ಎಲ್ಲಾ ಸಂಸದರಿಗೂ ಸೂಕ್ತ ಸಲಹೆ ಸೂಚನೆ ನೀಡುವ ಮೋದಿ: ಸಂಸದ ಪಿ.ಸಿ.ಮೋಹನ್‌

ಪ್ರಧಾನಿ ಮೋದಿ ಬಗ್ಗೆ ನನಗೆ ಅಪಾರ ಅಭಿಮಾನವಿದೆ: ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದ ಪಿ.ಸಿ.ಮೋಹನ್‌| ಕೊರೋನಾ ಕಾಲದಲ್ಲಿ ಅತ್ಯುತ್ತಮ ಪ್ಯಾಕೇಜ್‌ ನೀಡಿದ್ದಾರೆ| ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದ್ಭುತವಾಗಿ ಕೆಲಸ ಮಾಡುತ್ತಿದೆ| ಮೊದಲ ಐದು ವರ್ಷದಲ್ಲಿ 70 ವರ್ಷಗಳಲ್ಲಿ ಆಗದಿರುವ ಕೆಲಸಗಳು ನಡೆದಿವೆ|

Interview with Bangalore Central MP P C Mohan on PM Narendra Modi govt 2 completing year

ಬೆಂಗಳೂರು: ಮೂರನೇ ಬಾರಿ ಸಂಸದರಾಗಿ ಚುನಾಯಿತರಾಗಿರುವ ಬೆಂಗಳೂರಿನ ಪಿ.ಸಿ.ಮೋಹನ್‌ ಅವರು ಹಿಂದಿನ ಯುಪಿಎ ಸರ್ಕಾರದ ಆಡಳಿತವನ್ನೂ ಗಮನಿಸಿ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಎರಡನೇ ಅವಧಿಯನ್ನೂ ನೋಡಿದ್ದಾರೆ. ಕನ್ನಡಪ್ರಭಕ್ಕೆ ನೀಡಿರುವ ಸಂದರ್ಶನದಲ್ಲಿ ಹಲವಾರು ವಿಷಗಳನ್ನು ಅವರು ಪ್ರಸ್ತಾಪಿಸಿ ವಿಶ್ಲೇಷಿಸಿದ್ದಾರೆ.

* ಎರಡು ಅವಧಿಯ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಮೊದಲ ಐದು ವರ್ಷದಲ್ಲಿ 70 ವರ್ಷಗಳಲ್ಲಿ ಆಗದಿರುವ ಕೆಲಸಗಳು ನಡೆದಿವೆ. ಎರಡು ಅವಧಿಯಲ್ಲಿ ಸಹ ಉತ್ತಮ ಕೆಲಸ ಮಾಡುತ್ತಿದೆ. ದೇಶ ಅತಿ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದೆ. ಇಂತಹ ಸಂದರ್ಭವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಎರಡು ತಿಂಗಳು ಲಾಕ್‌ಡೌನ್‌ ನಿಯಮವನ್ನು ಜನರು ನಿಜವಾಗಿ ಪಾಲಿಸಿದ್ದು ನರೇಂದ್ರ ಮೋದಿ ಅವರ ಮೇಲಿನ ನಂಬಿಕೆಯಿಂದ ಮಾತ್ರ. ಇದು ಮೋದಿ ಅವರ ಶಕ್ತಿ.

'ನಮೋ ಪ್ರಧಾನಮಂತ್ರಿ ಆಗಿರೋದು ಅವರ ಪುಣ್ಯವಲ್ಲ, ಭಾರತದ ಪುಣ್ಯ'

Interview with Bangalore Central MP P C Mohan on PM Narendra Modi govt 2 completing year

* ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು ಮೋದಿ ಅವರ ದೊಡ್ಡ ಸಾಧನೆಯೇ?

