Asianet Suvarna News Asianet Suvarna News

ಆರ್ಟ್‌ ಆಫ್‌ ಲಿವಿಂಗ್ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆದ ಭಾರತೀಯ ಯೋಗ ಸಂಘದ ಅಂತಾರಾಷ್ಟ್ರೀಯ ಸಮ್ಮೇಳನ!

ಬೆಂಗಳೂರಿನಲ್ಲಿರುವ ಆರ್ಟ್‌ ಆಫ್‌ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಭಾರತೀಯ ಯೋಗ ಸಂಘ(ಐವೈಎ) 2ನೇ ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿಯಾಗಿ ನಡೆಸಲಾಯಿತು.

Indian Yoga Association 2nd International Conference successfully held at Art of Living sat
Author
First Published Feb 26, 2024, 5:48 PM IST

ಬೆಂಗಳೂರು (ಫೆ.26): ಬೆಂಗಳೂರಿನಲ್ಲಿರುವ ಆರ್ಟ್‌ ಆಫ್‌ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಭಾರತೀಯ ಯೋಗ ಸಂಘ(ಐವೈಎ)ದಿಂದ ಯೋಗ ನಿಯಮಗಳು ಹಾಗೂ ಯೋಗದ ಮೇಲಿನ ಸಂಶೋಧನೆಗಳ ಕುರಿತಾದ 2ನೇ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲಾಯಿತು.

ಫೆ.24 ರಿಂದ ಫೆ.26ರವರೆಗೆ ನಡೆದ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಯೋಗದ ಮೇಲೆ ವೈಜ್ಞಾನಿಕ ಸಂಶೋಧನೆಯ ಪಾತ್ರಗಳು, ಇದರಿಂದಾಗುವ ಒಳಿತಿನ ದಿಕ್ಕುಗಳು, ಯೋಗದ ಸುಸ್ಥಿರ ಬೆಳವಣಿಗೆ ಹಾಗೂ ಯೋಗದ ಪ್ರಾಚೀನ ಜ್ಞಾನವನ್ನು ಭಾರತದಲ್ಲಿ ಹಾಗೂ ಜಗತ್ತಿನ ಇತರೆ ದೇಶಗಳಲ್ಲಿ ಯಾವ ರೀತಿಯಾಗಿ ಬೋಧಿಸಲಾಗುತ್ತಿದೆ ಎಂಬುದರ ಬಗ್ಗೆ ಚರ್ಚಿಸಲಾಯಿತು. ಈ ಸಮಾವೇಶದಲ್ಲಿ ದೇಶದ 25 ರಾಜ್ಯಗಳ ಯೋಗದ ಕೌನ್ಸಿಲ್‌ನ ಸದಸ್ಯರು, ಸಂಶೋಧಕರು, ಯೋಗದ ಖ್ಯಾತ ತಜ್ಞರು ಭಾಗವಹಿಸಿದ್ದರು.

ಆರ್ಟ್‌ ಆಫ್ ಲಿಂಗ್ ಸಂಸ್ಥಾಪಕರು, ಭಾರತೀಯ ಯೋಗ ಸಂಘದ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಮಾತನಾಡಿ, 'ನಮ್ಮ ಯೋಗದ ಪರಂಪರೆಯ ಸಾರದ ಶುದ್ಧತೆಯನ್ನು ಕಾಯ್ದುಕೊಂಡು ಬರಬೇಕು. ಅದನ್ನು ಅಕ್ಷುಣ್ಯವಾಗಿ ಇಡಬೇಕು. ಇದಕ್ಕಾಗಿ ಜೀವನದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು. ಅದರಲ್ಲಿ ಜೀವನದಲ್ಲಿ ಮೂರು 'ಸಿ' (3C) ಗಳನ್ನು ಹೊಂದಬೇಕು ಎಂದರು.

ಸಮಾಜದ ನೈಜ ಪರಿವರ್ತನೆಗೆ ನಾಂದಿ ಹಾಡುತ್ತಿರುವ ಶಿಕ್ಷಕರಿಗೆ ಎಜುಕೇಶನ್ ಅವಾರ್ಡ್!

