Asianet Suvarna News Asianet Suvarna News

ಭಾರತದ ಜಿ-20 ಅಧ್ಯಕ್ಷತೆಗೆ ವಿದೇಶಿ ಮಾಧ್ಯಮಗಳಿಂದಲೂ ಭಾರಿ ಮೆಚ್ಚುಗೆ : ಯಾವ ನಾಯಕರು ಏನಂದರು?

ಭಾನುವಾರ ಮುಕ್ತಾಯವಾದ 2 ದಿನಗಳ ದೆಹಲಿ ಜಿ20 ಶೃಂಗಸಭೆ ಅತ್ಯಂತ ಯಶಸ್ವಿಯಾಗಿದ್ದು, ಹಲವು ಜಾಗತಿಕ ಸಮಸ್ಯೆಗಳಿಗೆ ಮಾತುಕತೆ ಮತ್ತು ಶಾಂತಿಯುತ ಮಾರ್ಗಗಳ ಮೂಲಕ ಪರಿಹಾರದ ಸಾಧ್ಯತೆಯನ್ನು ಮುಂದಿಟ್ಟಿದೆ ಎಂದು ಸದಸ್ಯ ದೇಶಗಳು ಹಾಗೂ ವಿದೇಶಿ ಮಾಧ್ಯಮಗಳು ಅತೀವ ಮೆಚ್ಚುಗೆ ವ್ಯಕ್ತಪಡಿಸಿವೆ.

Indias G20 presidency is highly praised by foreign media too Which leaders said what on G-20 indias presidency akb
Author
First Published Sep 11, 2023, 10:15 AM IST

ನವದೆಹಲಿ: ಭಾನುವಾರ ಮುಕ್ತಾಯವಾದ 2 ದಿನಗಳ ದೆಹಲಿ ಜಿ20 ಶೃಂಗಸಭೆ ಅತ್ಯಂತ ಯಶಸ್ವಿಯಾಗಿದ್ದು, ಹಲವು ಜಾಗತಿಕ ಸಮಸ್ಯೆಗಳಿಗೆ ಮಾತುಕತೆ ಮತ್ತು ಶಾಂತಿಯುತ ಮಾರ್ಗಗಳ ಮೂಲಕ ಪರಿಹಾರದ ಸಾಧ್ಯತೆಯನ್ನು ಮುಂದಿಟ್ಟಿದೆ ಎಂದು ಸದಸ್ಯ ದೇಶಗಳು ಹಾಗೂ ವಿದೇಶಿ ಮಾಧ್ಯಮಗಳು ಅತೀವ ಮೆಚ್ಚುಗೆ ವ್ಯಕ್ತಪಡಿಸಿವೆ. ಅಲ್ಲದೆ ಸಂಘರ್ಷದ ಸಮಯದಲ್ಲಿ ಶಾಂತಿಮಂತ್ರ ಪಠಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ದೆಹಲಿಯ ಘೋಷಣೆಯಲ್ಲಿನ ಹಲವು ಅಂಶಗಳ ಬಗ್ಗೆ ಅಮೆರಿಕ, ರಷ್ಯಾ, ಫ್ರಾನ್ಸ್‌ ದೇಶಗಳ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ದಿಲ್ಲಿ ಘೋಷಣೆ ಬಗ್ಗೆ ವಿದೇಶಿ ಮಾಧ್ಯಮಗಳಲ್ಲೂ (foreign media) ಮೆಚ್ಚುಗೆ ವ್ಯಕ್ತವಾಗಿದ್ದು, ರಷ್ಯಾ ಯುದ್ಧ ಖಂಡಿಸಿದ ದಿಲ್ಲಿ ಘೋಷಣೆ ಒಂದು ರೀತಿ ಕ್ಷಿಪ್ರಕ್ರಾಂತಿ (quick revolution) ಇದ್ದಂತಿತ್ತು ಎಂದು ಅಮೆರಿಕದ ಸಿಎನ್‌ಎನ್‌ ಸುದ್ದಿವಾಹಿನಿ ಬಣ್ಣಿಸಿದೆ.

ಸವಾಲಿಗಿದೆ ಉತ್ತರ: ಬೈಡೆನ್‌

ಜಾಗತಿಕ ಆರ್ಥಿಕತೆಯು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳು, ದುರ್ಬಲತೆ ಮತ್ತು ಸಂಘರ್ಷಗಳಿಂದ ನಲುಗಿರುವಾಗ ಅತ್ಯಂತ ಕ್ಲಿಷ್ಟ ಸವಾಲುಗಳನ್ನು ಕೂಡಾ ಜಾಗತಿಕ ಸಮುದಾಯ ಒಂದಾಗಿ ಪರಿಹರಿಸಬಹುದು ಎಂಬುದನ್ನು ಜಿ20 ಶೃಂಗ ತೋರಿಸಿಕೊಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (US President Joe Biden) ಹೇಳಿದ್ದಾರೆ.

