ಬೆಂಗಲೂರು(ಜೂ.01); ಮೇ 30, 2019 ಅನೇಕ ದೃಷ್ಟಿಯಿಂದ ವಿಶೇಷವಾದ ದಿನ. ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಎರಡನೇ ಬಾರಿಗೆ ದೇಶ ಕಟ್ಟುವ ಕಾಯಕಕ್ಕೆ ತನ್ನನ್ನು ಅರ್ಪಿಸಿಕೊಂಡ ದಿನ. ಎರಡೂ ಬಾರಿ ಬಿಜೆಪಿಗೇ ಬಹುಮತ. ಎನ್‌ಡಿಎಗೆ ಅಗಾಧ ಬಹುಮತ. 28 ಕೋಟಿ ಮತಗಳೊಡನೆ ಎನ್‌ಡಿಎಗೆ 353 ಸ್ಥಾನಗಳು. (ಬಿಜೆಪಿ-303 ಸ್ಥಾನ, 38%- 23 ಕೋಟಿ ಮತ). ಬಿಜೆಪಿ ಸಹಿತ ಯಾವುದೇ ಕಾಂಗ್ರೆಸ್ಸೇತರ ಪಕ್ಷವೂ ಪೂರ್ಣ ಬಹುಮತದೊಡನೆ ಎರಡನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರಲಿಲ್ಲ. ಆ ಕಾರಣಕ್ಕೂ ಆ ದಿನ ವಿಶೇಷ ದಿನ.

5 ಹೆಜ್ಜೆಯ ಯಶಸ್ಸು ಅದು

ಉತ್ತರದ ಮೂರು ರಾಜ್ಯಗಳ ಸೋಲಿನ ಕಾರಣದಿಂದ ಎಡಪಂಥೀಯರು, ಕಾಂಗ್ರೆಸ್‌ ದರ್ಬಾರಿನ ಅಸಂಖ್ಯಾತ ಬುದ್ಧಿ ಜೀವಿಗಳು ಬಿಜೆಪಿಯನ್ನು 160+ಗೆ ಇಳಿಸಿದ್ದರು. ಆದರೆ ಸಂಕ್ರಾಂತಿ, 2020 ದಾಟುತ್ತಿದ್ದಂತೆ ಬಿಜೆಪಿ ತನ್ನ ಲಯವನ್ನು ಮತ್ತೆ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ನಿತೀಶ್‌ಕುಮಾರ್‌ ಜನತಾದಳ, ಮಹಾರಾಷ್ಟ್ರದ ಶಿವಸೇನೆ, ತಮಿಳುನಾಡಿನ ಎಐಡಿಎಂಕೆಯ ಜೊತೆ ಹೊಂದಾಣಿಕೆ ಮೊದಲ ಹೆಜ್ಜೆ. ಅತ್ಯಂತ ಜನಪರವಾದ ಬಜೆಟ್‌ ಎರಡನೇ ಹೆಜ್ಜೆ. ಪುಲ್ವಾಮ ದಾಳಿಯ ನಂತರ ನರೇಂದ್ರ ಮೋದಿ ನೇತೃತ್ವ ನಡೆದುಕೊಂಡ ರೀತಿ ದೇಶವನ್ನು ಬೆರಗಾಗಿಸಿತ್ತು. ಅದು ಮೂರನೇ ಹೆಜ್ಜೆ. ಪಶ್ಚಿಮಬಂಗಾಳ-ಒರಿಸ್ಸಾ-ತೆಲಂಗಾಣ-ಉತ್ತರಪೂರ್ವದ ರಾಜ್ಯಗಳಲ್ಲಿ ಬೃಹತ್‌ ಪೂರ್ವತಯಾರಿ-ಅಭಿಯಾನಗಳು ನಾಲ್ಕನೇ ಹೆಜ್ಜೆ. ವಿಧಾನಸಭೆಯಲ್ಲಿ ಸೋತ ಮೂರು ರಾಜ್ಯಗಳಲ್ಲಿ ಶೇ.100ರಷ್ಟು ಫಲಿತಾಂಶ ಸಾಧಿಸುವ ಐದನೇ ಹೆಜ್ಜೆ. ಈ ಐದು ಹೆಜ್ಜೆಗಳನ್ನಿಡುತ್ತಾ ಬಿಜೆಪಿ, ಎನ್‌ಡಿಎ ಜೊತೆಗೆ ಅಧಿಕಾರಕ್ಕೆ ಬಂದಿತ್ತು.

