ವಿದೇಶಕ್ಕೆ ಹೋದ ಹುಡುಗನೋರ್ವ ನಮ್ಮ ದೇಶದ ರಾಷ್ಟ್ರಧ್ವಜವನ್ನು ವಿದೇಶಿ ನೆಲದಲ್ಲಿ ಅದೂ ಆತ ಓದಿದ ಕಾಲೇಜಿನ ಸ್ಟೇಜ್ ಮೇಲೆ ಹಾರಿಸುವ ಮೂಲಕ ತನ್ನತನದ ಜೊತೆ ದೇಶದ ಮೇಲಿನ ಹೆಮ್ಮೆಯನ್ನು ಪ್ರದರ್ಶಿಸಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಊರು ಬಿಟ್ಟು ಹೋದ ಮೇಲೆ ಊರಿನ ಮೇಲೆ, ರಾಜ್ಯ ಬಿಟ್ಟು ಹೋದ ಮೇಲೆ ರಾಜ್ಯದ ಮೇಲೆ ದೇಶ ಬಿಟ್ಟು ಹೋದ ಮೇಲೆ ದೇಶದ ಮೇಲೆ ನಮ್ಮ ಅಭಿಮಾನ ಎಂದಿಗಿಂತಲೂ ಜಾಸ್ತಿಯಾಗುತ್ತದೆ. ಹೊರ ರಾಜ್ಯದಲ್ಲಿದ್ದಾಗ ನಮ್ಮ ರಾಜ್ಯದ ರಿಜಿಸ್ಟ್ರರ್ ಗಾಡಿಗಳನ್ನು ನೋಡಿ ಖುಷಿ ಪಡುವ ನಾವು ಕಿವಿಗೆ ಕನ್ನಡ ಪದ ಬಿದ್ದ ಕೂಡಲೇ ಜಾಗೃತರಾಗಿಬಿಡುತ್ತೇವೆ. ನಮ್ಮವರು ಎಂಬಂತೆ ಅಪರಿಚಿತರನ್ನು ಮಾತನಾಡಿಸಲು ಶುರು ಮಾಡುತ್ತೇವೆ. ತಾವು ಹುಟ್ಟಿ ಬೆಳೆದು ಬಂದ ಭಾಷೆ ಸಂಸ್ಕೃತಿ ಬಗ್ಗೆ ನಮಗೆ ಇಂತಹ ಒಂದು ವಿಶೇಷ ಅಭಿಮಾನವಿರುತ್ತದೆ. ಅದೇ ರೀತಿ ಓದಲು ವಿದೇಶಕ್ಕೆ ಹೋದ ಹುಡುಗನೋರ್ವ ನಮ್ಮ ದೇಶದ ರಾಷ್ಟ್ರಧ್ವಜವನ್ನು ವಿದೇಶಿ ನೆಲದಲ್ಲಿ ಅದೂ ಆತ ಓದಿದ ಕಾಲೇಜಿನ ಸ್ಟೇಜ್ ಮೇಲೆ ಹಾರಿಸುವ ಮೂಲಕ ತನ್ನತನದ ಜೊತೆ ದೇಶದ ಮೇಲಿನ ಹೆಮ್ಮೆಯನ್ನು ಪ್ರದರ್ಶಿಸಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೋವನ್ನು ಛತ್ತೀಸ್‌ಗಢ ಕೇಡರ್‌ನ ಐಎಎಸ್ ಅಧಿಕಾರಿ ಅವನೀಶ್ ಶರಣ್ (Awanish Sharan) ಅವರು ಪೋಸ್ಟ್ ಮಾಡಿದ್ದು, ಅವರು ಅವನು ಪದವಿಯೊಂದಿಗೆ ಕೋಟ್ಯಾಂತರ ಜನರ ಹೃದಯವನ್ನು ಗೆದ್ದುಕೊಂಡ ಎಂದು ಬರೆದಿದ್ದಾರೆ. 7 ಲಕ್ಷಕ್ಕೂ ಅಧಿಕ ಜನ ಈ ವೀಡಿಯೋವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಘಟಿಕೋತ್ಸವದಲ್ಲಿ ಭಾಗಿಯಾದ ಈ ವಿದ್ಯಾರ್ಥಿ ಭಾರತೀಯ ಧಿರಿಸಾದ (Indian costume) ಕಚ್ಚೆ ಹಾಗೂ ಕುರ್ತಾ ಧರಿಸಿ ಸ್ಟೇಜ್ ಮೇಲೆ ಬಂದಿದ್ದಾನೆ. ಬಂದವನೇ ಕೈ ಗಣ್ಯರಿಗೆ ಕೈ ಮುಗಿದ ವಿದ್ಯಾರ್ಥಿ ಬಳಿಕ ತನ್ನ ಜೇಬಿನಲ್ಲಿ ಇರಿಸಿಕೊಂಡು ಬಂದಿದ್ದ ಭಾರತದ ರಾಷ್ಟ್ರಧ್ವಜವನ್ನು ಅಲ್ಲಿ ಅರಳಿಸುತ್ತಾ ವೇದಿಕೆಯುದ್ಧಕ್ಕೂ ಸಾಗುತ್ತಾನೆ. ಆತ ಸಾಗುತ್ತಿದ್ದಂತೆ ರಾಷ್ಟ್ರಧ್ವಜ (National flag) ಅಗಲವಾಗಿ ತೆರೆದುಕೊಂಡು ಗಾಳಿಗೆ ಹಾರುತ್ತಿದೆ. ನಂತರ ಆತ ಅದನ್ನು ತನ್ನ ಮೇಲೆ ಹೊದ್ದುಕೊಳ್ಳುತ್ತಾನೆ. ರಾಷ್ಟ್ರಧ್ವಜ ಹಾಗೂ ದೇಶದ ಮೇಲಿನ ಆತನ ಪ್ರೇಮ ಆತನ ಈ ಕಾರ್ಯದಲ್ಲಿ ಎದ್ದು ಕಾಣುತ್ತಿದೆ. ಈ ವೇಳೆ ಅಲ್ಲಿ ಕಾರ್ಯಕ್ರಮ ಆಯೋಜಕರು ಖುಷಿಯಿಂದ ಆತನನ್ನೇ ನೋಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
6 ರಾಜ್ಯದ ಭಾರತೀಯ ವಿದ್ಯಾರ್ಥಿಗಳಿಗೆ ನಿಷೇಧ ಹೇರಿದ ಆಸ್ಟ್ರೇಲಿಯಾ!
ಈ ವೀಡಿಯೋ ನೋಡಿದ ಭಾರತೀಯರೆಲ್ಲರೂ ಈತನ ಕೆಲಸಕ್ಕೆ ಮೆಚ್ಚುಗೆಯ ಜೊತೆ ಧನ್ಯವಾದ ಸಲ್ಲಿಸಿದ್ದಾರೆ. ಅನೇಕರು ಆತನಿಗೆ ಪದವಿ ಪಡೆದಿರುವುದಕ್ಕೆ ಕಂಗ್ರಾಟ್ಸ್ ಹೇಳಿದ್ದರೆ, ಮತ್ತೆ ಕೆಲವರು ರಾಷ್ಟ್ರಧ್ವಜ ಹಾರಿಸಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ. ಮತ್ತೊಬ್ಬ ಧನ್ಯವಾದ ಇಂತಹ ದಿನವೊಂದನ್ನು ನೋಡಲು ನಾನು ಕಾಯುತ್ತಿದ್ದೆ ಎಂದು ಕಾಮೆಂಟ್ ಮಾಡಿದ್ದಾರೆ. ನೀನು ಹೃದಯವನ್ನು ತಟ್ಟಿ ಬಿಟ್ಟೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿನ್ನ ಬಗ್ಗೆ ಬಹಳ ಹೆಮ್ಮೆಯೆನಿಸುತ್ತಿದೆ. ಇದೊಂದು ಬೆಲೆಕಟ್ಟಲಾಗದ ಕ್ಷಣ, ನೀನು ಒಳ್ಳೆಯ ಕೆಲಸ ಮಾಡಿರುವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ: ಭಾರತೀಯ ವಿದ್ಯಾರ್ಥಿಗೆ ಅಮೆರಿಕನ್ ಏರ್‌ಲೈನ್ಸ್ ನಿಷೇಧ
ನಾವು ಯಾವ ದೇಶಕ್ಕೆ ಹೋಗಲಿ ನಾವು ಹುಟ್ಟಿ ಬೆಳೆದ ನೆಲದ ಸೆಳೆತ ನಮ್ಮನ್ನು ತಾಯ್ನಾಡಿಗಾಗಿ ತುಡಿಯುವಂತೆ ಮಾಡುತ್ತಿರುತ್ತದೆ. ವಿದೇಶದಲ್ಲಿ ಭಾರತೀಯರ ಕಂಡಾಗ ಅಪರಿಚಿತರಾದರೂ ನಮ್ಮವರೇ ಎಂಬ ಭಾವ ಮೂಡುತ್ತದೆ. ಹಾಗಂತ ಈ ದೇಶದ ಮಣ್ಣಿನ ಬಗೆಗಿನ ಪ್ರೇಮ ಮೋಹ ಎಂತದ್ದು ಎಂಬುದನ್ನು ರಾಮಾಯಣದಲ್ಲಿ ನೀವು ಓದಿರಬಹುದು, ಸುಂದರ ಲಂಕೆಯ ನೋಡಿ ಮೋಹಗೊಂಡ ಸಹೋದರ ಲಕ್ಷ್ಮಣ (Laxman) ಇಲ್ಲೇ ಇರುವ ಪ್ರಸ್ತಾಪವನ್ನು ಅಣ್ಣ ರಾಮನಿಗೆ ಹೇಳುತ್ತಾನೆ. ಈ ವೇಳೆ ಶ್ರೀರಾಮ ಜನ್ಮ ನೀಡಿದ ಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂದು ಸಹೋದರನಿಗೆ ತಿಳಿ ಹೇಳುವ ಕತೆ ಇದೆ. ಅದೇನೆ ಇರಲಿ ನಮ್ಮ ದೇಶ ನಮಗೆ ಹೆಚ್ಚು, ನಮ್ಮ ಅಪ್ಪಟ್ಟ ಕನ್ನಡಿಗ, ಯೂಟ್ಯೂಬರ್ ಡಾಕ್ಟರ್ ಬ್ರೋ ಕೂಡ ಸುಡಾನ್ (sudan) ನೆಲದಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗಿದ ವೀಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
