Asianet Suvarna News Asianet Suvarna News

ಲಿಬಿಯಾದಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಸಿದ್ದು ಕೇರಳದ ಯುವಕ, ಐಸಿಸ್ ಮುಖವಾಣಿಯಲ್ಲಿ ಬಹಿರಂಗ!

ಐಸಿಸ್ ಉಗ್ರಸಂಘಟನೆಯ ಮುಖವಾಣಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಲಿಬಿಯಾದಲ್ಲಿ ಐಸಿಸ್ ನಡೆಸಿದ ಮೊದಲ ಮರಣಾಂತಿಕ ಉಗ್ರದಾಳಿ ಕುರಿತು ಐಸಿಸ್ ಮಾಹಿತಿ ನೀಡಿದೆ. ಈ ದಾಳಿಯನ್ನು ನಡೆಸಿದ್ದು ಭಾರತೀಯ. ಅದರಲ್ಲೂ ಕೇರಳದ ಯುವಕ. ಈತನ ಕುರಿತು ಕೆಲ ಮಾಹಿತಿಗಳನ್ನು ಐಸಿಸ್ ಬಹಿರಂಗಪಡಿಸಿದೆ.

ISIS mouthpiece Voice of Khurasan reveals Indian who carried out the first deadly attack in Libya was a keralite ckm
Author
Bengaluru, First Published Aug 21, 2022, 3:32 PM IST

ನವದೆಹಲಿ(ಆ.21): ಕೇರಳದಿಂದ ಐಸಿಸ್ ಸೇರಿದಂತೆ ಹಲವು ಉಗ್ರಸಂಘಟನೆಗಳಿಗೆ ಯುವಕರು ಸೇರಿಕೊಳ್ಳುತ್ತಿದ್ದಾರೆ ಅನ್ನೋ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿದೆ. ಇದೀಗ ಐಸಿಸ್ ಉಗ್ರಸಂಘಟನೆ ಈ ಮಾಹಿತಿಯನ್ನು ಖಚಿತಪಡಿಸಿದೆ. ಲಿಬಿಯಾದಲ್ಲಿ ಐಸಿಸ್ ನಡೆಸಿದ ಮೊದಲ ಮಾರಾಣಾಂತಿಕ ಉಗ್ರ ದಾಳಿಯನ್ನು ನಡೆಸಿದ್ದು ಕೇರಳದ ಯುವಕ ಎಂದು ಐಸಿಸ್ ತನ್ನ ಮುಖವಾಣಿ ವಾಯ್ಸ್ ಆಫ್ ಖುರಾಸನ್‌ನಲ್ಲಿ ಹೇಳಿಕೊಂಡಿದೆ. ಈ ದಾಳಿಯಲ್ಲಿ ಭಾರತೀಯ ಮೂಲದ ಐಸಿಸ್ ಉಗ್ರ ಹತನಾಗಿದ್ದಾನೆ ಎಂದು ಖುರಾಸನ್‌ನಲ್ಲಿ ಹೇಳಿದೆ. ಈತನ ಹೆಸರನ್ನು ಐಸಿಸ್ ಬಹಿರಂಗ ಪಡಿಸಿಲ್ಲ. ಆದರೆ ಈತ ಐಸಿಸ್ ಸಂಘಟನೆಯಲ್ಲಿ ಅಬು ಬಕರ್ ಅಲ್ ಹೈದ್ ಹೆಸರಿನಲ್ಲಿ ಗುರುತಿಸಿಕೊಂಡಿದ್ದ. ಇಷ್ಟೇ ಅಲ್ಲ ಈತ ಕೇರಳದ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದ ಯುವಕ. ಗಲ್ಫ್ ರಾಷ್ಟ್ರದಲ್ಲಿ  ಉದ್ಯೋಗಿಯಾಗಿದ್ದ. ಐಸಿಸ್‌ನಿಂದ ಪ್ರಭಾವಿತನಾಗಿ ಇಸ್ಲಾಮ್ ಧರ್ಮ ಸ್ವೀಕರಿಸಿದ್ದ. ಬಳಿಕ ಐಸಿಸ್ ಸಂಘಟನೆ ಸೇರಿಕೊಂಡಿದ್ದ. ಈತನೇ ಲಿಬಿಯಾದಲ್ಲಿನ ಮೊದಲ ಭಯೋತ್ಪಾದಕ ದಾಳಿ ನಡೆಸಿದ್ದಾನೆ. ಈ ದಾಳಿಯಲ್ಲಿ ಅಬು ಬಕರ್ ಅಲ್ ಹೈದ್ ಮೃತಪಟ್ಟಿದ್ದಾನೆ ಎಂದು ವಾಯ್ಸ್ ಆಫ್ ಖುರಾಸನ್ ಹೇಳಿದೆ. 

