Asianet Suvarna News Asianet Suvarna News

ರಾಜ್ಯಸಭೆ ಚುನಾವಣೆ ಅಡ್ಡ ಮತದಾನಕ್ಕೆ ತಡೆಯೊಡ್ಡಿದ ಬಿಜೆಪಿ; 66 ಶಾಸಕರಿಗೆ ವಿಪ್ ಜಾರಿ

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನವನ್ನು ತಡೆಯುವ ಉದ್ದೇಶದಿಂದ ಬಿಜೆಪಿ ತನ್ನ ಎಲ್ಲ 66 ಶಾಸಕರಿಗೆ ವಿಪ್‌ ಜಾರಿ ಮಾಡಿದೆ.

Rajya Sabha elections 2024 BJP blocked cross voting by Whip applied to 66 MLAs sat
Author
First Published Feb 26, 2024, 5:15 PM IST

ಬೆಂಗಳೂರು (ಫೆ.26): ರಾಜ್ಯ ವಿಧಾನಸಭೆಯಲ್ಲಿ ನಾಳೆ (ಪೆ.27ರ ಮಂಗಳವಾರ) ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ವರ ಆಯ್ಕೆಗೆ ಎರಡು ಪಕ್ಷಗಳಲ್ಲಿ ಸ್ಪಷ್ಟ ಬಹುಮತವಿದೆ. ಆದರೆ, ಮೈತ್ರಿ ಅಭ್ಯರ್ಥಿಯ ಆಯ್ಕೆಗೆ ಮತಗಳ ಕೊರತೆಯಿದ್ದು, ಅಡ್ಡ ಮತದಾನದ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯಿಂದ 66 ಶಾಸಕರಿಗೂ ವಿಪ್‌ ಜಾರಿ ಮಾಡಲಾಗಿದೆ.

ರಾಜ್ಯಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್‌ನಿಂದ ಮೂವರು ಅಭ್ಯರ್ಥಿಗಳು, ಬಿಜೆಪಿಯಿಂದ ಒಬ್ಬರು ಹಾಗೂ ಮೈತ್ರಿ (ಬಿಜೆಪಿ-ಜೆಡಿಎಸ್‌) ಅಭ್ಯರ್ಥಿಯಾಗಿ ಒಬ್ಬರನ್ನು ಕಣಕ್ಕಿಳಿಸಲಾಗುತ್ತಿದೆ. ವಿಧಾನಸಭೆಯಲ್ಲಿ ಒಟ್ಟು 223 ಸದಸ್ಯರಿದ್ದು, (224ರಲ್ಲಿ ನಿನ್ನೆ ಸುರಪುರ ಶಾಸಕ ರಾಜಾ ವೆಂಕಟಪಟ್ಟ ನಾಯಕ ಸಾವು ಹೊರತುಪಡಿಸಿ) ಎಲ್ಲರೂ ಮತ ಚಲಾಯಿಸಲಿದ್ದಾರೆ. ಆದರೆ, ಇಲ್ಲಿ ಒಬ್ಬ ರಾಜ್ಯಸಭಾ ಅಭ್ಯರ್ಥಿ ಗೆಲುವಿಗೆ 45 ಮತಗಳು ಅಗತ್ಯವಿದೆ. ಕಾಂಗ್ರೆಸ್‌ ಪಕ್ಷದಲ್ಲಿ 134 ಸದಸ್ಯರಿದ್ದು, ಮೂವರನ್ನು ಸರಳವಾಗಿ ಗೆಲ್ಲಿಸಿಕೊಳ್ಳಬಹುದು. ಉಳಿದಂತೆ ಬಿಜೆಪಿ 66, ಜೆಡಿಎಸ್‌ 19, ಕೆಆರ್‌ಪಿಪಿ-1, ಸರ್ವೋದಯ ಕರ್ನಾಟಕ 1 ಹಾಗೂ ಪಕ್ಷೇತರ 2 ಸದಸ್ಯರಿದ್ದಾರೆ. ಆದ್ದರಿಂದ ಬಿಜೆಪಿ ತನ್ನ ಅಭ್ಯರ್ಥಿ ಗೆಲ್ಲಿಸಿಕೊಳ್ಳಬಹುದಾಗಿದ್ದು, ಉಳಿದಂತೆ ಮೈತ್ರಿ ಅಭ್ಯರ್ಥಿ ಗೆಲುವಿಗೆ ಬಾಕಿ ಮತಗಳನ್ನು ಹಾಕುವಂತೆ ನಿರ್ದೇಶನ ನೀಡಲಾಗಿದೆ.

ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ಗೆ ಶಿಫ್ಟ್; 135 ಸೀಟುಗಳಿದ್ದರೂ ಸರ್ಕಾರಕ್ಕೆ ಕುತ್ತು ಬಂತಾ?

