ವಿಶ್ವಕ್ಕೆ ಭಾರತೀಯರ ಜನಸೇವಾ ಕಾರ್ಯ ಎತ್ತಿ ತೋರಿದ ಮಹಾನ್‌ ನಾಯಕ ಮೋದಿ: ಗೋವಿಂದ ಕಾರಜೋಳ

ಪ್ರಧಾನಿ ಮೋದಿ ಜನ ಕಲ್ಯಾಣಕ್ಕಾಗಿ ನೂರೆಂಟು ಕಾರ್ಯ ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸಿದುದನ್ನು ಕಳೆದ ಆರು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಜನತೆ ಕಂಡಿದ್ದಾರೆ| ದಿನವಿಡೀ ಶ್ರಮಿಸಿದರೂ ಒಮ್ಮೆಯೂ ನರೇಂದ್ರ ಮೋದಿ ತಾನೇ ಎಲ್ಲಕ್ಕೂ ಕಾರಣಕರ್ತ ಎಂದಾಗಲೀ, ತನ್ನಿಂದಲೇ ಸರ್ವಸ್ವವೆಂದಾಗಲೀ ಹೊಗಳಿಕೊಂಡಿಲ್ಲ: ಗೋವಿಂದ ಕಾರಜೋಳ|

Interview with DCM Govind Karajol on PM Narendra Modi govt 2 completing year

ಬಾಗಲಕೋಟೆ: ನರೇಂದ್ರ ಮೋದಿ ಅವರು 2ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿ ಮೇ 30ಕ್ಕೆ 1 ವರ್ಷ. ಮೋದಿಯವರ ಅಪೂರ್ವ ಸಾಧನೆಗಳನ್ನು ನಾಡಿನ ಜನಮನಕ್ಕೆ ಮುಟ್ಟಿಸಲು ಕರ್ನಾಟಕ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಇಲ್ಲಿ ಸಂಪೂರ್ಣ ವಿವರಣೆ ನೀಡಿದ್ದಾರೆ. ಮೋದಿ ಅವರನ್ನು ತಾವೇಕೆ ಇಷ್ಟಪಡುತ್ತೇವೆ ಎಂಬುದನ್ನು ಇಲ್ಲಿ ಕಾರಜೋಳ ವಿವರಿಸಿದ್ದಾರೆ.

ಕಳೆದ ಸುಮಾರು ಐದು ದಶಕಗಳಿಂದ ನಾನು ಕನ್ನಡ ನಾಡಿನಲ್ಲಿ ಸಾರ್ವಜನಿಕ ಸೇವೆಯ ಬದುಕು ನಡೆಸಿದ್ದೇನೆ. ಜನಸೇವೆ ನನಗೆ ಉಸಿರಾಗಿದೆ. ಬದುಕಿರುವಷ್ಟು ಕಾಲ ಜನತೆಯಲ್ಲಿ ಜನಾರ್ಧನನನ್ನು ಕಾಣುವ ಅಭಿಲಾಷೆ ನನ್ನದು.
ರಾಜಕಾರಣಿಯಾಗಿ ನನ್ನ ಮನಸ್ಸಿನ ಅಂತರಾಳದ ಭಾವನೆಗಳನ್ನಾಗಲಿ, ಬೇಕು-ಬೇಡಗಳನ್ನಾಗಲಿ ಬಹಿರಂಗವಾಗಿ ನಾನು ಎಂದೂ ಹೇಳಿಕೊಂಡಿಲ್ಲ. ವೈಯಕ್ತಿಕ ಏಳಿಗೆ ಅಥವಾ ಲಾಭಕ್ಕಾಗಿ ನಾಯಕ ಇಲ್ಲವೇ ನಾಯಕಗಣವನ್ನು ವಿನಾಕಾರಣ ಸ್ತುತಿಸಿಲ್ಲ; ಹೊಗಳಿಲ್ಲ. ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ, ಚುನಾವಣೆ ರಾರ‍ಯಲಿಗಳಲ್ಲಿ, ಉಳಿದ ರಾಜಕಾರಣಿಗಳಂತೆ ಭಾಷಣ ಮಾಡಿದ್ದೇನೆ. ನಿಜ ಲೇಖನ ಅಥವಾ ಪ್ರಬಂಧ ಬರೆದು ನನ್ನ ಅನಿಸಿಕೆಗಳನ್ನು ಹಂಚಿಕೊಂಡಿಲ್ಲ.

