ಉಕ್ರೇನ್ ಮತ್ತು ಅದರ ನೆರೆಯ ದೇಶಗಳಾದ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ರೊಮೇನಿಯಾದಲ್ಲಿ ನೆಲೆಸಿದ್ದ ಭಾರತೀಯ ಮೂಲದವರು 'ಆಪರೇಷನ್‌ ಗಂಗಾ'ಗೆ ಹೇಗೆ ಸಹಾಯ ಮಾಡಿದ್ದಾರೆ ಎಂಬುದನ್ನು ತೋರಿಸಿದೆ.

ನವದೆಹಲಿ (ಜೂನ್ 19, 2023): ರಷ್ಯಾ - ಉಕ್ರೇನ್‌ ಯುದ್ಧ ಪ್ರಾರಂಭವಾದ ನಂತರ ಅಲ್ಲಿಂದ ಜನರನ್ನು ಕರೆತರುವುದು ಸುಲಭದ ಮಾತಲ್ಲ. ಆದರೂ, ಯುದ್ಧ ಪೀಡಿತ ದೇಶದಿಂದ 22,500 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಯ್ತು. ಕಳೆದ ವರ್ಷ ಫೆಬ್ರವರಿ 24, 2022 ರಂದು ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ವಿಶ್ವದ ಎಲ್ಲಿಯಾದರೂ ನಡೆಸಿದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಇನ್ನು, ಕೇಂದ್ರ ಸರ್ಕಾರದ 'ಆಪರೇಷನ್ ಗಂಗಾ' ಗೆ ದೇಶದ ಹೊರಗೆ ನೆಲೆಸಿರುವ ಭಾರತೀಯ ಸ್ನೇಹಿತರು ಸಹ ಸಹಾಯ ಮಾಡಿದ್ದಾರೆ.

ಈ ಬಗ್ಗೆ ಹಿಸ್ಟರಿ TV18 ‘ದಿ ಇವಾಕ್ಯುಯೇಶನ್: ಆಪರೇಷನ್ ಗಂಗಾ’ ಎಂಬ ಸಾಕ್ಷ್ಯಚಿತ್ರ ಮಾಡಿದ್ದು, ಜೂನ್ 17 ರಂದು ಪ್ರೀಮಿಯರ್‌ ಪ್ರದರ್ಶನ ಹೊಂದಿದೆ. ಇದರಲ್ಲಿ, ಉಕ್ರೇನ್ ಮತ್ತು ಅದರ ನೆರೆಯ ದೇಶಗಳಾದ ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ರೊಮೇನಿಯಾದಲ್ಲಿ ನೆಲೆಸಿದ್ದ ಭಾರತೀಯ ವಲಸೆಗಾರರು ಹೇಗೆ ಸಹಾಯ ಮಾಡಿದ್ದಾರೆ ಎಂಬುದನ್ನು ತೋರಿಸಿದೆ. ಈ ಮೂಲಕ ವಸುಧೈವ ಕುಟುಂಬಕಂ ಅಂದರೆ 'ಜಗತ್ತು ಒಂದೇ ಕುಟುಂಬ' ಎಂಬ ಹಳೆಯ ಮೌಲ್ಯವನ್ನು ಪ್ರತಿಪಾದಿಸುತ್ತದೆ.

ಇದನ್ನು ಓದಿ: Mann Ki Baat: ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಕರಾಳ ದಿನ; ಸಂವಿಧಾನವೇ ಸರ್ವೋಚ್ಚ: ಪ್ರಧಾನಿ ಮೋದಿ

