ಪಂಜಾಬ್‌ನ ಮೊದಲ ದಲಿತ ಸಿಎಂ ಬಳಿಕ ಅಧಿಕಾರ ಸ್ವೀಕರಿಸಿದ ದಲಿತ DGP!
- ಚರಣ್‌ಜಿತ್ ಸಿಂಗ್ ಚನಿ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ
- ಚನಿ ಸಿಎಂ ಆದ ಬಳಿಕ ಪಂಜಾಬ್ ಡಿಜಿಪಿ ಆಗಿ ದಲಿತ ಅಧಿಕಾರಿ ನೇಮಕ
- ಸ್ವತಂತ್ರ ಭಾರತದಲ್ಲಿ ಪಂಜಾಬ್‌ನ 3ನೇ ದಲಿತ ಡಿಜಿಪಿ ಹೆಗ್ಗಳಿಕೆಗೆ
ಪಂಜಾಬ್(ಸೆ.28): ಪಂಜಾಬ್(Punjab) ರಾಜಕೀಯದಲ್ಲಿ ಎದ್ದಿರುವು ಬಿರುಗಾಳಿಗೆ ಇದೀಗ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು(Navjot singh Sidhu) ಕೂಡ ರಾಜೀನಾಮೆ ನೀಡಿದ್ದಾರೆ. ಇತ್ತ ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನಿ(Charanjit singh channi), ಪಂಜಾಬ್ ನೂತನ ಡಿಜಿಪಿ ಆಗಿ ಇಕ್ಬಾಲ್ ಸಿಂಗ್ ಪ್ರೀತ್ ಸಹೋಟ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಚರಣಜಿತ್ ಸಿಂಗ್
ಇಕ್ಬಾಲ್ ಪ್ರೀತ್ ಸಿಂಗ್ ಸಹೋಟ(Iqbal Preet Singh Sahota) ಪಂಜಾಬ್‌ನ 3ನೇ ದಲಿತ ಪೊಲೀಸ್ ಡಿಜಿಪಿ(Police DGP) ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ವಾತಂತ್ರ ಭಾರತದಲ್ಲಿ ಪಂಜಾಬ್ 3ನೇ ದಲಿತ ಡಿಜಿಪಿ ಅಧಿಕಾರಿಯನ್ನು ನೋಡುತ್ತಿದೆ. ಚರಣ್‌ಜಿತ್ ಸಿಂಗ್ ಚನಿ ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ದಲಿತ ಡಿಜಿಪಿ ಆಯ್ಕೆ ಮಾಡಿದ್ದಾರೆ.
2009ರಲ್ಲಿ ಪಂಜಾಬ್ ಕೊನೆಯದಾಗಿ ದಲಿತ ಡಿಜಿಪಿ ಕರ್ತವ್ಯ ನಿಭಾಯಿಸಿದ್ದರು. 1971ರ ಬ್ಯಾಚ್ ಐಎಎಸ್ ಅಧಿಕಾರಿ ಕಮಲ್ ಕೆ ಅತ್ರಿ ಪಂಜಾಬ್‌ನ ದಲಿತ ಡಿಜಿಪಿಯಾಗಿದ್ದರು. ಆದರೆ ಕಮಲ್ ಕೇವಲ 4 ತಿಂಗಳು ಮಾತ್ರ ಡಿಜಿಪಿಯಾಗಿದ್ದರು. ಇನ್ನು ಪಂಜಾಬ್‌ನ ಮೊದಲ ದಲಿತ ಡಿಜಿಪಿ ಅನ್ನೋ ಹೆಗ್ಗಳಿಕೆಗೆ ಸುಬೆ ಸಿಂಗ್ ಪಾತ್ರರಾಗಿದ್ದಾರೆ. 1996ರ ಜುಲೈನಿಂದ 1997ರ ಫೆಬ್ರವರಿ ವರೆಗೆ ಅಂದರೆ 8 ತಿಂಗಳು ಸುಬೆ ಸಿಂಗ್ ಪಂಜಾಬ್ ಡಿಜಿಪಿಯಾಗಿದ್ದರು.
ಬಿಜೆಪಿ, ಅಕಾಲಿ ದಳಕ್ಕೆ ಕಾಂಗ್ರೆಸ್‌ನಿಂದ ಶಾಕ್: ದಲಿತರಿಗೇ ಏಕೆ ಸಿಎಂ ಪಟ್ಟ?
