ನವದೆಹಲಿ (ಸೆ.18): ವಿಶ್ವದ ಅತ್ಯುತ್ತಮ 109 ಸ್ಮಾರ್ಟ್‌ಸಿಟಿಗಳ ಪಟ್ಟಿಬಿಡುಗಡೆಯಾಗಿದ್ದು, ಹಾಂಕಾಂಗ್‌, ಹೆಲ್ಸಿಂಕಿ ಮತ್ತು ಜ್ಯೂರಿಚ್‌ ನಗರಗಳು ಟಾಪ್‌ 3 ಸ್ಥಾನ ಪಡೆದುಕೊಂಡಿವೆ. ಪಟ್ಟಿಯಲ್ಲಿ ಭಾರತದ ಹೈದ್ರಾಬಾದ್‌, ನವದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳು ಸ್ಥಾನ ಪಡೆದುಕೊಂಡಿವೆಯಾದರೂ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಅವುಗಳ ಸ್ಥಾನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ದ ಇನ್ಸ್‌ಟಿಟ್ಯೂಟ್‌ ಫಾರ್‌ ಮ್ಯಾನೇಜ್‌ಮೆಂಟ್‌ ಡೆವಲಪ್‌ಮೆಂಟ್‌ ಸಂಸ್ಥೆಯು ಸಿಂಗಾಪುರ ಯುನಿವರ್ಸಿಟಿ ಫಾರ್‌ ಟೆಕ್ನಾಲಜಿ ಆ್ಯಂಡ್‌ ಡಿಸೈನ ಜೊತೆಗೂಡಿ ಈ ರಾರ‍ಯಂಕಿಂಗ್‌ ಬಿಡುಗಡೆ ಮಾಡಿದೆ.

ಕೋವಿಡ್‌ ಎದುರಿಸಲು ಭಾರತದ ನಗರಗಳು ಸೂಕ್ತ ರೀತಿಯಲ್ಲೇ ಸಜ್ಜಾಗದೇ ಇದ್ದಿದ್ದು ಮತ್ತು ಭಾರತದ ನಗರಗಳ ಮೇಲೆ ಕೋವಿಡ್‌ ಬೀರಿದ ಪರಿಣಾಮಗಳು ರಾರ‍ಯಂಕಿಂಗ್‌ನಲ್ಲಿ ಇಳಿಕೆಯಾಗಲು ಕಾರಣ ಎಂದು ವರದಿ ಹೇಳಿದೆ. ಒಟ್ಟು 15 ಅಂಶ ಆಧರಿಸಿ ಸಮೀಕ್ಷೆ ನಡೆಸಿದ್ದು, ನಾಲ್ಕೂ ನಗರಗಳಲ್ಲಿ ಬಹುತೇಕ ಜನರು ಮಾಲಿನ್ಯ ಪ್ರಮುಖ ಸಮಸ್ಯೆ ಎಂದು ಹೇಳಿದ್ದಾರೆ.

ಭಾರತದ 4 ನಗರ:
ವಿಶ್ವದ ಟಾಪ್‌ ಸ್ಮಾರ್ಟ್‌ಸಿಟಿಗಳ ಪೈಕಿ ಭಾರತದ ಹೈದ್ರಾಬಾದ್‌ 85 (ಕಳೆದ ಬಾರಿ 67ನೇ ಸ್ಥಾನ), ನವದೆಹಲಿ 86 (ಕಳೆದ ಬಾರಿ 68ನೇ ಸ್ಥಾನ), ಮುಂಬೈ 93 (ಕಳೆದ ಬಾರಿ 78ನೇ ಸ್ಥಾನ) ಮತ್ತು ಬೆಂಗಳೂರು 95 (ಕಳೆದ ಬಾರಿ 79ನೇ ಸ್ಥಾನ) ಸ್ಥಾನ ಪಡೆದುಕೊಂಡಿವೆ.

ಬಳ್ಳಾರಿಯನ್ನು ಸ್ಮಾರ್ಟ್ ಸಿಟಿಗೆ ಸೇರಿಸುವಂತೆ ಕೇಂದ್ರಕ್ಕೆ ಮನವಿ

ವಿಶ್ವದ ಟಾಪ್‌ 10 ನಗರ
ಸಿಂಗಾಪುರ, ಹೆಲ್ಸಿಂಕಿ, ಜ್ಯೂರಿಚ್‌, ಆಕ್ಲೆಂಡ್‌, ಓಸ್ಲೋ, ಕೋಪನ್‌ಹೇಗನ್‌, ಜಿನೆವಾ, ತೈಪೇ ನಗರ, ಆಮ್‌ಸ್ಟರ್‌ಡ್ಯಾಮ್‌, ನ್ಯೂಯಾರ್ಕ್