"

 

ಮೊದಲೇ ಅರಿಕೆ ಮಾಡಿಕೊಂಡಂತೆ ನಾನೊಬ್ಬ ಸಾಮಾನ್ಯ ಸಾರ್ವಜನಿಕ ಕಾರ್ಯಕರ್ತ. ಇಂದು ರಾಷ್ಟ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕುರಿತಂತೆ ನಾನು ಕಂಡ ಮಹೋನ್ನತ ಗುಣ ಮತ್ತು ಸಾಧನೆಗಳನ್ನು ಬರೆದಿಡುವ ಮನಸ್ಸಾಗಿದೆ. ನನಗೆ ರಾಜಕೀಯವಾಗಿ ಮಾರ್ಗದರ್ಶನ ಮಾಡಿದ ದಿ. ರಾಮಕೃಷ್ಣ ಹೆಗಡೆಯವರನ್ನು ಭಕ್ತಿಯಿಂದ ನೆನೆದು ಈ ಲೇಖನ ಬರೆಯುತ್ತಿದ್ದೇನೆ.

ಜಗತ್ತೇ ಮೆಚ್ಚುವಂತೆ ದೇಶ ಮುನ್ನಡೆಸುತ್ತಿರುವ ಮೋದಿ: ಪ್ರಧಾನಿ ಬಗ್ಗೆ ಮುನಿಸ್ವಾಮಿ ಮಾತು

‘ಜನ ನಾಯಕ’ ಎನ್ನುವ ಪದವೊಂದಿದೆ. ಸಾಧನೆಗಿಂತ ಸೇವೆಗೆ ಹೊಂದುವಂತೆ ಪೂರಕ ಅರ್ಥಕೊಡುವ ಪರ್ಯಾಯ ಪದ ಇದು. ಭಾರತದ ಇಂದಿನ ಪ್ರಧಾನಮಂತ್ರಿ ನರೇಂದ್ರ ದಾಮೋದರ ಮೋದಿಯವರು ವಿಶ್ವದ ಜನನಾಯಕರಲ್ಲೊಬ್ಬರು. ವಿಶ್ವ ಸಮುದಾಯದೆತ್ತರಕ್ಕೆ ಭಾರತೀಯರ ಜನಸೇವಾ ಕಾರ್ಯಗಳನ್ನು ಎತ್ತಿ ತೋರಿದ ಮಹಾನ್‌ ನಾಯಕ ಈತ. ಶಾಂತಿ-ಸಹಬಾಳ್ವೆಯ ನಿರೂಪಕ, ನಿರ್ಮಾಪಕ, ದಿಗ್ದರ್ಶಕ, ಸ್ವಚ್ಛ ಭಾರತ ನಿರ್ಮಾತೃ,ಆಯುಷ್ಮಾನ್‌ ಭಾರತದ ರೂವಾರಿ ಹಾಗೂ ಅಂತ್ಯೋದಯ ಚಿಂತನೆಗಳ ಕಾರ್ಯಸಾಧಕ.

ಇದೇ ಮೇ 30ಕ್ಕೆ ನರೇಂದ್ರ ಮೋದಿಯವರು ಎರಡನೆಯ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ವರ್ಷವೊಂದನ್ನು ಪೂರೈಸಲಿದ್ದಾರೆ. ಮೋದಿಯವರ ಅಪೂರ್ವ ಸಾಧನೆಗಳನ್ನು ನಾಡಿನ ಜನಮನಕ್ಕೆ ಮುಟ್ಟಿಸಲು ನಾನು ಮುಂದಾಗಿದ್ದೇನೆ.