ದಿಲ್ಲಿ ಘೋಷಣೆ ಹಿಂದೆ 200 ಗಂಟೆ ಸಭೆ 300 ಚರ್ಚೆ: ಜಿ20 ಯಶಸ್ಸಿನ ಹಿಂದಿರುವ ರಾಜತಾಂತ್ರಿಕರಿವರು

ರಷ್ಯಾ ಮೆಚ್ಚುಗೆ:

ಭಾರತದ ಅಧ್ಯಕ್ಷತೆಯ ಜಿ20 ಶೃಂಗವು ಹಲವು ದೃಷ್ಟಿಕೋನದಲ್ಲಿ ಹಲವು ಮಹತ್ವದ ತಿರುವುಗಳಿಗೆ ಸಾಕ್ಷಿಯಾಗಿದೆ. ಶೃಂಗದ ಫಲಶೃತಿಯು ಹಲವು ಸವಾಲುಗಳ ನಡುವೆ ಮುನ್ನಡೆಯುವ ದಾರಿಯನ್ನು ತೋರಿಸಿದೆ ಮತ್ತು ಗ್ಲೋಬಲ್‌ ಸೌತ್‌ನ ಶಕ್ತಿ ಮತ್ತು ಮಹತ್ವವನ್ನು ತೋರಿಸಿಕೊಟ್ಟಿದೆ ಎಂದು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (President Vladimir Putin) ಬದಲಾಗಿ ದೇಶವನ್ನು ಪ್ರತಿನಿಧಿಸಿದ್ದ ರಷ್ಯಾ ವಿದೇಶಾಂಗ ಸಚಿವ ಸೆರ್ಗೈ ಲಾವ್ರೋವ್‌ (Russian Foreign Minister Sergei Lavrov) ತಿಳಿಸಿದ್ದಾರೆ.

ಉಕ್ರೇನ್‌ ಸೇರಿದಂತೆ ವಿವಿಧ ವಿಷಯಗಳಲ್ಲಿ ಪಾಶ್ಚಿಮಾತ್ಯ ದೇಶಗಳು ತಮ್ಮ ನಿಲುವುನಿಂದ ಮುಂದುವರೆಯುವುದನ್ನು ಭಾರತದ ಮಹತ್ವದ ಪಾತ್ರ ವಹಿಸಿದೆ. ಜೊತೆಗೆ ಸೇನಾ ಸಂಘರ್ಷವನ್ನು ತಡೆಯಲು ಇಡೀ ವಿಶ್ವ ವಿಶ್ವಸಂಸ್ಥೆಯ ಸನ್ನದಿನ ಅನ್ವಯ ಮುಂದುವರೆಯಬೇಕೇ ವಿನಃ ಪಾಶ್ಚಿಮಾತ್ಯ ದೇಶಗಳು ಜಾಗತಿಕ ಸಮಸ್ಯೆ ಇತ್ಯರ್ಥಕ್ಕೆ ತಮ್ಮ ನೀತಿಗಳ ಮೂಲಕವೇ ಮುಂದಾಗುವುದು ಸಾಧ್ಯವಿಲ್ಲ ಎಂಬುದನ್ನು ದೆಹಲಿ ಘೋಷಣೆ (Delhi Declaration) ಅತ್ಯಂತ ಸ್ಪಷ್ಟವಾಗಿದೆ. ಜಿ20 ಸಭೆಯನ್ನು ರಾಜಕೀಯಗೊಳಿಸುವ ಯತ್ನವನ್ನು ವಿಫಲಗೊಳಿಸಿದ ಭಾರತವನ್ನು ಅಭಿನಂದಿಸುತ್ತೇನೆ ಎಂದು ಲಾವ್ರೋವ್‌ ತಿಳಿಸಿದ್ದಾರೆ.

ಫ್ರಾನ್ಸ್‌ ಅಧ್ಯಕ್ಷ ಸಂತಸ

ಉಕ್ರೇನ್‌ ಯುದ್ಧಕ್ಕೆ ಕಾರಣವಾದ ರಷ್ಯಾವನ್ನು ಏಕಾಂಗಿ ಮಾಡುವಲ್ಲಿ ದೆಹಲಿ ಘೋಷಣೆ ಯಶಸ್ವಿಯಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರಾನ್‌ (French President Emmanuel Macron) ಹೇಳಿದ್ದಾರೆ. ಇಡೀ ಜಿ20 ಒಕ್ಕೂಟವು ಉಕ್ರೇನ್‌ನಲ್ಲಿ ಶಾಂತಿ ಬಯಸುತ್ತದೆ. ಇದಕ್ಕಾಗಿ ವಿಶ್ವಸಂಸ್ಥೆಯ ಸನ್ನದು ಪಾಲನೆ ಮಾಡಬೇಕು ಎಂಬುದು ಜಿ20 ಆಶಯ. ಈ ವಿಷಯದಲ್ಲಿ ಶಾಂತಿಯ ಮಾತುಗಳನ್ನು ಆಡಿದ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಮಳೆಯಿಂದ ಜಿ20 ಸಭಾಸ್ಥಳ ಮುಳುಗಿಲ್ಲ: ಕಾಂಗ್ರೆಸ್‌ ಆರೋಪ ಸುಳ್ಳು

ಐಎಂಎಫ್‌ ಗೀತಾ ಪ್ರಶಂಸೆ:

ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಎಂಬ ಭಾರತದ ಸಂದೇಶವು ಜಿ20 ಶೃಂಗದ ಎಲ್ಲಾ ಸದಸ್ಯರಲ್ಲಿ ಅನುರಣಿಸಿದೆ. ಇಂಥ ಒಂದು ಅತ್ಯಂತ ಯಶಸ್ವಿ ಶೃಂಗಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಹಿರಿಯ ಅಧಿಕಾರಿ ಗೀತಾ ಗೋಪಿನಾಥ್‌ (Gita Gopinath) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios