Asianet Suvarna News Asianet Suvarna News

ನಿರ್ಮಲಾ ಸೀತಾರಾಮನ್‌ ಅವರನ್ನು ವಜಾ ಮಾಡುವಂತೆ ಆಗ್ರಹಿಸಿದ್ದ ಐಆರ್‌ಎಸ್‌ ಅಧಿಕಾರಿ ಅಮಾನತು!

ನಿರ್ಮಲಾ ಸೀತಾರಾಮನ್ ಅವರನ್ನು ವಜಾಗೊಳಿಸುವಂತೆ ಜನವರಿಯಲ್ಲಿ ಐಆರ್‌ಎಸ್ ಅಧಿಕಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದರು.

IRS officer Balamurugan who demanded dismissal Nirmala Sitharaman suspended san
Author
First Published Jan 31, 2024, 7:34 PM IST

ನವದೆಹಲಿ (ಜ.31): ತಮ್ಮ ನಿವೃತ್ತಿಗೂ ಎರಡು ದಿನಗಳ ಮುನ್ನ ಇಡಿ ಪ್ರಕರಣದಲ್ಲಿ ಕೇಂದ್ರ ಹಣಕಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸಚಿವೆ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯ ಮಾಡಿದ್ದ ತಮಿಳುನಾಡು ಮೂಲದ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಬಿ ಬಾಲಮುರುಗನ್ ಅವರನ್ನು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಅಮಾನತುಗೊಳಿಸಿದೆ. ವರದಿಗಳ ಪ್ರಕಾರ ಬಾಲಮುರುಗನ್ ಬುಧವಾರ ನಿವೃತ್ತಿಯಾಗಬೇಕಿತ್ತು. ಚೆನ್ನೈ (ಉತ್ತರ) ಜಿಎಸ್‌ಟಿ ಮತ್ತು ಸಿಇಎಕ್ಸ್‌ನ ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ ಬಾಲಮುರುಗನ್ ಅವರು ಜನವರಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಇಡಿಯನ್ನು ಬಿಜೆಪಿ ತನ್ನ ವಿಸ್ತೃತ ಅಂಗವಾಗಿ ಪರಿವರ್ತಿಸಿಕೊಂಡಿದೆ ಹಾಗಾಗು ಕೇಂದ್ರ ಸಚಿವೆ ಸೀತಾರಾಮನ್ ಅವರನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯ ಇಬ್ಬರು ದಲಿತ ರೈತರಿಗೆ ಜುಲೈ 2023 ರಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್ ಕುರಿತು ಅಧಿಕಾರಿಯು ಅಧ್ಯಕ್ಷ ಮುರ್ಮು ಅವರಿಗೆ ಪತ್ರ ಬರೆದಿದ್ದರು.

ಬಾಲಮುರುಗನ್ ಅವರ ಪತ್ನಿ ದಲಿತ ಜಿ ಪ್ರವೀಣಾ ಇಡಿ ಪ್ರಕರಣದಲ್ಲಿ ರೈತರ ಪರ ವಕೀಲರಾಗಿದ್ದರು. ಈ ಪ್ರಕರಣವೀಗಾಗಲೇ ಅಂತ್ಯವಾಗಿದೆಜನವರಿ 29 ರಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಹೊರಡಿಸಿದ ಅಮಾನತು ಆದೇಶದಲ್ಲಿ ಬಾಲಮುರುಗನ್ ಅವರನ್ನು ಅಮಾನತುಗೊಳಿಸಲು ಬೇರೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ.

ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ: ನಾಳೆ ನಿರ್ಮಲಾ ಸೀತಾರಾಮನ್‌ರಿಂದ ಮಧ್ಯಂತರ ಬಜೆಟ್‌ ಮಂಡನೆ

ಬಾಲಮುರುಗನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ. ಅಮಾನತುಗೊಂಡ ಅಧಿಕಾರಿಯು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಪ್ರಧಾನ ಕಚೇರಿಯನ್ನು ತೊರೆಯಬಾರದು ಎಂದು ಅದು ಹೇಳಿದೆ. ಮಂಗಳವಾರ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಮುರುಗನ್, ನಿರ್ಮಲಾ ಸೀತಾರಾಮನ್ ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸಿ ಅಧ್ಯಕ್ಷ ಮುರ್ಮು ಅವರಿಗೆ ಪತ್ರ ಬರೆದ ಕಾರಣ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Union Budget 2024: ಪ್ಯಾರಿಸ್‌ ಒಲಿಂಪಿಕ್ಸ್‌ ಟಾರ್ಗೆಟ್‌, ಭಾರೀ ಬಜೆಟ್‌ ನಿರೀಕ್ಷೆಯಲ್ಲಿದೆ ಕ್ರೀಡಾಕ್ಷೇತ್ರ!

Follow Us:
Download App:
  • android
  • ios