ಇಕ್ಬಾಲ್ ಪ್ರೀತ್ ಸಿಂಗ್ ಸಹೋಟ ಮುಂದಿನ ವರ್ಷ ಆಗಸ್ಟ್ ತಿಂಗಳಲ್ಲಿ ನಿವೃತ್ತಿಯಾಗಲಿದ್ದಾರೆ. ಇದಕ್ಕೂ ಮೊದಲು ಇಕ್ಬಾಲ್ ಪ್ರೀತ್ ಸಿಂಗ್‌ಗೆ ಬಹುದೊಡ್ಡ ಜವಾಬ್ದಾರಿ ಹುಡುಕಿಕೊಂಡು ಬಂದಿದೆ. ಚರಣ್‌ಜಿತ್ ಸಿಂಗ್ ಆದೇಶದಿಂದ ಹಾಲಿ ಡಿಜಿಪಿ ದಿನಕರ್ ಗುಪ್ತಾ ಒಲ್ಲದ ಮನಸ್ಸಿನಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಕ್ಬಾಲ್ ಪ್ರೀತ್ ಸಿಂಗ್ ಸಹೋಟ ಯಾವುದೇ ವಿವಾದಕ್ಕೆ ಗುರಿಯಾಗಿಲ್ಲ. ಕ್ಲೀನ್ ಇಮೇಜ್ ಹೊಂದಿರುವ ಇಕ್ಬಾಲ್ ಸೌಮ್ಯ ಸ್ವಭಾವದ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ, ರೈಲ್ವೈ, ತನಿಖಾ ವಿಭಾಗ, ಕಾರಾಗೃಹ ಅಧಿಕಾರಿ ಸೇರಿದಂತೆ ಪೊಲೀಸ್ ಇಲಾಖೆಯ ಹಲವು ವಿಭಾಗದಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ.
ಪಂಜಾಬ್ ನಾಯಕತ್ವದಲ್ಲಿ ಬದಲಾವಣೆಯಾದ ಬಳಿಕ ಪಂಜಾಬ್‌ನ ಪ್ರಮುಖ ಅಧಿಕಾರಿಗಳ ವರ್ಗಾವಣೆಗಳು ಜೋರಾಗಿದೆ. ಹಲವು ಅಧಿಕಾರಿಗಳನ್ನು ಸದ್ದಿಲ್ಲದೆ ಬದಲಾಣೆ ಮಾಡಲಾಗಿದೆ. ಇದೀಗ ಪಂಜಾಬ್‌ನಲ್ಲಿ ಕಾಂಗ್ರೆಸ್ ಅಧ್ಯತ್ರ ನವಜೋತ್ ಸಿಂಗ್ ಸಿಧು ರಾಜೀನಾಮೆ ನೀಡಿರುವ ಕಾರಣ ಮತ್ತೊಂದು ರಾಜಕೀಯ ಮೇಲಾಟಕ್ಕೆ ವೇದಿಕೆ ಸಜ್ಜಾಗಿದೆ.
ಚನ್ನಿ ಪಂಜಾಬ್ ಸಿಎಂ ಆಗ್ತಿರೋದು ದಲಿತರಿಗೆ ಅವಮಾನ ಎಂದ ಬಿಜೆಪಿ!
ನವಜೋತ್ ಸಿಂಗ್ ಸಿಧು ಜೊತೆಗಿನ ಗುದ್ದಾಟ, ಕಾಂಗ್ರೆಸ್ ಹೈಕಮಾಂಡ್ ಮುನಿಸಿನಿಂದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕ್ಯಾಪ್ಟನ್ ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಿಧು ಕಳೆದ 4 ವರ್ಷಗಳಿಂದ ಸತತ ಹೋರಾಟ ಮಾಡಿದ್ದರು. ಕೊನೆಗೂ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದರು. ಇದೇ ರೀತಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಸಿಧು ಸತತ ಹೋರಾಟ ಮಾಡಿದ್ದರು. ಪಕ್ಷ ತೊರೆಯುವ ಸೂಚನೆಯನ್ನೂ ನೀಡಿದ್ದರು. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸಿಧುಗೆ ಅಧ್ಯಕ್ಷ ಸ್ಥಾನ ನೀಡಿತ್ತು. ಇದೀಗ ದಿಢೀರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.