ಅಹಮ್ಮದಾಬಾದ್(ಸೆ.22): 26 ವರ್ಷಗಳ ಕಾಲ ಬ್ರಿಟೀಷ್ ನೌಕೆಯಲ್ಲಿ ಸೇವೆ ಬಳಿಕ ಬರೋಬ್ಬರಿ 30 ವರ್ಷ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿರುವ ಭಾರತದ ಹೆಮ್ಮೆಯ INS ವಿರಾಟ್  ಕೆಲವೇ ದಿನಗಳಲ್ಲಿ ಇಲ್ಲವಾಗಲಿದೆ. 10.94 ಲಕ್ಷ ಕಿಲೋಮೀಟರ್ ಕ್ರಮಿಸಿರುವ ಹಾಗೂ ಎದುರಾಳಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ ನೌಕೆ, ಮೂರು ವರ್ಷಗಳ ಹಿಂದೆ ಭಾರತೀಯ ನೌಕಾಪಡೆಯಿಂದ ನಿವೃತ್ತಿಯಾಗಿತ್ತು. ಇದೀಗ ಈ ನೌಕೆಯನ್ನು ಒಡೆದು ಗುಜುರಿಗೆ ಹಾಕಲು ಗುಜರಾತ್‌ಗೆ ತರಲಾಗಿದೆ.

 ವಿರಾಟ್‌ ನೌಕೆ ಅಂತಿಮ ಯಾನ, ಮುಂಬೈನಿಂದ ಗುಜರಾತ್‌ಗೆ ಸಾಗಣೆ!

ಗುಜರಾತ್‌ನ ಕರಾವಳಿ ಅಲಾಂಗ್‌ಗೆ ಆಗಮಿಸಿದ ವಿರಾಟ್ ನೌಕೆಯನ್ನು ಶ್ರೀರಾಮ್ ಗ್ರೂಪ್ ಒಡೆದು ಗುಜುರಿಗೆ ಹಾಕಲಿದೆ. ಮುಂಬೈನ ಡಾರ್ಕ್‌ಯಾರ್ಡ್ ನೌಕಾ ಬಂದಿರಿನಿಂದ ಪಯಣ ಬೆಳೆಸಿದ ವಿರಾಟ್ ನೌಕೆ ಇಂದು(ಸೆ.22) ಗುಜರಾತ್‌ನ ಅಲಾಂಗ್ ಬಂದರಿಗೆ ಆಗಮಿಸಿದೆ.  

ನೌಕೆಯನ್ನು ಒಡೆಯಂದೆ ಸಂರಕ್ಷಿಸಲು ಇದೇ ವಿರಾಟ್ ನೌಕೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತಿ ನೌಕಾಧಿಕಾರಿಗಳು ಮನವಿ ಮಾಡಿದ್ದಾರೆ. ಇತ್ತ ಸಂಸದ ರಾಜೀವ್ ಚಂದ್ರಶೇಖರ್ ಕೂಡ ವಿರಾಟ್ ನೌಕೆಯನ್ನು ಉಳಿಸುವಂತೆ ಹಲವು ಸಂಘ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಆದರೆ ಯಾವ ಪ್ರಯತ್ನಗಳು ಪರಿಣಾಮಕಾರಿಯಾಗಿಲ್ಲ.

1959ರಿಂದ 1984ರ ವರೆಗೆ, ಅಂದರೆ 26 ವರ್ಷಗಳ ಕಾಲ ಬ್ರಿಟೀಷ್ ಬ್ರಿಟೀಷ್ ನೌಕಾ ಪಡೆಯಲ್ಲಿ ಈ ನೌಕೆ ಕಾರ್ಯನಿರ್ವಹಿಸಿತ್ತು. ಬಳಿಕ ಭಾರತ ಈ ನೌಕೆಯನ್ನು ಖರೀದಿಸಿತು. 1987ರಲ್ಲಿ INS ವಿರಾಟ್ ನೌಕೆಯಾಗಿ ಭಾರತೀಯ ನೌಕಾಪಡೆ ಸೇರಿಕೊಂಡಿತು.