ವಿಶಾಖಪಟ್ಟಣಂ(ಮೇ.10):  ಕೊರೋನಾ ವೈರುದ್ಧ ಭಾರತ ನಿರಂತರ ಹೋರಾಟ ನಡೆಸುತ್ತಿದೆ. ಇದಕ್ಕೆ ಹಲವು ರಾಷ್ಟ್ರಗಳು ನೆರವು ನೀಡುತ್ತಿದೆ. ಇದೀಗ ಸಿಂಗಾಪುರದಿಂದ ಆಕ್ಸಿಜನ್, ಕ್ರಯೋಜೆನಿಕ್ ಟ್ಯಾಂಕ್, ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಹಲವು ವೈದ್ಯಕೀಯ ಸಲಕರಣೆ ಹೊತ್ತ INS ಐರಾವತ್ ಇದೀಗ ಭಾರತಕ್ಕೆ ಆಗಮಿಸಿದೆ.

"

ಬಹ್ರೇನ್‌ನಿಂದ 40 MT ಆಕ್ಸಿಜನ್, ರಾಜ್ಯದ ಪ್ರತಿ ಜಿಲ್ಲೆಗೂ ಪ್ರಾಣವಾಯು ಪೂರೈಕೆ!.

COVID-19 ವಿರುದ್ಧದ ರಾಷ್ಟ್ರದ ಹೋರಾಟವನ್ನು ಬೆಂಬಲಿಸಲು ನಡೆಯುತ್ತಿರುವ 'ಸಮುದ್ರ ಸೆತು II' ಕಾರ್ಯಾಚರಣೆಯ ಭಾಗವಾಗಿ, ಐಎನ್‌ಎಸ್ ಐರಾವತ್ ವೈದ್ಯಕೀಯ ಸಲಕರಣೆಯೊಂದಿಗೆ ಭಾರತಕ್ಕೆ ಆಗಮಿಸಿದೆ. ಐಎನ್‌ಎಸ್ ಐರಾವತ್ ಇಂದು(ಮೇ.10) ಬೆಳಿಗ್ಗೆ ವಿಶಾಖಪಟ್ಟಣಂಗೆ ಆಗಮಿಸಿದೆ. 08 ಕ್ರಯೋಜೆನಿಕ್ ಆಮ್ಲಜನಕ ಟ್ಯಾಂಕ್‌,  3,898 ಆಮ್ಲಜನಕ ಸಿಲಿಂಡರ್‌ಗಳು ಸೇರಿದಂತೆ ಇತರ ನಿರ್ಣಾಯಕ COVID ವೈದ್ಯಕೀಯ ಸಲಕರಣೆಯೊಂದಿಗೆ ಆಗಮಿಸಿದೆ. 

ಕೊರೋನಾ ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ದಕ್ಷಿಣ ಕೊರಿಯಾ!

ಸಮುದ್ರ ಸೇತು 11 ಕಾರ್ಯಚರಣೆ ಅಡಿಯಲ್ಲಿ 9 ಐಎನ್‌ಎಸ್ ಐರಾವತ್ ಹಡಗುಗಳನ್ನು ನಿಯೋಜಿಸಲಾಗಿದೆ. ಪರ್ಷಿಯನ್ ಕೊಲ್ಲಿ ಮತ್ತು ಆಗ್ನೇಯ ಏಷ್ಯಾದ ಮಿತ್ರ ರಾಷ್ಟ್ರಗಳ ನೆರವನ್ನು ಭಾರತಕ್ಕೆ ಪೂರೈಕೆ ಮಾಡಲು ಐಎನ್‌ಎಸ್ ಐರಾವತ್ ನಿರಂತರ ಕೆಲಸ ಮಾಡುತ್ತಿದೆ.