ವಿದೇಶಿ ವಿನಿಮಯ ಉಲ್ಲಂಘನೆ : ಇಡಿಯಿಂದ ಮತ್ತೆ ಬಿಬಿಸಿ ಅಧಿಕಾರಿಗಳ ವಿಚಾರಣೆ

ಎರಡು ತಿಂಗಳ ಹಿಂದೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯ ಬಳಿಕ ಬಿಬಿಸಿ ಇಂಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ವಿದೇಶಿ ವಿನಿಮಯ ಉಲ್ಲಂಘನೆ ಕುರಿತು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ.

Foreign Exchange Violation ED again questions BBC officials in delhi akb

ನವದೆಹಲಿ: ಎರಡು ತಿಂಗಳ ಹಿಂದೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯ ಬಳಿಕ ಬಿಬಿಸಿ ಇಂಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ವಿದೇಶಿ ವಿನಿಮಯ ಉಲ್ಲಂಘನೆ ಕುರಿತು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ ಮೂಲದ ಸುದ್ದಿ ಮಾಧ್ಯಮದ ಡೆಪ್ಯುಟಿ ಮ್ಯಾನೇಜಿಂಗ್‌ ಎಡಿಟರ್‌ ಅವರನ್ನು ಕಚೇರಿಗೆ ಕರೆಸಿಕೊಂಡು ಇ.ಡಿ. ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಅಡಿ ಬಿಬಿಸಿಯಿಂದ ಕೆಲ ದಾಖಲೆಗಳನ್ನು ಕೇಳಿದ್ದು, ಅದರ ಇನ್ನೂ ಕೆಲ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

ಕಂಪನಿಯು ನಡೆಸಿದೆ ಎನ್ನಲಾದ ವಿದೇಶಿ ನೇರ ಬಂಡವಾಳ ಹೂಡಿಕೆಗೆ (FDI) ಸಂಬಂಧಿಸಿದ ಅಕ್ರಮಗಳನ್ನು ಇ.ಡಿ. ತನಿಖೆ ನಡೆಸುತ್ತಿದೆ. ಈ ವರ್ಷದ ಫೆ.14ರಂದು ಆದಾಯ ತೆರಿಗೆ ಅಧಿಕಾರಿಗಳು ದೆಹಲಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳ (BBC Office) ಮೇಲೆ ದಾಳಿ ನಡೆಸಿ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ತಪಾಸಣೆ ನಡೆಸಿದ್ದರು. ಸತತ ಮೂರು ದಿನಗಳ ಕಾಲ ದಾಳಿ ನಡೆದಿತ್ತು. ನಂತರ ಕೇಂದ್ರೀಯ ನೇರ ತೆರಿಗೆ ಮಂಡಳಿಯು (CBDT) ಬಿಬಿಸಿಯ ಆದಾಯಕ್ಕೂ ಅದು ತೋರಿಸುತ್ತಿರುವ ಲಾಭಕ್ಕೂ ತಾಳೆಯಾಗುತ್ತಿಲ್ಲ. ಭಾರತದಲ್ಲಿ ಸಾಕಷ್ಟುದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತಿರುವ ಬಿಬಿಸಿ, ಅದಕ್ಕೆ ತಕ್ಕುದಾಗಿ ತೆರಿಗೆ ಪಾವತಿಸುತ್ತಿಲ್ಲ ಎಂದು ಹೇಳಿತ್ತು. ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ಬಿಬಿಸಿ ಆಕ್ಷೇಪಾರ್ಹ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ಕೆಲವೇ ದಿನಗಳಲ್ಲಿ ಆ ದಾಳಿ ನಡೆದಿದ್ದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು.

1984ರಲ್ಲೂ ಗಲಭೆಯಾಗಿತ್ತು ಈ ಬಗ್ಗೆ ಬಿಬಿಸಿ ಸಾಕ್ಷ್ಯಚಿತ್ರ ಯಾಕೆ ಬಂದಿಲ್ಲ..?' ಜೈಶಂಕರ್‌ ಪ್ರಶ್ನೆ

