ದೆಹಲಿಯಲ್ಲಿ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ಕಾರ್ಯಾರಂಭ..! ಹೀಗಿದೆ ರೂಲ್ಸ್
ಕೊರೋನಾ ವೈರಸ್‌ಗೆ ಚಿಕಿತ್ಸೆಗೆ ಸ್ಥಾಪಿಸಲಾದ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ದೆಹಲಿಯಲ್ಲಿ ಗುರುವಾರ ಕಾರ್ಯಾರಂಭ ಮಾಡಿದೆ. ಕೊರೋನಾದಿಂದ ಗುಣಮುಖರಾಗಿ 14 ದಿನ ಆದವರು ಪ್ಲಾಸ್ಮಾವನ್ನು ನೀಡಬಹುದು.
ನವದೆಹಲಿ(ಜು.03): ಕೊರೋನಾ ವೈರಸ್‌ಗೆ ಚಿಕಿತ್ಸೆಗೆ ಸ್ಥಾಪಿಸಲಾದ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ದೆಹಲಿಯಲ್ಲಿ ಗುರುವಾರ ಕಾರ್ಯಾರಂಭ ಮಾಡಿದೆ. ಕೊರೋನಾದಿಂದ ಗುಣಮುಖರಾಗಿ 14 ದಿನ ಆದವರು ಪ್ಲಾಸ್ಮಾವನ್ನು ನೀಡಬಹುದು.
ನಗರದ ಲಿವರ್ ಆ್ಯಂಡ್ ಬೈಲರಿ ಸೈನ್ಸ್‌ಸ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ. ಜನರು 1031 ಮತ್ತು 8800007722 ನಂಬರ್‌ಗೆ ಕರೆ ಮಾಡಿ ಪ್ಲಾಸ್ಮಾ ನೀಡಬಹುದು.
ಮಹಾರಾಷ್ಟ್ರದಲ್ಲಿ ಪ್ಲಾಸ್ಮಾ ಥೆರಪಿ ವಿಫಲ, ಸೋಂಕಿತ ಸಾವು
ಕೊರೋನಾ ವೈರಸ್‌ನಿಂದ ಗುಣಮುಖವಾದ ವ್ಯಕ್ತಿಯ ರಕ್ತದಲ್ಲಿನ ಪ್ರತಿಕಾಯಗಳನ್ನು ತೆಗೆದು ಇನ್ನೊಬ್ಬ ರೋಗಿಗೆ ನೀಡುವುದೇ ಪ್ಲಾಸ್ಮಾ ಥೆರಪಿ. ಇದಕ್ಕಾಗಿ ಜನರಿಂದ ರಕ್ತವನ್ನು ಪಡೆದು ಪ್ಲಾಸ್ಮಾವನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ದೆಹಲಿ ಸರ್ಕಾರ ಪ್ಲಾಸ್ಮಾ ಬ್ಯಾಂಕ್ ಅನ್ನು ಆರಂಭಿಸಿದೆ.
ಪ್ಲಾಸ್ಮಾ ಚಿಕಿತ್ಸೆ ಎಂದರೇನು..?
ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ರೂಪುಗೊಂಡಿರುತ್ತದೆ. ಅಂತಹ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಕಣಗಳನ್ನು ಪಡೆದು ಸೋಂಕಿತ ಅಥವಾ ಸೋಂಕಿನ ಸಂಭಾವ್ಯತೆ ಇರುವ ವ್ಯಕ್ತಿಯ ರಕ್ಷಕ್ಕೆ ಸೇರಿಸಿದರೆಆತನಲ್ಲೂ ರೋಗ ನಿರೋಧಕ ಶಕ್ತಿ ರೂಪುಗೊಂಡು 3ರಿಂದ 7 ದಿನದಲ್ಲಿ ರೋಗ ನಿವಾರಣೆಯಾಗುತ್ತದೆ. 18ರಿಂದ 60 ವರ್ಷದೊಳಗಿನ, 50 ಕೆಜಿ ಭಾರವುಳ್ಳ ವ್ತಕ್ತಿ ಪ್ಲಾಸ್ಮಾ ದಾನ ಮಾಡಬಹುದಾಗಿದೆ. ಡಯಾಬಿಟೀಸ್, ಇನ್ಸುಲಿನ್, ಕ್ಯಾನ್ಸರ್ ಇರುವವರು ಕೊಡುವಂತಿಲ್ಲ.