ದೃಢ ನಿಶ್ಚಯದ ಧಾವಂತ ಹೆಜ್ಜೆ

ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌ಗೆ, ಸಬ್‌ ಕಾ ವಿಶ್ವಾಸ್‌ ಜೋಡಿಸುವುದರ ಜೊತೆಗೆ ಮೋದಿ ಸರ್ಕಾರದ ಎರಡನೇ ಅವಧಿ ಆರಂಭಗೊಂಡಿತು. ವ್ಯವಸ್ಥೆಗಳಲ್ಲಿ ಸುಧಾರಣೆ, ತಂತ್ರಜ್ಞಾನ ಅಳವಡಿಕೆಯ ಮೂಲಕ ಪಾರದರ್ಶಕತೆ, ದೇಶದ ಸುರಕ್ಷತೆಯ ಕುರಿತು ವಿಶೇಷ ಆದ್ಯತೆಯ ಜೊತೆಗೆ ಹಲವು ದಶಕಗಳಿಂದ ಸಮಸ್ಯೆಯಾಗಿಯೇ ಉಳಿದುಕೊಂಡಿದ್ದ ಅನೇಕ ವಿಷಯಗಳನ್ನು ಪರಿಹರಿಸುವ ಸಂಕಲ್ಪ ಮೋದಿಯವರ ಮನದಲ್ಲಿತ್ತು. ಎರಡನೇ ಬಾರಿ ಪ್ರಮಾಣವಚನದ ನಂತರ, ಅವರ ಹೆಜ್ಜೆಗಳು ದೃಢ ನಿಶ್ಚಯದ ಧಾವಂತದ ಹೆಜ್ಜೆಗಳಾಗಿದ್ದವು. ಸಮಸ್ಯೆಗಳು, ಜಡತ್ವವನ್ನು ಹಿಂದೆ ಬಿಟ್ಟು ವಿಕಾಸದ ರಾಜಮಾರ್ಗದೆಡೆಗೆ ತೆರಳುವ ಧಾವಂತ ಅವರಲ್ಲಿ ಕಾಣುತ್ತಿತ್ತು. ಸಂಸತ್‌ ಮೂರು ಯಾವು (ಮಳೆಗಾಲ, ಚಳಿಗಾಲ, ಬಜೆಟ್‌ ಅಧಿವೇಶನ) ತೊಡಗಿಸಿಕೊಂಡ ರೀತಿಯಲ್ಲೇ ಅದರ ಅರಿವಾಗುತ್ತಿತ್ತು.

ಒಂದು ದೇಶ-ಒಂದು ವ್ಯವಸ್ಥೆಗೆ ಅನುಗುಣವಾಗಿ O್ಞಛಿ ಇಟ್ಠ್ಞಠ್ಟಿy ​ O್ಞಛಿ ್ಕaಠಿಜಿಟ್ಞ ಇa್ಟd ಜಾರಿಗೆ ಬಂದಿತು. ಇಂದು ದೇಶದ ಯಾವುದೇ ರೇಶನ್‌ ಅಂಗಡಿಯಲ್ಲಿ ಪಡಿತರ ತೆಗೆದುಕೊಳ್ಳಬಹುದು. O್ಞಛಿ ಇಟ್ಠ್ಞಠ್ಟಿy ​ O್ಞಛಿ ಊಅಖಠಿaಜ ಎಲ್ಲಾ ಟೋಲ್‌ ಪ್ಲಾಜಾಗಳಲ್ಲಿ ನಗದು ರಹಿತ ವ್ಯವಸ್ಥೆ ತರುವುದರ ಜೊತೆಗೆ ಸಮಯ, ಇಂಧನ ಉಳಿತಾಯವನ್ನು ಸಾಧಿಸುತ್ತಿದೆ. ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನೂ ಒಂದುಗೂಡಿಸಿ ಜಲಶಕ್ತಿ ಇಲಾಖೆಯಾಗಿ ಯೋಜಿಸಿದ ಪ್ರಧಾನಮಂತ್ರಿಗಳು 2022ರ ಹೊತ್ತಿಗೆ ಪ್ರತೀ ಮನೆಗೆ ನಲ್ಲಿ ನೀರಿನ ವ್ಯವಸ್ಥೆ ಒದಗಿಸುವ ಕಡೆಗೆ ಹೆಜ್ಜೆ ಇಟ್ಟಿದ್ದಾರೆ. ಅಟಲ್‌ ಭೂ ಜಲ ಯೋಜನೆ, ಜಲಸಂರಕ್ಷಣೆ, ಜಲ ಜೀವನ ಮಿಶನ್‌ಗಳ ಮುಖಾಂತರ 78 ಜಿಲ್ಲೆಗಳ 8350 ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತದ ಯೋಜನೆ ಜಾರಿಗೆ ಬಂದಿದೆ.

