Asianet Suvarna News Asianet Suvarna News

ಮುಸ್ಲಿಂ ಸಮುದಾಯವನ್ನು ದೇಶದ ವಿರುದ್ಧ ಎತ್ತಿ ಕಟ್ಟುತ್ತಿದೆಯಾ ಸಿಖ್ ಪ್ರತ್ಯೇಕತವಾದಿ ಗುಂಪು ಎಸ್‌ಎಫ್‌ಜೆ

ಸದಾ ಭಾರತ ವಿರೋಧಿ ಪ್ರಚಾರದ ಮೂಲಕ ಸುದ್ದಿಯಾಗುತ್ತಿರುವ ಸಿಖ್ಸ್ ಫಾರ್ ಜಸ್ಟೀಸ್‌ ಸಂಘಟನೆ ಈಗ ಉರ್ದುಸ್ತಾನ್ ಹೆಸರಿನಲ್ಲಿ ದೇಶದ ಮುಸ್ಲಿಂ ಸಮುದಾಯವನ್ನು ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುವಂತೆ ಎತ್ತಿ ಕಟ್ಟುತ್ತಿದೆ ಎಂಬ ಕಳವಳಕಾರಿ ಅಂಶವೊಂದು ಬೆಳಕಿಗೆ ಬಂದಿದೆ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

intelligence agency concerns that  Sikh separatist group SFJ raising the Muslim community against the country in the name of separate urdu state akb
Author
First Published Jun 13, 2024, 12:03 PM IST

ನವದೆಹಲಿ: ಸದಾ ಭಾರತ ವಿರೋಧಿ ಪ್ರಚಾರದ ಮೂಲಕ ಸುದ್ದಿಯಾಗುತ್ತಿರುವ ಸಿಖ್ಸ್ ಫಾರ್ ಜಸ್ಟೀಸ್‌ ಸಂಘಟನೆ ಈಗ ಉರ್ದುಸ್ತಾನ್ ಹೆಸರಿನಲ್ಲಿ ದೇಶದ ಮುಸ್ಲಿಂ ಸಮುದಾಯವನ್ನು ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸುವಂತೆ ಎತ್ತಿ ಕಟ್ಟುತ್ತಿದೆ ಎಂಬ ಕಳವಳಕಾರಿ ಅಂಶವೊಂದು ಬೆಳಕಿಗೆ ಬಂದಿದೆ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ದೇಶದ ಏಕತೆಯನ್ನು ಅಸ್ಥಿರಗೊಳಿಸುವ ಸಂಘಟನೆಯ ಈ ಪ್ರಯತ್ನದ ಬಗ್ಗೆ ಭದ್ರತಾ ಪಡೆಗಳು ಗಮನಕ್ಕೆ ತಂದಿವೆ ಎಂದು ವರದಿ ಆಗಿದೆ.

ಭದ್ರತಾ ಪಡೆಗಳು ಸ್ವೀಕರಿಸಿದ ಗುಪ್ತಚರ ವರದಿಯ ಪ್ರಕಾರ, ಎಸ್‌ಎಫ್‌ಜೆ( Sikhs for Justice)ಸಂಘಟನೆ ತನ್ನ ಭಾರತ ವಿರೋಧಿ ಚಟುವಟಿಕೆಯನ್ನು ನಿರಂತರ ಮುಂದುವರಿಸುತ್ತಿದ್ದು, ಅದು ದೇಶವನ್ನು ಆರ್ಥಿಕವಾಗಿ ದುರ್ಬಲಗೊಳಿಸುವುದಕ್ಕಾಗಿ ಸಿಖ್ ಹಾಗೂ ಮುಸ್ಲಿಂ ಸಮುದಾಯವನ್ನು ದೇಶದ ಏಕತೆ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ಇತ್ತೀಚೆಗೆ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರನ್ನು ಜಾಗತಿಕವಾಗಿ ಮುಸ್ಲಿಮರ ವಿರೋಧಿ ಎಂದು ಬಿಂಬಿಸಲು ಯತ್ನಿಸುವ ಜೊತೆಗೆ ಪ್ರತ್ಯೇಕ ಉರ್ದುಸ್ತಾನ್ ರಾಜ್ಯ ಸ್ಥಾಪನೆಗೆ ಮುಸ್ಲಿಮರಿಗೆ ಪ್ರಚೋದನೆ ನೀಡುತ್ತಿದೆ ಎಂಬ ಕಳವಳಕಾರಿ ಅಂಶ ಬೆಳಕಿಗೆ ಬಂದಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. 