ಹೌದು. ಹಿಂದಿನ ಸರ್ಕಾರದಲ್ಲಿ ಸಣ್ಣದೊಂದು ಭ್ರಷ್ಟಾಚಾರ ನಡೆಯದಂತೆ ನರೇಂದ್ರ ಮೋದಿ ಅವರು ಆಡಳಿತ ನಡೆಸಿದ್ದರು. ಅದನ್ನು ಎರಡನೇ ಅವಧಿಯಲ್ಲೂ ಮುಂದುವರೆಸಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಕಾಣಿಸಿದರು. ಇದನ್ನೆಲ್ಲ ಜನ ಮೆಚ್ಚಿದ್ದಾರೆ. ಜನರಿಗೆ ತಲುಪುವ ಕಾರ್ಯಕ್ರಮಗಳನ್ನು ಮೋದಿ ಅನುಷ್ಠಾನಗೊಳಿಸಿದ್ದಾರೆ. ಮೋದಿ ಅವರು ಪ್ರಧಾನಿ ಆಗುವ ಮುನ್ನ 100 ಕೋಟಿ ಜನ ಸಂಖ್ಯೆಯಲ್ಲಿ ಕೇವಲ ಮೂರು ಕೋಟಿ ಜನರು ಬ್ಯಾಂಕ್‌ ಖಾತೆದಾರರಾಗಿದ್ದರು. ಆದರೆ ಒಂದೇ ವರ್ಷದಲ್ಲಿ 35 ಕೋಟಿ ಜನ ಬ್ಯಾಂಕ್‌ ಖಾತೆ ಹೊಂದಿದ್ದಾರೆ. ಈಗ ಸರ್ಕಾರದ ಪರಿಹಾರವು ಮಧ್ಯವರ್ತಿಗಳಿಲ್ಲದೆ ನೇರವಾಗಿ ಬಡ ಜನರಿಗೆ ತಲುಪುತ್ತಿದೆ. ಜನರ ಪ್ರೀತಿಗೆ ಮೋದಿ ಪಾತ್ರರಾಗಿದ್ದಾರೆ.

* ವೈಯಕ್ತಿಕವಾಗಿ ನಿಮಗೆ ನರೇಂದ್ರ ಮೋದಿ ಯಾಕೆ ಇಷ್ಟವಾಗುತ್ತಾರೆ?

ದೇಶದ ಜನರಿಗೆ ಏನೂ ಬೇಕೊ ಅದನ್ನು ಮೋದಿ ಕೊಡುತ್ತಿದ್ದಾರೆ. ಇದರಿಂದ ನನಗೆ ಅವರ ಮೇಲೆ ಅಪಾರವಾದ ಅಭಿಮಾನ. ಮೋದಿ ಅವರನ್ನು ದೇಶದ ನಾಯಕ ಅಂತ ಎನ್ನುವುದಕ್ಕಿಂತ ವಿಶ್ವದ ನಾಯಕ ಎಂದೂ ಕರೆಯಲು ಇಷ್ಟಪಡುತ್ತೇನೆ. ಪ್ರಪಂಚವನ್ನೇ ಮುನ್ನಡೆಸುತ್ತಾರೆ. ಜಾಗತಿಕ ಮಟ್ಟದಲ್ಲಿ ಏನೇ ನಿರ್ಧಾರಗಳು ತೆಗೆದುಕೊಳ್ಳುವ ಮುನ್ನ ನರೇಂದ್ರ ಮೋದಿ ಅವರಿಲ್ಲದೆ ಯಾವುದೂ ನಡೆಯಲ್ಲ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ರಷ್ಯಾದ ಪುಟಿನ್‌ ಅವರೆಲ್ಲ ಕೊರೋನಾ ನಿಭಾಯಿಸಲಾರದೆ ಸೋತರು. ಆದರೆ ಮೋದಿ ಕೊರೋನಾ ವಿರುದ್ಧ ಗೆದ್ದರು. ಮೋದಿ ಅವರು ತೆಗೆದುಕೊಂಡ ನಿರ್ಧಾರಗಳಿಂದ 130 ಕೋಟಿ ಜನಸಂಖ್ಯೆಯಲ್ಲಿ ಸಾವಿನ ಪ್ರಮಾಣ ಅಲ್ಪ ಮಟ್ಟದಲ್ಲಿದೆ.

Interview with Bangalore Central MP P C Mohan on PM Narendra Modi govt 2 completing year

* ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ .20 ಲಕ್ಷ ಕೋಟಿ ಮೊತ್ತದ ಬೃಹತ್‌ ಪ್ಯಾಕೇಜ್‌ ಪ್ರಕಟಿಸಿದೆ ಈ ಬಗ್ಗೆ ನಿಮ್ಮ ಅಭಿಪ್ರಾಯ?