ರಕ್ಷಣೆ ಸರ್ಕಾರದ ಆದ್ಯತೆ

ರಕ್ಷಣೆ ಈ ಸರ್ಕಾರದ ಆದ್ಯತೆಗಳಲ್ಲಿ ಪ್ರಮುಖವಾದದ್ದು. 8 ಅಪಾಚಿ ಯುದ್ಧ ಹೆಲಿಕಾಪ್ಟರ್‌, ರಫೇಲ್‌ ಯುದ್ಧ ವಿಮಾನ, ಅಸಾಲ್ಟ್‌ ರೈಫಲ್‌ಗಳು, ರಕ್ಷಣಾ ಉತ್ಪಾದನೆಗಳಲ್ಲಿ ವೇಗ ಸಾಧಿಸುವುದರ ಜೊತೆಗೆ ಹಲವು ದಶಕಗಳ ಕಾಲ ಚಿಂತನೆಯಲ್ಲೇ ಉಳಿದಿದ್ದ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ (ಮೂರು ಇಲಾಖೆಗಳ ಮುಖ್ಯಸ್ಥರ ಸ್ಥಾನ) ರಚಿಸಿ, ಅದಕ್ಕೆ ಜನರಲ್‌ ಬಿಪಿನ್‌ ರಾವತ್‌ರನ್ನು ನೇಮಿಸಿದ್ದು ದೊಡ್ಡ ಹೆಜ್ಜೆ. ಭಯೋತ್ಪಾದನೆಯ ನಿಯಂತ್ರಣಕ್ಕೆ ಯುಎಪಿಎ-2019 ಕಾನೂನು ಜಾರಿಗೆ ಬಂದಿದೆ. ಇದರ ಮೂಲಕ ದೇಶ ಭಯೋತ್ಪಾದಕರನ್ನು ಗುರುತಿಸಿ, ಘೋಷಿಸಲು ಸಾಧ್ಯವಾಗಿದೆ. ಅದೇ ರೀತಿ, ಎನ್‌ಐಎ-2019 ವಿಧೇಯಕ ತನಿಖಾ ಸಂಸ್ಥೆಗಳಿಗೆ ಹೆಚ್ಚು ಶಕ್ತಿ ನೀಡಿದ್ದು, ಗಡಿಗಳಲ್ಲಿನ ರಸ್ತೆ ನಿರ್ಮಾಣ, ಸರ್ವಋುತು ಸುರಂಗಗಳ ನಿರ್ಮಾಣ, ಕಠಿಣ ಪ್ರದೇಶಗಳಲ್ಲಿ ರೈಲು ಮಾರ್ಗಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಇತ್ತೀಚಿನ ಲಡಾಖ್‌ ಬಳಿಯ ಚೀನಾದ ತೀವ್ರ ಚಟುವಟಿಕೆಗಳು ನಮ್ಮ ರಸ್ತೆ ನಿರ್ಮಾಣದಿಂದ ಅವರಲ್ಲಿ ನಿರ್ಮಾಣವಾಗಿರುವ ಆತಂಕದ ಪ್ರತಿಫಲನ.

