Asianet Suvarna News Asianet Suvarna News

ಮೊತ್ತ ಮೊದಲ ಮದ್ಯದ ಮ್ಯೂಸಿಯಂ ಆರಂಭ; ಲೋಕಲ್‌ನಿಂದ ಸ್ಕಾಚ್ ವರೆಗಿನ ಆಲ್ಕೋಹಾಲ್ ಕಲೆಕ್ಷನ್!

  • ಇದು ಭಾರತದ ಮೊತ್ತ ಮೊದಲ ಮದ್ಯದ ಮ್ಯೂಸಿಯಂ
  • ಅಪೂರ್ವ, ಅತ್ಯಂತ ಹಳೆಯ, ಆಧುನಿಕ ಸ್ಕಾಚ್ ಕಲೆಕ್ಷನ್
  • ಗೋವಾದಲ್ಲಿ ಆಲ್ ಅಬೌಟ್ ಅಲ್ಕೋಹಾಲ್ ಮ್ಯೂಸಿಯಂ
Indias first museum dedicated to alcohol has opened in North goa ckm
Author
Bengaluru, First Published Oct 17, 2021, 8:30 PM IST
  • Facebook
  • Twitter
  • Whatsapp

ಗೋವಾ(ಅ.17): ಭಾರತದ ಪ್ರವಾಸಿ ತಾಣದಲ್ಲಿ ಗೋವಾಗೆ(Goa) ಮೊದಲ ಸ್ಥಾನ. ಇಲ್ಲಿ ಎಲ್ಲವೂ ಇದೆ. ಮೋಜು ಮಸ್ತಿಗೆ ಎಲ್ಲೆ ಇಲ್ಲ. ಇದೀಗ ಇದೇ ಗೋವಾದಲ್ಲಿ ಭಾರತದ ಮೊತ್ತ ಮೊದಲ ಮದ್ಯದ ಮ್ಯೂಸಿಯಂ(Alcohol museum) ಆರಂಭಗೊಂಡಿದೆ. ಇಲ್ಲಿ ಎಲ್ಲಾ ಅಪೂರ್ವ ಮದ್ಯ ಕಲೆಕ್ಷನ್ ಲಭ್ಯವಿದೆ.

2 ಡೋಸ್‌ ಲಸಿಕೆ ಪಡೆದರಷ್ಟೇ ಮದ್ಯ ಖರೀದಿಗೆ ಅವಕಾಶ!

ಮದ್ಯದ ಸಾಗರವೇ ಈ ಮ್ಯೂಸಿಯಂನಲ್ಲಿ ಶೇಖರಿಸಿಡಲಾಗಿದೆ. ಉತ್ತರ ಗೋವಾದ ಕ್ಯಾಂಡೋಲಿಯಂ ವಿಲೇಜ್‌ನಲ್ಲಿ ಹೊಸ ಮ್ಯೂಸಿಯಂ ಆರಂಭಗೊಂಡಿದೆ. ಈ ಮದ್ಯದ ಮ್ಯೂಸಿಯಂನಲ್ಲಿ ಸ್ಥಳೀಯ ಫೆನ್ನಿಯಿಂದ ಹಿಡಿದು ವಿದೇಶಿ ಸ್ಕಾಚ್ ವರೆಗೂ ಲಭ್ಯವಿದೆ. ಇದೀಗ ಈ ಮ್ಯೂಸಿಯಂ ಗೋವಾದ ಮತ್ತೊಂದು ಪ್ರಸಿದ್ದ ಜನಪ್ರಿಯ ತಾಣವಾಗಿ ಬದಲಾಗಿದೆ.

 

ಆಲ್ಕೋಹಾಲ್: ಆರೋಗ್ಯಕ್ಕೆ ಒಳ್ಳೇಯದು, ಆದರೆ ಕಡೀಷನ್ಸ್ ಅಪ್ಲೈ!

ಶತಮಾನಗಳ ಹಿಂದೆ ತಯಾರಿಸಿದ ಸ್ಥಳೀಯ ಫೆನ್ನಿ ಕೂಡ ಇಲ್ಲಿ ಲಭ್ಯವಿದೆ. ಈ ಮ್ಯೂಸಿಯಂನ ವಿಶೇಷತೆಗಳಲ್ಲೊಂದಾಗಿದೆ. ಉದ್ಯಮಿ ಕುಡ್ಚಾದ್ಕರ್ ಈ ಮದ್ಯದ ಮ್ಯೂಸಿಯಂ ಆರಂಭಿಸಿದ್ದಾರೆ. ಚಿಕ್ಕಂದಿನಿಂದಲೂ ಮದ್ಯಕ್ಕಾಗಿ ವಿಶೇಷ ಮ್ಯೂಸಿಯಂ ತೆರೆಯಬೇಕು ಅನ್ನೋ ಕನಸಿತ್ತು. ಇದು ಭಾರತದಲ್ಲಿ ಮೊತ್ತ ಮೊದಲ ಪ್ರಯತ್ನವಾಗಿದೆ. ಹೀಗಾಗಿ ಭಾರತದ ಮೂಲೆ ಮೂಲೆಯಲ್ಲಿ ಸಿಗುವ ಸ್ಥಳೀಯ ಮದ್ಯ ಸೇರಿದಂತೆ ವಿದೇಶಿ ಮದ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಕುಡ್ಚಾದ್ಕರ್ ಹೇಳಿದ್ದಾರೆ.

ಮೈಕೈ ನೋವಿಗೆ ಬಿಯರ್ ಮದ್ದು! ಇದು ಪ್ಯಾರಾಸಿಟಮಾಲ್‌ಗಿಂತ ಹೆಚ್ಚು ಎಫೆಕ್ಟಿವ್!

ಸ್ಕಾಟ್‌ಲೆಂಡ್, ರಷ್ಯಾ ಸೇರಿದಂತೆ ವಿದೇಶಗಳಿಗೆ ತೆರಳಿದಾಗ ಅಲ್ಲಿಯ ಜನ ತಮ್ಮ ತಮ್ಮ ದೇಶದ ವಿಶೇಷ ಮದ್ಯವನ್ನು ಪ್ರದರ್ಶಿಸುತ್ತಾರೆ. ಆದರೆ ಭಾರತದಲ್ಲಿ ಮದ್ಯವನ್ನು ನಾವು ತೋರ್ಪಡಿಸುವುದಿಲ್ಲ. ಹೀಗಾಗಿ ನಮ್ಮಲ್ಲಿ ಪೂರ್ವಜರೂ ಯಾವುದೇ ರಾಸಾಯನಿಕಗಳಿಲ್ಲದ ಮದ್ಯ ತಯಾರಿ ಸೇವಿಸುತ್ತಿದ್ದ ಉದಾಹರಣೆಗಳಿವೆ. ಹೀಗಾಗಿ ಭಾರತದ ಸ್ಥಳೀಯ ಮದ್ಯಗಳು ಸೇರಿದಂತೆ ವಿಶ್ವದೆಲ್ಲೆಡೆ ಸಿಗುವ ಮದ್ಯಗಳನ್ನು ಸಂಗ್ರಹಿಸಿ ಮ್ಯೂಸಿಯಂನಲ್ಲಿ ಇಡಲಾಗಿದೆ ಎಂದು ಉದ್ಯಮಿ ಹೇಳಿದ್ದಾರೆ.

ಈ ಮ್ಯೂಸಿಯಂನ ಮತ್ತೊಂದು ವಿಶೇಷತೆ ಎಂದರೆ, ಮ್ಯೂಸಿಯಂಗೆ ಆಗಮಿಸುವವರಿಗೆ ವೆಲ್‌ಕಮ್ ಡ್ರಿಂಕ್ ಆಗಿ ಸ್ಥಳೀಯ ಗೋವಾ ಫೆನ್ನಿ ನೀಡಲಾಗುತ್ತದೆ ಎಂದು ಮ್ಯೂಸಿಯಂ ಸಿಇಓ ಅರ್ಮಾಂಡೋ ಹೇಳಿದ್ದಾರೆ.

Follow Us:
Download App:
  • android
  • ios