ಸರ್ಕಾರಿ ಶಾಲೆಗಳಲ್ಲಿ ಭಾನುವಾರದ ಬದಲು ಶುಕ್ರವಾರ ರಜೆ, ಬಿಹಾರ-ಜಾರ್ಖಂಡ್‌ನಲ್ಲಿ ಕೋಲಾಹಲ!
ಬಿಹಾರ ಮತ್ತು ಜಾರ್ಖಂಡ್‌ನ ಸರ್ಕಾರಿ ಶಾಲೆಗಳಿಗೆ ಶುಕ್ರವಾರ ರಜೆಯ ವಿಷಯ ಬೆಳಕಿಗೆ ಬಂದ ನಂತರ ಹೊಸ ವಿವಾದ ಹುಟ್ಟಿಕೊಂಡಿದೆ. ಶಿಕ್ಷಣ ಇಲಾಖೆ ಕ್ರಮ ಕೈಗೊಂಡು ತನಿಖೆಗೆ ಆದೇಶಿಸಿದೆ. ಶುಕ್ರವಾರವನ್ನು ರಜೆಯ ದಿನವನ್ನಾಗಿ ಇಡಲು ಕಾರಣವೇನು ಮತ್ತು ಭಾನುವಾರದ ರಜೆಯ ನಿಯಮವನ್ನು ನಿಲ್ಲಿಸಲು ಕಾರಣವೇನು ಎಂದು ಪ್ರಶ್ನಿಸಲಾಗಿದೆ.
ರಾಂಚಿ (ಜುಲೈ 29): ಶಾಲೆಗಳಲ್ಲಿ ವಾರದ ರಜೆ ಅಥವಾ ಶುಕ್ರವಾರದ ರಜೆ ಬಗ್ಗೆ ಹೊಸ ವಿವಾದ ಹುಟ್ಟಿಕೊಂಡಿದೆ. ಯಾವುದೇ ಸರ್ಕಾರಿ ಸೂಚನೆಗಳಿಲ್ಲದೆ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಭಾನುವಾರ ಶಾಲೆಗಳನ್ನು ತೆರೆಯಲಾಗುತ್ತಿದೆ. ಜಾರ್ಖಂಡ್‌ನ ಜಮ್ತಾರಾ ನಂತರ, ಈಗ ದುಮ್ಕಾ ಜಿಲ್ಲೆಯ 33 ಶಾಲೆಗಳು ಶುಕ್ರವಾರ ವಾರದ ರಜೆ ಘೋಷಿಸಿವೆ. ಅದೇ ಸಮಯದಲ್ಲಿ, ಬಿಹಾರದ ಕಿಶನ್‌ಗಂಜ್‌ನಲ್ಲಿ ಅಂತಹ ಶಾಲೆಗಳ ಸಂಖ್ಯೆಯನ್ನು 37 ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರ ಕ್ರಮ ಕೈಗೊಂಡು ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರ ರಜೆಯಿಲ್ಲ. ಆದರೆ, ಜಾರ್ಖಂಡರ್ ಹಾಗೂ ಬಿಹಾರದ ಕೆಲ ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರ ರಜೆ ನೀಡಲಾಗಿದ್ದು, ಭಾನುವಾರ ಪೂರ್ಣ ಅವಧಿಗೆ ಶಾಲೆಗಳನ್ನು ತೆರೆಯಲಾಗುತ್ತಿದೆ. ವಿಷಯ ಬೆಳಕಿಗೆ ಬಂದ ನಂತರ ಬಿಹಾರ ಶಿಕ್ಷಣ ಸಚಿವ ವಿಜಯ್ ಕುಮಾರ್ ಚೌಧರಿ ತನಿಖೆಗೆ ಆದೇಶಿಸಿದ್ದಾರೆ. ಇಂತಹ ಪ್ರಕರಣಗಳು ಬೆಳಕಿಗೆ ಬಂದ ಸ್ಥಳಗಳಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ ಎಂದರು. ಇನ್ನೊಂದೆಡೆ ದುಮ್ಕಾ ಡಿಎಸ್‌ಇ, ಸಂಜಯ್ ಕುಮಾರ್ ದಾಸ್ ಅವರು 33 ಶಾಲೆಗಳ ಬಿಒಗಳಿಗೆ ಪತ್ರ ಬರೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸಲಹೆ ನೀಡಿದ್ದಾರೆ. ಈ ಎಲ್ಲಾ ಶಾಲೆಗಳು ಸರ್ಕಾರು ಉರ್ದು ಶಾಲೆಗಳಾಗಿವೆ. ಸರ್ಕಾರಿ ಶಾಲೆಗಳಲ್ಲಿ ಶುಕ್ರವಾರ ರಜೆ ಇಲ್ಲ, ಭಾನುವಾರ ಸಂಪೂರ್ಣ ರಜೆ ಇರುತ್ತದೆ. ಈ ಶಾಲೆಗಳಲ್ಲಿ ಶುಕ್ರವಾರ ರಜೆ ನಡಲು ಕಾರಣವೇನು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಶುಕ್ರವಾರ ರಜೆ ನೀಡುವಂತೆ ಯಾವುದೇ ಸರ್ಕಾರಿ ಆದೇಶವಿಲ್ಲ ಎಂದು ಹೇಳಲಾಗಿದೆ.