ಬಹಳಷ್ಟು ಯೋಚನೆ ಮಾಡಿ ಪ್ಯಾಕೇಜ್‌ ಅನ್ನು ಮೋದಿ ಘೋಷಿಸಿದ್ದಾರೆ. ಅತ್ಯುತ್ತಮವಾದ ಪ್ಯಾಕೇಜ್‌ ನೀಡಿದ್ದಾರೆ ಎಂಬುದು ನನ್ನ ಅನಿಸಿಕೆ. ವಲಸೆ ಕಾರ್ಮಿಕರ ಸಂಕಷ್ಟಗಳಿಗೆ ಪ್ರಧಾನಿಗಳು ಸ್ಪಂದಿಸಿದ್ದಾರೆ. ಸಣ್ಣ ಕೈಗಾರಿಕೋದ್ಯಮಗಳ ಪುನಶ್ಚೇತನಕ್ಕೆ ಒತ್ತು ಕೊಟ್ಟಿದ್ದಾರೆ. ಕೈಗಾರಿಕೆಗಳೇ ಉದ್ಯೋಗ ಸೃಷ್ಟಿಯ ಕೇಂದ್ರಗಳು. ಆ ವಲಯ ಪ್ರೋತ್ಸಾಹಕ್ಕೆ ಸಾಲ ಸೌಲಭ್ಯ ಕಲ್ಪಿಸಿದ್ದಾರೆ. ಆರ್ಥಿಕ ಪ್ರಗತಿಗೆ ಕೈಗಾರಿಕೆಗಳು ಅಭಿವೃದ್ಧಿ ಕಾಣಬೇಕಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಪರಿಹಾರವಾಗುತ್ತದೆ. ಚೀನಾದಿಂದ ನೂರಾರು ಕಂಪನಿಗಳು ದೇಶಕ್ಕೆ ಬರಲು ತಯಾರಾಗಿವೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶ್ವದಲ್ಲೇ ಭಾರತದ ಆರ್ಥಿಕ ಪ್ರಗತಿ ಅತ್ಯುನ್ನತ ಮಟ್ಟಕ್ಕೇರುವುದು ನೂರಕ್ಕೆ ನೂರಷ್ಟುಸತ್ಯ.

ಮೋದಿ ಆಶಯದಂತೆ ಹಾವೇರಿ-ಗದಗ ಅಭಿವೃದ್ಧಿ: ಸಂಸದ ಶಿವಕುಮಾರ ಉದಾಸಿ

* ಆದರೆ ಕೊರೋನಾ ಪ್ಯಾಕೇಜ್‌ ಬಗ್ಗೆ ಪ್ರತಿಪಕ್ಷಗಳು ಸುಳ್ಳಿನ ಕಂತೆ ಎಂದು ಟೀಕೆ ಮಾಡುತ್ತಿವೆ?

ದೇಶದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪನವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಜನರಿಗೆ ಸರ್ಕಾರದ ಸೌಲಭ್ಯಗಳು ನೇರವಾಗಿ ಲಭಿಸುವಂತಹ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಪ್ಯಾಕೇಜ್‌ ಬಗ್ಗೆ ಅಧ್ಯಯನ ನಡೆಸದೆ ವಿರೋಧ ಪಕ್ಷದ ನಾಯಕರ ಉಢಾಪೆ ಮಾತುಗಳು ನನಗೆ ನೋವುಂಟು ಮಾಡಿವೆ. ಸಿದ್ದರಾಮಯ್ಯನವರು ರಾಜ್ಯದ ವಿತ್ತ ಸಚಿವರಾಗಿ ಅವರು ಹಲವು ಬಾರಿ ಬಜೆಟ್‌ ಮಂಡಿಸಿದ್ದಾರೆ. ಕೈಗಾರಿಕೆಗಳಿಗೆ ಉತ್ತೇಜನ ಹೇಗೆಲ್ಲಾ ಪ್ರಯೋಜವಾಗುತ್ತದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕಿತ್ತು.

* ಸಂಸದರಿಗೆ ಏನಾದರೂ ಮೋದಿ ಅವರು ಸಲಹೆ ಸೂಚನೆಗಳನ್ನು ನೀಡುತ್ತಾರಾ?

ನರೇಂದ್ರ ಮೋದಿ ಅವರು ಬಹಳ ದೂರದೃಷ್ಟಿಹೊಂದಿರುವ ಪ್ರಧಾನ ಮಂತ್ರಿ. ಈ ಹಿಂದಿನ ಪ್ರಧಾನಿಗಳು ತಮ್ಮ ಪಕ್ಷದ ಸಂಸದರನ್ನಾಗಲಿ ಅಥವಾ ಬೇರೆ ಪಕ್ಷದ ಸಂಸದರನ್ನಾಗಲಿ ಭೇಟಿ ಮಾಡುತ್ತಿರಲಿಲ್ಲ. ಸಂಸದರನ್ನು ಮೋದಿ ಆಗಾಗ್ಗೆ ಭೇಟಿ ಮಾಡಿ ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಪ್ರಪಂಚದ ಯಾವ ನಾಯಕ ಸಹ ಮೋದಿ ಅವರಂತೆ ಅಭಿವೃದ್ಧಿ ಕಾರ್ಯಗಳ ಕುರಿತು ಸಂಸದರ ಜತೆ ಸಂವಾದ ನಡೆಸುವುದಿಲ್ಲ.

* ಎರಡನೇ ಅವಧಿಯ ಒಂದು ವರ್ಷದಲ್ಲಿ ಮೋದಿ ಅವರ ಯಾವ ಕಾರ್ಯಕ್ರಮಗಳು ಮುಖ್ಯವಾಗಿವೆ?

ಕಳೆದ ಐದು ವರ್ಷಗಳ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ. ಹಿಂದಿನ ಅವಧಿಯ ಜನಧನ್‌, ಉಜ್ವಲ, ಯುವ ಸಮೂಹಕ್ಕೆ ಸಾಲಸೌಲಭ್ಯ, ಡಿಜಿಟಲ್‌ ಇಂಡಿಯಾ ಇವೆಲ್ಲ ಬಹುಮುಖ್ಯ ಯೋಜನೆಗಳಾಗಿವೆ. ಈ ಬಾರಿಯ ಬಜೆಟ್‌ ಸಹ ಅತ್ಯುತ್ತಮವಾಗಿದೆ. ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ.

* ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಮಹತ್ವದ ಯೋಜನೆಗಳೇನು ಸಿಕ್ಕಿವೆ?

ನನ್ನ ಹಾಗೂ ಅನಂತಕುಮಾರ್‌ ಅವರ ಕನಸು ಸಬರ್‌ಬನ್‌ (ಉಪನಗರ) ರೈಲ್ವೆ ಯೋಜನೆ. ಕಳೆದ ಎಂಟು ಹತ್ತು ವಷÜರ್‍ಗಳಿಂದ ಈ ಯೋಜನೆ ಜಾರಿಗೆ ಬಹಳಷ್ಟುಪ್ರಯತ್ನವನ್ನು ಸಹ ನಾನು ವೈಯಕ್ತಿವಾಗಿ ಮಾಡಿದ್ದೆ. ಲೋಕಸಭೆ ಒಳಗೆ ಮತ್ತು ಹೊರಗೆ ಹೋರಾಟಗಳ ಮೂಲಕ ಸರ್ಕಾರದ ಮೇಲೆ ಒತ್ತಡ ಸಹ ತಂದಿದ್ದೆ. ಕಳೆದ ಅವಧಿ ಸರ್ಕಾರದಲ್ಲಿ ಪ್ರಧಾನ ಮಂತ್ರಿಗಳು ಸಬರ್‌ಮನ್‌ ಯೋಜನೆಗೆ 18 ಸಾವಿರ ಕೋಟಿ ರು. ಮೀಸಲಿಟ್ಟಿದ್ದರು. ಈ ವರ್ಷ ಯಡಿಯೂರಪ್ಪನವರು ಕೂಡಾ 500 ಕೋಟಿ ಅನುದಾನ ಕೊಟ್ಟಿದ್ದಾರೆ. ಸಬರ್‌ಬನ್‌ ಯೋಜನೆ ಜಾರಿಗೊಂಡರೆ ಬೆಂಗಳೂರಿಗೆ ಒಳ್ಳೆಯ ಕೆಲಸಗಳಾಗುತ್ತವೆ. ಈ ಯೋಜನೆ ನೀಡಿದ ಪ್ರಧಾನಿಗಳಿಗೆ ಬೆಂಗಳೂರಿಗರ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ.

ಮೋದಿ ಇಟ್ಟ ಹೆಜ್ಜೆಯಿಂದ ಭಾರತ ಹಿರಿಯಣ್ಣ ಆಗುತ್ತೆ: ಪ್ರಹ್ಲಾದ ಜೋಶಿ

* ದೇಶಕ್ಕೆ ನಿಜಕ್ಕೂ ಅಚ್ಛೇ ದಿನ್‌ ಬಂದಿವೆಯೇ?