ಸಂವಿಧಾನದಡಿ ಜಮ್ಮು-ಕಾಶ್ಮೀರ

ಬ್ಯಾಂಕ್‌ಗಳ ವಿಲೀನದ ಪ್ರಕ್ರಿಯೆ, ಕಲ್ಲಿದ್ದಲಿನ ಕ್ಷೇತ್ರದಲ್ಲಿ ಶೇ.100ರಷ್ಟುವಿದೇಶಿ ಹೂಡಿಕೆಗೆ ಅವಕಾಶ, ಗಗನಯಾನ-ಮಂಗಳಯಾನ-ಅಂತರಿಕ್ಷ ಕ್ಷೇತ್ರಕ್ಕೆ ಉತ್ತೇಜನ ಹೀಗೆ ಹಲವು ಕ್ಷೇತ್ರಗಳಿಗೆ ವೇಗ ದೊರಕಿದೆ. ಏಕಾತ್ಮ ಭಾರತದ ಕನಸಿಗೆ ಪೋಷಣೆ ಮಾಡುವ ಕೆಲಸವೂ ಭರದಿಂದ ಸಾಗಿದೆ. ದಶಕಗಳ ಸಂಘರ್ಷ ಬಿಜೆಪಿಯದ್ದು ಆರ್ಟಿಕಲ್‌ 370 ಮತ್ತು ವಿಧಿ 35ಎ ವಿರುದ್ಧ. ಅತ್ಯಂತ ಕುಶಲತೆಯಿಂದ ಸಂಸತ್ತಿನ ಎರಡೂ ಸದನಗಳಲ್ಲಿ ರದ್ಧತಿಯ ವಿಧೇಯಕ ಮಂಡಿಸಿದ ಗೃಹಮಂತ್ರಿ ಅಮಿತ್‌ ಶಾ ಒಂದು ಹೆಜ್ಜೆಯಲ್ಲಿ ಹಲವು ತಿರುವು ನೀಡಿದರು. ವಿಧಿ 35ಎ ಹಿಂದೆ ಪಡೆದಿದ್ದು, ವಿಧಿ 370ರ ರದ್ಧತಿ, ಲಡಾಖ್‌ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿಸಿದ್ದು, ಗಿಲ್ಗಿಟ್‌-ಬಾಲ್ಟಿಸ್ತಾನ್‌ಗಳೊಡನೆ ಲಡಾಖ್‌ನ ನಕ್ಷೆ ಪ್ರಕಟಿಸಿದ್ದು, ಲಕ್ಷಾಂತರ ದೇಶಭಕ್ತ ನಾಗರಿಕರ ಜೀವನಕ್ಕೆ ಧನ್ಯತೆ ನೀಡಿತು. ಇಂದು ಜಮ್ಮು-ಕಾಶ್ಮೀರ ಭಾರತದ ಸಂವಿಧಾನದ ಅಡಿಯಲ್ಲಿಯೇ ಕಾರ್ಯ ನಿರ್ವಹಿಸುವಂತಾಗಿದೆ. ಅಭಿವೃದ್ಧಿ ಕಾರ್ಯಕ್ಕೆ ವೇಗ ಸಿಕ್ಕಿದೆ. ಕಾಶ್ಮೀರ ಭಾರತ ಮಾತೆಯ ಸಿಂಧೂರ ವಾಕ್ಯಕ್ಕೆ ಅರ್ಥ ದೊರಕಿದೆ.