ಎಷ್ಟೊಳ್ಳೆ ಎಂಪಿ ಗೆಲ್ಲಿಸಿದ್ದೀರಿ ಎಂದು ಮೋದಿ ಹೇಳಿದ್ದೇ ನನಗೆ ಸ್ಫೂರ್ತಿ ಎಂದ ಸಿಂಹ

ದೇಶದ ಆಮೂಲಾಗ್ರ ಅಭಿವೃದ್ಧಿಗಾಗಿ ಹಗಲಿರಳು ದುಡಿಯುತ್ತಿರುವ ಮೋದಿ 

ಪ್ರಧಾನಿ ಮೋದಿಯವರು ಜನ ಕಲ್ಯಾಣಕ್ಕಾಗಿ ನೂರೆಂಟು ಕಾರ್ಯ ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸಿದುದನ್ನು ಕಳೆದ ಆರು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಜನತೆ ಕಂಡಿದ್ದಾರೆ. ಈ ಪೈಕಿ ನಾಡಿನ ದೀನ-ದಲಿತರು ಮತ್ತು ಅಶಕ್ತರು ಬಹುವಾಗಿ ಸ್ಮರಿಸುತ್ತಿರುವುದು ಅಂತ್ಯೋದಯದ ಮಹತ್ವಪೂರ್ಣ ಅಂಶಗಳನ್ನು ‘ಸಬ್‌ಕಾ ಸಾತ್‌, ಸಬ್‌ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌’ ಸೂತ್ರದ ಮೂಲಕ ಪ್ರಧಾನಿ ಮೋದಿ ದೇಶದ ಆಮೂಲಾಗ್ರ ಅಭಿವೃದ್ಧಿಗಾಗಿ ಹಗಲಿರಳು ದುಡಿಯುತ್ತಿದ್ದಾರೆ. ಗಾಂಧೀಜಿಯವರು ಕಂಡ ಕನಸನ್ನು ಪ್ರಾಮಾಣಿಕವಾಗಿ ನನಸು ಮಾಡುವತ್ತ ಮೋದಿಯವರು ಶ್ರಮಿಸಿದ್ದಾರೆ.

‘ಆಯುಷ್ಮಾನ್‌ ಭಾರತ’ ಮೋದಿಯವರ ಮಹತ್ವಪೂರ್ಣ ಯೋಜನೆಗಳಲ್ಲಿ ಮೊತ್ತ ಮೊದಲನೆಯ ಯೋಜನೆ. ಲ್ಯಾನ್ಸೆಟ್‌ ಎನ್ನುವ ಹೆಸರಿನ ಮಾಧ್ಯಮವೊಂದು ತಿಳಿಸುವಂತೆ ಆಯುಷ್ಮಾನ್‌ ಭಾರತದ ಕಾರ್ಯ ಯೋಜನೆಯ ವ್ಯಾಪಕತೆ, ಆಯಾಮ, ಜನರಿಗಾಗುತ್ತಿರುವ ಪ್ರಯೋಜನ ಕಂಡು ಮುಂದುವರೆದ ರಾಷ್ಟ್ರಗಳು ಬೆರಗಾಗಿವೆ. ‘ಜನಧನ್‌’ ಯೋಜನೆ ಮೂಲಕ ಸರ್ಕಾರದಿಂದ ಕೊಡಮಾಡುವ ಹಣ ನೇರವಾಗಿ ಬಡ ಪ್ರಜೆಗೆ ಸಂದಾಯವಾದದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. ಭಾಗ್ಯದ ಲಕ್ಷ್ಮಿಯಾಗಿದೆ ಈ ಯೋಜನೆ. ಜನ ಸುರಕ್ಷಾ ಯೋಜನೆ, ಕಿಸಾನ್‌ ಸಮ್ಮಾನ್‌ ನಿಧಿ, ಉಜ್ವಲ ಯೋಜನೆ ಹೀಗೆ ಹತ್ತು ಹಲವನ್ನು ಉಲ್ಲೇಖಿಸಬಹುದು.

ಸಂಸದರ ಜತೆಗೆ ಮೋದಿ ಒಡನಾಟ ಬೆಸ್ಟ್‌, ಖುದ್ದು ಭೇಟಿ ಮಾಡ್ಬೇಕಂದ್ರೆ ಮನೆಗೇ ಕರೀತಾರೆ ಪ್ರಧಾನಿ

ಈ ಮುನ್ನ ರೈತರ ನೆರವಿಗೆ ಕನಿಷ್ಠ ಐದು ಎಕರೆ ಜಮೀನಿನ ನಿಗದಿ ಕಡ್ಡಾಯವಾಗಿತ್ತು. ಇಂದು ಯಾವುದೇ ಮಿತಿ ಇಲ್ಲ. ವರುಷಕ್ಕೆ ರೈತನ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ 87,000 ಕೋಟಿ ರೂಪಾಯಿಗಳನ್ನು ವಿನಿಯೋಗಿಸುತ್ತಿರುವುದನ್ನು ಇಡೀ ದೇಶದ ರೈತ ಜನಾಂಗ ಕೃತಜ್ಞತೆಯಿಂದ ಕಾಣುತ್ತದೆ. ರೈತನೊಬ್ಬನ ಪ್ರೀತಿ-ವಿಶ್ವಾಸಗಳಿಸಲು ಇದೊಂದೇ ಕಾರಣವೆಂದರೂ ಅತಿಶಯೋಕ್ತಿಯಲ್ಲ.

