ವಿವಾಹ ಸಮಾರಂಭದಲ್ಲೇ ಜಗಳವಾಡಿ ವಿಷ ಸೇವಿಸಿದ ವರ - ವಧು: ಮದುವೆ ಗಂಡು ಸಾವು, ಮಹಿಳೆ ಸ್ಥಿತಿ ಗಂಭೀರ
ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಂಗಳವಾರ ನಡೆದ ವಿವಾಹ ಸಮಾರಂಭದಲ್ಲಿ ದಂಪತಿ ನಡುವೆ ವಾಗ್ವಾದ ನಡೆದ ನಂತರ ವಧು - ವರ ಇಬ್ಬರೂ ವಿಷ ಸೇವಿಸಿದ್ದಾರೆ.
ಇಂದೋರ್ (ಮೇ 18, 2023): ಮದುವೆ ಅಂದ್ರೆ ವರ - ವಧುವಿನ ಜೀವನದ ಬಹು ಮುಖ್ಯವಾದ ಕ್ಷಣಗಳಲ್ಲಿ ಒಂದು. ಆದರೆ, ಇಲ್ಲಿ ಮದುವೆ ಮನೆ ಸೂತಕದ ಮನೆಯಾಗಿ ಪರಿವರ್ತನೆಯಾಗಿದೆ. ಮದುವೆಯಾಗಿ ಸಂಸಾರ ನಡೆಸಬೇಕಿದ್ದ ವಧು - ವರ ಇಬ್ಬರೂ ವಿಷ ಸೇವಿಸಿದ್ದಾರೆ. ಈ ಪೈಕಿ ವರ ಮೃತಪಟ್ಟಿದ್ದು, ವರ ಆಸ್ಪತ್ರೆಯಲ್ಲಿ ಸಾವು - ಬದುಕಿನ ನಡುವೆ ಹೋರಾಡ್ತಿದ್ದಾಳೆ ಎಂದು ತಿಳಿದುಬಂದಿದೆ.
ಹೌದು, ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಂಗಳವಾರ ನಡೆದ ವಿವಾಹ ಸಮಾರಂಭದಲ್ಲಿ ದಂಪತಿ ನಡುವೆ ವಾಗ್ವಾದ ನಡೆದ ನಂತರ ವಧು - ವರ ಇಬ್ಬರೂ ವಿಷ ಸೇವಿಸಿದ್ದಾರೆ. ಈ ಘಟನೆಯಲ್ಲಿ 21 ವರ್ಷದ ವರ ಮೃತಪಟ್ಟಿದ್ದು, 20 ವರ್ಷದ ವಧುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವರ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಯಿತು ಎಂದು ತಿಳಿದುಬಂದಿದೆ.
ಇದನ್ನು ಓದಿ: ಬಾಲ್ಯವಿವಾಹಕ್ಕೆ ಬ್ರೇಕ್ ಬೆನ್ನಲ್ಲೇ ಬಹುಪತ್ನಿತ್ವ ಬ್ಯಾನ್ ಮಾಡಲು ಮುಂದಾದ ಅಸ್ಸಾಂ ಸಿಎಂ
ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ರಂಜಾನ್ ಖಾನ್ ಪ್ರಕಾರ, ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಜಗಳ ನಡೆದ ಕಾರಣ ವರ ವಿಷ ಸೇವಿಸಿ ಈ ಬಗ್ಗೆ ವಧುವಿಗೆ ತಿಳಿಸಿದ್ದಾನೆ. ನಂತರ, ವರ ವಿಷ ಸೇವಿಸಿರುವುದು ಗೊತ್ತಾದ ತಕ್ಷಣ ವಧು ಕೂಡ ವಿಷ ಕುಡಿದಿದ್ದಾಳೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ವೈದ್ಯರು ವರ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದು, ಹಾಗೆ ಮಹಿಳೆಯ ಸ್ಥಿತಿ ತುಂಬಾ ಘಂಭೀರವಾಗಿದೆ, ಆಕೆಯನ್ನು ಲೈಫ್ ಸಪೋರ್ಟ್ ಸಿಸ್ಟಮ್‌ನಲ್ಲಿ ಇರಿಸಲಾಗಿದೆ ಎಂದೂ ಮಾಹಿತಿ ನೀಡಿರುವುದಾಗಿ ಎಎಸ್‌ಐ ರಂಜಾನ್ ಖಾನ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.
ಕಳೆದ ಹಲವು ದಿನಗಳಿಂದ ವಧು ಮದುವೆಯಾಗಲು ವಧುವನ್ನು ಒತ್ತಾಯಿಸುತ್ತಿದ್ದರು ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ವೃತ್ತಿಜೀವನದ ಹಿನ್ನೆಲೆಯಲ್ಲಿ ಮದುವೆಗೆ ಎರಡು ವರ್ಷಗಳ ಗಡುವು ಕೇಳಿದಾಗ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ತುರ್ತಾಗಿ ಮದುವೆಗೆ ಏರ್ಪಾಡು ಮಾಡಲಾಗಿತ್ತು. ಆದರೆ, ಈ ಸಮಾರಂಭದ ವೇಳೆಯೇ ಇಬ್ಬರ ನಡುವೆ ಜಗಳ ನಡೆದಿದ್ದು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ವರ ಮೃತಪಟ್ಟಿದ್ದರೆ, ವಧು ಆಸ್ಪತ್ರೆಯಲ್ಲಿ ಸಾವು - ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾಳೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸಲಿಂಗಕಾಮ ಒಂದು ‘ಕಾಯಿಲೆ’: ಆರೆಸ್ಸೆಸ್ ಸಹವರ್ತಿ ಸಂಘಟನೆ; ದೇಶದ ವೈದ್ಯರನ್ನು ಸಂದರ್ಶಿಸಿ ಅಧ್ಯಯನ