ಭಾರತದ ಇವಿಎಂ ವ್ಯವಸ್ಥೆ ಸಂಪೂರ್ಣ ವಿಭಿನ್ನ. ಇಲ್ಲಿ ಅಂತರ್ಜಾಲ ಸೇರಿದಂತೆ ಯಾವುದೇ ಬಾಹ್ಯ ವ್ಯವಸ್ಥೆ ಜೊತೆ ಇವಿಎಂ ಸಂಪರ್ಕ ಹೊಂದಿರುವುದಿಲ್ಲ.ಹೀಗಾಗಿ ಇದರ ಹ್ಯಾಕ್ ಅಸಾಧ್ಯ ಎನ್ನುತ್ತಾರೆ ಬಿಜೆಪಿ ಹಿಂದಿನ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ರಾಜೀವ್‌ ಚಂದ್ರಶೇಖರ್‌.

ಮುಂಬೈ: ಒಟಿಪಿ ಬಳಸಿ ವಿದ್ಯುನ್ಮಾನ ಮತಯಂತ್ರ (ಇವಿಎಂ) ಅನ್‌ಲಾಕ್‌ ಅಸಾಧ್ಯ. ಈ ಬಗ್ಗೆ ಆಗುತ್ತಿರುವ ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಯಾವುದೇ ಬಾಹ್ಯ ಸಾಧನದಿಂದ ಇವಿಎಂ ತೆರೆಯುವುದು ಅಸಾಧ್ಯ ಎಂದು ಮುಂಬೈ ವಾಯವ್ಯ ಕ್ಷೇತ್ರದ ಚುನಾವಣಾ ಅಧಿಕಾರಿ ವಂದನಾ ಸೂರ್ಯವಂಶಿ ಸ್ಪಷ್ಟಪಡಿಸಿದ್ದಾರೆ.

ಮುಂಬೈ ವಾಯವ್ಯ ಕ್ಷೇತ್ರದಲ್ಲಿ ಶಿವಸೇನೆ ಅಭ್ಯರ್ಥಿ ರವೀಂದ್ರ ವಾಯಿಕರ್‌ ಇತ್ತೀಚೆಗೆ 48 ಮತದಿಂದ ಗೆದ್ದಿದ್ದರು. ಮತ ಎಣಿಕೆ ಕೇಂದ್ರದ ಏಜೆಂಟ್‌ ಆಗಿದ್ದ ಬಂಧು ಮಂಗೇಶ್‌ ಪಂಡಿಲ್ಕರ್‌ ಅವರು, ಎಣಿಕೆ ಕೇಂದ್ರದ ಅಧಿಕಾರಿಯ ಮೊಬೈಲ್‌ ಬಳಸಿ ಒಟಿಪಿ ಪಡೆದು ಇವಿಎಂ ಅನ್‌ಲಾಕ್‌ ಮಾಡಿದ್ದರು ಎಂದು ಅವರ ವಿರುದ್ಧ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಎಫ್‌ಐಆರ್‌ ಕೂಡ ದಾಖಲಿಸಲಾಗಿತ್ತು. ಹೀಗಾಗಿ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಇವಿಎಂಗಳನ್ನು ಅನ್‌ಲಾಕ್‌ ಮಾಡಲು ಚುನಾವಣಾ ಅಧಿಕಾರಿಗಳ ಮೊಬೈಲ್‌ ಫೋನ್‌ಗೆ ಒಟಿಪಿ ಬರುತ್ತವೆ. ಹೀಗಾಗಿ ಅಧಿಕಾರಿಗಳು ಮೊಬೈಲ್‌ ಇಟ್ಟುಕೊಳ್ಳಬಹುದು. ವಾಯವ್ಯ ಮುಂಬೈ ಮತ ಎಣಿಕಾ ಕೇಂದ್ರದ ಎಣಿಕೆ ಅಧಿಕಾರಿ ದಿನೇಶ್‌ ಗುರವ್‌ ಬಳಿ ಮೊಬೈಲ್‌ ಇತ್ತು. ಆದರೆ ಗುರವ್‌ ಅವರು ತಮ್ಮ ಫೋನನ್ನು ಪಂಡಿಲ್ಕರ್‌ಗೆ ನೀಡಿದ್ದರು ಎಂದು ಮಾಧ್ಯಮ ವರದಿಗಳು ಹೇಳಿದ್ದವು.

ಇವಿಎಂ ತಿರುಚಬಹುದು: ಎಲಾನ್‌ ಮಸ್ಕ್‌ ನುಡಿ ಭಾರತದಲ್ಲಿ ಭಾರಿ ವಿವಾದ!

ಎಲಾನ್‌ ಮಸ್ಕ್‌ ನುಡಿ ಭಾರತದಲ್ಲಿ ಭಾರಿ ವಿವಾದ!

ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ) ಹ್ಯಾಕ್‌ಗೆ ತುತ್ತಾಗುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ ಈ ಮುಂಚೆ ಜಾರಿಯಲ್ಲಿದ್ದ ಬ್ಯಾಲೆಟ್‌ ಪೇಪರ್‌ ವ್ಯವಸ್ಥೆಯೇ ಸೂಕ್ತ’ ಎಂದು ವಿಶ್ವದ ನಂ.1 ಶ್ರೀಮಂತ, ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌ ನೀಡಿದ ಹೇಳಿಕೆಯೊಂದು ಭಾರತದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. 

ಮಸ್ಕ್‌ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಬೆಂಬಲಿಸಿದ್ದಾರೆ. ಆದರೆ ಇಂಥ ಹೇಳಿಕೆ ‘ಯಾರೂ ಸುರಕ್ಷಿತ ಡಿಜಿಟಲ್‌ ಹಾರ್ಡ್‌ವೇರ್‌ ಮಾಡಲು ಅಸಾಧ್ಯ ಎಂಬ ಅಭಿಪ್ರಾಯ ಸೃಷ್ಟಿಸಿದೆ’ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿರುಗೇಟು ನೀಡಿದ್ದಾರೆ. ಜೊತೆಗೆ ಈ ವಿಷಯ ಮಸ್ಕ್‌ ಮತ್ತು ರಾಜೀವ್‌ ನಡುವೆ ಟ್ವೀಟರ್‌ನಲ್ಲಿ ಚರ್ಚೆಗೂ ನಾಂದಿ ಹಾಡಿದೆ.

ಇವಿಎಂ ಅನುಮಾನಿಸಿದ ಕಾಂಗ್ರೆಸ್‌ಗೆ ಮೋದಿ ಚಾಟಿ

ಮಸ್ಕ್‌ ಹೀಗೆ ಹೇಳಿಕೆಗೆ ಕಾರಣ ಏನು?: ಇತ್ತೀಚೆಗೆ ಪೋರ್ಟೊರಿಕೋ ದೇಶದಲ್ಲಿ ನಡೆದ ಚುನಾವಣೆ ವೇಳೆ ಸಾಫ್ಟ್‌ವೇರ್‌ ದೋಷದಿಂದಾಗಿ ಇವಿಎಂಗಳಲ್ಲಿ ಚಲಾವಣೆಯಾಗಿದ್ದ ಮತಗಳ ಎಣಿಕೆಯಲ್ಲಿ ವ್ಯತ್ಯಯ ಕಂಡುಬಂದಿತ್ತು. ಆದರೆ ಪೇಪರ್‌ ಟ್ರಯಲ್‌ ಇದ್ದ ಕಾರಣ, ಅವುಗಳಲ್ಲಿನ ಮತಗಳನ್ನು ಆಧರಿಸಿ ಫಲಿತಾಂಶ ಘೋಷಣೆ ಮಾಡಲಾಗಿತ್ತು. ಈ ಇವಿಎಂಗಳನ್ನು ಅಮೆರಿಕದ ಕಂಪನಿಯೊಂದು ಪೂರೈಸಿತ್ತು. ಈ ವಿಷಯವೇ ಮಸ್ಕ್‌ ಅವರು ಇವಿಎಂ ಸಂದೇಹಿಸಲು ಕಾರಣವಾಗಿದೆ.

ರಾಜೀವ್‌ ತಿರುಗೇಟು
ಮಸ್ಕ್‌ ಹೇಳಿಕೆ ಅಮೆರಿಕದ ಇವಿಎಂಗಳಿಗೆ ಅನ್ವಯವಾಗಬಹುದು. ಏಕೆಂದರೆ ಅವರ ಇವಿಎಂ ಮಷಿನ್‌ಗಳು ಇಂಟರ್ನೆಟ್‌ ಕನೆಕ್ಟ್‌ ಆಗಿರುವ ವ್ಯವಸ್ಥೆ ಹೊಂದಿವೆ. ಆದರೆ ಭಾರತದ ಇವಿಎಂ ವ್ಯವಸ್ಥೆ ಸಂಪೂರ್ಣ ವಿಭಿನ್ನ. ಇಲ್ಲಿ ಅಂತರ್ಜಾಲ ಸೇರಿದಂತೆ ಯಾವುದೇ ಬಾಹ್ಯ ವ್ಯವಸ್ಥೆ ಜೊತೆ ಇವಿಎಂ ಸಂಪರ್ಕ ಹೊಂದಿರುವುದಿಲ್ಲ. ಇದರಲ್ಲಿನ ಪ್ರೋಗ್ರಾಮ್‌ಗಳನ್ನು ಬದಲಾಯಿಸಲು ಕೂಡಾ ಸಾಧ್ಯವಿಲ್ಲ. ಭಾರತದಂತೆ ಬೇರೆಯವರು ಕೂಡಾ ಇವಿಎಂ ತಯಾರಿಸಬಹುದು ಎಂದಿದ್ದಾರೆ ಬಿಜೆಪಿ ಹಿಂದಿನ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ರಾಜೀವ್‌ ಚಂದ್ರಶೇಖರ್‌.