ಭಾರತದ ಏಕೈಕ ಜ್ವಾಲಾಮುಖಿ ಎನಿಸಿರುವ ಬ್ಯಾರೆನ್ ದ್ವೀಪದಲ್ಲಿರುವ ಜ್ವಾಲಾಮುಖಿ ಒಂದೇ ತಿಂಗಳಲ್ಲಿ ಎರಡೆರಡು ಬಾರಿ ಉಕ್ಕಿ ಕೆಂಡವುಗುಳಿದೆ. ಈ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಂದೇ ತಿಂಗಳಲ್ಲಿ ಎರೆಡರಡು ಭಾರಿ ಸ್ಫೋಟಿಸಿದ ದೇಶದ ಏಕೈಕ ಜೀವಂತ ಜ್ವಾಲಾಮುಖಿ

ಭಾರತದ ಏಕೈಕ ಜ್ವಾಲಾಮುಖಿ ಎನಿಸಿರುವ ಬ್ಯಾರೆನ್ ದ್ವೀಪದಲ್ಲಿರುವ ಜ್ವಾಲಾಮುಖಿ ಒಂದೇ ತಿಂಗಳಲ್ಲಿ ಎರಡೆರಡು ಬಾರಿ ಉಕ್ಕಿ ಕೆಂಡವುಗುಳಿದೆ. ಈ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದ ಏಕೈಕ ಜ್ವಾಲಾಮುಖಿ ಎಲ್ಲಿದೆ ಬ್ಯಾರೆನ್ ದ್ವೀಪ ಎಲ್ಲಿದೆ ಎಂಬ ಕುತೂಹಲ ನಿಮಗಿರಬಹುದು. ಆ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ..

ಎಲ್ಲಿದೆ ಈ ಜ್ವಾಲಾಮುಖಿ?

ಅಂದಹಾಗೆ ದೇಶದ ಏಕೈಕ ಸಕ್ರಿಯ ಜ್ವಾಲಾಮುಖಿ ಇರುವುದು ಅಂಡಮಾನ್ ನಿಕೋಬಾರ್ ಸಮೀಪ, ಪೋರ್ಟ್‌ಬ್ಲೇರ್‌ನಿಂದ ಸುಮಾರು 138 ಕಿಲೋ ಮೀಟರ್ ದೂರದಲ್ಲಿರುವ ಅಂಡಮಾನ್ ಸಮುದ್ರದಲ್ಲಿ ಈ ಬ್ಯಾರೆನ್ ದ್ವೀಪ ಇದ್ದು, ಇದು ದಕ್ಷಿಣ ಏಷ್ಯಾದ ಏಕೈಕ ಸಕ್ರಿಯ ಜ್ವಾಲಾಮುಖಿ ಎನಿಸಿದೆ. ಈ ಜ್ವಾಲಾಮುಖಿಯೂ ಸೆಪ್ಟೆಂಬರ್ 13 ಹಾಗೂ ಸೆಪ್ಟೆಂಬರ 20 ರಂದು ಎರಡು ಬಾರಿ ಉಕ್ಕೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಂದೇ ತಿಂಗಳಲ್ಲಿ ಎರಡು ಬಾರಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದವು. ಆದರೆ ಇದು ತೀವ್ರ ಸ್ವರೂಪದ್ದಾಗಿರಲಿಲ್ಲ. ಹೀಗಾಗಿ ಈ ಘಟನೆಯಿಂದ ಆ ಪ್ರದೇಶಗಳ ಸುತ್ತಮುತ್ತ ಯಾವುದೇ ಹಾನಿಯಾಗಿಲ್ಲ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಈ ಬ್ಯಾರೆನ್ ದ್ವೀಪವೂ 3 ಕಿಲೋ ಮೀಟರ್ ಚದರ ವಿಸ್ತೀರ್ಣದಲ್ಲಿದೆ. ಈ ದ್ವೀಪವೂ ಜ್ವಾಲಾಮುಖಿಯ ಶಂಕುಗಳು ಹಾಗೂ ಬೂದಿಯಿಂದ ಆವೃತವಾಗಿದೆ. ಈ ದೂರ ದೂರದಲ್ಲಿ ಬಹಳ ವಿರಳವಾಗಿ ಸಸ್ಯಗಳು ಕಾಣಲು ಸಿಗುತ್ತವೆ. ಸಮುದ್ರಮಟ್ಟದಿಂದ ಕೇವಲ 354 ಮೀಟರ್ ಎತ್ತರದಲ್ಲಿ ಈ ಬ್ಯಾರೆನ್ ದ್ವೀಪ ಇದ್ದು, ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಇದು ಒಂದಾಗಿದೆ. ಅಪರೂಪದ ಭೌಗೋಳಿಕ ಲಕ್ಷಣಗಳ ಕಾರಣದಿಂದ ಈ ಬ್ಯಾರೆನ್ ದ್ವೀಪ ಮಹತ್ವ ಪಡೆದಿದೆ.

