ಮದುವೆಗಾಗಿ ಅಮೆರಿಕಕ್ಕೆ ಬಂದಿದ್ದ  24  ವರ್ಷದ ಭಾರತೀಯ ಯುವತಿ ನ್ಯೂಜೆರ್ಸಿಯಲ್ಲಿ ನಾಪತ್ತೆಯಾಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಕಾಣೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನ್ಯೂಜೆರ್ಸಿ: ಭಾರತದಿಂದ ಮದುವೆಗೆಂದು ಅಮೆರಿಕಕ್ಕೆ ಬಂದಿದ್ದ 24 ವರ್ಷದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ನಡೆದಿದೆ. 24 ವರ್ಷದ ಸಿಮ್ರಾನ್ ಎಂಬ ಯುವತಿ ಜೂನ್ 20ರಂದು ನ್ಯೂಜೆರ್ಸಿಯಲ್ಲಿ ವಿಮಾನದಿಂದ ಇಳಿದ ನಂತರ ಕಾಣೆಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.. ಆದರೆ ಈ ಯುವತಿ ಭಾರತದ ಯಾವ ರಾಜ್ಯದವಳು ಎಂಬ ಬಗ್ಗೆ ಮಾಹಿತಿ ಇಲ್ಲ.

ಈಕೆ ನ್ಯೂಜೆರ್ಸಿಯಲ್ಲಿ ವಿಮಾನ ಇಳಿದ ಐದು ದಿನಗಳ ನಂತರ, ಬುಧವಾರ ಪೊಲೀಸರಿಗೆ ದೂರು ಬಂದಿದೆ. ಲಿಂಡೆನ್‌ವಾಲ್ಡ್ ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಗಳಲ್ಲಿ, ಯುವತಿ ಫೋನ್‌ನಲ್ಲಿ ಯಾರ ಜೊತೆಯೋ ಮಾತಾನಾಡುವುದು ರೆಕಾರ್ಡ್ ಆಗಿದೆ. ಯುವತಿ ಭಯಭೀತಳಾಗಿರಲಿಲ್ಲ, ಯಾರನ್ನೋ ಕಾಯ್ತಿದ್ದಂಗೆ ಕಾಣ್ತಿತ್ತು ಅಂತ ಪೊಲೀಸರು ಹೇಳಿದ್ದಾರೆ. ಈಕೆ ಜೂನ್ 20ರಂದು ಅಮೆರಿಕಾಗೆ ತೆರಳಿದ್ದಳು.

ಪ್ರಾಥಮಿಕ ತನಿಖೆಯಲ್ಲಿ, ಯುವತಿ ಅಮೆರಿಕಕ್ಕೆ ಬಂದಿದ್ದು 'ಅರೇಂಜ್ಡ್ ಮ್ಯಾರೇಜ್' ಗಾಗಿ ಅಂತ ಗೊತ್ತಾಗಿದೆ. ಆದ್ರೆ, ಅಮೆರಿಕಕ್ಕೆ ಫ್ರೀಯಾಗಿ ಹೋಗೋಕೆ ಮದುವೆ ನೆಪ ಮಾಡಿದ್ದಾಳಾ ಅಂತಾನೂ ಪೊಲೀಸರು ತನಿಖೆ ಮಾಡ್ತಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ ಪೊಲೀಸರು ಈ ಸಾಧ್ಯತೆಯನ್ನೂ ಪರಿಗಣಿಸ್ತಿದ್ದಾರೆ.

ಸಿಮ್ರಾನ್‌ಗೆ ಅಮೆರಿಕದಲ್ಲಿ ಯಾವ ಸಂಬಂಧಿಕರಿಲ್ಲ, ಆಕೆಗೆ ಇಂಗ್ಲಿಷ್ ಕೂಡ ಬರಲ್ಲ ಅಂತ ನ್ಯೂಜೆರ್ಸಿ ಪೊಲೀಸರು ಹೇಳಿದ್ದಾರೆ. ಸಿಮ್ರಾನ್‌ಳ ಇಂಡಿಯಾದ ಕುಟುಂಬದವರನ್ನ ಸಂಪರ್ಕಿಸೋಕೆ ಪೊಲೀಸರಿಗೆ ಆಗಿಲ್ಲ. ಸಿಮ್ರಾನ್ ಎಲ್ಲಿದ್ದಾಳೆ ಅನ್ನೋ ಮಾಹಿತಿಗಾಗಿ ಇಂಡಿಯಾದಲ್ಲಿರೋ ಕುಟುಂಬದವರನ್ನ ಸಂಪರ್ಕಿಸೋ ಪ್ರಯತ್ನ ಮಾಡ್ತಿದ್ದೀವಿ ಅಂತ ಲಿಂಡೆನ್‌ವಾಲ್ಡ್ ಪೊಲೀಸರು ಹೇಳಿದ್ದಾರೆ. ಆಕೆಯ ಫೋನ್ ವೈ-ಫೈ ಮಾತ್ರ ಕಾರ್ಯನಿರ್ವಹಿಸುವ ಅಂತಾರಾಷ್ಟ್ರೀಯ ಸಾಧನವಾಗಿದ್ದು, ಹೀಗಾಗಿ ಆಕೆಯನ್ನು ಸಂಪರ್ಕಿಸುವುದು ಇನ್ನಷ್ಟು ಕಷ್ಟವಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾಗಿ ವರದಿಯಾಗಿದೆ.

ಈಕೆ ಕೊನೆಯದಾಗಿ ಕಾಣಿಸಿಕೊಂಡಾಗ ಗ್ರೇ ಬಣ್ಣದ ಸ್ವೆಟ್‌ಪ್ಯಾಂಟ್, ಬಿಳಿ ಟೀ-ಶರ್ಟ್, ಕಪ್ಪು ಫ್ಲಿಪ್-ಫ್ಲಾಪ್ಸ್ ಮತ್ತು ವಜ್ರದ ಓಲೆಗಳನ್ನ ಧರಿಸಿದ್ದಳು. ಐದು ಅಡಿ ನಾಲ್ಕು ಇಂಚು ಎತ್ತರ, ಸುಮಾರು 68 ಕೆಜಿ ತೂಕ, ಹಣೆಯ ಎಡಭಾಗದಲ್ಲಿ ಸಣ್ಣ ಮಚ್ಚೆ ಇದೆ. ಸಿಮ್ರಾನ್ ಬಗ್ಗೆ ಏನಾದ್ರೂ ಮಾಹಿತಿ ಸಿಕ್ಕಿದ್ರೆ ಲಿಂಡೆನ್‌ವಾಲ್ಡ್ ಪೊಲೀಸರಿಗೆ ತಿಳಿಸಿ ಅಂತ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದರ ಜೊತೆಗೆ ಸಿಮ್ರಾನ್ ಇರುವಿಕೆಯ ಬಗ್ಗೆ ಮಾಹಿತಿ ಇರುವ ಯಾರಾದರು ಲಿಂಡೋನ್ವೋಲ್ಡ್ ಪೊಲೀಸ್ ಪತ್ತೆದಾರಿ ಜೋ ಟೊಮೆಸೆಟ್ಟಿ ಅವರನ್ನು ಸಂಪರ್ಕಿಸಲು ಅಧಿಕಾರಿಗಳು ಒತ್ತಾಯಿಸಿದ್ದಾರೆ.