Asianet Suvarna News Asianet Suvarna News

ಕಾಂಗ್ರೆಸ್‌ ಭ್ರಷ್ಟಾಚಾರದಿಂದ ಕರ್ನಾಟಕದ ಉದ್ಯಮಗಳು ಹೊರ ರಾಜ್ಯಕ್ಕೆ: ಕಿಶನ್‌ ರೆಡ್ಡಿ ಆರೋಪ

ಕಾಂಗ್ರೆಸ್‌ ಆಡಳಿತದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಒಂದು ವೇಳೆ ಕರ್ನಾಟಕದಲ್ಲಿ ಈಗಲೇ ಚುನಾವಣೆ ನಡೆದರೆ ಬಿಜೆಪಿ ಅತ್ಯಧಿಕ ಬಹುಮತದಿಂದ ಜಯಗಳಿಸಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಜನರು ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

industries based in karnataka are going out of state due to congress corruption g kishan reddy ash
Author
First Published Dec 11, 2023, 10:40 AM IST

ಹೈದರಾಬಾದ್‌ (ಡಿಸೆಂಬರ್ 11, 2023): ಕರ್ನಾಟದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿರುವ ತೆಲಂಗಾಣ ಬಿಜೆಪಿ ಅಧ್ಯಕ್ಷ ಕಿಶನ್‌ ರೆಡ್ಡಿ, ಕಾಂಗ್ರೆಸ್‌ನ ಭ್ರಷ್ಟಾಚಾರದಿಂದಾಗಿ ರಾಜ್ಯದಲ್ಲಿನ ಅನೇಕ ಉದ್ಯಮಗಳು ಮುಚ್ಚಿಹೋಗಿವೆ ಎಂದು ಆರೋಪಿಸಿದ್ದಾರೆ. ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಈ ಕಾರಣದಿಂದಲೇ ಅನೇಕ ಉದ್ಯಮಗಳು ಮುಚ್ಚಿಹೋಗಿವೆ. ಇಲ್ಲವೇ ಬೇರೆ ರಾಜ್ಯಗಳಿಗೆ ವರ್ಗಾವಣೆಯಾಗಿವೆ ಎಂದಿದ್ದಾರೆ. 

ಕಾಂಗ್ರೆಸ್‌ ಆಡಳಿತದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಒಂದು ವೇಳೆ ಕರ್ನಾಟಕದಲ್ಲಿ ಈಗಲೇ ಚುನಾವಣೆ ನಡೆದರೆ ಬಿಜೆಪಿ ಅತ್ಯಧಿಕ ಬಹುಮತದಿಂದ ಜಯಗಳಿಸಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಜನರು ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ರೇವಂತ್ ರೆಡ್ಡಿ ಸರ್ಕಾರ ರಚನೆಯಾಗ್ತಿದ್ದಂತೆ ಕಡತ ಹರಿದು ಹಾಕಿದ ಮಾಜಿ ಸಚಿವರ ಸಹಾಯಕ; ಕಳ್ಳತನಕ್ಕೂ ಯತ್ನ!

ಅಕ್ಬರುದ್ದೀನ್‌ ಓವೈಸಿಯಿಂದ ಪ್ರಮಾಣ ಸ್ವೀಕರಿಸಲು ಬಿಜೆಪಿ ಶಾಸಕರ ನಕಾರ!
ಹೈದರಾಬಾದ್‌: ತೆಲಂಗಾಣ ವಿಧಾನಸಭೆಯ ಹಂಗಾಮಿ ಸ್ಪೀಕರ್‌ ಆಗಿ ನಿಯೋಜಿತರಾಗಿರುವ ಎಐಎಂಐಎಂ ಶಾಸಕ ಅಕ್ಬರುದ್ದೀನ್‌ ಒವೈಸಿ ಅವರಿಂದ ಬಿಜೆಪಿಯ 8 ಶಾಸಕರು ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದಾರೆ. ಹೀಗಾಗಿ ಶನಿವಾರ ನಡೆದ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬಿಜೆಪಿ ಶಾಸಕರು ಬಹಿಷ್ಕರಿಸಿದ್ದಾರೆ. ಇದೇ ವೇಳೆ, ಒವೈಸಿ ಆಯ್ಕೆ ಪ್ರಶ್ನಿಸಿ ರಾಜ್ಯಪಾಲರಿಗೂ ದೂರು ನೀಡಿದ್ದಾರೆ.

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಗೋಶಾಮಹಲ್‌ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್‌, ‘ನಾನು ಬದುಕಿರುವವರೆಗೂ ಎಐಎಂಐಎಂ ಎದುರು ಪ್ರಮಾಣ ವಚನ ಸ್ವೀಕರಿಸುವುದಿಲ್ಲ. ಹಿಂದೂ ವಿರೋಧಿ ಹೇಳಿಕೆ ನೀಡಿದ ವ್ಯಕ್ತಿಯ ಎದುರಲ್ಲಿ ನಾನು ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವೇ? ಪೂರ್ಣ ಪ್ರಮಾಣದ ಸ್ಪೀಕರ್‌ ನೇಮಕವಾದ ಬಳಿಕವಷ್ಟೇ ನಾನು ಪ್ರಮಾಣ ವಚನ ಸ್ವೀಕರಿಸುತ್ತೇನೆ’ ಎಂದು ಘೋಷಿಸಿದ್ದಾರೆ.

ಇದನ್ನು ಓದಿ: ರೇವಂತ್‌ ರೆಡ್ಡಿ ಸಂಪುಟದಲ್ಲಿ ಒಬ್ಬ ಮುಸ್ಲಿಂ ಸಚಿವನೂ ಇಲ್ಲ: ಬಂದೂಕು ಹಿಡಿದಿದ್ದ ನಕ್ಸಲ್‌ ಸೀತಕ್ಕ ಈಗ ತೆಲಂಗಾಣ ಸಚಿವೆ

2018ರಲ್ಲೂ ರಾಜಾಸಿಂಗ್‌ ಅವರು ಅಂದಿನ ಎಂಐಎಂ ಪಕ್ಷದ ಹಂಗಾಮಿ ಸ್ಪೀಕರ್‌ರಿಂದ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದರು.

ತೆಲಂಗಾಣದಲ್ಲಿ ಕಾಂಗ್ರೆಸ್‌ ಭರ್ಜರಿ ಚುನಾವಣಾ ಭರವಸೆ: ಗ್ಯಾರಂಟಿ ಜಾರಿಗೆ ಹಣದ ಬರ?

Latest Videos
Follow Us:
Download App:
  • android
  • ios