ಜೀವನದಲ್ಲಿ 3 ಸಿ ಗಳನ್ನು ಪಾಲಿಸಿ
ಮೊದಲನೆಯ ಸಿ- ಕಾನ್ಟೆಕ್ಸ್ಟ್ ಟು ಲೈಫ್- ಜೀವನದ ಬಗ್ಗೆ ವಿಶಾಲವಾದ ದೃಷ್ಟಿಯನ್ನು ಹೊಂದಿದಾಗ ಸಣ್ಣ ಮನಸ್ಸು ಒಬ್ಬರನ್ನು ಕಾಡುವುದಿಲ್ಲ.
ಎರಡನೆಯ ಸಿ- ಕರಣೆ. ನಮ್ಮ ಮೇಲೆ ಹಾಗೂ ಇತರರ ಮೇಲೆ ಕರುಣೆ ತೋರುವುದು.
ಮೂರನೆಯ ಸಿ- ಜೀವನದಲ್ಲಿ ಬದ್ಧತೆ. ಈ ಮೂರೂ ಯೋಗದಿಂದ ಸಿಗುತ್ತದೆ ಎಂದು ರವಿಶಂಕರ್ ಗುರೂಜಿ ಹೇಳಿದರು.

ದಿ ಯೋಗ ಇನ್ಸ್ಟಿಟ್ಯೂಟ್ ಸಂಸ್ಥಾಪಕರಾದ  ಹನ್ಸ ಅವರು ಮಾತನಾಡಿ, ಜೀವನದಲ್ಲಿ 'ಮೂರು ಹೆಚ್ (3H) ಗಳನ್ನು ಪಾಲಿಸಬೇಕು. ಒಂದನೇ ಹೆಚ್- ಹಾರ್ಡ್‌ ವರ್ಕ್‌- ಕಷ್ಟಪಟ್ಟು ಕೆಲಸ ಮಾಡಿ. ಎರಡನೆಯ ಹೆಚ್- ತಲೆ- ನಮ್ಮ ತಲೆ ಸರಿಯಾಗಿರಬೇಕು. ಮೂರನೆಯ ಹೆಚ್ - ಹೃದಯ. ಹೃದಯವು ಮೆದುಳಿನ ಸಾಮ್ಯತೆಯಿಂದಿಗೆ  ನಡೆಯಬೇಕು' ಎಂದರು.  

ಆಚಾರ್ಯ ಲೋಕೇಶ್ ಮುನಿ ಅವರು, 'ಮಾನಸಿಕ ಶಾಂತಿಯಿಲ್ಲದೆ ವಿಶ್ವ ಶಾಂತಿ ಸಾಧ್ಯವಿಲ್ಲ. ವಿಶ್ವಶಾಂತಿಯು ಯೋಗದಿಂದ ಬರುತ್ತದೆ' ಎಂದರು. 
ಡಾ. ಬಸವರೆಡ್ಡಿಯವರು,'ಯೋಗವು ದೇಹ, ಮನಸ್ಸಿನ ಜ್ಞಾನವನ್ನು ನೀಡುತ್ತದೆ ಮತ್ತು ಇವುಗಳನ್ನು ಐಕ್ಯವಾಗಿಸುವ ದಾರಿಯನ್ನು ಯೋಗ ತೋರಿಸುತ್ತದೆ. ಅಂತಿಮವಾಗಿ ಇದು ಪ್ರಕೃತಿಯ ಎಲ್ಲವನ್ನೂ ಐಕ್ಯವಾಗಿಸುತ್ತದೆ' ಎಂದರು. 

ರಾಜ್ಯಸಭೆ ಚುನಾವಣೆ ಅಡ್ಡ ಮತದಾನಕ್ಕೆ ತಡೆಯೊಡ್ಡಿದ ಬಿಜೆಪಿ; 66 ಶಾಸಕರಿಗೆ ವಿಪ್ ಜಾರಿ

ಯೋಗ ಸಮ್ಮೇಳನದಲ್ಲಿ ವಿವೇಕಾನಂದ ಯೋಗ ಅನುಸಂಧಾನ ಕೇಂದ್ರದ ಸಂಸ್ಥಾಪಕ ಪದ್ಮಶ್ರೀ ಡಾ.ಹೆಚ್.ಆರ್. ನಾಗೇಂದ್ರ, ಕೈವಲ್ಯಧಾಮ ಹಾಗೂ ಐವೈಎಯ ಜಿನರಲ್ ಸೆಕ್ರೆಕರಿ ಶ್ರೀ ಸುಬೋಧ್ ತಿವಾರಿ, ಭಾರತೀಯ ಯೋಗ ಸಂಘದ ಜಂಟಿ ಕಾರ್ಯದರ್ಶಿ ಡಾ. ಆನಂದ್ ಬಾಲಯೋಗಿ, ಹರಿದ್ವಾರದ ಸಂಸ್ಕೃತಿ ವಿಶ್ವವಿದ್ಯಾಲಯದ ಡಾ.ಎಸ್.ಪಿ. ಮಿಶ್ರ ದೇವ್, ಭಾರತೀಯ ಯೋಗ ಸಂಘದ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಉಪಸ್ಥಿತರಿದ್ದರು.

Follow Us:
Download App:
  • android
  • ios