ಮಳೆಯಿಂದ ಜಿ20 ಸಭಾಸ್ಥಳ ಮುಳುಗಿಲ್ಲ: ಕಾಂಗ್ರೆಸ್‌ ಆರೋಪ ಸುಳ್ಳು

ದೆಹಲಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿ20 ಶೃಂಗಸಭೆ ನಡೆಯುತ್ತಿರುವ ಭಾರತ ಮಂಟಪ ಮುಳುಗಡೆಯಾಗಿದೆ. ಇದರ ನಿರ್ಮಾಣಕ್ಕೆ ಕೋಟ್ಯಂತ ರು. ಖರ್ಚು ಮಾಡಿದ್ದರೂ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್‌ ಭಾನುವಾರ ಆರೋಪಿಸಿದೆ. ಆದರೆ ಇದನ್ನು ಅಲ್ಲಗಳೆದಿರುವ ಪಿಐಬಿ ಫ್ಯಾಕ್ಟ್ಚೆಕ್‌ ಯುನಿಟ್‌ ನೀರು ತುಂಬಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

G20 meeting hall flooded due to rain PIB fact check revealed Congress allegation is false akb

ನವದೆಹಲಿ: ದೆಹಲಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿ20 ಶೃಂಗಸಭೆ ನಡೆಯುತ್ತಿರುವ ಭಾರತ ಮಂಟಪ ಮುಳುಗಡೆಯಾಗಿದೆ. ಇದರ ನಿರ್ಮಾಣಕ್ಕೆ ಕೋಟ್ಯಂತ ರು. ಖರ್ಚು ಮಾಡಿದ್ದರೂ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ಕಾಂಗ್ರೆಸ್‌ ಭಾನುವಾರ ಆರೋಪಿಸಿದೆ. ಆದರೆ ಇದನ್ನು ಅಲ್ಲಗಳೆದಿರುವ ಪಿಐಬಿ ಫ್ಯಾಕ್ಟ್ಚೆಕ್‌ ಯುನಿಟ್‌ ನೀರು ತುಂಬಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತ ಮಂಟಪದಲ್ಲಿ (Bharat Mandapam) ನೀರು ತುಂಬಿಕೊಂಡಿರುವ ವಿಡಿಯೋಗಳನ್ನು ಹಂಚಿಕೊಂಡಿರುವ ಕಾಂಗ್ರೆಸ್‌, ಇದು ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಪೊಳ್ಳು ಅಭಿವೃದ್ಧಿ ಬಹಿರಂಗವಾಗಿದೆ. ಜಿ20ಗಾಗಿ ಭಾರತ ಮಂಟಪವನ್ನು 2,700 ಕೋಟಿ ರು. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದೆ. ಆದರೆ ಇದು ಒಂದೇ ಮಳೆಗೆ ಹೀಗಾಗಿದೆ ಎಂದು ಹೇಳಿದೆ. ಜಿ20 ಶೃಂಗ ನಡೆಯುತ್ತಿರುವ ಸ್ಥಳ ಮುಳುಗಡೆಯಾಗಿದೆ. ಆದರೂ ಸಹ ಮಾಧ್ಯಮಗಳು ಇದನ್ನು ಪ್ರಸಾರ ಮಾಡುತ್ತಿಲ್ಲ. ಮೋದಿ ಅವರೇ ನೀವು ನಮ್ಮಿಂದ ಆಡಳಿತ ನಡೆಸುವುದನ್ನು ಕಲಿಯಲಿಲ್ಲ. ಆದರೆ ಮಾಧ್ಯಮವನ್ನು ನಿರ್ವಹಣೆ ಮಾಡುವುದನ್ನು ನಾವು ನಿಮ್ಮಿಂದ ಕಲಿತಿದ್ದೇವೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ (Congress spokesperson Pawan Khera) ಕಿಡಿಕಾರಿದ್ದಾರೆ. 3000 ಸಾವಿರ ಕೋಟಿ ರು.ನ ಅಭಿವೃದ್ಧಿ ಮಳೆಯಲ್ಲಿ ತೇಲುತ್ತಿದೆ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲಾ (Randeep Singh Surjewala) ವ್ಯಂಗ್ಯವಾಡಿದ್ದಾರೆ.

ಈ ವಿಡಿಯೋಗಳನ್ನು ಫ್ಯಾಕ್ಟ್ ಚೆಕ್‌ ಮಾಡಿರುವ ಪಿಐಬಿ, ಇದು ದಾರಿ ತಪ್ಪಿಸುವ ಹೇಳಿಕೆಯಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಭಾರತ ಮಂಟಪದಲ್ಲಿ ನೀರು ಹರಿಯುತ್ತಿತ್ತು. ಇದನ್ನು ಮೋಟರ್‌ ಬಳಸಿ ಖಾಲಿ ಮಾಡಲಾಗಿದೆ. ಈ ಪ್ರದೇಶ ಮುಳುಗಡೆಯಾಗಿಲ್ಲ ಎಂದು ಹೇಳಿದೆ. 

 ಜಿ20 ಔತಣದಲ್ಲಿ ಮೋದಿ-ನಿತೀಶ್‌-ದೀದಿ ಮುಖಾಮುಖಿ

ಜಿ20 ಶೃಂಗ ಸಭೆ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಆಯೋಜಿಸಿದ್ದ ಗಾಲಾ ಔತಣಕೂಟದಲ್ಲಿ ರಾಜಕೀಯ ವಿರೋಧಿಗಳ ಮುಖಾಮುಖಿ ನಡೆಯಿತು. ಹಲವು ದಿನಗಳಿಂದ ಪರಸ್ಪರ ಭೇಟಿಯಾಗದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Bihar Chief Minister Nitish Kumar), ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ (TMC leader Mamata Banerjee) ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಪರಸ್ಪರ ಭೇಟಿಯಾದರು. ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಪರಿಚಯ ಮಾಡಿಕೊಟ್ಟರು. ಇವರೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌(Jharkhand Chief Minister Hemant Soren), ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಕೂಡ ರಾಷ್ಟ್ರಪತಿ ಅವರ ಔತಣಕೂಟದಲ್ಲಿ ಭಾಗಿಯಾಗಿದ್ದರು. ಈ ಮೂಲಕ ದೇಶದ ವಿಚಾರದಲ್ಲಿ ರಾಜಕೀಯ ದ್ವೇಷವನ್ನು ಬಿಟ್ಟು ಸಾಮರಸ್ಯವನ್ನು ಮೆರೆದರು.

ಶಿಷ್ಟಾಚಾರ ಲೋಪ: ಜೋ ಬೈಡೆನ್‌ ಬೆಂಗಾವಲು ಕಾರು ಚಾಲಕ ವಶಕ್ಕೆ

ನವದೆಹಲಿ: ಜಿ20 ಶೃಂಗಸಭೆಯ ಸಮಯದಲ್ಲಿ ಶಿಷ್ಟಾಚಾರ ಲೋಪ ಸಂಭವಿಸಿದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (US President Joe Biden) ಬೆಂಗಾವಲು ಕಾರಿನ ಚಾಲಕನನ್ನು ಕೆಲಕಾಲ ವಶಕ್ಕೆ ಪಡೆದ ಘಟನೆ ಭಾನುವಾರ ನಡೆದಿದೆ. ಬೈಡೆನ್‌ ಅವರ ಬೆಂಗಾವಲು ವಾಹನ ಬೈಡೆನ್‌ ಇದ್ದ ಹೋಟೆಲ್‌ ಬದಲು ಯುಎಇ ರಾಜಕುಮಾರ ತಂಗಿದ್ದ ಹೋಟೆಲ್‌ಗೆ ಬಂದ ಕಾರಣ ಭದ್ರತಾ ಲೋಪ ಉಂಟಾಗಿದೆ. ಕಾರು ಚಾಲಕನನ್ನು ವಶಕ್ಕೆ ಪಡೆದು ಕೆಲಕಾಲ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಆತನನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಬೈಡೆನ್‌ ಬೆಂಗಾವಲು ಪಡೆಯಿಂದ ಆತನನ್ನು ವಜಾ ಮಾಡಲಾಗಿದೆ.

ಆಗಿದ್ದೇನು?:
ಬೈಡೆನ್‌ ಬೆಂಗಾವಲು ವಾಹನದ ಚಾಲಕನನ್ನು ಭಾನುವಾರ ಬೆಳಿಗ್ಗೆ 9.30ಕ್ಕೆ ಐಟಿಸಿ ಮೌರ್ಯ ಹೋಟೆಲ್‌ಗೆ ಬರುವಂತೆ ಸೂಚಿಸಲಾಗಿತ್ತು. ಆದರೆ 8 ಗಂಟೆಗೆ ಮತ್ತೊಬ್ಬ ಪ್ರಯಾಣಿಕ ತಾಜ್‌ ಹೊಟೆಲ್‌ಗೆ ಕರೆದೊಯ್ಯಲು ಕೇಳಿದ ಕಾರಣಕ್ಕೆ ಚಾಲಕ ಯುಎಇ ರಾಜಕುಮಾರ ತಂಗಿದ್ದ ಹೋಟೆಲ್‌ಗೆ ಧಾವಿಸಿದ್ದಾನೆ. ಇದರಿಂದಾಗಿ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.

Latest Videos
Follow Us:
Download App:
  • android
  • ios