Asianet Suvarna News Asianet Suvarna News

ರಾಜ್ಯಸಭೆ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಸುಧಾಮೂರ್ತಿ!

ಇನ್ಫೋಸಿಸ್‌ ಫೌಂಡೇಷನ್‌ನ ಅಧ್ಯಕ್ಷೆ ಸುಧಾಮೂರ್ತಿ ಗುರುವಾರ ರಾಜ್ಯಸಭೆ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು. ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಚೇರ್ಮನ್‌ ಜಗದೀಪ್‌ ಧನಕರ್‌ ಅವರ ಉಪಸ್ಥಿತಿಯಲ್ಲಿ ಅವರು ಪ್ರಮಾಣ ವಚನ ಪಡೆದುಕೊಂಡರು.
 

Infosys Foundation Chairperson Sudha Murthy took oath as Rajya Sabha Member san
Author
First Published Mar 14, 2024, 1:10 PM IST | Last Updated Mar 14, 2024, 1:22 PM IST

ನವದೆಹಲಿ (ಮಾ.14): ಇನ್ಫೋಸಿಸ್‌ ಫೌಂಡೇಷನ್‌ನ ಅಧ್ಯಕ್ಷೆ ಹಾಗೂ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರು ರಾಜ್ಯ ಸಭೆಯ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು. ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಂದ ಗುರುವಾರ ಪ್ರಮಾಣ ವಚನ ಬೋಧನೆ ಮಾಡಲಾಗಿದೆ. ಕೆಲ ದಿನಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸುಧಾ ಮೂರ್ತಿ ಅವರು ರಾಜ್ಯಸಭೆ ಸಂಸದರಾಗಿ ನಾಮ ನಿರ್ದೇಶನಗೊಂಡಿದ್ದರು.ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸುಧಾಮೂರ್ತಿ ಅವರ ಪತಿ ನಾರಾಯಣ ಮೂರ್ತಿ, ನಂದನ್‌ ನೀಲಕೇಣಿ ಹಾಗೂ ಕೇಂದ್ರ ಸಚಿವ ಪೀಯುಷ್‌ ಗೋಯೆಲ್‌ ಹಾಜರಿದ್ದರು. ಕನ್ನಡದಲ್ಲಿಯೇ ಸುಧಾಮೂರ್ತಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಕೆಲ ದಿನಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಸುಧಾ ಮೂರ್ತಿ ಅವರನ್ನು ಮೇಲ್ಮನೆಯ ನಾಮ ನಿರ್ದೇಶನಗೊಂಡ ಸದಸ್ಯರಾಗಿ ಆಯ್ಕೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಈ ಕುರಿತಾಗಿ ಟ್ವೀಟ್‌ ಮಾಡಿ ಪ್ರಕಟಿಸಿದ್ದರು.

ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನದಂದು ಇಂಜಿನಿಯರ್‌, ಲೇಖಕಿ ಹಾಗೂ ಸಮಾಜಸೇವಕಿ ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆಯಾಗಿರುವ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದು, ಹೆಚ್ಚಾಗಿ ಮಕ್ಕಳ ಕುರಿತಾಗಿನ ಕೃತಿಗಳಾಗಿವೆ. 73 ವರ್ಷದ ಮೂರ್ತಿ ಅವರು ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ, ಪದ್ಮಶ್ರೀ (2006) ಮತ್ತು ಪದ್ಮಭೂಷಣ (2023) ಪುರಸ್ಕೃತರಾಗಿದ್ದಾರೆ.

Breaking: ಬಿಜೆಪಿಯಿಂದ ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೇಶನ

ಟೆಲ್ಕೋ ಜೊತೆ ಕೆಲಸ ಮಾಡಿದ ಮೊದಲ ಮಹಿಳಾ ಇಂಜಿನಿಯರ್ ಆಗಿರುವ ಮೂರ್ತಿ, ಈಗ 80 ಶತಕೋಟಿ ಡಾಲರ್‌ಗಿಂತ ಮೌಲ್ಯ ಹೊಂದಿರುವ ಕಂಪನಿ ಆಗಿರುವ ಇನ್ಫೋಸಿಸ್‌ ಅನ್ನು ಸ್ಥಾಪನೆ ಮಾಡಲು ಪತಿ ನಾರಾಯಣ ಮೂರ್ತಿಗೆ ಮೊಟ್ಟಮೊದಲು ಹಣ ನೀಡಿದ್ದ ವ್ಯಕ್ತಿ ಸುಧಾಮೂರ್ತಿ. 10 ಸಾವಿರ ರೂಪಾಯಿಯನ್ನು ಅಂದು ನೀಡಿದ್ದೆ ಎಂದು ಸುಧಾಮೂರ್ತಿ ಹಲವು ವೇದಿಕೆಗಳಲ್ಲಿ ತಿಳಿಸಿದ್ದಾರೆ. ಇವರ ಪುತ್ರಿ ಅಕ್ಷತಾ ಮೂರ್ತಿ ಇಂಗ್ಲೆಂಡ್‌ನ ಫರ್ಸ್ಟ್‌ ಲೇಡಿ ಆಗಿದ್ದಾರೆ. ಅವರ ಪತಿ ರಿಷಿ ಸುನಕ್‌ ಇಂಗ್ಲೆಂಡ್‌ನ ಪ್ರಧಾನಿ ಆಗಿದ್ದಾರೆ.

ಕನ್ನಡತಿ ಸುಧಾಮೂರ್ತಿ ರಾಜ್ಯಸಭೆಗೆ ನಾಮನಿರ್ದೇಶನ, ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿಗಳು

Latest Videos
Follow Us:
Download App:
  • android
  • ios