Asianet Suvarna News Asianet Suvarna News

ಅಮರನಾಥ ಯಾತ್ರೆಯಲ್ಲಿ ಸಿಲುಕಿದ ಕನ್ನಡಿಗರಿಗೆ ರಾಜ್ಯದಿಂದ ಸಹಾಯವಾಣಿ!

ಅಮರನಾಥ ಗುಹೆಯ ಬಳಿ ಸಂಭವಿಸಿದ ಭೀಕರ ಮೇಘಸ್ಪೋಟದಲ್ಲಿ ಸಮಯ ಕಳೆದಂತೆ ಸಾವಿನ ಸಂಖ್ಯೆಗಳಲ್ಲೂ ಏರಿಕೆ ಕಾಣುತ್ತಿದೆ. ಈ ನಡುವೆ ರಾಜ್ಯ ಸರ್ಕಾರ, ಮೇಘಸ್ಫೋಟದ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ರಾಜ್ಯದ ಯಾತ್ರಿಕರಿಗೆ ಸಹಾಯವಾಣಿಯನ್ನು ಆರಂಭಿಸಿದೆ.
 

Karnataka Government Sets Up Helpline For Amarnath Yatra who stuck in Cloudburst place san
Author
Bengaluru, First Published Jul 9, 2022, 10:36 AM IST

ಬೆಂಗಳೂರು (ಜುಲೈ 9): ದಕ್ಷಿಣ ಕಾಶ್ಮೀರದಲ್ಲಿರುವ ಪ್ರಖ್ಯಾತ ಅಮರನಾಥ ಗುಹೆಯ (Amarnath Holy Cave) ಬಳಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಮೇಘಸ್ಪೋಟದಲ್ಲಿ (Cloudburst ) ಈವರೆಗೂ 16 ಮಂದಿ ಸಾವು ಕಂಡಿದ್ದು, 60ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಇದರ ನಡುವೆ ಅಮರನಾಥ ಯಾತ್ರೆಯಲ್ಲಿ (Amarnath Yatra) ಅತಂತ್ರವಾಗಿರುವ ಕನ್ನಡಿಗರ ನೆರವಿಗಾಗಿ ರಾಜ್ಯ ಸರ್ಕಾರ (Karnataka Government ) ಸಹಾಯವಾಣಿಯನ್ನು ಆರಂಭಿಸಿದೆ.

ಎನ್‌ಡಿಆರ್‌ಎಫ್‌, ಐಟಿಬಿಪಿ ಭಾರತೀಯ ಸೇನೆ, ಸಿಆರ್‌ಪಿಎಫ್‌, ಬಿಎಸ್‌ಎಫ್‌, ಎಸ್‌ಡಿಆರ್‌ಎಫ್‌ ಮತ್ತು ಜಮ್ಮು ಮತ್ತು ಕಾಶ್ಮೀರ್ ಪೋಲಿಸ್ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದವರಿಗೆ ಜಮ್ಮು ಕಾಶ್ಮೀರ ಸರ್ಕಾರವು ಸಹಾಯಹಸ್ತ ಚಾಚಿದೆ. ಅಮರನಾಥ ಗುಹೆಯ ಬಳಿ ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ 080-1070, 22340676 ಕರೆ ಮಾಡುವ ಮೂಲಕ ಅಥವಾ incomedmkar@gmail.com ಗೆ ಇಮೇಲ್ ಮಾಡುವ ಮೂಲಕ ಸಂಪರ್ಕಿಸಿದಲ್ಲಿ ಸರ್ಕಾರ ಅಗತ್ಯ ಸಹಾಯ ಮಾಡಲಿದೆ.

ಸಿಲುಕಿಕೊಂಡ ಶಿವಮೊಗ್ಗದ ಯಾತ್ರಿಕರು: ಶಿವಮೊಗ್ಗ (Shivamogga)  ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಸುರೇಖಾ ಮುರುಳಿಧರ್ (Surekha Murulidhar) ಹಾಗೂ 16 ಮಹಿಳಾ ಯಾತ್ರಿಕರು ಕೂಡ ಮೇಘಸ್ಪೋಟದ ವೇಳೆ ಸಿಲುಕಿಕೊಂಡಿದ್ದಾರೆ. ಮೇಘಸ್ಪೋಟದ ಕಾರಣದಿಂದಾಗಿ ಪ್ರಸ್ತುತ ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ. ಸುರೇಖಾ ಮುರಳೀಧರ್‌ ಹಾಗೂ ಅವರೊಂದಿಗಿರುವ ಕೆಲವು ಯಾತ್ರಿಕರು ಅಮರನಾಥ ಬೇಸ್‌ ಕ್ಯಾಂಪ್‌ನಲ್ಲಿ ಉಳಿದಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ 6 ಗಂಟೆಗೆ ಬೇಸ್‌ ಕ್ಯಾಂಪ್‌ನಿಂದ ಅಮರನಾಥ ದೇವಸ್ಥಾನಕ್ಕೆ ತಂಡ ತೆರಳಬೇಕಿತ್ತು. ಆದರೆ, ಈ ಘಟನೆಯ ಕಾರಣದಿಂದಾಗಿ ಇಡೀ ತಂಡವೀಗ ಬೇಸ್‌ ಕ್ಯಾಂಪ್‌ನಲ್ಲಿಯೇ ಇರಲಿದೆ.

