ಕಚೇರಿ ಪಕ್ಕದಲ್ಲಿ ಬೆಕ್ಕಿನ ಮರಿಯೊಂದು ಉದ್ಯೋಗ ಕಾಲು ಹಿಡಿದು ಅಂಗಲಾಚಿದೆ. ಬೆಕ್ಕಿನ ಮರಿಯ ಪ್ರೀತಿ, ಮನವಿಗೆ ಉದ್ಯೋಗಿ ಮನಸು ಕರಗಿದೆ. ಆತನ ನಡಗೆ ಭಾರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಹೃದಯಸ್ವರ್ಶಿ ವಿಡಿಯೋ ಇಲ್ಲಿದೆ.
ಕಚೇರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಉದ್ಯೋಗಿಗೆ ಅಚಾನಕ್ಕಾಗಿ ಬೆಕ್ಕಿನ ಮರಿಯೊಂದು ಅಡ್ಡಬಂದಿದೆ. ಎದುರಿಗೆ ಬಂದ ಬೆಕ್ಕಿನ ಮರಿ ಉದ್ಯೋಗಿ ಬಳಿ ಬಂದು ಕಾಲು ಹಿಡಿದು ಅಂಗಲಾಚಲು ಆರಂಭಿಸಿದೆ. ಅತ್ತಿದಿಂದ ಓಡಾಡುತ್ತಾ, ಅಂಗಲಾಚುತ್ತಿದ್ದ ಈ ಬೆಕ್ಕಿನ ಮರಿಯನ್ನು ಎತ್ತಿಕೊಂಡ ಉದ್ಯೋಗಿ ನೇರವಾಗಿ ಮನೆಗೆ ತಂದು ಆಶ್ರಯ ನೀಡಿದ್ದಾನೆ. ಉದ್ಯೋಗಿಯ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಬರೋಬ್ಬರಿ 13 ಮಿಲಿಯನ್ ವೀಕ್ಷಣೆ ಪಡೆದಿದೆ.
ಮ್ಯಾಟ್ ರಾಮ್ಸೆ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮ್ಯಾಟ್ ರಾಮ್ಸೆ ಪ್ರಾಣಿ ಪ್ರೇಮಿ. ಕಚೇರಿ ಕೆಲಸ ಮುಗಿಸಿ ಹೊರಬಂದ ರಾಮ್ಸೆ ಕೆಲ ದೂರ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ಯಾರೋ ಬಿಟ್ಟು ಹೋದ ಬೆಕ್ಕಿನ ಮರಿಯೊಂದು ರಾಮ್ಸೆ ಅಡ್ಡ ಬಂದಿದೆ. ಈ ಬೆಕ್ಕಿನ ಮರಿ ರಾಮ್ಸೆ ಕಾಲಿನ ಬಳಿ ಬಂದು ಅತ್ತಿದಿಂತ ಓಡಾಡಿದೆ. ಬಳಿಕ ಕಾಲು ಹಿಡಿದು ಅಂಗಲಾಚಲು ಆರಂಭಿಸಿದೆ. ಕಾಲು ಹತ್ತಿ ಮಡಿಲು ಸೇರಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಸಾಧ್ಯವಾಗಿಲ್ಲ. ಕೆಲ ಹೊತ್ತು ರಾಮ್ಸೆಗೆ ಏನು ಮಾಡಬೇಕು ಎಂದು ತೋಚಿಲ್ಲ. ಹೀಗಾಗಿ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಾ ಕೆಲ ಹೊತ್ತು ಹಾಗೆ ನಿಂತಿದ್ದಾರೆ.
ಮಾಲೀಕನಿಲ್ಲದ ವೇಳೆ ಅನ್ನ ಹಾಕಿದ ಮನೆಗೆ ಬೆಂಕಿ ಇಟ್ಟ ಸಾಕು ನಾಯಿ, ಸಿಸಿಟಿವಿಯಲ್ಲಿ ಕೃತ್ಯ ಸೆರೆ!
ಬೆಕ್ಕಿನ ಮರಿಯ ಮನವಿಯನ್ನು ತಿರಸ್ಕರಿಸಿ ಹೋಗುವ ಕಠಿಣ ಮನಸ್ಸು ರಾಮ್ಸೆಗೆ ಇರಲಿಲ್ಲ. ಹೀಗಾಗಿ ಬೆಕ್ಕಿನ ಮರಿಯನ್ನು ಎತ್ತಿಕೊಂಡ ರಾಮ್ಸೆ ಮನೆಗೆ ಮರಳಿದ್ದಾರೆ. ಬಳಿಕ ಬೆಕ್ಕಿನ ಮರಿಗೆ ಮಲಗಲು ವ್ಯವಸ್ಥೆ ಮಾಡಿದ್ದರೆ. ಜೊತೆಗೆ ಆಹಾರ ಒದಗಿಸಿದ್ದಾರೆ. ಇದೀಗ ಈ ಬೆಕ್ಕಿನ ಮರಿ ರಾಮ್ಸೆ ಜೊತೆ ಮಲಗುತ್ತಿದೆ. ಬೆಕ್ಕಿನ ಪ್ರೀತಿಯಲ್ಲಿ ರಾಮ್ಸೆ ಬಂಧಿಯಾಗಿದ್ದಾರೆ.
ಮನೆಯಲ್ಲಿ ಈ ಬೆಕ್ಕಿನ ಆರೈಕೆ, ಆಹಾರ, ಆಟದ ಕುರಿತು ಕೆಲ ವಿಡಿಯೋಗಳನ್ನು ರಾಮ್ಸೆ ಹಂಚಿಕೊಂಡಿದ್ದಾರೆ. ಮುದ್ದಾಗಿರುವ ಈ ಬೆಕ್ಕಿನ ಮರಿ ಇದೀಗ ಸ್ವಚ್ಚಂದವಾಗಿ ಕಾಲ ಕಳೆಯುತ್ತಿದೆ. ಮ್ಯಾಟ್ ರಾಮ್ಸೆ ಮೈಯಲ್ಲಿ ನಿದ್ರಿಸುವ ಈ ಬೆಕ್ಕಿನ ಮರಿಯ ಮತ್ತಷ್ಟು ವಿಡಿಯೋಗಳು ನೋಡುಗರನ್ನು ಸೆಳೆಯುತ್ತಿದೆ. ರಾಮ್ಸೆ ಹಂಚಿಕೊಂಡಿರುವ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಬೆಕ್ಕಿನ ಮರಿಗೆ ಆಶ್ರಯ ನೀಡಿ ಪ್ರೀತಿ ತೋರುತ್ತಿರುವ ರಾಮ್ಸೆಗೆ ನಡೆಗೆ ಭಾರಿ ಅಭಿನಂದನೆಗಳು ವ್ಯಕ್ತವಾಗುತ್ತಿದೆ. ರಾಮ್ಸೆ ನಾಯಿ ಸೇರಿದಂತೆ ಪ್ರಾಣಿಗಳನ್ನು ಪ್ರೀತಿಸುತ್ತಾರೆ. ಇದೀಗ ಈ ಪ್ರಾಣಿ ಪೀತಿಯಲ್ಲಿ ಬೆಕ್ಕಿನ ಮರಿಯೂ ಸೇರಿಕೊಂಡಿದೆ.
ಬೆಕ್ಕು ಕಳವು ಪ್ರಕರಣವೊಂದು ಹೈಕೋರ್ಟ್ ಮೆಟ್ಟಿಲೇರಿದೆ; ಪೊಲೀಸರ ನಡೆಗೆ ಜಡ್ಜ್ ಅಚ್ಚರಿ!
