ಕಳೆದ ಜುಲೈ- ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಭಾರತ ಆರ್ಥಿಕ ಪ್ರಗತಿ ದರ ಶೇ.7.6ರಷ್ಟು ದಾಖಲಾಗಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹಿರಿಮೆಯನ್ನು ತನ್ನಲ್ಲೇ ಉಳಿಸಿಕೊಂಡಿದೆ.

ನವದೆಹಲಿ: ಕಳೆದ ಜುಲೈ- ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಭಾರತ ಆರ್ಥಿಕ ಪ್ರಗತಿ ದರ ಶೇ.7.6ರಷ್ಟು ದಾಖಲಾಗಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹಿರಿಮೆಯನ್ನು ತನ್ನಲ್ಲೇ ಉಳಿಸಿಕೊಂಡಿದೆ.

Add Asianetnews Kannada as a Preferred SourcegooglePreferred

ರಾಷ್ಟ್ರೀಯ ಸಾಂಖಿಕ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ವರದಿ ಅನ್ವಯ, ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ.7.6ರಷ್ಟು ದಾಖಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆರ್ಥಿಕ ಪ್ರಗತಿ ದರ ಶೇ.6.2ರಷ್ಟು ದಾಖಲಾಗಿತ್ತು. ಇನ್ನು ಏಪ್ರಿಲ್‌- ಸೆಪ್ಟೆಂಬರ್‌ ಅವಧಿಯ ಜಿಡಿಪಿ ಪ್ರಗತಿ ದರ ಶೇ.7.7ರಷ್ಟು ದಾಖಲಾಗಿದೆ. ಕಳೆದ ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ ಈ ಪ್ರಮಾಣ ಶೇ.9.5ರಷ್ಟು ದಾಖಲಾಗಿತ್ತು.

ಮೊದಲ ಬಾರಿಗೆ $4 ಟ್ರಿಲಿಯನ್ ಗಡಿ ದಾಟಿದ ಭಾರತದ ಆರ್ಥಿಕತೆ!

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7.8ರ ದರದಲ್ಲಿ ಪ್ರಗತಿ ಕಂಡಿತ್ತು. ಆದರೆ ಈ ತ್ರೈಮಾಸಿಕದಲ್ಲಿ ಕೃಷಿ ವಲಯ ಶೇ.1.2, ಉತ್ಪಾದಕ ವಲಯ ಶೇ.13.9ರಷ್ಟು ಪ್ರಗತಿ ಕಂಡಿದೆ. ಇದು ಕಳೆದ ತ್ರೈಮಾಸಿಕಕ್ಕೆ ಕಡಿಮೆಯಾಗಿದೆ. ಹೀಗಾಗಿ ಕಳೆದ ತ್ರೈಮಾಸಿಕಕ್ಕಿಂತ ಕಮ್ಮಿ ದರದಲ್ಲಿ ಈ ಸಲ ಪ್ರಗತಿ ದಾಖಲಾಗಿದೆ.

ಈ ವರ್ಷ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಬೆಳವಣಿಗೆಯು ಶೇಕಡಾ 4.9 ರಷ್ಟಿತ್ತು. ಹೀಗಾಗಿ ಭಾರತ ಚೀನಾವನ್ನೂ ಹಿಂದಿಕ್ಕಿದಂತಾಗಿದೆ.

ಮೋದಿ ಗ್ಯಾರೆಂಟಿ ನಿಜವಾಗೋಕೆ ಇನ್ನೆಷ್ಟು ದಿನ ಬಾಕಿ..? ಭಾರತದ ಈ ಮಹಾಸಾಧನೆ ಹಿಂದಿರೋ ಅಸಲಿ ಕಥೆ ಏನು?