ಹಿಂದೂ ಭಕ್ತಿಗೀತೆಯನ್ನು ಹಾಡಿದ ಮುಸ್ಲಿಂ ಗಾಯಕಿಯೊಬ್ಬಳಿಗೆ ಮುಸ್ಲಿಂ ಧರ್ಮಗುರುಗಳು ನಿಂದಿಸಿದ್ದಾರೆ. ಇಂಡಿಯನ್ ಐಡಲ್‌ನಲ್ಲಿ ಭಾಗವಹಿಸಿದ ಫರ್ಮಾರಿ ನಾಜ್‌,  ಹಿಂದೂ ದೇವ ಶಿವನ ಹೊಗಳುವ ಹರ್‌ ಹರ್ ಶಂಭೊ ಹಾಡನ್ನು ಹಾಡಿದ್ದರು.

ಸಂಗೀತಾ ನೃತ್ಯ ಮುಂತಾದ ಕಲಾ ಪ್ರಕಾರಗಳಿಗೆ ಜಾತಿ ಭಾಷೆ ಧರ್ಮದ ಹಂಗಿಲ್ಲ. ದೇಶ ಭಾಷೆಯನ್ನು ಮೀರಿ ಕಲೆ ಬೆಳೆಯುವುದು. ಆದರೆ ಈಗ ಹರ್‌ ಹರ್ ಶಂಭು ಹಾಡನ್ನು ಹಾಡಿದ ಮುಸ್ಲಿಂ ಗಾಯಕಿಯೊಬ್ಬಳಿಗೆ ಬಹಿಷ್ಕಾರದ ಭಯ ಕಾಡಿದೆ. ಇಸ್ಲಾಂ ಪ್ರಕಾರ ಆಕೆ ಕೆಟ್ಟ ಕೆಲಸವನ್ನು ಮಾಡಿದ್ದಾಳೆ. ಇಸ್ಲಾಂ ಕಾನೂನು ಷರಿಯಾ ಇವುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಗಾಯಕಿಯನ್ನು ನಿಂದಿಸಿದ್ದಾರೆ. ಇಂಡಿಯನ್‌ ಐಡಲ್‌ ರಿಯಾಲಿಟಿ ಶೋದಲ್ಲಿ ಈ ಹಿಂದೆ ಹಾಡಿದ ಫರ್ಮಾನಿ ನಾಜ್ ಎಂಬುವವರೇ ಈಗ ಹರ್‌ ಹರ್‌ ಶಂಭೋ ಹಾಡಿ ಮುಸ್ಲಿಂ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾದವರು. ಈ ಹಾಡು ಹಿಂದೂ ದೇವರಾದ ಭಗವಾನ್ ಶಿವನನ್ನು ಹೊಗಳುವ ಹಾಡಾಗಿದೆ. 

ದಿಯೋಬಂದ್‌ ಮೂಲದ ಮುಸ್ಲಿಂ ಧರ್ಮಗುರು ಆಗಸ್ಟ್‌ 1 ರಂದು ಈ ಹೇಳಿಕೆ ನೀಡಿದ್ದಾರೆ. ವಿವಾದದ ಬಳಿಕ ಅಭಿಲಿಪ್ಸ ಪಂಡ ಹಾಗೂ ಜೀತು ಶರ್ಮಾ ಅವರು ಹಾಡಿರುವ ಹರ್‌ಹರ್ ಶಂಭೋ ಮೂಲ ಹಾಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮುಸ್ಲಿಂ ಗಾಯಕಿ ಫರ್ಮಾರಿ ನಾಜ್‌, ಹಿಂದೂ ದೇವ ಶಿವನಿಗೆ ಸಂಬಂಧಿಸಿದ ಈ ಹರ್ ಹರ್‌ ಶಂಭೊ ಹಾಡನ್ನು ಹಾಡಿ ಒಂದು ವಾರದ ಹಿಂದೆ ತಮ್ಮ ಯೂಟ್ಯೂಬ್ ಚಾನೆಲ್‌ಗೆ ಹಾಕಿದ್ದರು. ಈ ಹಾಡಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಆದಾಗ್ಯೂ ಇದು ಈಗ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ಮುಸ್ಲಿಂ ಸಮುದಾಯದ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

