ಚೀನಾದಲ್ಲಿ ಭಾರತೀಯ ಶಿಕ್ಷಕಿಗೆ ಕರೋನಾ ವೈರಸ್?
ಚೀನಾದಲ್ಲಿ ಭಾರತೀಯ ಶಿಕ್ಷಕಿಗೆ ಕರೋನಾ ವೈರಸ್?| ಶೆನ್ಜೆನ್ ಪ್ರಾಂತ್ಯದ ಅಂತಾರಾಷ್ಟ್ರೀಯ ಶಾಲೆಯೊಂದರಲ್ಲಿ ಶಿಕ್ಷಕಿ ಆಗಿರುವ ಪ್ರೀತಿ ಮಹೇಶ್ವರಿ
ಬೀಜಿಂಗ್[ಜ.20]: ಚೀನಾದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಮಾರಣಾಂತಿಕ ಕರೋನಾ ವೈರಸ್ ಭಾರತೀಯ ಮೂಲದ ಮಹಿಳೆಯೊಬ್ಬರಲ್ಲಿ ಕಾಣಿಸಿಕೊಂಡಿದೆ.
ಶೆನ್ಜೆನ್ ಪ್ರಾಂತ್ಯದ ಅಂತಾರಾಷ್ಟ್ರೀಯ ಶಾಲೆಯೊಂದರಲ್ಲಿ ಶಿಕ್ಷಕಿ ಆಗಿರುವ ಪ್ರೀತಿ ಮಹೇಶ್ವರಿ ಎಂಬಾಕೆ ಕರೋನಾ ವೈರಾಣುವಿನಿಂದ ಬಳಲುತ್ತಿದ್ದಾರೆ. ತನ್ಮೂಲಕ ಕರೋನಾ ವೈರಸ್ ತಗುಲಿದ ಮೊದಲ ವಿದೇಶಿ ಪ್ರಜೆ ಎನಿಸಿದ್ದಾರೆ. ಮಹೇಶ್ವರಿಗೆ ಸದ್ಯ ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ ಎಂದು ವರದಿಗಳು ತಿಳಿಸಿವೆ.
ಜಗತ್ತಿನ ನಿದ್ದೆಗೆಡಿಸಿದೆ ಮಾರಕ ಕರೋನಾ ವೈರಸ್: ಏನಿದು ಕಾಯಿಲೆ? ಗುಣಲಕ್ಷಣಗಳೇನು?
ಆದರೆ ಕರೋನಾ ವೈರಸ್ ಸೋಂಕು ತಗುಲಿಲ್ಲ. ಬೇರೆ ಸೋಂಕಿಗೆ ಪ್ರೀತಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪತಿ ಅಶುಮಾನ್ ಖೋವಾಲ್ ತಿಳಿಸಿದ್ದಾರೆ.
ದಿನದಲ್ಲಿ ಕೆಲವೇ ಗಂಟೆಗಳಷ್ಟೇ ಭೇಟಿಗೆ ಅವಕಾಶ ನೀಡಲಾಗುತ್ತಿದೆ. ಆಕೆ ಚೇತರಿಸಿಕೊಳ್ಳಲು ಸುದೀರ್ಘ ಸಮಯ ಬೇಕಾಗಬಹುದು ಎಂಬುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪತಿ ಅಶುಮಾನ್ ಖೋವಲ್ ಮಾಹಿತಿ ನೀಡಿದ್ದಾರೆ.
ಚೀನಾಕ್ಕೆ ಹೋದರೆ ಹಸಿಯಾದ ಮಾಂಸ ತಿನ್ನಬೇಡಿ: ಕೇಂದ್ರ