Asianet Suvarna News Asianet Suvarna News

ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ: ನಾಳೆ ನಿರ್ಮಲಾ ಸೀತಾರಾಮನ್‌ರಿಂದ ಮಧ್ಯಂತರ ಬಜೆಟ್‌ ಮಂಡನೆ

ಇದು ಕಡಿಮೆ ಅವಧಿಯ ಅಧಿವೇಶನವಾಗಿದ್ದು ಜನವರಿ 31 ರಿಂದ ಫೆಬ್ರವರಿ 9ರ ವರೆಗೆ ಮಾತ್ರ ನಡೆಯಲಿದೆ. ಲೇಖಾನುದಾನವನ್ನು ನಿರ್ಮಲಾ ಸೀತಾರಾಮನ್‌ ಗುರುವಾರ ಮಂಡಿಸಲಿದ್ದಾರೆ.

budget session to begin on january 31st all you need to know ash
Author
First Published Jan 31, 2024, 8:43 AM IST

ನವದೆಹಲಿ (ಜನವರಿ 31, 2024): ಬುಧವಾರದಿದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗಲಿದೆ. ಅಧಿವೇಶನ ಆರಂಭವಾದ ಮಾರನೇ ದಿನ ಫೆಬ್ರವರಿ 1 ರಂದು ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿತು. ಸಭೆಯಲ್ಲಿ, ‘ವಿಪಕ್ಷಗಳು ಪ್ರಸ್ತಾಪಿಸುವ ವಿವಿಧ ವಿಷಯಗಳ ಬಗ್ಗೆ ಉತ್ತರಿಸಲು ಸರ್ಕಾರ ಸಿದ್ಧವಿದೆ. ಆದರೆ ವಿಪಕ್ಷಗಳು ಸದನ ಸುಗಮವಾಗಿ ನಡೆಯಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.

ಸತತ 6 ಬಾರಿ ಕೇಂದ್ರ ಬಜೆಟ್‌ ಮಂಡಿಸಿ 2ನೇ ಸಚಿವೆಯಾಗಲಿರೋ ನಿರ್ಮಲಾ ಸೀತಾರಾಮನ್: ಈ ಸಾಧನೆ ಮಾಡಿದ ಮೊದಲ ವ್ಯಕ್ತಿ ಇವರೇ!

ಇದು ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಅಧಿವೇಶನವಾಗಿದೆ. ಹೀಗಾಗಿ ಇದು ಕಡಿಮೆ ಅವಧಿಯ ಅಧಿವೇಶನವಾಗಿದ್ದು ಜನವರಿ 31 ರಿಂದ ಫೆಬ್ರವರಿ 9ರ ವರೆಗೆ ಮಾತ್ರ ನಡೆಯಲಿದೆ. ಲೇಖಾನುದಾನವನ್ನು ನಿರ್ಮಲಾ ಸೀತಾರಾಮನ್‌ ಗುರುವಾರ ಮಂಡಿಸಲಿದ್ದಾರೆ. ಬಳಿಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಚನೆಯಾಗುವ ನೂತನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದೆ.

ಇಂದು ಆರ್ಥಿಕ ಸಮೀಕ್ಷೆ ಮಂಡನೆ ಇಲ್ಲ
ನವದೆಹಲಿ: ಬಜೆಟ್‌ ಮಂಡನೆಗೂ ಮುನ್ನಾ ದಿನ ಆರ್ಥಿಕ ಸಮೀಕ್ಷೆ ಪ್ರಕಟವಾಗುವುದುಂಟು. ಇದು ಮೊದಲಿನಿಂದಲೂ ನಡೆದ ಪದ್ಧತಿ. ಆದರೆ ಫೆಬ್ರವರಿ 1 ರ ಬಜೆಟ್‌ಗೂ ಮುನ್ನ ಈ ಸಲ ಆರ್ಥಿಕ ಸಮೀಕ್ಷೆ ಪ್ರಕಟವಾಗದು.

Union Budget 2024 ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ ಟೀಮ್‌ನಲ್ಲಿರುವ ಅನುಭವಿ ಮುಖಗಳಿವು!

ಬೇಸಿಗೆಯಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ, ಈ ಸಲ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗದು. ಇದು ಕೇವಲ ಮಧ್ಯಂತರ ಬಜೆಟ್‌ ಆಗಲಿದೆ. ಪೂರ್ಣ ಪ್ರಮಾಣದ ಬಜೆಟ್‌ ಆಗಿದ್ದರೆ ಮಾತ್ರ ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ. ಈ ಸಲದ್ದು ಮಧ್ಯಂತರ ಬಜೆಟ್‌ ಆಗಿರುವ ಕಾರಣ ಬುಧವಾರ ಆರ್ಥಿಕ ಸಮೀಕ್ಷೆ ಇಲ್ಲ.

ನಾಳೆ ಮಧ್ಯಂತರ ಬಜೆಟ್‌, ಹೊಸ ಘೋಷಣೆ ಇಲ್ಲ?
ನವದೆಹಲಿ: ಫೆಬ್ರವರಿ 1ರ ಗುರುವಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ. ಮಧ್ಯಂತರ ಬಜೆಟ್‌ ಆಗಿದ್ದರಿಂದ ‘ಆಕರ್ಷಕ ಘೋಷಣೆಗಳು’ ಇರದು ಎಂದು ಕಳೆದ ತಿಂಗಳು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಆದರೂ ಚುನಾವಣಾ ವರ್ಷ ಆಗಿರುವುದರಿಂದ ಏನಾದರೂ ಘೋಷಣೆ ಆಗಬಹುದಾ ಎಂದು ಜನ ಎದುರು ನೋಡುತ್ತಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ನೂತನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಿದೆ. ಆಗ ಹೊಸ ಯೋಜನೆಗಳ ಘೋಷಣೆ ಆಗಲಿವೆ.

ಅಮಾನತಾಗಿದ್ದ 146 ಸಂಸದರು ಸದನಕ್ಕೆ
ನವದೆಹಲಿ: ಚಳಿಗಾಲದ ಸಂಸತ್‌ ಅಧಿವೇಶನದ ಸಮಯದಲ್ಲಿ ಸನದ ಬಾವಿಗಿಳಿದು ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ಅಶಿಸ್ತು ತೋರಿದ ಕಾರಣ ಅಮಾನತುಗೊಂಡಿದ್ದ 146 ವಿಪಕ್ಷ ಸಂಸದರು ಬುಧವಾರ ಸದನಕ್ಕೆ ಆಗಮಿಸಲಿದ್ದಾರೆ. 132 ಸಂಸದರು ಚಳಿಗಾಲದ ಅಧಿವೇಶನಕ್ಕೆ ಸೀಮಿತವಾಗಿ ಅಮಾನತಾಗಿದ್ದರು. ಇನ್ನು 14 ಸಂಸದರನ್ನು ಗಂಭೀರ ಅಶಿಸ್ತು ತೋರಿದ್ದ ಕಾರಣ ನೀಡಿ ಅನಿರ್ಧಿಷ್ಟಾವಧಿಗೆ ಸಸ್ಪೆಂಡ್‌ ಮಾಡಲಾಗಿತ್ತು. ಇವರ ಅಮಾನತು ರದ್ದುಪಡಿಸಲಾಗಿದೆ.

Follow Us:
Download App:
  • android
  • ios