ಅದೇ ರೀತಿ, ರಾಮಜನ್ಮಭೂಮಿ ವಿವಾದದ ಪರಿಹಾರ, ಮಂದಿರ ನಿರ್ಮಾಣಕ್ಕೆ ಮಾರ್ಗ ಸುಲಲಿತ ಮಾಡಿದೆ. ಸುಪ್ರೀಂಕೋರ್ಟ್‌ನ ನ್ಯಾಯ ತೀರ್ಪಿನ ನಂತರ ಕೇಂದ್ರ ಸರ್ಕಾರ ಅತ್ಯಂತ ಮುತುವರ್ಜಿಯಿಂದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ರಚನೆ, ಅದಕ್ಕೆ 80ಜಿ ಅಡಿ ತೆರಿಗೆ ವಿನಾಯಿತಿ ನೀಡಿದ್ದು, ಜಮೀನಿನ ಹಸ್ತಾಂತರ ನಡೆದು ಈಗ ಮಂದಿರ ನಿರ್ಮಾಣದ ಕಾರ್ಯಕ್ಕೆ ಕ್ಷಣಗಣನೆ ನಡೆದಿದೆ. ಅಯೋಧ್ಯೆ ಜಗತ್ತಿನ ಭಕ್ತ ಜನರ ಕೇಂದ್ರವಾಗುವಂತೆ ಯೋಜನೆಗಳನ್ನು ಉತ್ತರಪ್ರದೇಶ ಸರ್ಕಾರ ಕೈಗೆತ್ತಿಕೊಂಡಿದೆ.

ಪೌರತ್ವ ತಿದ್ದುಪಡಿ ವಿಧೇಯಕ

ಮತ್ತೊಂದು ಮಹತ್ತರ ಹೆಜ್ಜೆ ನಾಗರಿಕ ತಿದ್ದುಪಡಿ ವಿಧೇಯಕ-2019, ಆಕ್ರಮ ಪ್ರವೇಶದ ಕಾರಣಕ್ಕೆ ಇಂದು ದೇಶದ ಬಹುದೊಡ್ಡ ಭಾಗದಲ್ಲಿ ಸಾಮಾಜಿಕ-ಆರ್ಥಿಕ ಸಮತೋಲನ ಕದಡಿರುವುದು ಸತ್ಯ. ಅಸ್ಸಾಂ ವಿದ್ಯಾರ್ಥಿ ಆಂದೋಲನ ಇದೇ ಕಾರಣಕ್ಕೆ ನಡೆದದ್ದು. ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಸಹಿಷ್ಣುತೆಗೆ ಗುರಿಯಾದವರಿಗೆ ಭಾರತದ ನಾಗರಿಕತ್ವ ನೀಡುವ ಸರ್ಕಾರದ ಕ್ರಮ ಕೋಟ್ಯಂತರ ಜನರಿಗೆ ಘನತೆಯ ಜೀವನ ನೀಡುವುದರ ಜೊತೆಗೆ, ವಿಚ್ಛಿದ್ರಕಾರಿ ಆಕ್ರಮ ಪ್ರವೇಶಕ್ಕೆ ತಡೆಯೊಡ್ಡಲಿದೆ. ಸ್ಥಾಪಿತ ಹಿತಾಸಕ್ತಿಗಳು, ರಾಜಕೀಯ ಪಕ್ಷಗಳು ಕೆಲವರನ್ನು ದಾರಿತಪ್ಪಿಸುವ ಕೆಲಸ ಮಾಡಿದರೂ ದೇಶದ ಬಹುದೊಡ್ಡ ವರ್ಗ ಈ ತಿದ್ದುಪಡಿಗೆ, ಶರಣಾರ್ಥಿಗಳಿಗೆ ನಾಗರಿಕತ್ವ ನೀಡುವುದರ ಪರವಾಗಿ ನಿಂತಿದೆ. ಇದೇ ರೀತಿಯಲ್ಲಿ ತ್ರಿವಳಿ ತಲಾಖ್‌ ಪದ್ಧತಿ ವಿಧೇಯಕ ಮುಸ್ಲಿಂ ಹೆಣ್ಣುಮಕ್ಕಳ ಬಾಳಿಗೆ ಹೊಸ ಬೆಳಕು ನೀಡಿದೆ. ದೃಢನಿಶ್ಚಯ, ದೂರದರ್ಶಿತ್ವ, ಕುಶಲ ರಾಜಕೀಯ ನಡೆಗಳು, ಕಾನೂನು-ಸಂವಿಧಾನದ ರಾಜ ಮಾರ್ಗದ ಅನುಸರಣೆಯಿಂದ ಈ ಎಲ್ಲಾ ಹೆಜ್ಜೆಗಳು ಸಂಸತ್‌ನಲ್ಲಿ ಮಂಜೂರಾತಿ ಪಡೆದಿವೆ.