ಈ ಶಾಲೆಗಳಿಗೆ ಶುಕ್ರವಾರ ಏಕೆ ರಜೆ?: ಮಾಧ್ಯಮ ವರದಿಗಳ ಪ್ರಕಾರ, ಶುಕ್ರವಾರ ಸರ್ಕಾರಿ ಶಾಲೆಗಳನ್ನು ಜಾರ್ಖಂಡ್ ಮತ್ತು ಬಿಹಾರದ ಕೆಲ ಜಿಲ್ಲೆಗಳಲ್ಲಿ ಮುಚ್ಚಲಾಗಿದ್ದಯ, ಭಾನುವಾರ ತೆರೆಯಲಾಗಿದೆ, ಮುಸ್ಲಿಂ ಸಮುದಾಯದ ಜನರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶುಕ್ರವಾರ ಶಾಲೆಯ ವಿದ್ಯಾರ್ಥಿಗಳು ನಮಾಜ್ ಮಾಡಲು ಹೋಗುತ್ತಾರೆ. ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಸ್ಥಳೀಯ ಗ್ರಾಮಸ್ಥರು.
ಶಾಲೆಯಲ್ಲಿ ಸಾಮೂಹಿಕ ಸನ್ನಿ: ವಿದ್ಯಾರ್ಥಿಗಳ ಕಿರುಚಾಟಕ್ಕೆ ಬೆಚ್ಚಿದ ಶಿಕ್ಷಕರು : viral video
ಸ್ಪಷ್ಟನೆ ಕೇಳಿದ ಎನ್‌ಸಿಪಿಸಿಆರ್: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (NCPCR) ಕೂಡ ಈ ಕುರಿತಾಗಿ ಸ್ಪಷ್ಟನೆ ಕೇಳಿದೆ. ರಾಜ್ಯದ ಮುಸ್ಲಿಂ ಬಾಹುಳ್ಯದ ಜಿಲ್ಲೆಯ 37 ಸರ್ಕಾರಿ ಶಾಲೆಗಳಲ್ಲಿ ಭಾನುವಾರದ ಬದಲು ಶುಕ್ರವಾರ ವಾರದ ರಜೆಯನ್ನು ಬಿಹಾರ ಸರ್ಕಾರ ನೀಡಿದ್ದೇಕೆ ಎಂದು ಎನ್‌ಸಿಪಿಸಿಆರ್ ಬಿಹಾರದ ಮುಖ್ಯ ಕಾರ್ಯದರ್ಶಿ ಅಮೀರ್ ಸುಭಾನಿಗೆ ಪತ್ರ ಬರೆದಿದೆ. ಭಾನುವಾರದ ಬದಲು ಶುಕ್ರವಾರವನ್ನು ವಾರದ ರಜೆ ಎಂದು ಘೋಷಿಸಲು ಯಾರ ನಿರ್ದೇಶನದ ಮೇರೆಗೆ ನಿರ್ಧರಿಸಲಾಗಿದೆ ಎಂದು ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕನುಂಗೋ ಪತ್ರದಲ್ಲಿ ಕೇಳಿದ್ದಾರೆ. ಆಯೋಗವು 10 ದಿನಗಳಲ್ಲಿ ಈ ವಿಷಯದಲ್ಲಿ ಬಿಹಾರ ಸರ್ಕಾರದಿಂದ ವರದಿ ಕೇಳಿದೆ.
ಶಾಲಾ ಕ್ಯಾಂಪಸ್‌ಗೆ ನುಗ್ಗಿದ ಕಾಡಾನೆ: ಕಕ್ಕಾಬಿಕ್ಕಿಯಾದ ವಿದ್ಯಾರ್ಥಿಗಳು..!
500ಕ್ಕೂ ಹೆಚ್ಚು ಶಾಲೆಗಳಲ್ಲಿ ರಜೆ: ಗಮನಾರ್ಹ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಬಿಹಾರದ ಸೀಮಾಂಚಲ್ ಪ್ರದೇಶದ 500 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಈ ಪರಿಣಾಮದ ಬಗ್ಗೆ ಯಾವುದೇ ಸರ್ಕಾರದ ನಿರ್ದೇಶನವಿಲ್ಲದೆ ವರ್ಷಗಳವರೆಗೆ ಭಾನುವಾರದ ಬದಲು ಶುಕ್ರವಾರವನ್ನು ವಾರದ ರಜೆಯಾಗಿ ಆಚರಿಸುತ್ತಿವೆ ಎಂದು ಹಲವಾರು ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ. ಕಿಶನ್‌ಗಂಜ್, ಅರಾರಿಯಾ, ಕತಿಹಾರ್ ಮತ್ತು ಪುರ್ನಿಯಾದ ನಾಲ್ಕು ಜಿಲ್ಲೆಗಳನ್ನು ಒಳಗೊಂಡಿರುವ ಬಿಹಾರದ ಪೂರ್ವ ಪ್ರದೇಶವು 2011 ರ ಜನಗಣತಿಯ ಪ್ರಕಾರ 30% ರಿಂದ 70% ವರೆಗೆ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಅಂತಹ ಹೆಚ್ಚಿನ ಸಂಖ್ಯೆಯ ಶಾಲೆಗಳು ಅರಾರಿಯಾ ಜಿಲ್ಲೆಯ ಜೋಕಿಹತ್ ಬ್ಲಾಕ್‌ನಲ್ಲಿವೆ, ಅಲ್ಲಿ 244 ಸರ್ಕಾರಿ ಶಾಲೆಗಳಲ್ಲಿ 229 ಶುಕ್ರವಾರ ವಾರದ ರಜೆಯನ್ನು ಹೊಂದಿವೆ. ಜೋಕಿಹತ್ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ಶಿವನಾರಾಯಣ ಸುಮನ್ ಅಂಕಿಅಂಶಗಳನ್ನು ಖಚಿತಪಡಿಸಿದ್ದಾರೆ. "ಇದು ಸಾಕಷ್ಟು ಹಳೆಯ ಅಭ್ಯಾಸ," ಎಂದೂ ಅವರು ಹೇಳಿದ್ದಾರೆ.