Asianet Suvarna News Asianet Suvarna News

ಲಘು ವಾಹನ ಪರವಾನಗಿ ಇದ್ದರೆ ಸರಕು ವಾಹನ ಚಾಲನೆ ಸಾಧ್ಯವೇ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಪ್ರಶ್ನೆ

ಲಘು ವಾಹನದ ಚಾಲನಾ ಪರವಾನಗಿ ಹೊಂದಿರುವವರು ನಿರ್ದಿಷ್ಟ ಗಾತ್ರದ ಸರಕು ವಾಹನದ ಚಾಲನೆ ಮಾಡಬಹುದೇ ಎಂಬುದರ ಕುರಿತಾಗಿ ಕಾನೂನಿನಲ್ಲಿರುವ ಅವಕಾಶವನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಸೂಚಿಸಿದೆ.

Is it possible to drive a cargo vehicle if you have a light vehicle license Supreme Court questions the central government akb
Author
First Published Sep 14, 2023, 8:40 AM IST

ನವದೆಹಲಿ: ಲಘು ವಾಹನದ ಚಾಲನಾ ಪರವಾನಗಿ ಹೊಂದಿರುವವರು ನಿರ್ದಿಷ್ಟ ಗಾತ್ರದ ಸರಕು ವಾಹನದ ಚಾಲನೆ ಮಾಡಬಹುದೇ ಎಂಬುದರ ಕುರಿತಾಗಿ ಕಾನೂನಿನಲ್ಲಿರುವ ಅವಕಾಶವನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಬುಧವಾರ ಸೂಚಿಸಿದೆ.  ಇಂತಹ ಅವಕಾಶಗಳ ಬಗ್ಗೆ ಗಮನಹರಿಸುವುದು ಲಕ್ಷಾಂತರ ಜನರಿಗೆ ಅನುಕೂಲ ಒದಗಿಸಲಿದೆ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ (DY Chandrachud) ಅವರ ನೇತೃತ್ವದ ಸಾಂವಿಧಾನಿಕ ಪೀಠ ಹೇಳಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದ್ದರೆ ಈ ಕುರಿತಾಗಿ ನೀತಿಯನ್ನು ರೂಪಿಸಬೇಕು. ಅಲ್ಲದೇ ಈ ಬಗ್ಗೆ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಮುಂದಿನ 2 ತಿಂಗಳೊಳಗೆ ತಿಳಿಸಬೇಕು. ಕಾನೂನಿನಲ್ಲಿ ತರುವ ಬದಲಾವಣೆಗಳು ರಸ್ತೆ ಸುರಕ್ಷತೆಯನ್ನು ಕಡೆಗಣಿಸಬಾರದು ಎಂದು ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪ್ರಸ್ತುತ 2017ರಲ್ಲಿ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ (Supreme Court) ತ್ರಿಸದಸ್ಯ ಪೀಠ ನೀಡಿದ್ದ ಆದೇಶವನ್ನು ಆಧರಿಸಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಇದಕ್ಕೆ ಕಾನೂನಿನ ಮಾನ್ಯತೆ ನೀಡುವಂತೆ ಕೋರ್ಟ್‌ ಸೂಚಿಸಿದೆ. 2017ರ ತೀರ್ಪಿನ ಪ್ರಕರಣ ವಾಹನ ತೂಕ 7500 ಕೇಜಿ ಮೀರದಿದ್ದರೆ ಅದನ್ನು ಲಘು ವಾಹನ ಎಂದೇ ಪರಿಗಣಿಸಲಾಗುತ್ತದೆ.

