Asianet Suvarna News Asianet Suvarna News

Omicron BA.4 ಭಾರತದಲ್ಲಿ 2ನೇ ಓಮಿಕ್ರಾನ್ ಉಪತಳಿ ಪತ್ತೆ, ಮತ್ತೆ ಹೈ ಅಲರ್ಟ್!

  • ಕೊರೋನಾ ಆತಂಕ ತಗ್ಗಿದ ಬೆನ್ನಲ್ಲೇ ಓಮಿಕ್ರಾನ್ ಹಾವಳಿ
  • ಓಮಿಕ್ರಾನ್ BA.4 ಉಪಳಿತ ಪತ್ತೆ, ಅತೀ ವೇಗವಾಗಿ ಹರಡಬಲ್ಲ ವೈರಸ್
  • ಮತ್ತೆ ಹೈ ಅಲರ್ಟ್ ಮೂಡ್‌ಗೆ ಜಾರಿದ ಭಾರತ
     
India report 2nd Case Of BA 4 Omicron Sub Variant High Alert on Tamil Nadu ckm
Author
Bengaluru, First Published May 21, 2022, 4:08 PM IST

ನವದೆಹಲಿ(ಮೇ.21): ಮಳೆ, ಪ್ರವಾಹಗಳ ಆತಂಕದಲ್ಲಿರುವ ಭಾರತಕ್ಕೆ ಇದೀಗ ಮತ್ತ ಕೊರೋನಾ ಕಾಟ ಆರಂಭಗೊಂಡಿದೆ. ಇತ್ತೀಚೆಗೆಷ್ಟೇ ಕೋವಿಡ್ ಅಬ್ಬರದ ಆತಂಕ ಹೆಚ್ಚಾಗಿತ್ತು. ಆದರೆ ಇದೀಗ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಇದರ ಬೆನ್ನಲ್ಲೇ ಓಮಿಕ್ರಾನ್  BA.4 ಉಪತಳಿ ಪತ್ತೆಯಾಗಿದೆ. ಇದು ಭಾರತದ ಎರಡನೇ ಪ್ರಕರಣವಾಗಿದೆ.

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ನವಲೂರಿನಲ್ಲಿನ ಓಮಿಕ್ರಾನ್  BA.4 ವೈರಸ್ ಪತ್ತೆಯಾಗಿದೆ. ಇದು ಓಮಿಕ್ರಾನ್ ಉಪತಳಿಯಾಗಿದೆ. ಚೆನ್ನೈ ನಗರದಲ್ಲಿ ಕೇವಲ 30 ಕಿಲೋಮೀಟರ್ ದೂರದಲ್ಲಿ ಎರಡನೇ ಪ್ರಕರಣ ಪತ್ತೆಯಾಗಿರುವುದು ಇದೀಗ ನಗರದ ಆತಂಕ ಹೆಚ್ಚಿಸಿದೆ.

ಕೊರೋನಾ ಬಳಿಕ 'ಮಂಕಿಪಾಕ್ಸ್‌ ವೈರಸ್‌' ಹಾವಳಿ, ಎಮರ್ಜೆನ್ಸಿ ಮೀಟಿಂಗ್ ಕರೆದ ವಿಶ್ವಸಂಸ್ಥೆ!