ಜೀವ-ಜೀವನ ಎರಡನ್ನೂ ನಿಭಾಯಿಸ್ತಿದೆ

ಕೋವಿಡ್‌-19 ಸಮಸ್ಯೆ ಇಂದು ಜಗತ್ತಿನ ಎಲ್ಲಾ ದೇಶಗಳನ್ನು ಕಾಡುತ್ತಿದೆ. ಇಂಥ ಸಂದರ್ಭದಲ್ಲಿ ನರೇಂದ್ರ ಮೋದಿಯವರ ನಾಯಕತ್ವ ಇನ್ನಷ್ಟುಪ್ರಖರವಾಗಿದೆ. ಜನವರಿ 1ರಿಂದಲೇ ಭಾರತ ತನ್ನ ಉಪಕ್ರಮಗಳನ್ನು ಆರಂಭಿಸಿತು. ಆ ಎಲ್ಲಾ ಕ್ರಮಗಳಿಂದಾಗಿ 130 ಕೋಟಿ ಜನಸಂಖ್ಯೆಯ ಭಾರತ ಇಂದು ಅತಿ ಕಡಿಮೆ ಸಾವಿನ ಪ್ರಮಾಣ, ಅತಿ ಹೆಚ್ಚು ಗುಣಮುಖರು, ಕನಿಷ್ಠ ಪ್ರಮಾಣದ ಗಂಭೀರ ರೋಗಿಗಳು, 600 ಪ್ರಯೋಗಾಲಯಗಳು, ಪಿಪಿಇ-ಎನ್‌-95 ವೆಂಟಿಲೇಟರ್‌, ಪರೀಕ್ಷಾ ಕಿಟ್‌ಗಳಲ್ಲಿ ಸ್ವಾವಲಂಬನೆಯ ಜೊತೆಗೆ ಜಗತ್ತನ್ನು ಆಧರಿಸುತ್ತಿದೆ. 123 ದೇಶಗಳಿಗೆ ಭಾರತ ಔಷ​ಧ ಸಾಮಗ್ರಿಗಳನ್ನು ಕಳುಹಿಸಿದೆ. ಜೀವ ಮುಖ್ಯ-ಜೀವನ ನಂತರ ಎನ್ನುವ ಮೋದಿಯವರ ಮಾತು ವಿಶ್ವದೆಲ್ಲೆಡೆ ಕುತೂಹಲ ಹುಟ್ಟಿಸಿತು. ಈಗ ಭಾರತ ಜೀವ-ಜೀವನ ಎರಡನ್ನೂ ನಿಭಾಯಿಸುವ ಹೆಜ್ಜೆಗಳನ್ನಿಡುತ್ತಿವೆ. ಇಟಟpಛ್ಟಿaಠಿಜಿvಛಿ ಊಛಿdಛ್ಟಿa್ಝಜಿsಞ ನ ಅತ್ಯುನ್ನತ ಉದಾಹರಣೆ ಭಾರತದ್ದು. ಭಾರತದ ಪ್ರತಿ ವ್ಯಕ್ತಿ ಇಂದು ಜವಾಬ್ದಾರಿಯುತವಾಗಿ ಈ ಸಮಸ್ಯೆಯನ್ನು ಎದುರಿಸುವಲ್ಲಿ ಪ್ರಧಾನಿ ನೇತೃತ್ವ ಹಾಗೂ ಸಮಾಜದ ಅಂತಃಸತ್ವದ ಬಹುದೊಡ್ಡ ಪಾತ್ರವಿದೆ. ಯುಗಾದಿ, ಈಸ್ಟರ್‌, ಬುದ್ಧ ಜಯಂತಿ, ಮಹಾವೀರ ಜಯಂತಿ, ಈದ್‌ ಹಬ್ಬಗಳನ್ನು ಶಾಂತಿಯುತವಾಗಿ ಮನೆಯಲ್ಲಿಯೇ ಆಚರಿಸುವಷ್ಟರ ಮಟ್ಟಿಗೆ ಸಮಾಜ ಉದ್ದೀಪ್ತವಾಗಿದೆ. ಧನ್ಯತೆಯ ಕ್ಷಣಗಳಿಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ.

