Asianet Suvarna News Asianet Suvarna News

INS Vikrant: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಕಾರ್ಯಾರಂಭ, ಏನಿದರ ವಿಶೇಷತೆ?

Aiorcraft Carrier INS Vikrant: 262 ಮೀಟರ್‌ ಉದ್ದ, 62 ಮೀಟರ್‌ ಅಗಲವಾಗಿರುವ ಐಎನ್‌ಎಸ್ ವಿಕ್ರಾಂತ್‌, ಭಾರತದ ನೌಕಾಸೇನೆಗೆ ನಿಯೋಜನೆಯಾಗಿದೆ. ಅಂದಾಜು ಒಂದು ವರ್ಷಗಳ ಕಾಲ ಸಮುದ್ರದಲ್ಲಿ ಟ್ರಯಲ್ಸ್‌ಗೆ ಒಳಗಾಗಿದ್ದ ಐಎನ್‌ಎಸ್ ವಿಕ್ರಾಂತ್‌, ನಿಯೋಜನೆಯೂ ಆಗಿರುವ ಕಾರಣ, ಸೇನೆಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ.
 

Indias First Home Built Aircraft Carrier INS Vikrant Commissioned in Kochi PM Modi san
Author
First Published Sep 2, 2022, 11:37 AM IST

ನವದೆಹಲಿ (ಸೆ.2): ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಸುಮಾರು ಒಂದು ವರ್ಷದ ಸಮುದ್ರ ಪ್ರಯೋಗಗಳನ್ನು ಪೂರ್ಣಗೊಳಿಸಿದ ನಂತರ ಇಂದು ಔಪಚಾರಿಕವಾಗಿ ಕಾರ್ಯಾರಂಭ ಮಾಡಿದೆ. ₹ 20,000 ಕೋಟಿ ವೆಚ್ಚದಲ್ಲಿ 45,000 ಟನ್‌ ಯುದ್ಧನೌಕೆ ನಿರ್ಮಾಣ ಮಾಡಲಾಗಿದೆ. ಈ ಸಮುದ್ರ ಶಕ್ತಿಯ ಬಲದ ಮೇಲೆ ಛತ್ರಪತಿ ವೀರ ಶಿವಾಜಿ ಮಹಾರಾಜರು ಅಂತಹ ನೌಕಾಪಡೆಯನ್ನು ನಿರ್ಮಿಸಿದರು. ಶತ್ರುಗಳಿಗೆ ಇದು ನಿದ್ರೆಯಿಲ್ಲದಂಥ ರಾತ್ರಿಗಳನ್ನು ಈ ನೌಕಾಪಡೆ ನೀಡಿತ್ತು. ಆದರೆ, ಬ್ರಿಟಿಷರು ಭಾರತಕ್ಕೆ ಬಂದಾಗ, ಅವರು ಭಾರತೀಯ ಹಡಗುಗಳ ಶಕ್ತಿ ಮತ್ತು ಅವುಗಳ ಮೂಲಕ ಆಗುತ್ತಿರುವ ವ್ಯಾಪಾರದಿಂದ ಹೆದರಿದ್ದರು. ಅದಕ್ಕಾಗಿಯೇ ಅವರು ಭಾರತದ ಸಮುದ್ರ ಶಕ್ತಿಯ ಬೆನ್ನು ಮುರಿಯಲು ನಿರ್ಧರಿಸಿದರು. ಅಂದು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಕಾನೂನನ್ನು ಜಾರಿಗೊಳಿಸಿ ಭಾರತೀಯ ಹಡಗುಗಳು ಮತ್ತು ವ್ಯಾಪಾರಿಗಳ ಮೇಲೆ ಹೇಗೆ ಕಠಿಣ ನಿರ್ಬಂಧಗಳನ್ನು ಹೇರಲಾಗಿತ್ತು ಎನ್ನುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಐಎನ್‌ಎಸ್ ವಿಕ್ರಾಂತ್ ನಿಯೋಜನೆಯ ವೇಳೆ ಮಾತನಾಡಿದ್ದಾರೆ. ಮೇಡ್‌ ಇನ್‌ ಇಂಡಿಯಾ ವಿಮಾನವಾಹಕ ಯುದ್ಧ ನೌಕೆಯಲ್ಲಿ ಇರುವ ವಿಶೇಷತೆಗಳೇನು ಎನ್ನುವುದರ ವರದಿ ಇಲ್ಲಿದೆ.

ಐಎನ್‌ಎಸ್‌ ವಿಕ್ರಾಂತ್‌ ಕುರಿತಾಗಿ 10 ಬೆಳವಣಿಗೆಗಳು..

1. ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ವಿಮಾನವಾಹಕ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೌಕಾಪಡೆಗೆ ನಿಯೋಜನೆ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಹೊಸ ನೌಕಾ ಧ್ವಜವನ್ನು ಅನಾವರಣಗೊಳಿಸಿದರು. ಈ ಹೊಸ ಲಾಂಛನವು ಶ್ರೀಮಂತ ಭಾರತೀಯ ಕಡಲ ಪರಂಪರೆಗೆ ಹೊಂದಿಕೆಯಾಗಲಿದೆ ಎಂದು ನೌಕಾಪಡೆ ಈ ಹಿಂದೆ ಹೇಳಿತ್ತು.

2. 262 ಮೀಟರ್‌ ಉದ್ದವಿರುವ ಐಎನ್‌ಎಸ್‌ ವಿಕ್ರಾಂತ್‌, 62 ಮೀಟರ್‌ ಅಗಲವಿದೆ. ಭಾರತದಲ್ಲಿ ಈವರೆಗೂ ನಿರ್ಮಾಣವಾಗಲಿರುವ ಅತೀದೊಡ್ಡ ಯುದ್ಧನೌಕೆ ಇದಾಗಿದೆ. ಇದರ ಮೇಲೆ 30 ಯುದ್ಧವಿಮಾನಗಳನ್ನು ನಿಸಲ್ಲಿಸಬಹುದಾಗಿದೆ. ಮಿಗ್‌-29ಕೆ ಯುದ್ಧವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಇರಿಸಬಹುದಾಗಿದೆ. ಅಂದಾಹು 1600 ಸಿಬ್ಬಂದಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.

3. INS ವಿಕ್ರಾಂತ್, ಆರಂಭದಲ್ಲಿ, ಮಿಗ್ ಯುದ್ಧವಿಮಾನಗಳು ಮತ್ತು ಕೆಲವು ಚಾಪರ್‌ಗಳನ್ನು  ಮಾತ್ರ ಹೊಂದಿರುತ್ತದೆ. ನೌಕಾಪಡೆಯು 26 ಡೆಕ್ ಆಧಾರಿತ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿದೆ, ಕೆಲವು ಬೋಯಿಂಗ್ ಮತ್ತು ಡಸಾಲ್ಟ್ ವಿಮಾನಗಳು ತನ್ನ ನೆಲೆ ಮಾಡಿಕೊಳ್ಳಲಿದೆ.

4. ಅಂದಾಜು 13 ವರ್ಷಗಳ ಕಾಲ ಐಎನ್‌ಎಸ್ ವಿಕ್ರಾಂತ್‌ ಅನ್ನು ನಿರ್ಮಾಣ ಮಾಡಲಿದೆ. ವಿವಿಧ ಹಂತಗಳ ಸಮುದ್ರ ಟ್ರಯಲ್ಸ್‌ನಲ್ಲೂ ಐಎನ್‌ಎಸ್‌ ವಿಕ್ರಾಂತ್‌ ಭಾಗಿಯಾಗಿತ್ತು, ಆಗಸ್ಟ್‌ 21 ರಂದು ಒಂದು ವರ್ಷಗಳ ಟ್ರಯಲ್ಸ್‌ ಮುಕ್ತಾಯಗೊಂಡಿತ್ತು. ನೌಕಾಪಡೆಗೆ ವಿಕ್ರಾಂತ್‌ ನಿಯೋಜನೆ ಆದ ಬಳಿಕ ವಾಯುಪಡೆ ವಿಮಾನದಲ್ಲಿ ತನ್ನ ಪ್ರಯೋಗಗಳನ್ನು ನಡೆಸಲಿದೆ.

5. ಪ್ರಸ್ತುತ, ಭಾರತವು ಕೇವಲ ಒಂದು ವಿಮಾನವಾಹಕ ನೌಕೆಯನ್ನು ಹೊಂದಿದೆ, ಐಎನ್ಎಸ್ ವಿಕ್ರಮಾದಿತ್ಯ, ಇದನ್ನು ರಷ್ಯಾದ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ರಕ್ಷಣಾ ಪಡೆಗಳು ಒಟ್ಟಾರೆಯಾಗಿ ಮೂರು ವಿಮಾನ ವಾಹಕಗಳಿಗೆ ಬೇಡಿಕೆ ಇಟ್ಟಿದೆ. ಹಿಂದೂ ಮಹಾಸಾಗರ ಹಾಗೂ ಬಂಗಾಳ ಕೊಲ್ಲಿಯಲ್ಲಿ ತಲಾ ಒಂದು ವಿಮಾನವಾಹಕ ಯುದ್ಧನೌಕೆಯ ನಿಯೋಜನೆಯೊಂದಿಗೆ, ಇನ್ನೊಂದನ್ನು ವಿಶೇಷ ಬಳಕೆಗಾಗಿ ಬಳಸುವ ಯೋಜನೆಯನ್ನು ಇರಿಸಿಕೊಂಡಿದೆ.