ವಾಯ್ಸ್ ಆಫ್ ಖುರಾಸನ್ ಆಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಸಿಸ್ ಸಂಘಟನೆಯ ಮುಖವಾಣಿಯಾಗಿದೆ. ಈ ಸ್ಫೋಟಕ  ಮಾಹಿತಿ ಹೊರಬಿದ್ದ ಬೆನ್ನಲ್ಲೇ ಭಾರತದ ತನಿಖಾ ಸಂಸ್ಥೆ ರಹಸ್ಯ ತನಿಖೆ ಆರಂಭಿಸಿದೆ. ಈಗಾಗಲೇ ಕೇರಳದಿಂದ ನಾಪತ್ತೆಯಾಗಿರುವ ಯುವಕರ ಮಾಹಿತಿಯನ್ನು ಪಡೆದುಕೊಂಡಿದೆ. ಕ್ರಿಶ್ಚಿಯನ್‌ನಿಂದ ಇಸ್ಲಾಮ್‌ಗೆ ಮತಾಂತರವಾಗಿರುವ, ವಿದೇಶದಲ್ಲಿ ಕೆಲಸಕ್ಕೆ ಸೇರಿ ಬಳಿಕ ಭಾರತಕ್ಕೆ ಮರಳದ ಕೇರಳದ ಯುವಕರ ಕುರಿತ ಮಾಹಿತಿಯನ್ನು ತನಿಖಾ ಸಂಸ್ಥೆ ಕಲೆ ಹಾಕುತ್ತಿದೆ. 

ISIS terrorist: ಸ್ವಾತಂತ್ರ್ಯ ದಿನದಂದು ದಾಳಿ ಸಂಚು: ಐಸಿಸ್‌ ಉಗ್ರನ ಬಂಧನ

ಲಿಬಿಯದಲ್ಲಿನ 2015ರಲ್ಲಿ ಐಸಿಸ್ ನಡೆಸಿದ ಮೊದಲ ದಾಳಿ ಬೆನ್ನಲ್ಲೇ ವಾಯ್ಸ್ ಆಫ್ ಖುರಾಸನ್ ಮುಖವಾಣಿಯಲ್ಲಿ ಈ ದಾಳಿಯ ಹಿಂದಿರುವುದು ಭಾರತೀಯ ಅನ್ನೋ ಮಾಹಿತಿಯನ್ನು ಬಹಿರಂಗ ಪಡಿಸಿತ್ತು. ಆದರೆ ಈ ಯುವಕನ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿರಲಿಲ್ಲ. ಈ ವೇಳೆಯೂ ಭಾರತೀಯ ತನಿಖಾ ಸಂಸ್ಥೆ ಮುಖವಾಣಿಯಲ್ಲಿನ ಮಾಹಿತಿ ಆಧರಿಸಿ ತನಿಖೆ ನಡೆಸಿತ್ತು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದೀಗ ಈತ ಕೇರಳದ ಯುವಕ ಅನ್ನೋದು ಬಹಿರಂಗಗೊಂಡಿದೆ. ಇಷ್ಟೇ ಅಲ್ಲ ಈತ ಕ್ರಿಶ್ಟಿಯನ್ ಸಮುದಾಯಕ್ಕೆ ಸೇರಿದ್ದವನು, ಬಳಿಕ ಇಸ್ಲಾಮ್‌ಗೆ ಮತಾಂತರಗೊಂಡಿದ್ದ ಅನ್ನೋ ಮಾಹಿತಿಗಳು ತನಿಖಾ ಸಂಸ್ಥೆಗೆ ಸಿಕ್ಕಿದೆ. ಇದೀಗ ಗಲ್ಫ್ ರಾಷ್ಟ್ರದಲ್ಲಿ ಕೇರಳದಿಂದ ಉದ್ಯೋಗಕ್ಕೆ ತೆರಳಿ ಮತಾಂತರಗೊಂಡಿರುವವರ ಕುರಿತು ತನಿಖಾ ಸಂಸ್ಥೆ ಮಾಹಿತಿ ಕೇಳಿದೆ. 