ಮತೀಯವಾದಿಗಳ ಮಟ್ಟಹಾಕಿ: ಮುಸ್ಲಿಂ ಧಾರ್ಮಿಕ ಸಮ್ಮೇಳನದಲ್ಲಿ ದೋವಲ್‌ ಕರೆ

Scroll to load tweet…

ಸುದ್ದಿಸಂಸ್ಥೆ ಎಎನ್‌ಐಗೆ ನೀಡಿದ ಹೇಳಿಕೆಯಲ್ಲಿ ಧರ್ಮಗುರುಗಳಾದ ಮುಫ್ತಿ ಅಸದ್‌ ಖಾಸೀಂ, ಹಾಡುವುದು ಹಾಗೂ ನರ್ತಿಸುವುದಕ್ಕೆ ಮುಸ್ಲಿಂ ಧರ್ಮದಲ್ಲಿ ಅವಕಾಶವಿಲ್ಲ, ಇದನ್ನು ಕೆಟ್ಟ ಕೆಲಸ ಎಂದು ಹೇಳಲಾಗುತ್ತದೆ. ಷರೀಯಾ ಕಾನೂನು ಇದಕ್ಕೆ ಅವಕಾಶ ನೀಡುವುದಿಲ್ಲ. ಇದು ಕೆಟ್ಟ ಕೆಲಸ. ಆಕೆ ತನ್ನ ಈ ಹಾಡಿನ ಕೃತ್ಯಕ್ಕಾಗಿ ಅಲ್ಲಾಹ್ ಬಳಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. 

Scroll to load tweet…

ಸರ್ಕಾರಿ ಶಾಲೆಗಳಲ್ಲಿ ಭಾನುವಾರದ ಬದಲು ಶುಕ್ರವಾರ ರಜೆ, ಬಿಹಾರ-ಜಾರ್ಖಂಡ್‌ನಲ್ಲಿ ಕೋಲಾಹಲ!

ಹೀಗೆ ತನ್ನ ಹಾಡು ವಿವಾದಕ್ಕೀಡಾಗುತ್ತಿದ್ದಂತೆ ನಾಯಕಿ ಫರ್ಮಾನಿ ನಾಜ್‌, ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಎಲ್ಲರಿಗೂ ಇದನ್ನು ವಿವಾದ ಮಾಡದಂತೆ ಮನವಿ ಮಾಡಿದ್ದಾರೆ. ಕಲಾಕಾರರಿಗೆ ಯಾವುದೇ ಧರ್ಮದ ಹಂಗಿಲ್ಲ, ನಾನು ಈ ಹಾಡನ್ನು ಹಾಡುವಾಗ ಎಲ್ಲವನ್ನೂ ಮರೆತೆ, ಅಲ್ಲದೇ ನಾನು ಕವ್ವಾಲಿಯನ್ನು ಕೂಡ ಹಾಡುತ್ತೇನೆ. (ಕವ್ವಾಲಿ ಮುಸ್ಲಿಂ ಧಾರ್ಮಿಕ ಹಾಡುಗಳು) ಅಲ್ಲದೇ ಮೊಹಮ್ಮದ್ ರಫಿ ಹಾಗೂ ಮಾಸ್ಟರ್‌ ಸಲೀಮ್ ಕೂಡ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಬೆದರಿಕೆಯನ್ನು ಸ್ವೀಕರಿಸಿಲ್ಲ. ಇದೊಂದು ಸಣ್ಣ ವಿವಾದವಷ್ಟೇ. ಈ ವಿಚಾರವಾಗಿ ಯಾರೂ ನಮ್ಮ ಮನೆಗೆ ಬಂದು ಏನೂ ಹೇಳಿಲ್ಲ. ಬೆದರಿಕೆ ಒಡ್ಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

Scroll to load tweet…

ಈ ಗಾಯಕಿ ಫರ್ಮಾನಿ ಉತ್ತರಪ್ರದೇಶದ ಮುಜಾಫರ್‌ನಗರದ ನಿವಾಸಿಯಾಗಿದ್ದು, ಅವರು ಟಿವಿ ಚಾನೆಲ್‌ವೊಂದರ ರಿಯಾಲಿಟಿ ಶೋ ಇಂಡಿಯನ್‌ ಐಡಲ್‌ನ ಸೀಸನ್ 12ರಲ್ಲಿ ಭಾಗವಹಿಸಿದ ನಂತರ ಸಾಕಷ್ಟು ಜನಮನ್ನಣೆ ಗಳಿಸಿದ್ದರು. ಇವರಿಗೆ ಯೂಟ್ಯೂಬ್‌ನಲ್ಲಿ 3.8 ಮಿಲಿಯನ್ ಫಾಲೋವರ್‌ಗಳಿದ್ದಾರೆ. ಅಲ್ಲದೇ ಹಾಡುವುದೇ ಅವರ ಆದಾಯದ ಮೂಲವಾಗಿದೆ. ಇದಕ್ಕೂ ಮೊದಲು ಉತ್ತರಪ್ರದೇಶ ವಿಧಾನಸಭಾ ಚುನಾವಣೆ ನಡೆಯುವುದಕ್ಕೂ ಕೆಲ ತಿಂಗಳ ಮೊದಲು ಫರ್ಮಾನಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಹಾಡೊಂದನ್ನು ಬಿಡುಗಡೆ ಮಾಡಿದ್ದರು.