ಕೂದಲೆಳೆ ಅಂತರದಲ್ಲಿ ಪಾರಾದ ಮೈಸೂರಿನ ಯಾತ್ರಿಕರು: ಮೈಸೂರಿನಲ್ಲಿ (Mysuru) ವಕೀಲಿ ವೃತ್ತಿ ಮಾಡುತ್ತಿರುವ ಅಮರನಾಥ್‌ ಇತರ 10 ಜನರೊಂದಿಗೆ ಅಮರನಾಥಕ್ಕೆ ತೆರಳಿದ್ದರು. ಮೇಘಸ್ಪೋಟದ ಸಮಯದಲ್ಲಿ ಇವರೆಲ್ಲರೂ ಅದೇ ಪ್ರದೇಶದಲ್ಲಿದ್ದರು. ಕೂದಲೆಳೆಯ ಅಂತರದಲ್ಲಿ ಅವರು ಪಾರಾಗಿದ್ದಾರೆ. ಸದ್ಯ ಹತ್ತು ಮಂದಿಯೂ ಸುರಕ್ಷಿತರಾಗಿದ್ದು, ಎಲ್ಲರೂ ಮೈಸೂರಿಗೆ ವಾಪಾಸು ಬರುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.

ಇದನ್ನೂ ಓದಿ: Amarnath : ಮೇಘಸ್ಫೋಟಕ್ಕೆ ಈವರೆಗೂ 16 ಭಕ್ತರ ಸಾವು, ಸೇನಾ ಹೆಲಿಕಾಪ್ಟರ್‌ ಬಳಸಿ ರಕ್ಷಣಾ ಕಾರ್ಯ

ಬೀದರ್‌ ಜಿಲ್ಲೆಯ ಯಾತ್ರಿಕರು ಸೇಫ್‌:  ಬೀದರ್ (Bidar) ಜಿಲ್ಲೆಯಿಂದ ಅಮರಮಾಥ ಯಾತ್ರೆಗೆ ಹೋಗಿದ್ದ 10 ಜನ ಸುರಕ್ಷಿತರಾಗಿದ್ದಾರೆ. 10 ಜನರ ಪೈಕಿ 6 ಜನರು ಈಗಾಗಲೇ ಅಮರನಾಥನ ದರ್ಶನ ಮಾಡಿದ್ದರೆ, ನಾಲ್ವರ ದರ್ಶನ ಇನ್ನೂ ಬಾಕಿ ಉಳಿದಿತ್ತು. ಬೀದರ್‌ನ ಭಾಲ್ಕಿ ತಾಲೂಕಿನ 6, ಬಸವ ಕಲ್ಯಾಣ ತಾಲೂಕಿನ 2 ಜನ ಸೇರಿದಂತೆ ಒಟ್ಟು 10 ಜನ ಅಮರನಾಥ ಯಾತ್ರಗೆ ತೆರಳಿದ್ದರು. ಮೇಘಸ್ಪೋಟದ ಕಾರಣದಿಂದಾಗಿ ಉಳಿದ ನಾಲ್ವರು ದರ್ಶನ ಪಡೆಯದೇ ರಾಜ್ಯಕ್ಕೆ ವಾಪಸಾಗುತ್ತಿದ್ದಾರೆ.

ಇದನ್ನೂ ಓದಿ:  ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ವಲಯದಲ್ಲಿ ಮೇಘಸ್ಫೋಟ, ಹಲವು ಭಕ್ತರ ಸಾವು!

16 ಸಾವುಗಳು ಈವರೆಗೂ ದೃಢಪಟ್ಟಿವೆ, ಸುಮಾರು 40 ಜನ ಇನ್ನೂ ಕಾಣೆಯಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಭೂಕುಸಿತವಾಗಿಲ್ಲ. ಆದರೆ, ನಿರಂತರ ಮಳೆ ಶುಕ್ರವಾರ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಎನ್‌ಡಿಆರ್‌ಎಫ್‌ನ ನಾಲ್ಕು ತಂಡಗಳು ಸ್ಥಳದಲ್ಲಿದೆ. ಅದರೊಂದಿಗೆ ಭಾರತೀಯ ಸೇನೆ, ಎಸ್‌ಡಿಆರ್‌ಎಫ್, ಸಿಆರ್‌ಪಿಎಫ್ ಮತ್ತು ಇತರರು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಎನ್‌ಡಿಆರ್‌ಎಫ್ ಡಿಜಿ ಅತುಲ್ ಕರ್ವಾಲ್ ತಿಳಿಸಿದ್ದಾರೆ. ಇನ್ನು ಬಿಎಸ್ಎಫ್‌ ಎಂ-17 ಹೆಲಿಕಾಪ್ಟರ್‌ನಿಂದ ಈವರೆಗೂ 9 ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂದು ಬಿಎಸ್ಎಫ್‌ ಪ್ರಕಟಣೆ ನೀಡಿದೆ.

ಸಹಾಯವಾಣಿ ನಂಬರ್‌ಗಳು

ಎನ್‌ಡಿಆರ್‌ಎಫ್‌: 011-23438252, 011-23438253

ಕಾಶ್ಮೀರ ವಿಭಾಗೀಯ ಸಹಾಯವಾಣಿ: 0194-2496240

ದೇವಳ ಮಂಡಳಿಯ ಸಹಾಯವಾಣಿ : 0194-2313149
 

Follow Us:
Download App:
  • android
  • ios