ಭಾರತದ ಕೇಸರಿಗೀಗ ಬಂಗಾರದ ದರ; 1 ಕೆಜಿ ಕೇಸರಿ ಬೆಲೆ 5 ಲಕ್ಷಕ್ಕೆ ಹತ್ತಿರ!
ವಿಶ್ವದಲ್ಲೇ ಅತಿ ದುಬಾರಿ ಮಸಾಲೆ ಎಂಬ ಪಟ್ಟ ಗಳಿಸಿರುವ ಕೇಸರಿಯ ಬೆಲೆ ಗಗನಕ್ಕೇರಿದೆ. ಹತ್ತಿರತ್ತಿರ 5 ಲಕ್ಷ ರೂ. 1 ಕೆಜಿಯ ದರವಾಗಿದ್ದು, ಈ ಮಟ್ಟಕ್ಕೆ ಬೆಲೆಯೇರಲು ಕಾರಣವಿಲ್ಲಿದೆ.
ವಿಶ್ವದ ಅತ್ಯಂತ ದುಬಾರಿ ಮಸಾಲೆಯಾದ ಕೇಸರಿ ಬೆಲೆಯು ಆಕಾಶಕ್ಕೇರಿದೆ. ಪ್ರತಿ ಕೆಜಿ ಕೇಸರಿ 4.95 ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ.
ಕಳೆದ ಒಂದು ತಿಂಗಳಿನಿಂದ ಸಗಟು ಮಾರುಕಟ್ಟೆಯಲ್ಲಿ ಭಾರತೀಯ ಕೇಸರಿ ಬೆಲೆ 20% ಮತ್ತು ಚಿಲ್ಲರೆ ವ್ಯಾಪಾರದಲ್ಲಿ 27% ರಷ್ಟು ಹೆಚ್ಚಾಗಿದೆ. ಇರಾನ್‌ನಿಂದ ಕೇಸರಿ ಪೂರೈಕೆಯಲ್ಲಿನ ಕುಸಿತವು ಕೇಸರಿ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ.
'ಉತ್ತಮ ಗುಣಮಟ್ಟದ ಭಾರತೀಯ ಕೇಸರಿ ಈಗ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 3.5-3.6 ಲಕ್ಷಕ್ಕೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟದಲ್ಲಿ ಇದರ ಬೆಲೆ ಕೆಜಿಗೆ 4.95 ಲಕ್ಷ ರೂ.' ಎಂದು ವರದಿ ಹೇಳಿದೆ.
ತಾಯಂದಿರ ದಿನ; ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ; ಹೊಸ ಹೆಸರೇನು?
ಇರಾನ್ ವಿಶ್ವದ ಅತಿ ದೊಡ್ಡ ಕೇಸರಿ ಉತ್ಪಾದಕ ದೇಶವಾಗಿದೆ ಮತ್ತು ಸುಮಾರು 430 ಟನ್‌ಗಳಷ್ಟು ವಾರ್ಷಿಕ ಉತ್ಪಾದನೆಯನ್ನು ಹೊಂದಿದೆ. ಇದು ಕೇಸರಿಯ ಜಾಗತಿಕ ಉತ್ಪಾದನೆಯ ಸುಮಾರು 90% ರಷ್ಟಿದೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತೀಯ ಕೇಸರಿ ಕಾಶ್ಮೀರದಲ್ಲಿ ಬೆಳೆಯಲಾಗುತ್ತದೆ, ಆದರೆ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.
ಕಾಶ್ಮೀರದಲ್ಲಿ ಕೇಸರಿ ಕೃಷಿ
'ಕೆಂಪು ಚಿನ್ನ' ಎಂದೂ ಕರೆಯಲ್ಪಡುವ ಕೇಸರಿಯನ್ನು ಕಾಶ್ಮೀರದಲ್ಲಿ ಕೇವಲ 5,707 ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲಾಗುತ್ತದೆ. ಇದರಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಂಪೋರ್ ತೆಹಸಿಲ್‌ನಲ್ಲಿದ್ದರೆ ಉಳಿದವು ಮಧ್ಯ ಕಾಶ್ಮೀರದ ಬುದ್ಗಾಮ್ ಮತ್ತು ಶ್ರೀನಗರ ಜಿಲ್ಲೆಗಳಲ್ಲಿದೆ.
ಗೊತ್ತುಗುರಿ ಇಲ್ದೆ ಖಾತೆಗೆ 6.3 ಕೋಟಿ ಬಂತು ಅಂತಾ ಹಿಂಗಾ ಮಾಡೋದು ಇವ್ಳು?!
ಕಾಶ್ಮೀರ ಕೇಸರಿಯನ್ನು ವರ್ಷಕ್ಕೊಮ್ಮೆ ಅಂದರೆ ಅಕ್ಟೋಬರ್ ಅಂತ್ಯದಿಂದ ನವೆಂಬರ್ ಮಧ್ಯದವರೆಗೆ ಕೊಯ್ಲು ಮಾಡಲಾಗುತ್ತದೆ ಮತ್ತು ಒಂದು ಕಿಲೋಗ್ರಾಂ ಮಸಾಲೆಯನ್ನು ಪಡೆಯಲು 150,000 ಕ್ಕಿಂತ ಹೆಚ್ಚು ಹೂವುಗಳು ಬೇಕಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ, ಹೆಚ್ಚುತ್ತಿರುವ ವೆಚ್ಚಗಳು ಮತ್ತು ಹವಾಮಾನ ಬದಲಾವಣೆ ಕಾರಣದಿಂದ ಕಣಿವೆಯ ಅನೇಕ ರೈತರು ಕೇಸರಿ ಕೃಷಿಯನ್ನು ತ್ಯಜಿಸಿದ್ದಾರೆ. ಈ ಎಲ್ಲ ಕಾರಣದಿಂದ ಕೇಸರಿಯ ಬೆಲೆ ಏರುತ್ತಲೇ ಇದೆ.