ಡೀಸೆಲ್‌ ವಾಹನಗಳ ಮೇಲೆ ಶೇ. 10ರಷ್ಟು ಹೆಚ್ಚುವರಿ ಜಿಎಸ್‌ಟಿ ಶಿಫಾರಸು, ಸ್ಪಷ್ಟೀಕರಣ ನೀಡಿದ ನಿತಿನ್‌ ಗಡ್ಕರಿ

ಗುಜರಾತ್‌ನಲ್ಲಿ ನಕಲಿ ಎನ್ಕೌಂಟರ್‌ ಆರೋಪ: ಮುಂದಿನ ವಾರ ತನಿಖೆ

ಗುಜರಾತ್‌ನಲ್ಲಿ 2002 -06ರವರೆಗೆ ನಡೆದಿದೆ ಎಂದು ಆರೋಪಿಸಲಾದ ನಕಲಿ ಎನ್‌ಕೌಂಟರ್‌ಗಳನ್ನು (Fake encounter allegation) ತನಿಖೆ ನಡೆಸಬೇಕು ಎಂದು 2007ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಎರಡು ವಾರದ ಬಳಿಕ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ (Supreme Court) ತೀರ್ಮಾನಿಸಿದೆ. ನಕಲಿ ಎನ್‌ಕೌಂಟರ್‌ಗಳನ್ನು ತನಿಖೆ ನಡೆಸಬೇಕು ಎಂದು 2007ರಲ್ಲಿ ಹಿರಿಯ ಪತ್ರಕರ್ತ ಬಿ.ಜಿ.ವರ್ಗೀಸ್‌ (BG Varghese) ಹಾಗೂ ಲೇಖಕ ಜಾವೇದ್‌ ಅಕ್ತರ್‌ (Javed Akhtar) ಹಾಗೂ ಶಬ್ನಂ ಹಶ್ಮಿ (Shabnam Hashmi) ದಾವೆ ಹೂಡಿದ್ದರು. ಬಳಿಕ 2014ರಲ್ಲಿ ವರ್ಗೀಸ್‌ ಮೃತಪಟ್ಟಿದ್ದರು. ಇದನ್ನು ಸರ್ವೋಚ್ಚ ನ್ಯಾಯಾಲಯದ ಅಂದಿನ ನ್ಯಾಯಾಧೀಶರಾಗಿದ್ದ ಬೇಡಿ ಅವರ ನೇತೃತ್ವದಲ್ಲಿ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಈ ಪ್ರಕರಣವನ್ನು ಎರಡು ವಾರದ ಬಳಿಕ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ತಿಳಿಸಿದೆ. 

ಅಪಘಾತವಾದರೆ ನಾವೆಷ್ಟು ಸುರಕ್ಷಿತ: ಭಾರತದಲ್ಲೇ ಸಾಧ್ಯ ಇನ್ನು ವಾಹನ ಸುರಕ್ಷತಾ ಪರೀಕ್ಷೆ

9 ಅಂತಸ್ತಿನ ಕಟ್ಟಡಕ್ಕೆ ಬೆಂಕಿ: 56 ಜನ ಬಲಿ

ಹನೋಯಿ: ವಿಯೆಟ್ನಾಂ ರಾಜಧಾನಿ ಹನೋಯಿಯಲ್ಲಿ ( Hanoi)9 ಅಂತಸ್ತಿನ ಅಪಾರ್ಟ್ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು ಈ ವೇಳೆ 4 ಚಿಕ್ಕ ಮಕ್ಕಳೂ ಸೇರಿ 56 ಜನರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ 54 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಮೃತರ ಪೈಕಿ 39 ಜನರ ಗುರುತು ಪತ್ತೆಯಾಗಿದ್ದು, ಉಳಿದ ದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಕಟ್ಟಡದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಬಳಿಕ ಅವಘಡ ಸಂಭವಿಸಿದೆ. 150 ಜನರು ವಾಸಿಸುತ್ತಿದ್ದ ಕಟ್ಟಡದಿಂದ 70 ಜನರನ್ನು ರಕ್ಷಿಸಲಾಗಿದೆ. ಹೀಗಾಗಿ ಮೃತರ ಸಂಖ್ಯೆ 56ಕ್ಕಿಂತ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಕಟ್ಟಡದ ಮಾಲೀಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Follow Us:
Download App:
  • android
  • ios