70 ಲಕ್ಷ ಜನ ಬರಲು ಟ್ರಂಪ್ ಏನು ದೇವರಾ?: ಕೈ ನಾಯಕ ಹೇಳಿದ್ದು ಕೇಳಿದಿರಾ?
ಡೋನಾಲ್ಡ್ ಟ್ರಂಪ್ ಭಾರತ ಭೇಟಿಗೆ ಕಾಂಗ್ರೆಸ್ ನಾಯಕನ ಅಪಸ್ವರ| ಅದ್ದೂರಿ ಸ್ವಾಗತದ ಪರಿಗೆ ಅಧೀರ್ ರಂಜನ್ ಚೌಧರಿ ಕಿಡಿ| 70 ಲಕ್ಷ ಜನ ಸೇರಿಸಲು ಟ್ರಂಪ್ ಏನು ದೇವರಾ ಎಂದು ಪ್ರಶ್ನಿಸಿದ ಚೌಧರಿ| ಟ್ರಂಪ್ ಸ್ವಾಗತದ ತಯಾರಿಗಾಗಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ನಾಯಕ| ಟ್ರಂಪ್ ಭೇಟಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಸಿದ್ದತೆಗೆ ಶಿವಸೇನೆ ಕೊಂಕು| 'ಸಿದ್ದತೆ ನೋಡಿದರೆ ಭಾರತೀಯರ ಗುಲಾಮ ಮನೋವೃತ್ತಿಯನ್ನು ತೋರಿಸುತ್ತದೆ'|
ನವದೆಹಲಿ(ಫೆ.19): ಇದೇ ಫೆ.24ರಿಂದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಟ್ರಂಪ್ ಸ್ವಾಗತಕ್ಕೆ ಭರದ ಸಿದ್ಧತೆ ನಡೆದಿದೆ. ಆದರೆ ಇದೇಕೊ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಸರಿ ಕಂಡುಬರುತ್ತಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಭಾರತ ಭೇಟಿಗೆ ಅಪಸ್ವರ ಎತ್ತಿರುವ ಅಧೀರ್ ರಂಜನ್ ಚೌಧರಿ, ಟ್ರಂಪ್ ಸ್ವಾಗತದ ತಯಾರಿಗಾಗಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ.
ಭಾರತ ಚೆನ್ನಾಗಿ ನೋಡಿಕೊಂಡಿಲ್ಲ: ಬರವುದಕ್ಕೂ ಮೊದಲೇ ಇದೇನು ಹೇಳಿಬಿಟ್ರಿ ಟ್ರಂಪ್?
ಅಹಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ 70 ಲಕ್ಷ ಜನ ಟ್ರಂಪ್ ಅವರನ್ನು ಸ್ವಾಗತಿಸಲು ಅವರೇನು ದೇವರೇ ಎಂದು ಅಧೀರ್ ರಂಜನ್ ಚೌಧರಿ ಪ್ರಶ್ನಿಸಿದ್ದಾರೆ.
ಟ್ರಂಪ್ ಸ್ವಹಿತಾಸಕ್ತಿಗಾಗಿ ಭಾರತಕ್ಕೆ ಬರುತ್ತಿದ್ದು, ಅವರಿಗೇಕೆ ಇಷ್ಟು ಅದ್ದೂರಿ ಸ್ವಾಗತ ಎಂದು ಅಧೀರ್ ರಂಜನ್ ಚೌಧರಿ ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
3 ಗಂಟೆ ಇರಲಿರುವ ಟ್ರಂಪ್‌ಗಾಗಿ 100 ಕೋಟಿ ರೂ. ಖರ್ಚು ಮಾಡಿದ ಸರ್ಕಾರ!
ಟ್ರಂಪ್ ಭೇಟಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಸಿದ್ದತೆಗೆ ಶಿವಸೇನೆ ಕೂಡ ಕಿಡಿಕಾರಿದೆ. ಸರ್ಕಾರ ಮಾಡುತ್ತಿರುವ ಸಿದ್ದತೆ ನೋಡಿದರೆ ಭಾರತೀಯರ ಗುಲಾಮ ಮನೋವೃತ್ತಿಯನ್ನು ತೋರಿಸುತ್ತದೆ ಎಂದು ಶಿವಸೇನೆ ಹರಿಹಾಯ್ದಿದೆ.
ಫೆಬ್ರವರಿ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