ಆತ್ಮ ನಿರ್ಭರತೆಯ ಸಂಕಲ್ಪ

ಆತ್ಮ ನಿರ್ಭರತೆಯ ಸಂಕಲ್ಪದೊಡನೆ ದೇಶ ಹೆಜ್ಜೆ ಮುಂದಿಡುತ್ತಿದೆ. 2022ರ ಸ್ವಾತಂತ್ರ್ಯದ 75ನೇ ವರ್ಷದ ಹೊತ್ತಿಗೆ ಪುಟಿದೆದ್ದ ಆರ್ಥಿಕತೆ, ವಿಶ್ವದರ್ಜೆಯ ಸೌಲಭ್ಯಗಳು, ತಂತ್ರಜ್ಞಾನ ಆಧಾರಿತ ಸೇವೆಗಳು, ಕ್ರಿಯಾಶೀಲ ಯುವಭಾರತ, ಜಾಗತಿಕ ಉದ್ಯಮ ವ್ಯವಸ್ಥೆಯ ಪ್ರಧಾನ ಕೊಂಡಿಯಾಗುವ ಯೋಜನೆಯ ಜೊತೆಗೆ ಭಾರತ ಮುಂದೆ ಸಾಗುತ್ತಿದೆ. ಎಟ T್ಟಜಿಚಿa್ಝ, ಎಟ ಔಟ್ಚa್ಝ ಮುಖಾಂತರ ಸ್ಥಳೀಯ ಉದ್ಯಮಕ್ಕೆ ಬೆಂಬಲವಾಗಿ ನಿಲ್ಲಬೇಕಾಗಿದೆ. ಕೃಷಿ ಮಾರುಕಟ್ಟೆ, ಕೃಷಿ ಉತ್ಪಾದನಾ ವ್ಯವಸ್ಥೆ, ಕಲ್ಲಿದ್ದಿಲು, ವಿಮಾನಯಾನ, ಅಣುವಿಜ್ಞಾನ, ಶಿಕ್ಷಣ ವ್ಯವಸ್ಥೆ ಆಮೂಲಾಗ್ರ ಪರಿವರ್ತನೆ-ನೆಗೆತಕ್ಕೆ ಭಾರತವನ್ನು ಸಿದ್ಧಗೊಳಿಸಲಾಗುತ್ತಿದೆ.

ಭಾರತ ತನ್ನ ನೈಜಶಕ್ತಿ ಕಂಡುಕೊಳ್ಳಬೇಕು. ಅದಕ್ಕನುಗುಣವಾಗಿ ಗತಿಶೀಲ ಸಮಾಜ ನಿರ್ಮಾಣವಾಗಬೇಕು. ಹೊಸ ಜಾಗತಿಕ ವ್ಯವಸ್ಥೆಗೆ ಆಧಾರವಾಗಬೇಕು. ವಿಶ್ವಶಾಂತಿಯ ಬೇರುಗಳಿಗೆ ನೀರೆರೆಯಬೇಕು ಎಂಬುದು ಈ ಸರ್ಕಾರದ, ಪ್ರಧಾನಿಗಳ ಹಂಬಲ. ಸರ್ವಂ ಆತ್ಮವಶಂ ಸುಖಂ ಎಂಬ ಹಿರಿದಾಸೆಯೊಂದಿಗೆ ಸ್ವಾಭಿಮಾನಿ, ಸಶಕ್ತ, ಸಂಘಟಿತ, ಸಂಪನ್ನ, ಏಕಾತ್ಮ ಭಾರತವಾಗುವತ್ತ ಹೆಜ್ಜೆಗಳನ್ನಿಡುತ್ತಿದ್ದೇವೆ. ಅದು ದೃಢವಾಗಬೇಕು. ಅದಕ್ಕೆ ವೇಗ ಸಿಗಬೇಕು. ಅದಕ್ಕಾಗಿ ಪ್ರಧಾನಿ ಮೋದಿಯವರ ಹೆಜ್ಜೆಗಳಿಗೆ ಹೆಜ್ಜೆ ಜೋಡಿಸೋಣ.