ರಾಜಕೀಯ ಕಾರ್ಯಕರ್ತರುಗಳಿಗೆ ಮೋದಿ ಮಹಾನ್‌ ನಾಯಕ 

ಹೇಳಲು ಬಹಳಷ್ಟಿದೆ; ನಾನು ಹಚ್ಚು ಹೇಳಬಯಸುವುದಿಲ್ಲ. ದೇಶದಲ್ಲಿನ ಲಕ್ಷಾಂತರ ಜನಾಭಿಪ್ರಾಯ ನೇತಾರರು ಮತ್ತು ರಾಜಕೀಯ ಕಾರ್ಯಕರ್ತರುಗಳಿಗೆ ಮಹಾನ್‌ ನಾಯಕನಾಗಿ ಕಂಡಿದ್ದಾರೆ ಮೋದಿ. ಸೃಜನಾತ್ಮಕ ಕಾರ್ಯಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯ ಅನುಷ್ಠಾನಕ್ಕೆ ದಾರಿ ದೀಪ ಆಗಿದ್ದಾರೆ. ಜನಮನ ಮೆಚ್ಚಿಸುವ ಮತ್ತೆರಡು ವಿಶಿಷ್ಟಪೂರ್ಣ ಕಾರ್ಯಕ್ರಮಗಳನ್ನು ಸ್ಮರಿಸಬೇಕಾದದ್ದು ನಮ್ಮ ಕರ್ತವ್ಯ.

ಬಿಜೆಪಿ ಕಾರ್ಯಕರ್ತ ಸಮೂಹಕ್ಕೂ ಮೋದಿ ಅವರು ಸ್ಫೂರ್ತಿ ಮತ್ತು ಉತ್ಸಾಹ ಮೂಡಿಸಿದ್ದಾರೆ. ಒಂದು- ರಾಜಕೀಯ ಸಿದ್ಧಾಂತ, ತತ್ವಗಳ ಜನಾದರಣೆಯ ಸಲುವಾಗಿ ಮೋದಿ ಅವರು ಹಿಂದೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಡೆಸಿಕೊಟ್ಟಯಾತ್ರೆಗಳು. ಎರಡು- ಇದೀಗ ವಿಶ್ವಸಮುದಾಯ ಎದುರಿಸುತ್ತಿರುವ ಕೋವಿಡ್‌ 19 ಮಹಾಮಾರಿ ಜಾಡ್ಯದ ವಿರುದ್ಧ ಭಾರತದ ಬೃಹತ್‌ ಪ್ರಮಾಣದ ಆರ್ಥಿಕ, ಸಾಮಾಜಿಕ ಮತ್ತು ಜನಾರೋಗ್ಯ ಸಿದ್ಧತೆ.
ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಎಗ್ಗು ತಗ್ಗಿಲ್ಲದೇ ನಡೆದಿದ್ದ, ಸ್ವಾರ್ಥ, ದೌರ್ಜನ್ಯ, ಭ್ರಷ್ಟಾಚಾರ, ಅಕ್ರಮ -ಇವುಗಳ ವಿರುದ್ಧ ಸಿಡಿದೆದ್ದು ಪ್ರಾಮಾಣಿಕ ಮತ್ತು ಸತ್ಯನಿಷ್ಠ ರಾಜಕೀಯ ಆಡಳಿತ ಕಾಣಲು ನರೇಂದ್ರ ಮೋದಿಯವರು ಸಂಘಟಿಸಿದ ಹಲವಾರು ಯಾತ್ರೆಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಲ್ಲದೇ ಬಡವರು, ಅಲೆಮಾರಿಗಳು ಕುಲಕಸುಬು ನಂಬಿ ಜೀವನ ಸಾಗಿಸುವ ಜನರ ಬಗ್ಗೆ ತೋರಿದ ಕಳಕಳಿ, ಕಾಳಜಿ ಮತ್ತು ಅವರು ನೀಡಿದ 20 ಲಕ್ಷ ಕೋಟಿ ರು.ಗಳ ವಿಶೇಷ ಪ್ಯಾಕೇಜ್‌ ದೇಶದ ಎಲ್ಲಾ ರಾಜ್ಯಗಳ ಮೆಚ್ಚುಗೆಯಾಗಿದೆ ಮತ್ತು ಮಾದರಿಯಾಗಿದೆ.