ಹೈದರಾಬಾದ್‌ನಲ್ಲಿ ಭಾರತದ ಮೊದಲ ಓಮಿಕ್ರಾನ್  BA.4 ವೈರಸ್ ಪತ್ತೆಯಾಗಿತ್ತು. ಇದೀಗ ತಮಿಳುನಾಡಿನಲ್ಲಿ ವೈರಸ್ ಕಾಣಿಸಿಕೊಂಡಿದೆ. ದೇಶದಲ್ಲಿ ಅಧಿಕೃತ ಒಮಿಕ್ರಾನ್ BA.4 ಎರಡು ಪ್ರಕರಣಗಳು ಮಾತ್ರ ಇವೆ. ಆದರೆ ತಜ್ಞ ವೈದ್ಯರು ಹೆಚ್ಚಿನ ಪ್ರಕರಣಗಳು ಇರುವ ಸಾಧ್ಯತೆ ಇದೆ. ರೋಗ ಲಕ್ಷಣಗಳಿಲ್ಲದ ಹಲವರಲ್ಲೂ ಈ ವೈರಸ್ ಕಾಣಿಸಿಕೊಂಡಿರುವ ಸಾಧ್ಯತೆಗಳಿವೆ. ಹೀಗಾಗಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ನವಲೂರಿನಲ್ಲಿ ಪತ್ತೆಯಾದ ಒಮಿಕ್ರಾನ್ BA.4 ಉಪತಳಿ ಕೆಲ ಅನುಮಾನಗಳಿಗೂ ಎಡೆ ಮಾಡಿಕೊಟ್ಟಿದೆ. ಸೋಂಕಿತ ಹಾಗೂ ಆತನ ಕುಟುಂಬಕ್ಕೆ ಯಾವುದೇ ಟ್ರಾವೆಲ್ ಹಿಸ್ಟರ್ ಇಲ್ಲ. ನವಲೂರು ಬಿಟ್ಟು ಯೂರೂ ಕೂಡ ಹೊರಗಡೆ ಹೋಗಿಲ್ಲ. ಆದರೂ ಓಮಿಕ್ರಾನ್ ಪತ್ತೆಯಾಗಿದೆ. ಹೀಗಾಗಿ ಈ ವೈರಸ್ ಹಲವರ ದೇಹ ಹೊಕ್ಕಿರುವ ಸಾಧ್ಯತೆ ಇದೆ ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

2259 ಹೊಸ ಪ್ರಕರಣ,20 ಸಾವು: ಸಕ್ರಿಯ ಕೇಸು 15044ಕ್ಕೆ ಇಳಿಕೆ
ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,259 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆಯಲ್ಲಿ 20 ಸೋಂಕಿತರು ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆಯು 15,044ಕ್ಕೆ ಇಳಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.0.50ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ.0.53ಕ್ಕೆ ಏರಿಕೆಯಾಗಿದೆ. ಕೋವಿಡ್‌ ಚೇತರಿಕೆ ದರವು ಶೇ.98.75ರಷ್ಟಿದೆ. ಈವರೆಗೆ ದೇಶದಲ್ಲಿ ಒಟ್ಟು 191.96 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

Tomato Flu ಕೋವಿಡ್‌ಗೂ ಟೊಮೆಟೋ ಜ್ವರಕ್ಕೂ ಸಂಬಂಧವಿಲ್ಲ, ಸುಧಾಕರ್‌!

100ಕ್ಕಿಂತ ಕೆಳಗಿಳಿದ ಕೋವಿಡ್‌: 95 ಕೇಸ್‌
ಕರ್ನಾಟಕದಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು 100ಕ್ಕಿಂತ ಕಡಿಮೆಯಾಗಿವೆ. ಸತತ ಮೂರನೇ ದಿನ ಸೋಂಕಿತರ ಸಾವು ವರದಿಯಾಗಿಲ್ಲ.ಶುಕ್ರವಾರ 95 ಮಂದಿಗೆ ಸೋಂಕು ತಗುಲಿದ್ದು, 155 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1666 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 20 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ 0.6 ದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಒಂದು ಸಾವಿರ ಇಳಿಕೆಯಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 29 ಕಡಿಮೆಯಾಗಿದೆ. (ಗುರುವಾರ 124 ಪ್ರಕರಣಗಳು, ಸಾವು ಶೂನ್ಯ).

ಬೆಂಗಳೂರು 89, ದಕ್ಷಿಣ ಕನ್ನಡ 2, ಬೆಂಗಳೂರು ಗ್ರಾಮಾಂತರ, ಕಲಬುರಗಿ, ರಾಮನಗರ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಒಬ್ಬರಿಗೆ ಸೋಂಕು ತಗುಲಿದೆ. 24 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಮೇ 18 ರಿಂದ ಸತತ ಮೂರನೇ ದಿನ ಸೋಂಕಿತರ ಸಾವಿಲ್ಲ. ರಾಜ್ಯದಲ್ಲಿ ಈವರೆಗೆ 39.49 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.07 ಲಕ್ಷ ಮಂದಿ ಗುಣಮುಖರಾಗಿದ್ದು, 40,064 ಮಂದಿ ಸಾವಿಗೀಡಾಗಿದ್ದಾರೆ.

Follow Us:
Download App:
  • android
  • ios