6. ಐಎನ್‌ಎಸ್‌ ವಿಕ್ರಾಂತ್‌ಗೆ ಇದೇ ಹೆಸರನ್ನು ಹೊಂದಿದ್ದ ತನ್ನ ಹಿಂದಿನ ವಿಮಾನವಾಹಕ ಯುದ್ಧನೌಕೆಯ (aircraft carrier ) ಹೆಸರನ್ನು ಇಡಲಾಗಿದೆ. 1971ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧ ಹಾಗೂ ಬಾಂಗ್ಲಾದೇಶದ ವಿಮೋಚನೆಯಲ್ಲಿ ಹಿಂದಿನ ಐಎನ್‌ಎಸ್ ವಿಕ್ರಾಂತ್‌ (INS Vikrant) ಪ್ರಮುಖ ಪಾತ್ರ ವಹಿಸಿತ್ತು.

7. INS ವಿಕ್ರಾಂತ್‌ನೊಂದಿಗೆ, ಭಾರತವು ಅಮೆರಿಕ, ಇಂಗ್ಲೆಂಡ್‌, ರಷ್ಯಾ, ಚೀನಾ ಮತ್ತು ಫ್ರಾನ್ಸ್‌ನಂತಹ ಆಯ್ದ ರಾಷ್ಟ್ರಗಳ ಗುಂಪನ್ನು ಸೇರಿದೆ. ಈ ದೇಶಗಳು ತಮ್ಮದೇ ಆದ ವಿಮಾನವಾಹಕ ನೌಕೆಗಳನ್ನು ವಿನ್ಯಾಸ ಮಾಡಿದ್ದಲ್ಲದೆ, ಅವುಗಳ ನಿರ್ಮಾಣವನ್ನು ದೇಶದಲ್ಲಿಯೇ ಮಾಡುತ್ತವೆ.

INS Vikrant: ಸಾಗರದ ಚಕ್ರವರ್ತಿ ನೌಕಾಸೇನೆಗೆ ನಿಯೋಜನೆ!


8. ಭಾರತೀಯ ನೌಕಾಪಡೆಯು (Indian Navy) ಹೊಸ ಯುದ್ಧನೌಕೆಯನ್ನು ತನ್ನ ಶಕ್ತಿಯಲ್ಲಿ ಪ್ರಮುಖ ಸೇರ್ಪಡೆಯಾಗಿ ಪರಿಗಣಿಸಿದೆ. ಭಾರತವು ಈಗ ತನ್ನ ಪೂರ್ವ ಮತ್ತು ಪಶ್ಚಿಮ ಸಮುದ್ರ ತೀರಗಳಲ್ಲಿ ವಿಮಾನವಾಹಕ ನೌಕೆಯನ್ನು ನಿಯೋಜನೆ ಮಾಡುವುದರೊಂದಿಗೆ, ಕಡಲ ಅಸ್ತಿತ್ವವನ್ನು ವಿಸ್ತರಿಸಬಹುದು.

ಮೇಡ್‌ ಇನ್ ಇಂಡಿಯಾ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಸೆ.2ಕ್ಕೆ ಸೇನೆಗೆ ಸೇರ್ಪಡೆ!

9. ಚೀನಾ ಸಮುದ್ರದಲ್ಲಿ ತನ್ನ ಬಲವನ್ನು ಆಕ್ರಮಣಕಾರಿಯಾಗಿ ವಿಸ್ತರಿಸುತ್ತಿದೆ. ಇತ್ತೀಚಿನ ಉಪಗ್ರಹ ಚಿತ್ರಗಳು, ಆಫ್ರಿಕಾದ ಹಾರ್ನ್‌ನಲ್ಲಿರುವ ಜಿಬೌಟಿಯಲ್ಲಿರುವ ಚೀನಾದ ನೌಕಾ ನೆಲೆಯು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಿಯೋಜಿಸಲಾದ ಯುದ್ಧನೌಕೆಗಳನ್ನು ಬೆಂಬಲಿಸುತ್ತದೆ ಎಂದು ಸೂಚಿಸುತ್ತದೆ. ಇತ್ತೀಚೆಗಷ್ಟೇ ಚೀನಾದ ‘ಗೂಢಚಾರಿಕೆ’ ಹಡಗು ಶ್ರೀಲಂಕಾದಲ್ಲಿ ಬಂದಿಳಿದಾಗ ಭಾರತವೂ ಆತಂಕಕ್ಕೆ ಒಳಗಾಗಿತ್ತು.

10. ಭಾರತ ನೌಕಾಪಡೆಯ ಅಸ್ತಿತ್ವದಲ್ಲಿರುವ ಫ್ಲೀಟ್ ಒಂದು ವಿಮಾನವಾಹಕ ನೌಕೆ, 10 ವಿಧ್ವಂಸಕ, 12 ಫ್ರಿಗೇಟ್‌ಗಳು ಮತ್ತು 20 ಕಾರ್ವೆಟ್‌ಗಳನ್ನು ಒಳಗೊಂಡಿದೆ.

Follow Us:
Download App:
  • android
  • ios