ಮೋದಿಯದ್ದು ಜನಮೆಚ್ಚಿದ, ಜಗಮೆಚ್ಚಿದ ಆಡಳಿತ; ಸಂಸದ ನಳಿನ್‌ ಕುಮಾರ್‌ ಕಟೀಲ್‌

ಕೊರೋನಾ ವಿರುದ್ಧ ಭಾರತದ ಸಮರ

ಇಂದಿನ ಕೊರೋನಾ ವಿರುದ್ಧದ ವಿಶ್ವ ಸಮರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮರ್ಥ ಆಡಳಿತದ ಜಾಗರೂಕತೆ ಕ್ರಮಗಳನ್ನು ಕುರಿತು ದೇಶದಾದ್ಯಂತ ಮೆಚ್ಚುಗೆ ಮತ್ತು ಸಮಾಧಾನದ ಮಾತುಗಳು ಕೇಳಿ ಬಂದಿವೆ.
ಮೋದಿಯವರನ್ನು ಸೂಕ್ತ ವಿವೇಚನೆ, ಸಮಯೋಚಿತ ಕ್ರಮಗಳು, ಬೃಹತ… ಪ್ರಮಾಣದ ಆರೋಗ್ಯ ವ್ಯವಸ್ಥೆ, ಮತ್ತಿತರ ಮುನ್ನೆಚ್ಚರಿಕೆ ಕ್ರಮಕ್ಕಾಗಿ ವಿಶ್ವದ ನಾಯಕರುಗಳು ಮುಕ್ತ ಕಂಠದಿಂದ ಪ್ರಶಂಶಿಸಿದ್ದನ್ನು ನಾವೆಲ್ಲ ಪ್ರತ್ಯಕ್ಷ ಕಂಡಿದ್ದೇವೆ. ಮಾರ್ಚ್ ತಿಂಗಳ ಮೂರನೆಯ ವಾರದಿಂದ ಮೇ ಮಧ್ಯದವರೆಗಿನ ಗಂಡಾಂತರದ ಆತಂಕದ ದಿನಗಳಲ್ಲಿ ರಾಷ್ಟ್ರದ ಸಮಗ್ರ ಆರೋಗ್ಯ ಆಡಳಿತದ ಹೊಣೆ ಹೊತ್ತ ಪ್ರಧಾನಿ ನರೇಂದ್ರ ಮೋದಿ ಈ ಅವಧಿಯಲ್ಲಿ ವಿಶ್ರಾಂತಿ ಅಥವಾ ನಿದ್ರೆ ಮಾಡಿದ್ದಾರೆಯೇ ಇಲ್ಲವೇ ಎನ್ನುವ ಸಂದೇಹ ನನಗಿದೆ.

ಗ್ರಾಮೀಣ ಬದುಕು ನಮ್ಮೆಲ್ಲರ ಹಿನ್ನೆಲೆ. ಭಾರತೀಯ ಜನಸಾಮಾನ್ಯನಿಗೆ ಬಡತನವೇ ಹಾಸಿಗೆ, ಅದೇ ಹೊದಿಕೆ. ಗ್ರಾಮೀಣ ಕುಟುಂಬಗಳ ಕಷ್ಟದ ಬದುಕನ್ನು ಹಂಚಿಕೊಂಡು ಬೆಳೆದ ಜನನಾಯಕ ನರೇಂದ್ರ ಮೋದಿ. ಪ್ರತಿ ಹಂತದಲ್ಲಿಯೂ ಬಡಜನರ ಕಣ್ಣೀರು ಒರೆಸುವ ಕಾರ್ಯಕ್ರಮಗಳಿಗೆ ಆದ್ಯತೆ ಕೊಟ್ಟಮೋದಿಯವರ ಆಡಳಿತ ನೂರೆಂಟು ಟೀಕೆ ಟಿಪ್ಪಣಿಗಳನ್ನು ಎದುರಿಸಬೇಕಾಗಿದೆ. ಜನ ಸಾಮಾನ್ಯರ ಸಲುವಾಗಿ ರೂಪಿತವಾದ ಕಾರ್ಯಕ್ರಮಗಳಂತೂ ಶ್ರೀಮಂತ ವರ್ಗದ ಕಣ್ಣಿಗೆ ಕೆಂಪಾಗಿದೆ.