ಖಂಡಿತವಾಗಿಯೂ ಬಂದಿವೆ. ನಾನು ಮೂರನೇ ಬಾರಿಗೆ ಸಂಸದನಾಗಿದ್ದೇನೆ. ಯುಪಿಎ ಎರಡನೇ ಅವಧಿಯ ಸರ್ಕಾರದ ಆಡಳಿತವನ್ನು ಕಂಡಿದ್ದೇನೆ. ನನ್ನ ಎರಡನೇ ಮತ್ತು ಮೂರನೇ ಅವಧಿಯ ಸಂಸದನಾಗಿ ಮೋದಿ ಅವರ ಅಚ್ಛೇ ದಿನ್‌ಗಳನ್ನು ಕಾಣುತ್ತಿದ್ದೇನೆ. ಮೋದಿ ಅವರ ಅಚ್ಛೇ ದಿನ್‌ ಅಂದರೆ ಜನರಿಗೆ ತಲುವಂತಹ ಕಾರ್ಯಕ್ರಮಗಳ ಜಾರಿ, ಭ್ರಷ್ಟಾಚಾರ ಮುಕ್ತ ಸರ್ಕಾರವಾಗಿದೆ. ದೇಶದ ಜನ ನಿಜಕ್ಕೂ ಅಚ್ಛೇ ದಿನ ನೋಡಿಯೇ 262 ರಿಂದ 302 ಸಂಸತ್‌ ಸ್ಥಾನಗಳನ್ನು ಮೋದಿ ಅವರಿಗೆ ಕೊಟ್ಟಿದ್ದಾರೆ.

* ಕೇಂದ್ರದಲ್ಲೂ ಮತ್ತು ರಾಜ್ಯದಲ್ಲೂ ಬಿಜೆಪಿ ಸರ್ಕಾರಗಳಿವೆ. ರಾಜ್ಯಕ್ಕೇನಾದರೂ ಅನುಕೂಲವಾಗಿದೆಯೇ?

ಬಹಳ ವರ್ಷಗಳ ನಂತರ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳಿರುವುದು ರಾಜ್ಯಕ್ಕೆ ವರದಾನ ಎನ್ನಬಹುದು. ಯಡಿಯೂರಪ್ಪನವರು ಹಠಾತ್ತಾಗಿ ಮುಖ್ಯಮಂತ್ರಿಗಳಾದವರಲ್ಲ. 40 ವರ್ಷಗಳು ವಿಧಾನಸಭೆಯ ಒಳಗೆ ಮತ್ತು ಹೊರಗೆ ಅವರು ಹೋರಾಟ ಮಾಡಿ ಬಂದಿದ್ದಾರೆ. ಯಡಿಯೂರಪ್ಪನವರ ಮೊದಲ ಅವಧಿಯ ಮುಖ್ಯಮಂತ್ರಿಗಳಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಕಾಂಗ್ರೆಸ್‌ ಪಕ್ಷ ಆಡಳಿತ ನಡೆಸಿದರೂ ಯಡಿಯೂರಪ್ಪನವರಂತೆ ಯೋಜನೆಗಳನ್ನು ಜನರಿಗೆ ಕೊಡಲಿಲ್ಲ. ಕೊರೋನಾ ಸಂಕಷ್ಟದಲ್ಲಿ ದೇಶದಲ್ಲೇ ಯಾವ ಸರ್ಕಾರ ಮಾಡದಷ್ಟುಕೆಲಸ ಮಾಡಿದ್ದಾರೆ. ಪ್ಯಾಕೇಜ್‌ ಕೊಟ್ಟಿದ್ದಾರೆ.

ಸಲಹೆ ಕೇಳಿಯೇ ತೀರ್ಮಾನ ತಗೊಳ್ತಾರೆ: 6 ವರ್ಷದಿಂದ ಮೋದಿ ಜೊತೆಗಿರೋ ಸದಾನಂದ ಗೌಡ ಮುಕ್ತ ಮಾತು

Interview with Bangalore Central MP P C Mohan on PM Narendra Modi govt 2 completing year

* ಬಿಜೆಪಿಯಿಂದ 25 ಜನ ಸಂಸದರು ಗೆದ್ದಿದ್ದರೂ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು?

ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿತ್ತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಯಾವ ಮಟ್ಟಿಗೆ ಅಕ್ರಮ ನಡೆದಿತ್ತು ಎಂಬುದು ಜನರಿಗೆ ಗೊತ್ತಿದೆ. ಯಡಿಯೂರಪ್ಪನವರು ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ನಾವು (ಸಂಸದರು) ಸಹ ಕೇಂದ್ರದಿಂದ ರಾಜ್ಯಕ್ಕೆ ಏನೆಲ್ಲ ಯೋಜನೆಗಳು ತರಬೇಕೊ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾಡಿನ ಪ್ರಗತಿಗಾಗಿ ಈ ಹಿಂದೆ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ಸಹ ಸಂಸದರು ಬೆಂಬಲ ಕೊಟ್ಟು ಕೆಲಸ ಮಾಡಿದ್ದೇವೆ. ನಾಡಿನ ನೆಲ, ಜಲ ವಿಚಾರ ಬಂದಾಗ ಪಕ್ಷಾತೀತವಾಗಿ ದುಡಿಯುತ್ತೇವೆ. 
 

Latest Videos
Follow Us:
Download App:
  • android
  • ios