ಸಾಮಾನ್ಯವಾಗಿ ಭಾರತೀಯ ನೌಕಾದಳದ ಹಡಗುಗಳನ್ನು ಸ್ಟೀಲ್ ಹಾಗೂ ಅಲ್ಯೂಮಿನಿಯಂನಿಂದ ನಿರ್ಮಾಣ ಮಾಡಲಾಗುತ್ತದೆ. ಉತ್ತಮ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುನ್ನುಗ್ಗುತ್ತಿರುವ ಭಾರತೀಯ ನೌಕಾದಳ ಇದೀಗ ಇತಿಹಾಸದ ಪುಟಗಳಲ್ಲಿದ್ದ ತಂತ್ರಜ್ಞಾನದ ಜತೆ ಹಡಗು ನಿರ್ಮಿಸಿ ಯುದ್ಧಕ್ಕೂ ಸೈ, ಶಾಂತಿಗೂ ಸೈ ಎಂದು ತೋರಿಸಿಕೊಟ್ಟಿದೆ.
INSV Kaundinya Indian Navy launch: ಸಾಮಾನ್ಯವಾಗಿ ಭಾರತೀಯ ನೌಕಾದಳದ ಹಡಗುಗಳನ್ನು ಸ್ಟೀಲ್ ಹಾಗೂ ಅಲ್ಯೂಮಿನಿಯಂನಿಂದ ನಿರ್ಮಾಣ ಮಾಡಲಾಗುತ್ತದೆ. ಉತ್ತಮ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುನ್ನುಗ್ಗುತ್ತಿರುವ ಭಾರತೀಯ ನೌಕಾದಳ ಇದೀಗ ಇತಿಹಾಸದ ಪುಟಗಳಲ್ಲಿದ್ದ ತಂತ್ರಜ್ಞಾನದ ಜತೆ ಹಡಗು ನಿರ್ಮಿಸಿ ಯುದ್ಧಕ್ಕೂ ಸೈ, ಶಾಂತಿಗೂ ಸೈ ಎಂದು ತೋರಿಸಿಕೊಟ್ಟಿದೆ.
ಐದನೇ ಶತಮಾನದ ತಂತ್ರಜ್ಞಾನ ಬಳಕೆ:
ಅಜಂತಾ ಗುಹೆಗಳಲ್ಲಿರುವ ವರ್ಣಚಿತ್ರವನ್ನು ಆಧಾರವಾಗಿಟ್ಟುಕೊಂಡು ಐದನೇ ಶತಮಾನದ ತಂತ್ರಜ್ಞಾನ ಬಳಸಿ, ತೆಂಗಿನ ನಾರು, ಹಲಸಿನ ಮರಗಳನ್ನು ಬಳಸಿ ಐಎನ್‌ಎಸ್ ವಿ ಕೌಂಡಿನ್ಯ ಹೆಸರಿನ ಹಡಗನ್ನು ಸಿದ್ಧಪಡಿಸಲಾಗಿದೆ. ಕೇಂದ್ರ ಸಂಸ್ಕೃತಿ ಇಲಾಖೆಯ ಅನುದಾನದಲ್ಲಿ ಗೋವಾದ ಹೋಡಿ ಇನ್ನೋವೇಶನ್ಸ್ ಕಂಪೆನಿಯು ಈ ಹಡಗನ್ನು ನಿರ್ಮಾಣ ಮಾಡಿದ್ದು, ಈ ಹಡಗು ನಿರ್ಮಾಣ ಮಾಡಲು 16 ತಿಂಗಳ ಪರಿಶ್ರಮ ಹಾಕಲಾಗಿದೆ. ತಳಕ್ಕೆ ಹಲಸಿನ ಮರ, ತೆಂಗಿನ ನಾರನ್ನು ಬಳಸಲಾಗಿದ್ದು, ಮೀನಿನ ಎಣ್ಣೆ, ಬೇವಿನ ಎಣ್ಣೆ, ಗೋವುಗಳ ತುಪ್ಪ ಬಳಸಲಾಗಿದೆ.
ಇದನ್ನೂ ಓದಿ: ಚೀನಾ, ಟರ್ಕಿ ನಂತರ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಈ ಮೂರನೇ ದೇಶ ಯಾವುದು?
ಐಎನ್‌ಎಸ್ ವಿ ಕೌಂಡಿನ್ಯ ವಿಶೇಷತೆ:
ಉಪ್ಪಿನ ಅಂಶ ಹಡಗಿಗೆ ಯಾವುದೇ ತೊಂದರೆ ನೀಡದಂತೆ ತಡೆಯಲು ಕೇರಳದಿಂದ ಕಚ್ಚಾ ವಸ್ತುಗಳನ್ನು ತಂದು ಇವುಗಳಿಗೆ ಕೋಟಿಂಗ್ ಮಾಡಲಾಗಿದೆ. ಪ್ರತಿಕೂಲ ಹವಾಮಾನವನ್ನು ಸಹ ಸಹಿಸುವಂತೆ ಈ ಹಡಗು ನಿರ್ಮಾಣವಾಗಿದ್ದು, ಫೆಬ್ರವರಿ 25 ರಂದು ಪ್ರಾಯೋಗಿಕವಾಗಿ ಸಮುದ್ರಕ್ಕೆ ಇಳಿಸಲಾಗಿತ್ತು. ಭಾರತೀಯ ನೌಕಾಪಡೆ ಹಾಗೂ ಮದ್ರಾಸ್ ಐಐಟಿನ ಸಾಗರ ಎಂಜಿನಿಯರಿಂಗ್ ವಿಭಾಗದ ತಜ್ಞರು ಇದರ ಸಾಗರಯಾನ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಇಂದು ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಉದ್ಘಾಟನೆ ನೆರವೇರಿಸಿದರು.
ಗುಜರಾತ್‌ನಿಂದ ಓಮನ್‌ಗೆ ಮೊದಲ ಕಡಲಯಾನವನ್ನು ಈ ಹಡಗು ನಡೆಸಲಿದ್ದು, ಪ್ರಾಚೀನ ಭಾರತವು ಶ್ರೀಮಂತ ನೌಕಾ ವ್ಯವಸ್ಥೆ ಹೊಂದಿತ್ತು ಎಂಬುದನ್ನು ಬಿಂಬಿಸಲು ಈ ಹಡಗನ್ನು ಸಿದ್ಧ ಮಾಡಲಾಗಿದೆ. ಈ ಹಡಗಿನ ಲೋಕಾರ್ಪಣೆ ವೇಳೆ ಆಪರೇಷನ್ ಸಿಂಧೂರ್ ಅನ್ನು ಕೂಡಾ ಕೇಂದ್ರ ಸಚಿವರು ಹಾಡಿ ಹೊಗಳಿದ್ದಾರೆ.


