ಗಾಜಾ ಮೇಲೆ ಇಸ್ರೇಲ್ ದಾಳಿ ವೇಳೆ ಭಾರತೀಯ ಯೋಧ ವೈಭವ್ ಹುತಾತ್ಮ
ಗಾಜಾಪಟ್ಟಿ ಪ್ರದೇಶದಲ್ಲಿ ಹಮಾಸ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಭಾರತೀಯ ಮೂಲದ ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ವಿಶ್ವಸಂಸ್ಥೆಯ ತಂಡದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ಮಾಜಿ ಯೋಧ ಕರ್ನಲ್ ವೈಭವ್ ಅನಿಲ್ ಕಾಲೆ (46) ಮೃತಪಟ್ಟಿಪಟ್ಟಿದ್ದಾರೆ.
ವಿಶ್ವಸಂಸ್ಥೆ: ಗಾಜಾಪಟ್ಟಿ ಪ್ರದೇಶದಲ್ಲಿ ಹಮಾಸ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಭಾರತೀಯ ಮೂಲದ ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ವಿಶ್ವಸಂಸ್ಥೆಯ ತಂಡದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಸೇನೆಯ ಮಾಜಿ ಯೋಧ ಕರ್ನಲ್ ವೈಭವ್ ಅನಿಲ್ ಕಾಲೆ (46) ಮೃತಪಟ್ಟಿಪಟ್ಟಿದ್ದಾರೆ. ರಫಾದಲ್ಲಿ ವಿಶ್ವಸಂಸ್ಥೆ ವಾಹನ ತೆರಳುವಾಗ ಬಾಂಬ್ ಸಿಡಿದ ಪರಿಣಾಮ ವೈಭವ್ ಸ್ಥಳದಲ್ಲಿಯೇ ಸಾವನ್ನಪ್ಪಿ, ಮತ್ತೋರ್ವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ವೈಭವ್ ಅವರ ಸಾವಿಗೆ ವಿಶ್ವಸಂಸ್ಥೆಯ ಆ್ಯಂಟನಿ ಗುಟೆರಸ್ ಸಂತಾಪ ಸೂಚಿಸಿದ್ದಾರೆ. ವಿಶ್ವಸಂಸ್ಥೆ ಹಾಗೂ ಇಸ್ರೇಲ್ ಸಾವಿಗೆ ಪ್ರತ್ಯೇಕ ತನಿಖೆ ನಡೆಸುವುದಾಗಿ ಹೇಳಿದೆ.
2000ನೇ ಇಸವಿಯಲ್ಲಿ ಇವರು ಭಾರತೀಯ ಸೇನೆ ಸೇರಿದ್ದರು. 2022ರಲ್ಲಿ ಅವಧಿಗೆ ಮೊದಲೇ ಅವರು ಸೇವಾ ನಿವೃತ್ತಿ ಪಡೆದಿದ್ದು, 2 ತಿಂಗಳ ಹಿಂದಷ್ಟೇ ವಿಶ್ವಸಂಸ್ಥೆಯ ಸುರಕ್ಷತೆ ಹಾಗೂ ಭದ್ರತಾ ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿದ್ದ ಇವರು 2000ದಲ್ಲಿ ಜಮ್ಮು ಕಾಶ್ಮೀರದ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಕೆಲಸಕ್ಕೆ ಸೇರಿದ್ದರು. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅಲ್ ಜಝೀರಾ ಮಾಧ್ಯಮ ಸಂಸ್ಥೆಗೆ ಬೀಗ, ಇಸ್ರೇಲ್ ಸಂಸತ್ತಿನಲ್ಲಿ ಸರ್ವಾನುಮತ ನಿರ್ಧಾರ!