ಕಾಶ್ಮೀರಿ ಉಗ್ರರ ಜೊತೆ ಸೇರಿ ಪನ್ನು ಹೊಸ ಉಗ್ರ ಸಂಘಟನೆ! ಕಾಶ್ಮೀರ್ - ಖಲಿಸ್ತಾನ್ ರೆಫರೆಂಡಮ್‌ ಫ್ರಂಟ್‌ ಘೋಷಣೆ

ಪ್ರತ್ಯೇಕತವಾದಿ ಚಟುವಟಿಕೆಗಳ ಕಾರಣಕ್ಕೆ ಎಸ್‌ಎಫ್‌ಜೆ ಸಂಘಟನೆಯನ್ನು ಭಾರತದಲ್ಲಿ ಈಗಾಗಲೇ ನಿಷೇಧಿಸಲಾಗಿದೆ. ಆದರೆ ಈ ಸಂಘಟನೆ ದೇಶದಲ್ಲಿ ತನ್ನ ಸಂದೇಶವನ್ನು ಹರಡಲು,  ಸಾಮಾಜಿಕ ಜಾಲತಾಣಗಳನ್ನು ವೇದಿಕೆಯಾಗಿ ಬಳಸುತ್ತಿದೆ. ತಮ್ಮ ಇತ್ತೀಚಿನ ಅಭಿಯಾನಗಳಲ್ಲಿ ಈ ಸಂಘಟನೆ ಭಾರತೀಯ ಮುಸ್ಲಿಂ ಸಮುದಾಯವನ್ನು ಪ್ರತ್ಯೇಕ ರಾಜ್ಯಕ್ಕಾಗಿ ಒಟ್ಟುಗೂಡಿಸಲು ಒತ್ತಾಯಿಸುತ್ತಿದೆ.  ಅಲ್ಲದೇ ಉರ್ದು ಮಾತನಾಡುವ ಜನರಿಗೆ ಸ್ವಂತ ತಾಯ್ನಾಡಿಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿಕೊಳ್ಳುತ್ತಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹಿಂದಿನ ಸರ್ಕಾರವೂ ಇಡೀ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಕಾನೂನು ತರುವುದಾಗಿ ಈ ಹಿಂದೆ ಹೇಳುತ್ತಾ ಬಂದಿದ್ದು, ಇದನ್ನೇ ಮುಸ್ಲಿಂ ಸಮುದಾಯವನ್ನು ದೇಶದ ವಿರುದ್ಧ ಎತ್ತಿ ಕಟ್ಟಲು ಬಳಸುತ್ತಿರುವ ಎಸ್‌ಎಫ್‌ಜೆ, ಇದು ಮುಸ್ಲಿಂ ಸಮುದಾಯ ಅನುಸರಿಸುವ ಷರಿಯಾ ಕಾನೂನಿಗೆ ವಿರುದ್ಧವಾಗಿದೆ. ಜೊತೆಗೆ ಇದು ಮುಸ್ಲಿಂ ಸಮುದಾಯವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದೆ. ಆದರೆ ಪ್ರತ್ಯೇಕ ಉರ್ದುಸ್ತಾನವೂ ಮುಸ್ಲಿಂ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವುದು ಎಂದೆಲ್ಲಾ ತಲೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸುತ್ತಿದೆ ಎಂದು ವರದಿ ಆಗಿದೆ. 

ಕೆನಡಾದಲ್ಲಿ 55 ಅಡಿಯ ಹನುಮಾನ್ ಪ್ರತಿಮೆಗೆ ಖಲಿಸ್ತಾನಿಗಳ ತೀವ್ರ ವಿರೋಧ: ಬಿಗಿ ಭದ್ರತೆ

ಹೀಗೆ ಸಿಖ್ಸ್ ಫಾರ್ ಜಸ್ಟೀಸ್ ಸಂಸ್ಥೆ ಪ್ರತ್ಯೇಕ ಉರ್ದುಸ್ತಾನದ ಹೆಸರಿನಲ್ಲಿ ಬೆಂಕಿ ಹಚ್ಚಲು ಮುಂದಾಗಿದ್ದು, ಈ ಪ್ರತ್ಯೇಕ ಉರ್ದುಸ್ತಾನವೂ ಮುಸ್ಲಿಂ ಹಿತಾಸಕ್ತಿಗಳನ್ನು ರಕ್ಷಣೆ ಮಾಡುತ್ತದೆ ಎಂದು ಹೇಳಿ ಜನರ ಹಾದಿ ತಪ್ಪಿಸುತ್ತಿದೆ. ಇದುವರೆಗೆ ಖಲಿಸ್ತಾನ ಪ್ರತ್ಯೇಕ ರಾಷ್ಟ್ರಕ್ಕೆ ಬೆಂಬಲಿಸುತ್ತಿದ್ದ ಈ ಸಿಖ್ಸ್ ಫಾರ್ ಜಸ್ಟೀಸ್ ಈಗ ಹೀಗೆ ಉರ್ದುಸ್ತಾನದ ಪ್ರಚೋದನಕಾರಿ ಅಭಿಯಾನದ ಮೂಲಕ ದೇಶದಲ್ಲಿ ಕೋಲಾಹಲ ಸೃಷ್ಟಿಸಲು ಯತ್ನಿಸುತ್ತಿದೆ. ಇದು ಸಾಮಾಜಿಕ ಹಾಗೂ ರಾಜೀಯ ವಲಯದಲ್ಲಿ ಉದ್ವಿಗ್ನಕ್ಕೆ ಕಾರಣವಾಗಲಿದೆ. ಜೊತೆಗೆ ದೇಶದ ಏಕತೆಗೆ ಅಡ್ಡಿಪಡಿಸುವ ಜೊತೆ ಕೋಮು ಸಂಘರ್ಷವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ವರದಿ ಆಗಿದೆ. 

ನಾವು ಪರಿಸ್ಥಿತಿಯನ್ನು ಹತ್ತಿರದಿಂದ ಅವಲೋಕಿಸಿದ್ದು, ಎಸ್‌ಎಫ್‌ಜೆನ ತಳಮಟ್ಟದ ಕಾರ್ಯಕರ್ತರು ಹಾಗೂ ಪ್ರತ್ಯೇಕತವಾದಿ ನಾಯಕರು ಈ ರೀತಿಯ ವಿಧ್ವಂಸಕ ಅಭಿಯಾನ ನಡೆಸುವುದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದು ಖಚಿತವಾಗಿದೆ ಎಂದು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ಅಂಗ್ಲ ಮಾಧ್ಯಮ ವರದಿ ಮಾಡಿದೆ. 

ಹರ್ಯಾಣ 19 ವರ್ಷದ ಗ್ಯಾಂಗ್‌ಸ್ಟರ್‌ ಕಡ್ಯಾನ್‌ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌, ಅಮೆರಿಕಕ್ಕೆ ಪರಾರಿ

ಭದ್ರತಾ ಏಜೆನ್ಸಿಯ ಪ್ರಕಾರ, ಎಸ್‌ಎಫ್‌ಜೆ ಈಗಾಗಲೇ ಪ್ರತ್ಯೇಕ ಸಿಖ್ ರಾಜ್ಯಕ್ಕೆ ಬೇಡಿಕೆ ಇಟ್ಟಿರುವಂತಹ ಸಂಘಟನೆ, ಜೊತೆಗೆ ಅದು ಪಂಜಾಬ್‌ನ ಸ್ವಾತಂತ್ರ್ಯದ ಬಗ್ಗೆ ವಕೀಲಿಕೆ ಮಾಡುತ್ತಿದೆ, ಇದಕ್ಕಾಗಿ ಅಂತಾರಾಷ್ಟ್ರೀಯ ವೇದಿಕೆಯನ್ನು ಹಾಗೂ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳನ್ನು ಬೆಂಬಲಕ್ಕಾಗಿ ಬಳಸಿಕೊಳ್ಳುತ್ತಿದೆ.  ಇದರ ಜೊತೆಗೆ ಈಗ ಅವರು ಉರ್ದುಸ್ತಾನ ಎಂಬ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುವಂತೆ ಮುಸ್ಲಿಂ ಸಮುದಾಯವನ್ನು ಎತ್ತಿ ಕಟ್ಟುತ್ತಿವೆ ಎಂದು ತಿಳಿದು ಬಂದಿದೆ. 

Latest Videos
Follow Us:
Download App:
  • android
  • ios