ಈ ಹಿಂದಿನ ಜ್ವಾಲಾಮುಖಿ

ಬ್ಯಾರೆನ್ ದ್ವೀಪದಲ್ಲಿ, ಇದಕ್ಕೂ ಮೊದಲು 1787 ರ ಸಮಯದಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದ ಘಟನೆಗಳು ನಡೆದಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಅದರ ನಂತರ 2017 ಮತ್ತು 2022 ರಲ್ಲಿಯೂ ಇಲ್ಲಿನ ಜ್ವಾಲಾಮುಖಿಯ ಚಟುವಟಿಕೆಗಳು ಗಮನಕ್ಕೆ ಬಂದಿದ್ದವು. ಇದಾದ ನಂತರ ಈ ವರ್ಷದ ಜುಲೈನಲ್ಲಿಯೂ ಒಮ್ಮೆ ಜ್ವಾಲಾಮುಖಿ ಉಕ್ಕಿದ ಘಟನೆ ನಡೆದಿತ್ತು. ಇಲ್ಲಿ ಇತ್ತೀಚಿಗೆ ನಡೆದ ಘಟನೆಗಳು ಸಣ್ಣ ಘಟನೆಗಳಾಗಿದ್ದು, ಇದರಿಂದ ಮಾನವ ವಸಾಹತುಗಳಿಗೆ ಯಾವುದೇ ತಕ್ಷಣದ ಅಪಾಯ ಆಗಿಲ್ಲ, ಭೂ ವಿಜ್ಞಾನ ಅಧಿಕಾರಿಗಳು ಈ ದ್ವೀಪವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಇದನ್ನೂ ಓದಿ: ಯಾವುದೇ ಬೆಲ್ಟ್ ಇಲ್ಲದೇ 28 ಶ್ವಾನಗಳ ಜೊತೆ ವಾಕ್ ಬರುವ ಬೆಂಗಳೂರು ಮಹಿಳೆ: ವಿಡಿಯೋ ಭಾರಿ ವೈರಲ್

ಇದನ್ನೂ ಓದಿ: ಹಾವನ್ನು ಕೊರಳಿಗೆ ಸುತ್ತಿಕೊಂಡು ಸ್ಟಂಟ್ ಮಾಡಲು ಹೋಗಿ ಜೀವ ಬಿಟ್ಟ ಯುವಕ

ಇದನ್ನೂ ಓದಿ: ರೈಲ್ವೆಯ ಪ್ರತಿಷ್ಠಿತ ಎಸಿ ಕೋಚಲ್ಲಿ ಬೆಡ್‌ಶೀಟ್ ಕದ್ದು ಬ್ಯಾಗ್‌ಗೆ ತುಂಬಿಸಿ ಸಿಕ್ಕಿಬಿದ್ದ ಕುಟುಂಬ : ವೀಡಿಯೋ

ಇದನ್ನೂ ಓದಿ: ಮಿಲಿಯನ್ ವೀವ್ಸ್‌ ಗಳಿಸಿದ ರೀಲ್ಸ್ ಡಿಲೀಟ್‌ಗೆ ಸೂಚಿಸಿದ ಪೊಲೀಸರು: ಸಾಯುವುದಾಗಿ ಬೆದರಿಸಿದ ಯುವತಿ

Scroll to load tweet…