ರಷ್ಯಾ ತನ್ನ ನೆರೆಹೊರೆಯ ದೇಶದ ಮೇಲೆ ಆಕ್ರಮಣ ಮಾಡಿದ ತಕ್ಷಣ, ಭಾರತವು ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ದೊಡ್ಡ ವಿದ್ಯಾರ್ಥಿ ಜನಸಂಖ್ಯೆಯನ್ನು ತವರಿಗೆ ತರಲು ಕಾಯಬೇಕಾಯಿತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತು ಭಾರತೀಯ ರಾಯಭಾರ ಕಚೇರಿಗಳ ನೇತೃತ್ವದ ಸರ್ಕಾರದ ಪ್ರಯತ್ನಗಳ ಜೊತೆಗೆ, ಹೊರದೇಶದಲ್ಲಿರೋ ಭಾರತೀಯರು ಸಹ ಸಹಾಯ ಮಾಡಿದ್ದಾರೆ. ಈ ಬಗ್ಗೆ ಮೋದಿ ಸಹ ಮಾತನಾಡಿದ್ದು, "ಜಗತ್ತಿನಲ್ಲಿ ಭಾರತೀಯರು ಎಲ್ಲೇ ಇದ್ದರೂ, ಅವರ ಪಾಸ್‌ಪೋರ್ಟ್‌ಗಳ ಬಣ್ಣ ಬದಲಾಗಿದ್ದರೂ, ಅವರು ತಮ್ಮ ದೇಶದೊಂದಿಗೆ ರಕ್ತ ಸಂಬಂಧವನ್ನು ಹೊಂದಿದ್ದಾರೆ. ನಾವೆಲ್ಲರೂ ಭಾರತದೊಂದಿಗೆ ರಕ್ತದ ಮೂಲಕ ಸಂಪರ್ಕ ಹೊಂದಿದ್ದೇವೆ" ಎಂದು ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ.

The Evacuation: Operation Ganga | Full Episode

ಇನ್ನೊಂದೆಡೆ, ಇಂಡೋ ಪೋಲಿಷ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಉಪಾಧ್ಯಕ್ಷ ಅಮಿತ್ ಲಾತ್ ಅವರು ‘’ನಾನು ಈ ಪ್ರದೇಶದ ಹೋಟೆಲ್‌ಗಳು ಮತ್ತು ಮೋಟೆಲ್‌ಗಳಿಗೆ ಸುಮಾರು 160ಕ್ಕೂ ಹೆಚ್ಚು ಕರೆಗಳನ್ನು ಮಾಡಿದ್ದೇನೆ. ನಿರ್ದಿಷ್ಟ ಹೋಟೆಲ್ ಮಾಲೀಕರೊಬ್ಬರ ಜತೆ 24 ಗಂಟೆಗಳಲ್ಲಿ ನನಗೆ 250 ಹಾಸಿಗೆಗಳನ್ನು ಜೋಡಿಸಬೇಕಾಗಿದೆ ಎಂದು ಕರೆ ಮಾಡಿದ್ದೆ. ಅವರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಸಾಕಷ್ಟು ದಯೆ ತೋರಿಸಿದರು’’ ಎಂದು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಮೊದಲು ಹೊರ ದೇಶದ ಭಾರತೀಯರ ಸಹಾಯದ ಬಗ್ಗೆ ಹೇಳಿದರು. 

ಇದನ್ನೂ ಓದಿ: ಅಮೆರಿಕ ಪ್ರವಾಸದ ಜೊತೆಗೆ ಈಜಿಪ್ಟ್‌ಗೂ ಮೋದಿ ಭೇಟಿ: ವಿದೇಶಾಂಗ ಸಚಿವಾಲಯ

ಇನ್ನೊಂದೆಡೆ, ನಾನು ಕಂಪನಿಯೊಂದಕ್ಕೆ ಕರೆ ಮಾಡಿ ಸುಮಾರು 3,000 ಸಿಮ್ ಕಾರ್ಡ್‌ಗಳನ್ನು ವ್ಯವಸ್ಥೆ ಮಾಡಬಹುದೇ ಎಂದು ಕೇಳಿದೆ; ಅವರು 20,000 ಸಿಮ್‌ ಜತೆಗೆ ಉಚಿತ ಇಂಟರ್ನೆಟ್‌ ನೀಡಿದರು. ಭಾರತೀಯರಿಗೆ ಮಾತ್ರವಲ್ಲದೆ ಇತರರಿಗೂ ನೀಡಲಾಯ್ತು ಎಂದು ಇಂಡೋ-ಪೋಲಿಷ್ ಚೇಂಬರ್ ಆಫ್ ಕಾಮರ್ಸ್‌ನ ವ್ಯಾಪಾರ ಸಂಬಂಧಗಳ ನಿರ್ದೇಶಕ ಚಂದ್ರಮೋಹನ್ ನಲ್ಲೂರ್ ಹೇಳಿದರು.

