ಮುಂಬೈ(se. 19): ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷ ಸೇವೆ ಸಲ್ಲಿಸಿ 3 ವರ್ಷದ ಹಿಂದಷ್ಟೇ ನಿವೃತ್ತಿಯಾಗಿದ್ದ ಐಎನ್‌ಎಸ್‌ ವಿರಾಟ್‌ ನೌಕೆ ಶನಿವಾರ ತನ್ನ ಕೊನೆಯ ಪ್ರಯಾಣ ಬೆಳೆಸಲಿದೆ. ಮುಂಬೈನ ನೌಕಾ ಡಾಕ್‌ಯಾರ್ಡ್‌ನಿಂದ ಗುಜರಾತ್‌ನ ಭಾವನಗರ ಜಿಲ್ಲೆಯಲ್ಲಿರುವ ಅಲಾಂಗ್‌ನಲ್ಲಿರುವ ಬಂದರಿಗೆ ವಿರಾಟ್‌ ನೌಕೆಯನ್ನು ತಂದು ಅಲ್ಲಿ ಅದನ್ನು ಒಡೆದು ಗುಜರಿಗೆ ಹಾಕಲಾಗುತ್ತದೆ. ಈ ನೌಕೆಯನ್ನು ಮ್ಯೂಸಿಯಂ ಅಥವಾ ರೆಸ್ಟೋರೆಂಟ್‌ ಆಗಿ ಪರಿವರ್ತಿಸುವುದಕ್ಕೆ ಉದ್ದೇಶಿಸಲಾಗಿತ್ತು. ಆದರೆ, ಅಂತಿಮವಾಗಿ ನೌಕೆಯನ್ನು ಗುಜರಿಗೆ ಹಾಕುವ ನಿರ್ಧಾರವವನ್ನು ಕೈಗೊಳ್ಳಲಾಗಿದೆ. ಈ ನೌಕೆಯನ್ನು ಶ್ರೀರಾಮ್‌ ಗ್ರೂಪ್‌ 38.54 ಕೋಟಿ ರು.ಗೆ ಪಡೆದುಕೊಂಡಿದೆ. ಮುಂದಿನ 9 ರಿಂದ 12 ತಿಂಗಳಲ್ಲಿ ಯುದ್ಧನೌಕೆಯನ್ನು ಒಡೆದು ಗುಜರಿಗೆ ಹಾಕಲಾಗುತ್ತದೆ.

ನೌಕೆಯ ಇತಿಹಾಸ:

1959ರಿಂದ 1984ರವರೆಗೆ ಬ್ರಿಟಿಷ್‌ ನೌಕಾ ಪಡೆಯಲ್ಲಿ ಎನ್‌ಎಮ್‌ಎಸ್‌ ಹಮ್ಸ್‌ರ್‍ ನೌಕೆಯಾಗಿ ಐಎನ್‌ಎಸ್‌ ವಿರಾಟ್‌ ಕಾರ್ಯನಿರ್ವಹಿಸಿತ್ತು. ಬಳಿಕ 80ರ ದಶಕದಲ್ಲಿ ಈ ನೌಕೆಯನ್ನು ಭಾರತ ಖರೀದಿಸಿತ್ತು. 1987 ಮೇ 12ರಂದು ಐಎನ್‌ಎಸ್‌ ವಿರಾಟ್‌ ನೌಕಾ ಪಡೆಗೆ ಸೇರ್ಪಡೆ ಆಗಿತ್ತು. ಐಎನ್‌ಎಸ್‌ ವಿರಾಟ್‌ ವಿಶ್ವದಲ್ಲೇ ಅತೀ ದೀರ್ಘಕಾಲ ಸೇವೆ ಸಲ್ಲಿಸಿದ ಗಿನ್ನೆಸ್‌ ದಾಖಲೆಯನ್ನು ಸಹ ನಿರ್ಮಿಸಿದೆ. ಈ ಕಾರಣಕ್ಕೆ ಐಎನ್‌ಎಸ್‌ ವಿರಾಟ್‌ ವಿಶ್ವದ ಓಲ್ಡ್‌ ಲೇಡಿ ಎಂಬ ಖ್ಯಾತಿ ಪಡೆದಿದೆ.

ಅರ್ಜೆಂಟೀನಾ ಯುದ್ಧ ಗೆದ್ದಿತ್ತು:

1982ರಲ್ಲಿ ರಾಯಲ್‌ ಬ್ರಿಟೀಷ್‌ ನೇವಿ ಪರವಾಗಿ ಅರ್ಜಂಟೀನಾ ವಿರುದ್ಧ ಫಾಲ್‌್ಕಲ್ಯಾಂಡ್ಸ್‌ ಯುದ್ಧವನ್ನು ಗೆದ್ದ ಹೆಗ್ಗಳಿಕೆ ಐಎನ್‌ಎಸ್‌ ವಿರಾಟ್‌ ನೌಕೆಗೆ ಇದೆ. ಅಲ್ಲದೇ 27 ಬಾರಿ ಭೂಮಿಯನ್ನು ಸುತ್ತಿರುವ ಖ್ಯಾತಿ ಈ ನೌಕೆಗೆ ಇದೆ.

ನೌಕೆಯ ವಿಶೇಷತೆ:

27,800 ಟನ್‌: ನೌಕೆಯ ತೂಕ

226.5 ಮೀಟರ್‌: ನೌಕೆಯ ಉದ್ದ

48.78 ಮೀಟರ್‌: ನೌಕೆಯ ಅಗಲ

10.94 ಲಕ್ಷ ಕಿ.ಮೀ. ವಿರಾಟ್‌ನೌಕೆ ಕ್ರಮಿಸಿದ ದೂರ

ಬೇಹುಗಾರಿಕೆಗೆ ಪ್ರಾಣಿಗಳನ್ನು ಛೂ ಬಿಟ್ಟ ಡ್ರ್ಯಾಗನ್, ಚೀನಾ ರಹಸ್ಯ ಬಯಲು!...

"