ಇನ್ನು ಬಿಜೆಪಿಯ 66 ಶಾಸಕರ ಪೈಕಿ 45 ಮತಗಳನ್ನು ಬಿಜೆಪಿಯ ಅಭ್ಯರ್ಥಿ ನಾರಾಯಣ ಸಾ ಭಾಂಡಗೆ ಅವರಿಗೆ ಹಾಕಲಿದ್ದಾರೆ. ಉಳಿಕೆ 21 ಮತಗಳನ್ನು ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಹಾಕಬೇಕು. ಆದರೆ, ಶಾಸಕರಾದ ಎಸ್‌ಟಿ. ಸೋಮಶೇಖರ್ ಅವರು ಈಗಾಗಲೇ ಕಾಂಗ್ರೆಸ್ ನಾಯಕರೊಂದಿಗೆ ಕಾಣಿಸಿಕೊಂಡಿದ್ದು, ಅಡ್ಡ ಮತದಾನ ಮಾಡುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ. ಜೊತೆಗೆ, ಶಿವರಾಮ್ ಹೆಬ್ಬಾರ್ ಅವರು ಕೂಡ ಅಡ್ಡ ಮತದಾನ ಮಾಡುವ ಸಾಧ್ಯತೆಯನ್ನು ಮನಗಂಡಿದ್ದರಿಂದ ಬಿಜೆಪಿ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ತಮ್ಮ ಪಕ್ಷದ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.

ಪ್ರತಿಪಕ್ಷ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ರಾಜ್ಯ ಸಭೆ ಚುನಾವಣೆ ಕಾರಣ ಬಿಜೆಪಿಯ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಇದರ ನಡುವೆಯೂ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ನಡೆ ಇನ್ನೂ ನಿಗೂಢವಾಗಿದೆ. ನಾಳೆ ರಾಜ್ಯಸಭಾ ಮತದಾನಕ್ಕೂ ಮುನ್ನ ಬೆಳಗ್ಗೆ ಶಾಸಕ ಸೋಮಶೇಖರ್ ಅವರಿಗೆ ಬ್ರೇಕ್‌ಫಾಸ್ಟ್‌ಗೆ ತಮ್ಮೊಂದಿಗೆ ಬರುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಹ್ವಾನ ನೀಡಿದ್ದಾರೆ. ಬೆಳಗ್ಗೆ ಅವರೊಂದಿಗೆ ತಿಂಡಿ ಸೇವನೆಗೆ ಹೋದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾವಣೆ (ಅಡ್ಡ ಮತದಾನ- ತಾವು ಗೆದ್ದ ಪಕ್ಷದ ಹೊರತಾಗಿ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದು) ಮಾಡುವ ಸಾಧ್ಯತೆಯಿದೆ. ಇನ್ನು ಇದರಿಂದಾಗಿ ಬಿಜೆಪಿ ಎಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಆದರೆ, ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ಯಾವ ಅಭ್ಯರ್ಥಿಗೆ ಮತ ನೀಡುವಂತೆ ಸೂಚನೆ ನೀಡುತ್ತಾರೆ ಎನ್ನುವುದುರ ಮೇಲೆ ತಾವು ಮತ ಯಾರಿಗೆ ಹಾಕಬೇಕು ಎನ್ನುವುದನ್ನು ನಿರ್ಧಾರ ಮಾಡಲಿದ್ದಾರೆ ಎಂದು ಕೇಳಿಬಂದಿದೆ.

  • ಪಕ್ಷಗಳ ಬಲಾಬಲವೇನು?
  • ಕಾಂಗ್ರೆಸ್ - 135
  • ಬಿಜೆಪಿ - 66
  • ಜೆಎಇಎಸ್‌ -19
  • ಕೆಆರ್‌ಪಿಪಿ -1
  • ಸರ್ವೋದಯ- 1
  • ಪಕ್ಷೇತರ -2
  • ಒಟ್ಟು- 224

ರಾಜ್ಯಸಭೆಯ 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ವಿರುದ್ಧ ಕೇಸ್‌

ಕಣದಲ್ಲಿ ಅಭ್ಯರ್ಥಿಗಳು
ಅಜಯ್ ಮಕೇನ್ (ಕಾಂಗ್ರೆಸ್)
ಜಿಸಿ ಚಂದ್ರಶೇಖರ್ (ಕಾಂಗ್ರೆಸ್)
ಡಾ ಸೈಯದ್ ನಾಸೀರ್ ಹುಸೇನ್ (ಕಾಂಗ್ರೆಸ್)
ನಾರಾಯಣ ಎಸ್ ಭಾಂಡಗೆ (ಬಿಜೆಪಿ)
ಡಿ ಕುಪೇಂದ್ರ ರೆಡ್ಡಿ (ಮೈತ್ರಿ ಅಭ್ಯರ್ಥಿ)

Follow Us:
Download App:
  • android
  • ios