ಮುಂಬೈ[ಜ.14]: ದೂರದ ಊರುಗಳಿಂದ ಆಗಮಿಸಿ ರಾತ್ರಿ ವೇಳೆ ತಂಗಲು ಕಡಿಮೆ ಬೆಲೆಯ ಹೋಟೆಲ್ ಹುಡುಕಲು ಪರದಾಡುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ‘ಪಾಡ್ ಹೋಟೆಲ್’ಗಳನ್ನು ತೆರೆಯಲು ಮುಂದಾಗಿದೆ.

ಮುಂಬೈ ಸೆಂಟ್ರಲ್ ರೈಲು ನಿಲ್ದಾಣದ ಮೊದಲ ಮಹಡಿಯಲ್ಲಿರುವ 2 ಹವಾನಿ ಯಂತ್ರಿತ ಪ್ರಯಾಣಿಕರ ನಿರೀಕ್ಷಣಾ ಕೊಠಡಿಗಳಲ್ಲಿ 30 ಪಾಡ್ ಹೋಟೆಲ್‌ಗಳನ್ನು ನಿರ್ಮಿಸಲು ಹೊರಟಿದೆ. ಈ ಸಂಬಂಧ ಐಆರ್‌ಸಿಟಿಸಿ ಟೆಂಡರ್ ಅನ್ನೂ ಆಹ್ವಾನಿಸಿದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ 2020ರ ಡಿಸೆಂಬರ್‌ನಲ್ಲಿ ರೈಲ್ವೆಯ ಮೊದಲ ಪಾಡ್ ಹೋಟೆಲ್ ಮುಂಬೈನಲ್ಲಿ ಕಾರ್ಯಾರಂಭಿಸಲಿದೆ. ಇದು ರೈಲ್ವೆಯ ಮೊದಲ ಪಾಡ್ ಹೋಟೆಲ್ ಆಗಿರಲಿದೆ.

'ಖಾಸಗಿ ರೈಲು ಅಪಘಾತಕ್ಕೀಡಾದರೆ ರೈಲ್ವೆ ಪರಿಹಾರ ಇಲ್ಲ'

ದೇಶದ ಮೊದಲ ಪಾಡ್ ಹೋಟೆಲ್ ಅನ್ನು ಖಾಸಗಿ ಕಂಪನಿಯೊಂದು 2017ರಿಂದ ಮುಂಬೈನ ಅಂಧೇರಿಯಲ್ಲಿ ನಿರ್ವಹಿಸುತ್ತಿದೆ. ರಾತ್ರಿ ವೇಳೆ 12 ತಾಸು ತಂಗಲು ಪಾಡ್ ಹೋಟೆಲ್‌ನಲ್ಲಿ ಅವಕಾಶವಿರುತ್ತದೆ. ಇಲ್ಲಿ ಎರಡು ಮಾದರಿ ಕೋಣೆಗಳು ಇರುತ್ತವೆ. ಕ್ಲಾಸಿಕ್ ಎಂಬ ದರ್ಜೆಯಲ್ಲಿ ಒಬ್ಬ ಪ್ರಯಾಣಿಕ ತಂಗಬಹುದು. ಲಾಕರ್, ಬ್ಯಾಗ್ ಇಡಲು ಜಾಗ ಹಾಗೂ ಮೊಬೈಲ್ ಚಾರ್ಜಿಂಗ್ ಸೌಲಭ್ಯ ಇರುತ್ತದೆ.

ಸ್ವೀಟ್ ಎಂಬ ಮತ್ತೊಂದು ದರ್ಜೆಯಲ್ಲಿ ಇಬ್ಬರು ಮಲಗಬಹುದಾದ ಹಾಸಿಗೆ, ವೈಫೈ ಹಾಗೂ ಲಾಕರ್ ಸೌಲಭ್ಯ ಇರುತ್ತದೆ. ಇದಲ್ಲದೆ ಲಾಂಜ್ ಪ್ರದೇಶ, ಬಟ್ಟೆ ಬದಲಿಸಲು ಕೋಣೆ, ವಾಶ್ ರೂಂ, ಕೆಫಿಟೀರಿಯಾ ಎಲ್ಲ ಸೌಲಭ್ಯಗಳು ಇರುತ್ತವೆ. ರೈಲು ನಿಲ್ದಾಣಗಳಲ್ಲಿ ಬಾಡಿಗೆಗೆ ಲಭ್ಯ ಇರುವ ಕೋಣೆಗಳಿಗಿಂತ ಪಾಡ್ ಹೋಟೆಲ್ ದರ ಕಡಿಮೆ ಇರುತ್ತದೆ.

ರೈಲ್ವೆ ಸೇವೆ ಮತ್ತಷ್ಟು ಸರಳ ಸುಲಭ, ಜಸ್ಟ್ 139ಕ್ಕೆ ಡಯಲ್ ಮಾಡಿ

ಏನಿದು ಪಾಡ್ ಹೋಟೆಲ್?

ಒಬ್ಬರು ಅಥವಾ ಇಬ್ಬರು ಮಲಗಬಹುದಾದ, ಒಂದರ ಪಕ್ಕ ಹಾಗೂ ಒಂದರ ಮೇಲೊಂ ದರಂತೆ ನಿರ್ಮಿಸಲಾದ ಕ್ಯಾಪ್ಸೂಲ್ ಶೈಲಿಯ ಕೋಣೆಗಳೇ ಪಾಡ್ ಹೋಟೆಲ್. ಇವು ವಿಶ್ವಾದ್ಯಂತ ಜನಪ್ರಿಯ. ರಾತ್ರಿ ತಂಗಲು ಹೋಟೆಲ್‌ಗೆ ಹೋದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಆದರೆ ಪಾಡ್ ಹೋಟೆಲ್ ಅಗ್ಗವಾಗಿರುತ್ತ