ಸಂಕಷ್ಟದ ಮಧ್ಯೆ ವಿವಾಹ ಆಚರಣೆ ಸೂಕ್ತವಲ್ಲ ಎಂದು ಇಸ್ರೇಲ್‌ನ ನೆತನ್ಯಾಹು ವಿರೋಧಿಗಳು ಟೀಕಿಸಿದ್ದಾರೆ. ಗಾಜಾದಲ್ಲಿ ಅನೇಕ ಇಸ್ರೇಲಿ ಜನರು ಒತ್ತೆಯಾಳುಗಳಾಗಿರುವಾಗ, ವಿವಾಹದಂತಹ ಕಾರ್ಯಕ್ರಮವನ್ನು ಆಚರಿಸುವುದು ಸರಿಯಲ್ಲ ಎಂದು ಅವರು ಹೇಳಿದರು.
ಇರಾನ್-ಇಸ್ರೇಲ್ ಸಂಘರ್ಷ ತೀವ್ರ: ಜೂನ್ 13ರಂದು ಇಸ್ರೇಲ್ ಇರಾನ್‌ನ ಪರಮಾಣು, ಮಿಲಿಟರಿ ಮತ್ತು ಕ್ಷಿಪಣಿ ನೆಲೆಗಳ ಮೇಲೆ ದಾಳಿ ನಡೆಸಿತು. ಪ್ರತಿಯಾಗಿ, ಇರಾನ್ ಇಸ್ರೇಲ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ಮಾಡಿತು, ಇದರಿಂದ ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಉದ್ಭವಿಸಿತು. ಜನರು ಬಾಂಬ್ ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದರು. ಇರಾನ್ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 180 ಮಂದಿ ಗಾಯಗೊಂಡಿದ್ದಾರೆ. 7 ಜನರು ಕಾಣೆಯಾಗಿದ್ದು, ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಇಸ್ರೇಲಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Indians in Iran embassy helpline: ಇರಾನ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ರಾಯಭಾರ ಕಚೇರಿ ಮಹತ್ವದ ಸೂಚನೆ!
ಇಸ್ರೇಲ್ ದಾಳಿಯ ಬಳಿಕ ಇರಾನ್ ಅಮೆರಿಕ ಜೊತೆಗಿನ ಪರಮಾಣು ಮಾತುಕತೆಯನ್ನು ನಿಲ್ಲಿಸಿದೆ. ಇಸ್ರೇಲ್‌ನ ಬಾಂಬ್ ದಾಳಿಯನ್ನು ನಿಲ್ಲಿಸಲು ಇದೊಂದೇ ಮಾರ್ಗ ಎಂದು ಅಮೆರಿಕ ಹೇಳಿದೆ.
ನೆತನ್ಯಾಹು ಎಚ್ಚರಿಕೆ: ಏತನ್ಮಧ್ಯೆ, ಇರಾನ್ ಮೇಲೆ ಇಲ್ಲಿಯವರೆಗೆ ನಡೆದಿರುವ ದಾಳಿಗಳು ಮುಂದಿನ ದಿನಗಳಲ್ಲಿ ನಡೆಯಲಿರುವ ದಾಳಿಗಳಿಗೆ ಹೋಲಿಸಿದರೆ ಏನೂ ಅಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ (ಜೂನ್ 14) ಎಚ್ಚರಿಸಿದ್ದಾರೆ. ಇದೀಗ ಜಗತ್ತು ಆತಂಕದಿಂದ ನೋಡುತ್ತಿದೆ.