ಪ್ರವಾದಿ ಬೆಂಬಲಿಸಿ ಗುರುದ್ವಾರ ಮೇಲೆ ದಾಳಿ: ಐಸಿಸ್‌

2015ರ ಜನವರಿಯಲ್ಲಿ ಐಸಿಸ್ ಸಂಘನೆ ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿರುವ ಕಾರ್ನ್‌ಥಿಯಾ ಹೊಟೆಲ್ ಮೇಲೆ ದಾಳಿ ನಡೆಸಿತ್ತು. ಕಾರಿನಲ್ಲಿ ಐವರು ಐಸಿಸ್ ಉಗ್ರರ ತಂಡ ನಿರಂತರ ಗುಂಡಿನ ದಾಳಿ ನಡೆಸುತ್ತಾ ಟ್ರಿಪೋಲಿ ಹೊಟೆಲ್‌ಗೆ ನುಗ್ಗಿತ್ತು.  ಕಾರ್ನ್‌ಥಿಯಾ ಹೊಟೆಲ್ ಒಳಗೆ ಕಾರು ನುಗ್ಗಿಸಿದ ಐಸಿಸ್ ಉಗ್ರರು ಕಾರನ್ನೇ ಸ್ಫೋಟಿಸಿ ಆತ್ಮಾಹುತಿ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಲಿಬಿಯಾದ ಐವರು, ತಜಕಿಸ್ತಾನದ ಮೂವರು, ಫ್ರಾನ್ಸ್‌ನ ಓರ್ವ ಹಾಗೂ ಅಮರಿಕ ಓರ್ವ ಪ್ರಜೆ ಸೇರಿ ಒಟ್ಟು10 ಮಂದಿ ಮೃತಪಟ್ಟಿದ್ದರು. ಈ ದಾಳಿಯನ್ನು ಮುನ್ನಡೆಸಿದ್ದು ಕೇರಳದ ಯುವಕ ಅನ್ನೋದು ಐಸಿಸ್ ಮುಖವಾಣಿಯಲ್ಲಿ ಬಹಿರಂಗೊಂಡಿದೆ.

ಕೇರಳದಿಂದ ಐಸಿಸ್ ಸಂಘಟನೆ ಸೇರಿಕೊಳ್ಳುತ್ತಿರುವುದು ಇದು ಹೊಸದೇನಲ್ಲ. ಆದರೆ ಇಡೀ ದಾಳಿಯ ನೇತೃತ್ವ ವಹಿಸಿರುವುದು ಇದೇ ಮೊದಲು.  ಐಸಿಸ್‌ ಜೊತೆ ನಂಟು ಹೊಂದಿದ್ದ ಕೇರಳದ ವ್ಯಕ್ತಿಯೊಬ್ಬನನ್ನು ಅಷ್ಘಾನಿಸ್ತಾನ ಸರ್ಕಾರ ಭಾರತಕ್ಕೆ ಗಡೀಪಾರು ಮಾಡಿತ್ತು. ಕಾಸರಗೋಡಿನ ನಿವಾಸಿಯಾದ ನಶೀದುಲ್‌ ಹಮ್ಜಾಫರ್‌ ಎಂಬಾತ ಉಗ್ರ ಸಂಘಟನೆ ಸೇರಲು 14 ಮಂದಿ ಇತರ ಯುವಕರ ಜೊತೆ ಅಷ್ಘಾನಿಸ್ತಾನಕ್ಕೆ ತೆರಳಿದ್ದ. ಅಕ್ರಮವಾಗಿ ದೇಶ ಪ್ರವೇಶಿಸಿದ ಆರೋಪದ ಮೇಲೆ ನಶೀದುಲ್‌ನನ್ನು ಅಷ್ಘಾನಿಸ್ತಾನದ ಭದ್ರತಾ ಪಡೆ ಕಳೆದ ವರ್ಷ ಬಂಧಿಸಿತ್ತು. ಕಾಬೂಲ್‌ನಿಂದ ಮರಳುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ ನಶೀದುಲ್‌ನನ್ನು ವಶಕ್ಕೆ ಪಡೆದಿದೆ. ಐಸಿಸ್‌ ಜೊತೆ ನಂಟುಹೊಂದಿದ್ದ ವ್ಯಕ್ತಿಯೊಬ್ಬನನ್ನು ಅಷ್ಘಾನಿಸ್ತಾನದಿಂದ ಗಡೀಪಾರು ಮಾಡಿರುವ ಮೊದಲ ಪ್ರಕರಣ ಇದಾಗಿದೆ.

Follow Us:
Download App:
  • android
  • ios