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಇತ್ತೀಚೆಗೆ ಗುಜರಾತ್‌ ಗಲಭೆಯ ವಿಚಾರವಾಗಿ ಬಿಬಿಸಿ ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರದ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತಾಗಿ ಎಎನ್‌ಐ ಸಂದರ್ಶನದಲ್ಲಿ ಮಾತನಾಡಿದ ಅವರು, ಇಂದು ಬೇರೆ ಬೇರೆ ಮಾಧ್ಯಮಗಳನ್ನು ಬಳಸಿಕೊಂಡು ರಾಜಕಾರಣ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. 20 ವರ್ಷಗಳ ಹಿಂದೆ ನಡೆದುಹೋಗಿರುವ ಅದರ ಬಗ್ಗೆ ಈಗಾಗಲೇ ನಿರ್ಧಾರವಾಗಿರುವ ವಿಚಾರದಲ್ಲಿ ಸತ್ಯದ ಹುಡುಕಾಟ ಎನ್ನುವ ಹೆಸರಲ್ಲಿ ಯಾರದೋ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುತ್ತೀದ್ದೀರಿ ಎಂದು ಅವರು ಹೇಳಿದ್ದಾರೆ. ಬಿಬಿಸಿ ಸಾಕ್ಷ್ಯಚಿತ್ರ ದಿಢೀರ್‌ ಆಗಿ ಬಂದಿದ್ದು ಹೇಗೆ ಎನ್ನುವ ಬಗ್ಗೆ ನೀವು ಯೋಚನೆ ಮಾಡುತ್ತಿರಬಹುದು ಎಂದು ಹೇಳಿದ ಜೈಶಂಕರ್‌,  ಭಾರತದಲ್ಲಿ ಅಥವಾ ದೆಹಲಿಯಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ತಯಾರಿ ಆಗುತ್ತಿದೆಯೋ ಇಲ್ಲವೋ ನನಗೆ ತಿಳಿಯದು. ಆದರೆ, ನ್ಯೂಯಾರ್ಕ್‌ ಹಾಗೂ ಲಂಡನ್‌ನಲ್ಲಿ ಭಾರತದ ಚುನಾವಣೆಯ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿದೆ. ಅನೇಕ ಬಾರಿ ಭಾರತದಲ್ಲಿ ನಡೆಯುವ ರಾಜಕಾರಣದ ಮೂಲ ಈ ನೆಲ ಆಗಿರೋದೇ ಇಲ್ಲ. ವಿದೇಶದ ಸಿದ್ಧಾಂತದ ರಾಜಕಾರಣವಾಗಿರುತ್ತದೆ. ಆ ರಾಜಕೀಯ ಹೋರಾಟದ ಆಲೋಚನೆಗಳು ಹಾಗೂ ಕಾರ್ಯಸೂಚಿಗಳು ಹೊರಗಿನಿಂದ ಬರುತ್ತದೆ ಎಂದು ಹೇಳಿದ್ದಾರೆ.

ಬಿಬಿಸಿ ತೆರಿಗೆ ವಂಚನೆ ಪತ್ತೆ; ಲೆಕ್ಕಪತ್ರಗಳಲ್ಲಿ ಭಾರಿ ಲೋಪದೋಷ : ಐಟಿ ಇಲಾಖೆ

1984ರ ಗಲಭೆಯ ಬಗ್ಗೆ ಯಾಕೆ ಸಾಕ್ಷ್ಯಚಿತ್ರ ಬಂದಿಲ್ಲ: ಭಾರತದಲ್ಲಿ ಆಗಿರುವ ಗಲಭೆಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡ್ತೀರಿ ಎನ್ನುತ್ತೀರಿ. 1984ರಲ್ಲಿ ದೆಹಲಿಯಲ್ಲೂ ದೊಡ್ಡ ಗಲಭೆಯಾಗಿತ್ತು. ಆದರೆ, ಈ ವಿಷಯದ ಬಗ್ಗೆ ಎಂದೂ ಯಾವ ಸಾಕ್ಷ್ಯಚಿತ್ರಗಳೂ ಬಂದಿಲ್ಲ ಯಾಕೆ. ಇದು ಕೇವಲ ರಾಜಕಾರಣವಷ್ಟೇ. ರಾಜಕೀಯ ಕ್ಷೇತ್ರಕ್ಕೆ ಬರುವ ಶಕ್ತಿ ಇಲ್ಲದವರ ಪರವಾಗಿ ಮಾಡುತ್ತಿರುವ ರಾಜಕೀಯವಷ್ಟೆ. ತಮ್ಮನ್ನು ತಾವು ಈ ಸಂಸ್ಥೆಗಳು ಎನ್‌ಜಿಓ, ಮಾಧ್ಯಮ ಸಂಸ್ಥೆಗಳು ಎಂದು ಇತ್ಯಾದಿಯಾಗಿ ಹೇಳಿಕೊಳ್ಳುತ್ತದೆ. ಆದರೆ, ಇವರುಗಳು ನಿಜವಾಗಿ ಮಾಡುತ್ತಿರುವುದು ರಾಜಕಾರಣ ಎಂದು ಹೇಳಿದ್ದಾರೆ.

BBC ಇತ್ತೀಚೆಗೆ "ಇಂಡಿಯಾ: ದಿ ಮೋದಿ ಕ್ವಶ್ಚನ್‌" ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಸಾಕ್ಷ್ಯಚಿತ್ರವು 2002 ರಲ್ಲಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಗಲಭೆಗಳನ್ನು ಆಧರಿಸಿದ ಚಿತ್ರವಾಗಿತ್ತು. ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಸಾಕಷ್ಟು ಕೋಲಾಹಲ ಎದ್ದಿದ್ದರಿಂದ,  ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿಷೇಧ ವಿಧಿಸಿತ್ತು. ಅದರ ಲಿಂಕ್‌ಗಳನ್ನು ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರೂ. ನಂತರ ಸರ್ಕಾರವು ಈ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ತೆಗೆದುಹಾಕಲು ಟ್ವಿಟರ್ ಮತ್ತು ಯೂಟ್ಯೂಬ್‌ಗೆ ಕೇಳಿತ್ತು.

ಬಿಬಿಸಿಯಲ್ಲಿ ಚೀನಾ ಹಣ ಹೂಡಿಕೆ ತನಿಖೆ ನಡೆಸಿ: ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ

Latest Videos
Follow Us:
Download App:
  • android
  • ios