ಹಾಗೆ, ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ರೊಮೇನಿಯಾಗೆ ಕಳುಹಿಸಲಾದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಹ ನಮ್ಮ ಅನಿವಾಸಿ ಭಾರತೀಯರು ನಿಜವಾಗಿಯೂ ನಮ್ಮ ವಿದ್ಯಾರ್ಥಿಗಳ ಸಹಾಯಕ್ಕೆ ಬಂದರು ಎಂದಿದ್ದಾರೆ. "ವಿಪ್ರೋ, ಇನ್ಫೋಸಿಸ್, ಸನ್ ಫಾರ್ಮಾ ಮತ್ತು ಹಲವಾರು ಕಂಪನಿಗಳು ಸಹಾಯಕ್ಕೆ ಬಂದವು’’ ಎಂದೂ ಜ್ಯೋತಿರಾದಿತ್ಯ ಸಿಂಧಿಯಾ ನೆನೆಪಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಸಿರಿಧಾನ್ಯಗಳ ಬಗ್ಗೆ ಹಾಡು ಬರೆದ ಮೋದಿ: ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತೆ ಫಾಲ್ಗುಣಿ ಶಾ ಸಂಗೀತ ನೀಡಿದ ಸಾಂಗ್‌ ರಿಲೀಸ್‌

ಗಂಗಾ ಕಾರ್ಯಾಚರಣೆಯ ಸಂದರ್ಭದಲ್ಲಿ ಹಂಗೇರಿಗೆ ತೆರಳಿದ್ದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು “ಸಾಮಾಜಿಕ ನೆರವು ಒದಗಿಸಿದವರಿಗೆ ಪೂರ್ಣ ಅಂಕಗಳು’’ ಎಂದಿದ್ದಾರೆ. 
ವಿದ್ಯಾರ್ಥಿಗಳು ಉಕ್ರೇನ್‌ನಿಂದ ಹೊರಬರುವಾಗ, ಅವರಿಗೆ ಎಲ್ಲಾ ಸೌಲಭ್ಯಗಳು ಲಭ್ಯವಿವೆ ಮತ್ತು ಅವರು ಭಾರತದ ಧ್ವಜವನ್ನು ತೋರಿಸಿದಾಗಲೆಲ್ಲಾ ಸುರಕ್ಷಿತವಾಗಿ ಪ್ರಯಾಣಿಸಲು ಮತ್ತು ಗಡಿಗಳನ್ನು ತಲುಪಲು ಅವಕಾಶ ನೀಡಲಾಯಿತು ಎಂದು ಮೋದಿ ಹೇಳಿದರು. ಇನ್ನು, ಹರ್ ಘರ್ ತಿರಂಗ ಉಕ್ರೇನ್‌ನಲ್ಲಿ ಸಂಭವಿಸಿದೆ ಮತ್ತು ಯುದ್ಧ ಪೀಡಿತ ದೇಶದಲ್ಲಿ ನಮ್ಮ ಧ್ವಜ ಯಾವಾಗ್ಲೂ ಹಾರುತ್ತಿತ್ತು ಮತ್ತು ಸುರಕ್ಷಿತ ಮಾರ್ಗವನ್ನು ಖಾತ್ರಿಪಡಿಸಲಾಗಿದೆ ಎಂದು ಸಿಂಧಿಯಾ ಹೇಳಿದರು.

“ಚರ್ಮದ ಬಣ್ಣಕ್ಕಿಂತ ಧ್ವಜದ ಬಣ್ಣವು ಶಕ್ತಿಯುತವಾಗಿತ್ತು. ಈ ಸಂಪೂರ್ಣ ಅನುಭವವು ಭಾರತೀಯ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜದ ಶಕ್ತಿಯನ್ನು ಕಲಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದು, ಬೇರೆ ಯಾವುದೇ ದೇಶವು ತಮ್ಮ ನಾಗರಿಕರಿಗಾಗಿ ಇದನ್ನು ಮಾಡಿಲ್ಲ’ ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ಹಿಂದೆ ನೇಮಕಾತಿಗೆ ಒಂದೂವರೆ ವರ್ಷ, ಈಗ ಕೆಲವೇ ತಿಂಗಳು: 70000 ಜನರಿಗೆ ಉದ್ಯೋಗ ಪತ್ರ ವಿತರಣೆ ವೇಳೆ ‘ಕೈ’ ವಿರುದ್ಧ ಮೋದಿ ಚಾಟಿ