ಎಲ್‌ಟಿಟಿಇ ನಿಷೇಧ ಮತ್ತೆ 5 ವರ್ಷ ವಿಸ್ತರಿಸಿದ ಕೇಂದ್ರ
ನವದೆಹಲಿ: ಪ್ರತ್ಯೇಕ ತಮಿಳು ದೇಶಕ್ಕೆ ಆಗ್ರಹಿಸಿ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಅಡ್ಡಿ ಉಂಟು ಮಾಡುತ್ತಿರುವ ಶ್ರೀಲಂಕಾ ಮೂಲದ ಲಿಬರೇಷನ್ ಆಫ್ ತಮಿಳ್ ಟೈಗರ್ಸ್ ಈಳಂ (ಎಲ್‌ಟಿಟಿಇ) ಸಂಘಟನೆಯ ನಿಷೇಧವನ್ನು ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ‘ಎಲ್‌ಟಿಟಿಇ ಸಂಘಟನೆ ನಿಷೇಧದ ಹೊರತಾಗಿಯೂ ಅದರ ಪರ ಹಲವಾರು ಸಂಘಟನೆಗಳು ಹಾಗೂ ಬೆಂಬಲಿಗರು ಭಾರತದಲ್ಲಿ ಹುಟ್ಟಿಕೊಂಡು ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿದ್ದಾರೆ. ಪ್ರಮುಖವಾಗಿ ತಮಿಳರು ಹೆಚ್ಚಿರುವ ತಮಿಳುನಾಡಿನಲ್ಲಿ ಭಾರತದ ಸಂವಿಧಾನ ಮತ್ತು ಕೇಂದ್ರ ಸರ್ಕಾರದ ಕುರಿತು ದ್ವೇಷ ಭಾವನೆ ಹುಟ್ಟಿಸಿ ಅವರಲ್ಲಿ ಪ್ರತ್ಯೇಕ ದೇಶ ಬೇಕೆನ್ನುವ ಭಾವನೆ ಹುಟ್ಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್‌ಟಿಟಿಇ ಸಂಘಟನೆಯ ನಿಷೇಧವನ್ನು ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಿ ಅದನ್ನು ಕಾನೂನಾತ್ಮಕವಲ್ಲದ ಸಂಘಟನೆ ಎಂಬ ಹಣೆಪಟ್ಟಿ ಕೊಡಲಾಗಿದೆ. ಮತ್ತು ಅದರ ಬೆಂಬಲಿಗರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದನ್ನು ಮುಂದುವರೆಸಲಾಗುವುದು’ ಎಂದು ತಿಳಿಸಿದೆ.
ಇಸ್ರೇಲ್-ಇರಾನ್ ಸಂಘರ್ಷ: ಈ 5 ಭಾರತೀಯ ಕಂಪನಿಗಳ ಷೇರು ಬೆಲೆಯಲ್ಲಿ ಭಾರೀ ಹೆಚ್ಚಳ!
ಚುನಾವಣೆಯಿಂದ 6 ವರ್ಷ ಪ್ರಧಾನಿ ಮೋದಿ ನಿಷೇಧ ಕೋರಿದ್ದ ಅರ್ಜಿ ವಜಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧೆಯಿಂದ ನಿಷೇಧಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ರೀತಿ ಅರ್ಜಿಗಳು ಮೊದಲ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹೋಗಬೇಕು ಎಂದು ಸೂಚಿಸಿದೆ. ಫಾತಿಮಾ ಎಂಬುವರು ಪ್ರಧಾನಿ ನರೇಂದ್ರ ಮೋದಿ ಅವರು ದ್ವೇಷ ಭಾಷಣ ಮಾಡುತ್ತಿದ್ದಾರೆ. ಈ ಮೂಲಕ ಸಮಾಜದಲ್ಲಿ ದ್ವೇಷ ವಾತಾವರಣ ನಿರ್ಮಿಸುತ್ತಿದ್ದಾರೆ. ಹೀಗಾಗಿ ಅವರನ್ನು ಚುನಾವಣೆಯಿಂದ ನಿಷೇಧ ಹೇರಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾ. ವಿಕ್ರಂನಾಥ್ ಹಾಗೂ ನ್ಯಾ.ಎಸ್.ಸಿ. ಶರ್ಮ ಅವರಿದ್ದ ಪೀಠ ವಜಾಗೊಳಿಸಿದೆ.