ಪ್ರಧಾನಿ ಮೋದಿಯವರು ಸಂಕಷ್ಟದಲ್ಲಿ ಸಿಲುಕಿದ ಕೋಟ್ಯಂತರ ಭಾರತೀಯ ಸಲುವಾಗಿ ಇದೀಗ ಘೋಷಿಸಿರುವ 20 ಲಕ್ಷ ಕೋಟಿ ರು.ಗಳ ಸಂಕಷ್ಟಪರಿಹಾರೋಪಾಯ ಮತ್ತು ವಿವಿಧ ಹಂತದ ರಿಯಾಯತಿ, ಪೋ›ತ್ಸಾಹ ಕಾರ್ಯಕ್ರಮಗಳು ಜನತೆಗೆ ಆಶಾದಾಯಕ ಎನಿಸಿವೆ.

ಪ್ರಜಾತಂತ್ರ ವ್ಯವಸ್ಥೆಯ ಜನನಾಯಕನಲ್ಲಿ ಇರಬೇಕಾದ ಆದರ್ಶದ ಗುಣವೆಂದರೆ ಸಂಘಶಕ್ತಿ. ಜನಪರ ಕಾರ್ಯಕ್ರಮಗಳು ಜನತೆಯಿಂದಲೇ ಅನುಷ್ಠಾನಗೊಳ್ಳಬೇಕೆಂಬ ಸಾಮೂಹಿಕ ನಿರ್ವಹಣಾ ಮನೋಧರ್ಮ. ಭಾರತದಂತಹ ಜನಬಾಹುಳ್ಯ ಪ್ರಜಾತಂತ್ರದ ಪ್ರಧಾನಮಂತ್ರಿಯಾಗಿ ದೇಶದ ಅಭಿವೃದ್ಧಿ ಕಾರ್ಯಕ್ರಮಗಳ ಯಶಸ್ವಿಗಾಗಿ ದಿನವಿಡೀ ಶ್ರಮಿಸಿದರೂ ಒಮ್ಮೆಯೂ ನರೇಂದ್ರ ಮೋದಿ ತಾನೇ ಎಲ್ಲಕ್ಕೂ ಕಾರಣಕರ್ತ ಎಂದಾಗಲೀ, ತನ್ನಿಂದಲೇ ಸರ್ವಸ್ವವೆಂದಾಗಲೀ ಹೊಗಳಿಕೊಂಡಿಲ್ಲ. ಸ್ವಯಂ ಪ್ರತಿಷ್ಠೆಯ ಗರ್ವ, ಆತ್ಮ ಪ್ರಶಂಸೆ, ಪ್ರತಿಪಕ್ಷಗಳ ಬಗೆಗೆ ಕೀಳರಿಮೆ - ಇಂತಹ ಯಾವುದೇ ಲೋಪ, ದೋಷ ಎಣಿಸಿಲ್ಲ. ಪ್ರಾಯಶಃ ಇದೊಂದೇ ಗುಣದಿಂದ ಮೋದಿಯವರು ವಿಶ್ವಮಾನ್ಯತೆ ಗಳಿಸಲು ಅರ್ಹತೆ ಗಳಿಸಿದ್ದಾರೆ. ಇದು ನನ್ನ ಖಚಿತ ಅಭಿಮತ.

ಸುಧಾರಕ ವಿಶ್ವಗುರು ಬಸವಣ್ಣನವರ ಮಾತನ್ನು ನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ಅನ್ವಯ ಮಾಡಿ ಹೇಳಿದರೆ ಸತ್ಯ ಹೇಳಿದಂತೆ:

ನಾ ಮಾಡಿದೆನೆಂಬುದು ಮನದೊಳು ಸುಳಿದೊಡೆ
ಏಡಿಸಿ ಕಾಡಿತ್ತು ಶಿವನ ಡಂಗುರ;
ನಾ ಮಾಡಿದೆನೆನ್ನದಿರು ಲಿಂಗಕ್ಕೆ,
ನಾ ಮಾಡಿದೆನೆನ್ನದಿರು ಜಂಗಮಕ್ಕೆ,
ನಾ ಮಾಡಿದೆನೆಂಬುದು ಮನದೊಳಿಲ್ಲದಿದ್ದೊಡೆ
ಬೇಡಿದನೀವ ನಮ್ಮ ಕೂಡಲ ಸಂಗಮದೇವ
 

Latest Videos
Follow Us:
Download App:
  • android
  • ios