* 41 ವರ್ಷಗಳ ಸೇವೆಯ ಬಳಿಕ ಐಎನ್‌ಎಸ್‌ ರಜಪೂತ್‌ ನಿವೃತ್ತಿ* ಭಾರತೀಯ ನೌಕಾ ಪಡೆಯ ಮೊದಲ ದಾಳಿ ನೌಕೆ* ಕೊರೋನಾ ಹಿನ್ನೆಲೆಯಲ್ಲಿ ವಿಶಾಖಪಟ್ಟಣಂ ಬಂದರಿನಲ್ಲಿ ನಡೆದ ಸರಳ ಸಮಾರಂಭದ ವೇಳೆ ನೌಕೆಗೆ ವಿದಾಯ

ಹೈದರಾಬಾದ್‌(ಮೇ.22): ಭಾರತೀಯ ವಾಯು ಪಡೆಯ ಮೊದಲ ದಾಳಿ ನೌಕೆ ಎನಿಸಿದ್ದ ಐಎನ್‌ಎಸ್‌ ರಜಪೂತ್‌ 41 ವರ್ಷಗಳ ಸೇವೆಯ ಬಳಿಕ ಶುಕ್ರವಾರ ನಿವೃತ್ತಿ ಹೊಂದಿದೆ. ಈ ಹಿಂದಿನ ಯುಎಸ್‌ಎಸ್‌ಆರ್‌ ನಿರ್ಮಿತ ನೌಕೆ 1980 ಮೇ 4ರಂದು ಸೇವೆ ಆರಂಭಿಸಿತ್ತು. ಕೊರೋನಾ ಹಿನ್ನೆಲೆಯಲ್ಲಿ ವಿಶಾಖಪಟ್ಟಣಂ ಬಂದರಿನಲ್ಲಿ ನಡೆದ ಸರಳ ಸಮಾರಂಭದ ವೇಳೆ ನೌಕೆಗೆ ವಿದಾಯ ಹೇಳಲಾಯಿತು.

ಐಎನ್‌ಎಸ್‌ ವಿರಾಟ್‌ ನೌಕೆ ರಕ್ಷಿಸುವಂತೆ ಕೋರಿದ್ದ ಅರ್ಜಿ ಸುಪ್ರಿಂಕೋರ್ಟ್‌ನಲ್ಲಿ ವಜಾ!

ಈಗಿನ ಉಕ್ರೇನ್‌ನ ನಿಕೋಲೇವ್‌ ಹಡಗುಕಟ್ಟೆಯಲ್ಲಿ ಐಎನ್‌ಎಸ್‌ ರಜಪೂತ್‌ ನೌಕೆಯನ್ನು 1976ರಲ್ಲಿ ನಿರ್ಮಾಣ ಮಾಡಲಾಗಿತ್ತು. ಆ ವೇಳೆ ನೌಕೆಗೆ ನಾಡೆಝಹ್ನಿ ಎಂಬ ಹೆಸರನ್ನು ನೀಡಲಾಗಿತ್ತು. ಶ್ರೀಲಂಕಾ ಕರಾವಳಿಯಲ್ಲಿ ಭಾರತದ ಶಾಂತಿ ಸ್ಥಾಪನೆ ಪಡೆಗೆ ನೆರವು ನೀಡಿದ ಆಪರೇಷನ್‌ ಅಮಾನ್‌ ಹಾಗೂ 1987ರಿಂದ 1990ರ ವೇಗೆ ಎಲ್‌ಟಿಟಿಇ ವಿರುದ್ಧ ಗಸ್ತು ಕಾರ್ಯಾಚರಣೆಗೆ ನಿಯೋಜಿಸಿದ ಆಪರೇಷನ್‌ ಪವನ್‌ ಕಾರ್ಯಚರಣೆಯಲ್ಲಿ ನೌಕೆ ಭಾಗಿಯಾಗಿತ್ತು.

ಭಾರತ ಸೇನೆ ನಂ.4 ಶಕ್ತಿಶಾಲಿ: ಜಗತ್ತಿನಲ್ಲಿ ಈಗ ಯುದ್ಧ ನಡೆದರೆ ಚೀನಾ ಗೆಲ್ಲುವ ಸಾಧ್ಯತೆ!

ಮಾಲ್ಡೀವ್ಸ್ ಕರಾವಳಿಯಲ್ಲಿ ಒತ್ತೆಯಾಳು ಬಿಕ್ಕಟ್ಟು ಶಮನಕ್ಕೆ ನಡೆಸಲಾದ ಆಪರೇಷನ್‌ ಕಾಕ್ಟಸ್‌ ಕಾರ್ಯಾಚರಣೆಯಲ್ಲಿಯೂ ನೌಕೆ ಮಹತ್ವದ ಪಾತ್ರ ವಹಿಸಿತ್ತು. ಈ ನೌಕೆಗೆ ‘ರಾಜ್‌ ಕರೇಗಾ ರಾಜಪೂತ್‌’ ಎಂಬ ಧ್ಯೇಯ ವಾಕ್ಯವನ್ನು ನೀಡಲಾಗಿತ್ತು. ಭಾರತೀಯ ಸೇನೆಯ ರಜಪೂತ್‌ ರೆಜಿಮೆಂಟ್‌ನೊಂದಿಗೆ ಗುರುತಿಸಿಕೊಂಡ ಮೊದಲ ನೌಕೆ ಇದಾಗಿದೆ.